ಇಮ್ರಾನ್ ಖಾನ್ 'ದಿ ಕಪಿಲ್ ಶರ್ಮಾ ಶೋ'ಗೆ ಸೇರಲಿ: ಮತ್ತೆ ಕಾಲೆಳೆದ ಮಾಜಿ ಪತ್ನಿ

By Anusha Kb  |  First Published Apr 14, 2022, 9:11 PM IST
  • ಮಾಜಿ ಪತಿ ವಿರುದ್ಧ ಮತ್ತೆ ರೆಹಮ್‌ ಖಾನ್ ವ್ಯಂಗ್ಯ
  • ನವಜೋತ್ ಸಿಂಗ್ ಸಿಧು ಅವರ ಬದಲಿಗೆ ಉತ್ತಮ  ಆಯ್ಕೆ
  • ಇಮ್ರಾನ್‌ ಖಾನ್‌ ದಿ ಕಪಿಲ್ ಶರ್ಮಾ ಶೋಗೆ ಸೇರಲಿ ಎಂದ ಮಾಜಿ ಪತ್ನಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ (Reham Khan) ಅವರು ಮತ್ತೆ ತನ್ನ ಮಾಜಿ ಪತಿ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇಮ್ರಾನ್‌ ಖಾನ್‌ಗೆ ಹಾಸ್ಯ ಪ್ರಜ್ಞೆ ಇದ್ದು,  ಅವರು ಜನಪ್ರಿಯ ಭಾರತೀಯ ಟಿವಿ ಶೋ'ದಿ ಕಪಿಲ್ ಶರ್ಮಾ ಶೋ.ದಲ್ಲಿ ನವಜೋತ್ ಸಿಂಗ್ ಸಿಧು ಅವರ ಬದಲಿಗೆ ಉತ್ತಮ ಬದಲಿ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ. 

ಈ ಹಿಂದೆಯೂ ರೆಹಮ್‌ ಖಾನ್‌, ಇಮ್ರಾನ್ ಖಾನ್ ಅವರು ಭಾರತವನ್ನು ಖುದ್ದರ್ ಕ್ವಾಮ್ (ಬಹಳ ಸ್ವಾಭಿಮಾನದ ಜನರು) ಎಂದು ಹೊಗಳಿರುವುದನ್ನು ಉಲ್ಲೇಖಿಸಿ ಟೀಕೆ ಮಾಡಿದ್ದರು. ಈಗ ಮತ್ತೆ ಇಮ್ರಾನ್‌ ಕಾಲೆಳೆದ ಅವರು ಬಾಲಿವುಡ್‌ನಲ್ಲಿಯೂ ಇಮ್ರಾನ್‌ ಖಾನ್‌ ಒಂದು ಕೈ ನೋಡಬೇಕು ಎಂದು ಹೇಳಿದರು.

Tap to resize

Latest Videos

ಇಮ್ರಾನ್ ಖಾನ್ ಕಲರ್’ಫುಲ್ ಕಹಾನಿ: ಖಾನ್ ಖಾಸಗಿ ಬದುಕು ಅನಾವರಣ..!

ಭಾರತದ ಬಗ್ಗೆ ಇಮ್ರಾನ್‌ ಖಾನ್‌ ತುಂಬಾ ಭಾವುಕರಾಗಿದ್ದರು. ಭಾರತವು ಅವರಿಗಾಗಿ ಬಹುಶಃ ಬಾಲಿವುಡ್‌ನಲ್ಲಿ ಅವಕಾಶ ನೀಡಬೇಕು ಎಂದು ನಾನು ಭಾವಿಸುತ್ತೇನೆ. ಅವರು ಆಸ್ಕರ್ ವಿಜೇತ ಪ್ರದರ್ಶನವನ್ನು ನೀಡಬಲ್ಲರು ಎಂದು ನಾನು ನಂಬುತ್ತೇನೆ ಎಂದು  ಪಾಕಿಸ್ತಾನಿ ವರದಿಗಾರರೊಂದಿಗೆ ಮಾತನಾಡುತ್ತಾ ರೆಹಮ್‌ ಖಾನ್‌ ಹೇಳಿದ್ದಾರೆ.

ಇಮ್ರಾನ್‌ ಖಾನ್‌ಗೆ ನಾಯಕ ಅಥವಾ ಖಳನಾಯಕನ (villain) ಪಾತ್ರವನ್ನು ನೀಡಬೇಕೇ ಎಂದು ಕೇಳಿದಾಗ ಅದು ಅವರ ಮೇಲೆ ಅವಲಂಬಿತವಾಗಿದೆ, ಬಾಲಿವುಡ್‌ನಲ್ಲಿ, ಹೀರೋಗಳು ವಿಲನ್‌ಗಳಾಗುತ್ತಾರೆ ಮತ್ತು ವಿಲನ್‌ಗಳು ಹೆಚ್ಚು ಜನಪ್ರಿಯರಾಗುತ್ತಾರೆ. ಆದರೆ ಅವರಲ್ಲಿ ಹಾಸ್ಯ ಪ್ರತಿಭೆಯೂ ಇದೆ ಎಂದು ನಾನು ಭಾವಿಸುತ್ತೇನೆ ಬೇರೇನೂ ಇಲ್ಲ, ಕಪಿಲ್ ಶರ್ಮಾ ಶೋನಲ್ಲಿ ಪಾಜಿ ಅವರ (ನವಜೋತ್ ಸಿಧು ಅವರ) ಸ್ಥಾನ ಖಾಲಿಯಾಗಿದೆ ಎಂದು ನಿಮಗೆ ತಿಳಿದಿದೆ ಮತ್ತು ಈಗ ಅವರು ಶೆರೋ-ಶಾಯರಿ (ಉರ್ದು ದ್ವಿಪದಿಗಳು) ನಲ್ಲಿದ್ದಾರೆ ಎಂದು ರೆಹಮ್ ಖಾನ್ ಹೇಳಿದರು.

ನನ್ನ ಬಳಿ ಎಲ್ಲಾ ಇದೆ ಎಂದ ಪಾಕ್ ಪ್ರಧಾನಿಗೆ ಮಾಜಿ ಪತ್ನಿ ಏನಂದ್ಲು ನೋಡಿ!

ಹಾಗೆಯೇ, ಇಮ್ರಾನ್‌ ಖಾನ್‌ ಅವರು ಪಾಜಿಯೊಂದಿಗೆ (ನವಜೋತ್ ಸಿಧು)ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಅವರೊಂದಿಗೆ ಕಷ್ಟಸುಖ ಹಂಚಿಕೊಳ್ಳಬಹುದು ಎಂದು ನಾನು ಭಾವಿಸುತ್ತೇನೆ ಎಂದು ರೆಹಮ್‌ ಖಾನ್‌ ಹೇಳಿದ್ದರು. ಗಮನಾರ್ಹವಾಗಿ ಇಮ್ರಾನ್‌ ಖಾನ್‌ ಅಧಿಕಾರದಿಂದ ಹೊರಹಾಕಲ್ಪಟ್ಟ ನಂತರ ಪಾಕಿಸ್ತಾನವನ್ನು ಉದ್ದೇಶಿಸಿ ಮಾಡಿದ ಮೊದಲ ಭಾಷಣ ಮಾಡಿದಂದೇ ರೆಹಮ್ ಖಾನ್‌ ಈ ಹೇಳಿಕೆ ಹೊರ ಬಿದ್ದಿದೆ.

ಈ ಹಿಂದೆ ನನ್ನ ಬಳಿ ಎಲ್ಲಾ ಇದೆ ಎಂಬ ಇಮ್ರಾನ್ ಖಾನ್ ಅವರ  ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಪತ್ನಿ ರೆಹಮ್ ಖಾನ್ (Reham Khan) ಆತನ ಬಳಿ ಅಖಲ್‌ವೊಂದು (ಪ್ರಜ್ಞೆಅಥವಾ ಬುದ್ಧಿವಂತಿಕೆ) ಬಿಟ್ಟು ಮತ್ತೆಲ್ಲವೂ ಇದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇಮ್ರಾನ್ ಖಾನ್  ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯಿಸಿದ ರೆಹಮ್ ಖಾನ್, ಇಮ್ರಾನ್‌ ಖಾನ್‌ ಪಾಕ್‌ ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನವು ಉತ್ತಮ ಸ್ಥಳವಾಗಿತ್ತು ಎಂದು ಹೇಳಿದ್ದರು.

ಏತನ್ಮಧ್ಯೆ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ (Congress Chief) ನವಜೋತ್ ಸಿಂಗ್ ಸಿಧು (Navjot Sidhu)ಅವರು ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಮೃತಸರ ಪೂರ್ವದಿಂದ ಸ್ಪರ್ಧಿಸಿ ಸೋತಿದ್ದಾರೆ. ಸೋಲಿನ ಬೆನ್ನಲ್ಲೇ ಸಿಧು ಅವರು ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮಾಜಿ ಕ್ರಿಕೆಟಿಗ (former cricketer) ಸಿಧು ದಿ ಕಪಿಲ್ ಶರ್ಮಾ ಶೋ ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು ಮತ್ತು ಪುಲ್ವಾಮಾ ಭಯೋತ್ಪಾದಕ ದಾಳಿಯ (Pulwama terror attack) ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಕಾರ್ಯಕ್ರಮದಿಂದ ಹೊರಹಾಕಲ್ಪಟ್ಟರು.

click me!