ಮನೆಯವರಿಂದಲೇ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚು!

By Suvarna NewsFirst Published Jul 23, 2020, 5:13 PM IST
Highlights

ಮನೆಯವರಿಂದಲೇ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚು| ದಕ್ಷಿಣ ಕೊರಿಯಾ ಸಾಂಕ್ರಾಮಿಕ ರೋಗ ತಜ್ಞರ ಅಧ್ಯಯನ|  59 ಸಾವಿರ ಜನರನ್ನು ಅಧ್ಯಯನಕ್ಕೆ

ಸೋಲ್(ಜು.23):  ಕೊರೋನಾ ವೈರಸ್‌ ಸೋಂಕು ಹೊರಗಿನವರಿಂದ ಅಂಟುವುದಕ್ಕಿಂತ ಮನೆಯ ಸದಸ್ಯರಿಂದಲೇ ಅಂಟುವ ಸಾಧ್ಯತೆ ಹೆಚ್ಚು ಎಂದು ದಕ್ಷಿಣ ಕೊರಿಯಾದ ಸಾಂಕ್ರಾಮಿಕ ರೋಗ ತಜ್ಞರು ಕಂಡುಕೊಂಡಿದ್ದಾರೆ.

ಈ ತಜ್ಞರು 5706 ಕೊರೋನಾ ಸೋಂಕಿತ ರೋಗಿಗಳನ್ನು ಹಾಗೂ ಅವರ ಸಂಪರ್ಕಕ್ಕೆ ಬಂದ 59 ಸಾವಿರ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರಲ್ಲಿ 100ಕ್ಕೆ 2 ಸೋಂಕಿತರು ಹೊರಗಿನವರಿಂದ ಸೋಂಕಿಗೆ ಒಳಗಾಗಿದ್ದಾರೆ. 10ರಲ್ಲಿ ಒಬ್ಬರು ತಮ್ಮ ಕುಟುಂಬದವರಿಂದಲೇ ಸೋಂಕಿತರಾಗಿದ್ದಾರೆ.

ಕೊರೋನಾ ಲಸಿಕೆ ಸಂಶೋಧನೆ ಹ್ಯಾಕ್‌ಗೆ ಚೀನಾ ಯತ್ನ!

ವಯಸ್ಸಿಗೆ ಅನುಗುಣವಾಗಿ ಸೋಂಕಿತರ ಅಧ್ಯಯನ ನಡೆಸಿದಾಗ ಹದಿಯರೆಯದ ಬಾಲಕರು ಹಾಗೂ 60-70 ದಾಟಿದ ವೃದ್ಧರಿಗೆ ಸೋಂಕು ಬಂದಿರುವುದು ಹೆಚ್ಚಾಗಿ ಮನೆಯವರಿಂದಲೇ ಎಂದು ದೃಢಪಟ್ಟಿದೆ.

‘ಈ ವಯೋಮಾನದವರು ಹೆಚ್ಚಾಗಿ ಮನೆ ಮಂದಿ ಜತೆ ಅತ್ಯಂತ ನಿಕಟ ಸಂಪರ್ಕ ಹೊಂದಿರುತ್ತಾರೆ. ಇವರಿಗೆ ಮನೆಯ ಇತರರಿಂದ ದೈನಂದಿನ ಚಟುವಟಿಕೆಯಲ್ಲಿ ಹೆಚ್ಚು ಸಹಾಯ ಬೇಕಾಗುತ್ತದೆ. ಹೀಗಾಗಿಯೇ ಮನೆಯವರಿಂದಲೇ ಇವರು ಹೆಚ್ಚು ಸೋಂಕಿತರಾಗಿರಬಹುದು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ರಾಯಭಾರ ಕಚೇರಿ ಬಂದ್‌ಗೆ ಚೀನಾಕ್ಕೆ ಅಮೆರಿಕ ಸೂಚನೆ!

ಆದರೆ ಮಕ್ಕಳು ಸೋಂಕಿಗೆ ಒಳಗಾದರೂ ಸೋಂಕಿನ ಲಕ್ಷಣ ಇರುವುದಿಲ್ಲ. ಇವರಿಂದ ಇತರರಿಗೆ ಸೋಂಕು ಹರಡುವ ಸಾಧ್ಯತೆ ಕೂಡ ಕಡಿಮೆ ಎಂದು ಅಧ್ಯಯನ ಹೇಳಿದೆ.

ಜನವರಿ 20ರಿಂದ ಮಾಚ್‌ರ್‍ 27ರವರೆಗೆ ಅಧ್ಯಯನ ನಡೆಸಲಾಗಿದೆ. ಆ ಸಂದರ್ಭದಲ್ಲಿ ದಕ್ಷಿಣ ಕೊರಿಯಾದಲ್ಲಿ ಕೊರೋನಾ ಉತ್ತುಂಗ ಸ್ಥಿತಿಗೆ ತಲುಪಿತ್ತು.

ದ. ಕೊರಿಯಾದಲ್ಲಿ 13,816 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 296 ಜನ ಸಾವನ್ನಪ್ಪಿದ್ದಾರೆ.

click me!