ದ.ಆಫ್ರಿಕಾದ ಡರ್ಬನ್‌ನಲ್ಲಿ ಮಹಾ ಪ್ರವಾಹ :259 ಮಂದಿ ಬಲಿ

By Anusha KbFirst Published Apr 15, 2022, 3:10 AM IST
Highlights
  • ದ.ಆಫ್ರಿಕಾದದಲ್ಲಿ ಭಾರಿ ಪ್ರವಾಹಕ್ಕೆ 259 ಮಂದಿ ಬಲಿ
  • ಕುಸಿದ ಸೇತುವೆಗಳು, ರಸ್ತೆಗಳು
  • 6 ಸಾವಿರಕ್ಕೂ ಹೆಚ್ಚು ಮನೆಗಳು ನಾಶ

ಡರ್ಬನ್‌: ದಕ್ಷಿಣ ಆಫ್ರಿಕಾದಲ್ಲಿ(South Africa) ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬುಧವಾರ ಪೂರ್ವ ಕರಾವಳಿ ನಗರ ಡರ್ಬನ್‌ (Durban) ಮತ್ತು ಸುತ್ತಮುತ್ತ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು, ಸುಮಾರು 259 ಜನರು ಸಾವಿಗೀಡಾಗಿದ್ದಾರೆ. ಹಲವಾರು ಬೆಟ್ಟಗಳು ಕುಸಿದಿವೆ, ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನೂರಾರು ಜನರು ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸೇತುವೆಗಳು, ರಸ್ತೆಗಳು ಕುಸಿದಿವೆ. ಜನರು ಸಾವಿಗೀಡಾಗುತ್ತಿದ್ದಾರೆ. ಇದು ಅಗಾಧ ಪ್ರಮಾಣದ ದುರಂತವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಈ ಪ್ರವಾಹ ಉಂಟಾಗಿದೆ. ಹವಾಮಾನ ಬದಲಾವಣೆ ತಡೆಯಲು ಮಾಡಬೇಕಾದ ಕೆಲಸಗಳನ್ನು ಇನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಸಿರಿಲ್‌ ರಾಮಾಪೋಸಾ (Cyril Ramaphosa) ಹೇಳಿದ್ದಾರೆ. ಪ್ರವಾಹದಿಂದಾಗಿ 6 ಸಾವಿರಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವ ರಕ್ಷಣೆಗಾಗಿ ಹೆಚ್ಚುವರಿ 300 ಅಧಿಕಾರಿಗಳನ್ನು ನೇಮಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ವಾಯುಪಡೆಯ ವಿಮಾನಗಳನ್ನು ನೇಮಿಸಲಾಗಿದೆ.

Latest Videos

ಕಳೆದ 48 ಗಂಟೆಗಳಲ್ಲಿ 450 ಸೆ.ಮೀ. ಮಳೆ:

ಕಳೆದ 24 ಗಂಟೆಗಳಲ್ಲಿ 18 ಇಂಚಿಗೂ ಹೆಚ್ಚಿನ ಮಳೆ ಸುರಿದಿದೆ. ಈ ಭಾರಿ ಮಳೆಯಿಂದಾಗಿ ಬೆಟ್ಟಗುಡ್ಡಗಳು ಕುಸಿದಿದ್ದು, ರಸ್ತೆಗಳೆಲ್ಲಾ ಕೊಚ್ಚಿ ಹೋಗಿವೆ. ಡರ್ಬನ್‌ ವಾರ್ಷಿಕವಾಗಿ 1009 ಮಿ.ಮೀ. ಮಳೆಯಾಗುತ್ತಿತ್ತು.

ಕೆಲವು ಪ್ರದೇಶಗಳಲ್ಲಿ ಒಂದೇ ದಿನದಲ್ಲಿ ತಿಂಗಳ ಮಳೆ ಬಿದ್ದ ನಂತರ ಸ್ಥಳೀಯ ಅಧಿಕಾರಿಗಳು ವಿಪತ್ತಿನ ಸ್ಥಿತಿಯನ್ನು ಘೋಷಿಸಿದ್ದಾರೆ. ಅಧಿಕಾರಿಗಳು ಇದನ್ನು  ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಹವಾಮಾನ ಬಿರುಗಾಳಿಗಳಲ್ಲಿ ಒಂದಾಗಿದೆ ಎಂದು ಕರೆದಿದ್ದಾರೆ. ಮಣ್ಣು ಕುಸಿದು ಜನರು ಕಟ್ಟಡಗಳ ಕೆಳಗೆ ಸಿಲುಕಿದ್ದು, ಇನ್ನೂ ಹೆಚ್ಚಿನ ಹಾನಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳ ಬಳಕೆ ಮಾಡಲಾಗುತ್ತಿದೆಯಾದರೂ
ಕಡಿಮೆ ಗೋಚರತೆಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ವರದಿಗಳು ಹೇಳಿವೆ.

ಬುಧವಾರ, ಪ್ರಾಂತ್ಯದ ಆರೋಗ್ಯ ಮುಖ್ಯಸ್ಥ ನೊಮಗುಗು ಸಿಮೆಲೆನ್-ಜುಲು (Nomagugu Simelen-Zulu) ಸ್ಥಳೀಯ ಸುದ್ದಿ ಕೇಂದ್ರಕ್ಕೆ ನೀಡಿದ ಮಾಹಿತಿಯ ಪ್ರಕಾರ ಮಂಗಳವಾರ ತಡರಾತ್ರಿ 250 ಕ್ಕೂ ಹೆಚ್ಚು ಶವಗಳನ್ನು ಶವಾಗಾರಗಳಲ್ಲಿ ಸ್ವೀಕರಿಸಲಾಗಿದೆ ಎಂದು ಹೇಳಿದರು. ಕಳೆದ ರಾತ್ರಿಯ ಹೊತ್ತಿಗೆ, ನಮ್ಮ ಎರಡು ವಿಭಿನ್ನ ಶವಾಗಾರಗಳಲ್ಲಿ ನಾವು ಸುಮಾರು 253 ಶವಗಳನ್ನು ಸ್ವೀಕರಿಸಿದ್ದೇವೆ ಎಂದು ಸಿಮೆಲೆನ್-ಜುಲು ಹೇಳಿದರು. ಸ್ವಲ್ಪ ಸಮಯದ ನಂತರ ಆಪತ್ತು ನಿರ್ವಹಣೆಯ ವಕ್ತಾರರು ಈ ಸಂಖ್ಯೆಯು ಈಗ 259 ದಾಟಿದೆ ಎಂದು ದೃಢಪಡಿಸಿದರು.

click me!