ಹೊರಗಡೆ ಸಿಗದ ಆಹಾರ : ಅನ್ನಕ್ಕಾಗಿ ಜೈಲು ಸೇರುತ್ತಿರುವ ಚೀನಿಯರು

Published : Apr 15, 2022, 04:05 AM IST
ಹೊರಗಡೆ ಸಿಗದ ಆಹಾರ : ಅನ್ನಕ್ಕಾಗಿ ಜೈಲು ಸೇರುತ್ತಿರುವ ಚೀನಿಯರು

ಸಾರಾಂಶ

ಉದ್ದೇಶಪೂರ್ವಕ ಕೋವಿಡ್‌ ನಿಯಮ ಉಲ್ಲಂಘಿಸಿ ಜೈಲು ಪಾಲು ಹೊರಗಡೆ ಆಹಾರ ಸಿಗದ ಕಾರಣ ಜೈಲಲ್ಲಲಾದರೂ ಸಿಗುವ ಆಸೆ ಆಹಾರವಿಲ್ಲದೆ ಹಸಿವಿನಿಂದ ಕಂಗೆಟ್ಟು ಹೆಚ್ಚುತ್ತಿವೆ ಅತ್ಮಹತ್ಯೆ ಪ್ರಕರಣ ಸೋಂಕಿತರ ಸಾಕು ಪ್ರಾಣಿಗಳ ಹತ್ಯೆ ಮಾಡುತ್ತಿರುವ ಅಧಿಕಾರಿಗಳು

ಬೀಜಿಂಗ್‌: ಚೀನಾದ ವಾಣಿಜ್ಯ ರಾಜಧಾನಿ ಶಾಂಘೈ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಕೋವಿಡ್‌ ಸೋಂಕು ದಿನೇ ದಿನೇ ವ್ಯಾಪಿಸುತ್ತಿದ್ದು, ಇದರ ನಿಗ್ರಹಕ್ಕಾಗಿ ಹೇರಿದ ಲಾಕ್ಡೌನ್‌ ಜನರ ಬದುಕನ್ನು ಹೈರಾಣಾಗಿಸಿದೆ. ಸುಮಾರು 1 ತಿಂಗಳಿನಿಂದ ಸತತ ಲಾಕ್ಡೌನ್‌ (Lockdown) ಪರಿಣಾಮ 2.5 ಕೋಟಿ ಜನಸಂಖ್ಯೆಯ ಶಾಂಘೈನಲ್ಲಿ ಜನರಿಗೆ ಆಹಾರ ವಸ್ತುಗಳ ಪೂರೈಕೆ ಬಹುತೇಕ ನಿಂತು ಹೋಗಿದ್ದು, ಜನರು ಆಹಾರಕ್ಕೆ ಪರಿತಪಿಸುವಂತಾಗಿದೆ.

ಮನೆಯಲ್ಲಿ ತಿನ್ನಲು ಏನೂ ಇಲ್ಲದ ಕಾರಣ, ಜೈಲಿನಲ್ಲಾದರೂ ಆಹಾರ (Food) ಸಿಗಬಹುದು ಎಂಬ ಕಾರಣಕ್ಕಾಗಿ ಜನರು ಉದ್ದೇಶಪೂರ್ವಕವಾಗಿಯೇ ಕೋವಿಡ್‌ ನಿಯಮ ಉಲ್ಲಂಘಿಸಿ ಜೈಲು ಪಾಲಾಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಂತೂ ಜನರೇ ಪೊಲೀಸರನ್ನು ಕೈಮುಗಿದು ಬಂಧಿಸಿ ಜೈಲಿಗೆ ಹಾಕುವಂತೆ ಗೋಗರೆಯುತ್ತಿರುವ ಘಟನೆಗಳೂ ನಡೆದಿವೆ.

ಚೀನಾ ಲಾಕ್ಡೌನ್ ಎಫೆಕ್ಟ್ ಅಂಗಡಿಗಳ ಲೂಟಿಗಿಳಿದ ಜನ!

ಹಸಿವಿಗೆ ಹೆದರಿ ಆತ್ಮಹತ್ಯೆ:

ಆಹಾರ ಸಮಸ್ಯೆ ಎದುರಿಸಲಾಗದೇ ಜನರು ಆತ್ಮಹತ್ಯೆಗೆ (Suicide) ಶರಣಾಗುತ್ತಿರುವ ಕರುಣಾಜನಕ ಘಟನೆಗಳು ಕೂಡಾ ನಡೆದಿವೆ. ತಿಯಾನ್‌ಜಿನ್‌ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಸಮೇತ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಅವರ ಮಗು (Baby) ಮನೆಯೊಳಗೆ ಏಕಾಂಗಿಯಾಗಿತ್ತು ಎಂದು ವರದಿಯಾಗಿದೆ.


ಲೂಟಿ:

ಆಹಾರ ವಸ್ತುಗಳ ಪೂರೈಕೆ ಸ್ಥಗಿತಗೊಂಡಿರುವ ಕಾರಣ ಶಾಂಘೈ (Shanghai) ಸೇರಿದಂತೆ ಹಲವು ನಗರಗಳಲ್ಲಿ ಸಣ್ಣ ಪುಟ್ಟಪ್ರಮಾಣದ ಪ್ರತಿಭಟನೆ, ಅಂಗಡಿ, ಮಾಲ್‌ಗಳ ಲೂಟಿ ಮುಂದುವರೆದಿದೆ. ಕಳೆದ 4-5 ದಿನಗಳಿಂದ ಇಂಥ ಹಲವು ಘಟನೆಗಳು ವರದಿಯಾಗಿವೆ.

Shanghai Lockdown: ಜೈಲಿನಂತಾದ ಮನೆಗಳಿಂದ ಪ್ರಜೆಗಳ ಆರ್ತನಾದ ವಿಡಿಯೋ ವೈರಲ್!

ಪ್ರಾಣಿಗಳ ಹತ್ಯೆ:

ಈ ನಡುವೆ ಕೋವಿಡ್‌ ಸೋಂಕಿತರ ಸಾಕು ಪ್ರಾಣಿಗಳನ್ನು ಅಧಿಕಾರಿಗಳು ಸಾರ್ವಜನಿಕವಾಗಿ ಇಲ್ಲವೇ, ಮನೆಗೆ ನುಗ್ಗಿ ಹತ್ಯೆ (Murder) ಮಾಡುತ್ತಿರುವ ಭೀಕರ ದೃಶ್ಯಗಳು ಕೂಡ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚೀನಿ ಅಧಿಕಾರಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

ಆಸ್ಪತ್ರೆಗಳ ಸ್ಥಿತಿ ಗಂಭೀರ:

ಕೆಲವೇ ಸಾವಿರ ಮಂದಿ ಸಕ್ರಿಯ ಸೋಂಕಿತರು ಇದ್ದರೂ ಕೂಡಾ ಚೀನಾದ ಆಸ್ಪತ್ರೆಗಳು ಗಂಭೀರ ಸಮಸ್ಯೆಎದುರಿಸುತ್ತಿವೆ ಎಂದು ಜನಸಾಮಾನ್ಯರು ದೂರಿದ್ದಾರೆ. ಆಸ್ಪತ್ರೆಗಳಲ್ಲಿ ಮಾಸ್‌್ಕ, ಸ್ಯಾನಿಟೈಸರ್‌ ಲಭ್ಯವಿಲ್ಲ, ಸೋಂಕಿತರು ಇರುವ ಪ್ರದೇಶಗಳನ್ನು ಸ್ಯಾನಿಟೈಸ್‌ ಮಾಡುತ್ತಿಲ್ಲ, ಎಲ್ಲೆಡೆ ಕಸ ತುಂಬಿ ತುಳುಕುತ್ತಿದೆ ಎಂದು ರೋಗಿಗಳು ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಾಖಲೆ ಪ್ರಮಾಣ ಕೇಸು:

ಗುರುವಾರ ಚೀನಾದಲ್ಲಿ 29411 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 3020ರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಲ್ಲಿ. ದೇಶದಲ್ಲಿನ ಒಟ್ಟು ಸೋಂಕಿತರ ಪೈಕಿ ಶಾಂಘೈ ನಗರವೊಂದರ ಪಾಲೇ ಶೇ.95ರಷ್ಟಿದೆ. ಅಂದರೆ ನಗರದಲ್ಲಿ 27719 ಕೇಸು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?