ಚಳಿಗಾಲದಲ್ಲಿ ದಾಳಿ ನಡೆಸಲು ಚೀನಾ ಸಂಚು..? ಫ್ರಾನ್ಸ್‌ನಿಂದ ಹ್ಯಾಮರ್‌ ಕ್ಷಿಪಣಿ ಖರೀದಿಸಿದ ಭಾರತ

By Kannadaprabha NewsFirst Published Jul 24, 2020, 7:07 AM IST
Highlights

ಫ್ರಾನ್ಸ್‌ನಿಂದ ತುರ್ತಾಗಿ ಹ್ಯಾಮರ್‌ ಕ್ಷಿಪಣಿಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕ್ಷಿಪಣಿಗಳು, ಈಗಾಗಲೇ ಫ್ರಾನ್ಸ್‌ನಿಂದ ಭಾರತಕ್ಕೆ ಪೂರೈಕೆ ಆಗುವ ಹಂತದಲ್ಲಿರುವ ರಫೇಲ್‌ ವಿಮಾನಗಳಲ್ಲಿ ಅಳವಡಿಕೆಯಾಗಲಿವೆ.

ನವದೆಹಲಿ(ಜು.24): ಫ್ರಾನ್ಸ್‌ನಿಂದ ತುರ್ತಾಗಿ ಹ್ಯಾಮರ್‌ ಕ್ಷಿಪಣಿಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕ್ಷಿಪಣಿಗಳು, ಈಗಾಗಲೇ ಫ್ರಾನ್ಸ್‌ನಿಂದ ಭಾರತಕ್ಕೆ ಪೂರೈಕೆ ಆಗುವ ಹಂತದಲ್ಲಿರುವ ರಫೇಲ್‌ ವಿಮಾನಗಳಲ್ಲಿ ಅಳವಡಿಕೆಯಾಗಲಿವೆ. ಈ ಮೂಲಕ ರಫೇಲ್‌ನ ಬಲವನ್ನು ಇನ್ನಷ್ಟುಹೆಚ್ಚಿಸಲಿದೆ. ಹ್ಯಾಮರ್‌ ಕ್ಷಿಪಣಿಗಳು 60-70 ಕಿ. ಮೀ ವ್ಯಾಪ್ತಿಯಲ್ಲಿ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ.

ಗಡಿ ಬಿಕ್ಕಟ್ಟು ಇತ್ಯರ್ಥ ನಿಟ್ಟಿನಲ್ಲಿ ಲಡಾಖ್‌ನ ವಿವಾದಿತ ಪ್ರದೇಶದಿಂದ ತನ್ನ ಸೇನೆ ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿದ್ದ ಚೀನಾ ಮತ್ತೆ ತನ್ನ ಮೊಂಡಾಟ ಪ್ರದರ್ಶಿಸಿದೆ. ತಾನು ಒಪ್ಪಿಕೊಂಡಂತೆ ಪೂರ್ಣ ಹಿಂದೆ ಸರಿಯುವ ಬದಲು ಇನ್ನೂ ವಿವಾದಿತ ಪ್ರದೇಶದಲ್ಲೇ ಭಾರೀ ಪ್ರಮಾಣದ ಸೈನಿಕರೊಂದಿಗೆ ಬೀಡುಬಿಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಹಿಂದೆ ಸರಿದಂತೆ ಮಾಡಿ ಈಗ ಅದು ಮತ್ತಷ್ಟುಸಂಖ್ಯೆಯ ಯೋಧರನ್ನು ಗಡಿಯ ವಿವಿಧ ಭಾಗಗಳಲ್ಲಿ ನಿಯೋಜಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

'ಒಬ್ಬ ವ್ಯಕ್ತಿ ಇಮೇಜ್ ಬದಲಾದರೆ ದೇಶ ಬದಲಾಗಲ್ಲ' ಮೋದಿಗೆ ರಾಹುಲ್ ಗುದ್ದು

ಮೂಲಗಳ ಪ್ರಕಾರ 40 ಸಾವಿರ ಯೋಧರನ್ನು ಗಡಿಯ ವಿವಿಧ ಭಾಗಗಳಲ್ಲಿ ಚೀನಾ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ತಿರುಗೇಟು ನೀಡಲು ಭಾರತ ಕೂಡ ಸಜ್ಜಾಗಿದ್ದು, ಸುದೀರ್ಘ ಅವಧಿಯವರೆಗೆ, ಮುಂಬರುವ ಚಳಿಗಾಲದಂಥ ಕಠಿಣ ಸಂದರ್ಭದಲ್ಲಿ ಕೂಡ ಭಾರತದ ಪಡೆಗಳನ್ನು ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲು ತೀರ್ಮಾನಿಸಿದೆ. ಇದಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸೇನೆಗೆ ಭಾರತವು ಅಗತ್ಯ ಪಡಿತರ, ಸೇನಾ ಸಲಕರಣೆ ಸೇರಿದಂತೆ ಇತರ ಪೂರೈಕೆಗಳನ್ನು ಮಾಡಲು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಗಡಿಯಲ್ಲಿ ಚೀನಾ ಹಾಗೂ ಭಾರತದ ಪಡೆಗಳು ಹಿಂದೆ ಸರಿವ ಬಗ್ಗೆ ಉಭಯ ದೇಶಗಳು ಸೇನಾ ಕೋರ್‌ ಕಮಾಂಡರ್‌ಗಳ ಮಟ್ಟದಲ್ಲಿ 4 ಬಾರಿ ಮಾತುಕತೆ ನಡೆಸಿವೆ. ಕಳೆದ ವಾರ ಕೂಡ ಇಂಥದ್ದೇ ಒಂದು ಮಾತುಕತೆ ನಡೆದಿತ್ತು. ಆದರೆ ಫಿಂಗರ್‌-5 ಹಾಗೂ ಪ್ಯಾಂಗಾಂಗ್‌ ಸರೋವರ ವಲಯದಲ್ಲಿ ಚೀನಾ ಪಡೆಗಳು ಹಿಂದೆ ಸರಿಯದೇ ಹಾಗೆಯೇ ಬೀಡು ಬಿಟ್ಟಿವೆ. ಕಳೆದ 1 ವಾರದಿಂದ ಈ ಪಡೆಗಳ ಚಲನವಲನ ನಡೆಯುತ್ತಿಲ್ಲ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕೇಂದ್ರ ಸರ್ಕಾರದ 'ಸಾಧನೆ'ಗಳನ್ನು ಪಟ್ಟಿ ಮಾಡಿದ ರಾಹುಲ್

ಇದರ ಬದಲು ಸುಮಾರು 40 ಸಾವಿರ ಯೋಧರನ್ನು ಪೂರ್ವ ಲಡಾಖ್‌ ಗಡಿ ಆಚೆ ಚೀನಾ ನಿಯೋಜಿಸಿದೆ. ಈ ಪಡೆಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ವಾಯುರಕ್ಷಣಾ ವ್ಯವಸ್ಥೆ ಹೊಂದಿವೆ ಎಂದು ಮೂಲಗಳು ಹೇಳಿವೆ.

ಈ ಕಾರಣಕ್ಕೆ ಭಾರತ ಸೇನೆ ಕೂಡ ತಯಾರಿ ಆರಂಭಿಸಿದೆ. ಈ ಪ್ರದೇಶದಲ್ಲಿ ಸುದೀರ್ಘ ಅವಧಿಯವರೆಗೆ, ಅಂದರೆ ಮುಂಬರುವ ಕೊರೆಯುವ ಚಳಿಗಾಲದಲ್ಲೂ ಇಲ್ಲಿಯೇ ಬೀಡು ಬಿಡಲು ತೀರ್ಮಾನಿಸಿವೆ. ಸೇನೆಗೆ ಅಗತ್ಯ ಸೇನಾ ಸಲಕರಣೆಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿದುಬಂದಿದೆ.

ನೂತನ ಬೈಕ್ ಪಡೆದ ಸಂಭ್ರಮ, ಸವಾರನ ಸಾಹಸಕ್ಕೆ ಶೋ ರೂಂ ಮೆಟ್ಟಿಲು ಕಿತ್ತು ಬಂತು!

ಕೆಲವು ಭಾಗಗಳಲ್ಲಿ ಭಾರತ-ಚೀನಾ ಸೇನೆಯ ನಡುವಿನ ಅಂತರ 3ರಿಂದ 8 ಕಿ.ಮೀ.ವರೆಗೂ ಇದೆ. ಆದರೆ ಪ್ಯಾಟ್ರೋಲಿಂಗ್‌ ಪಾಯಿಂಟ್‌-15 ಎಂಬಲ್ಲಿ ಉಭಯ ಸೇನೆಗಳ ನಡುವಿನ ಅಂತರ ಕೇವಲ 600ರಿಂದ 800 ಮೀ. ಎಂದು ವರದಿಗಳು ಹೇಳಿವೆ.

click me!