ಶೇಕ್ ಹಸೀನಾ ರಾಜಾಶ್ರಯ ಪಡೆಯಲಿರುವ ಬ್ರಿಟನ್‌ ವಿದೇಶದಲ್ಲಿ ಆಶ್ರಯ ಬಯಸುವವರ ನೆಚ್ಚಿನ ತಾಣ

By Suvarna News  |  First Published Aug 6, 2024, 12:05 PM IST

ರಾಜಾಶ್ರಯ ಎಂದರೆ ಥಟ್ಟನೆ ನೆನಪಾಗುವುದು ಬ್ರಿಟನ್‌. ಇಲ್ಲಿ ದೇಶಭ್ರಷ್ಟರು, ಒಂದು ದೇಶದಲ್ಲಿ ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರು ರಾಜಾಶ್ರಯ ಪಡೆವುದು ಮಾಮೂಲಿ. ಈಗ ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಕೂಡ ಬ್ರಿಟನ್‌ನಲ್ಲಿ ರಾಜಾಶ್ರಯ ಬಯಸಿದ್ದಾರೆ.


ಲಂಡನ್: ರಾಜಾಶ್ರಯ ಎಂದರೆ ಥಟ್ಟನೆ ನೆನಪಾಗುವುದು ಬ್ರಿಟನ್‌. ಇಲ್ಲಿ ದೇಶಭ್ರಷ್ಟರು, ಒಂದು ದೇಶದಲ್ಲಿ ಪದಚ್ಯುತಿಗೊಂಡ ರಾಜಕಾರಣಿಗಳು, ಇತರ ಗಣ್ಯರು ರಾಜಾಶ್ರಯ ಪಡೆವುದು ಮಾಮೂಲಿ. ಈಗ ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಕೂಡ ಬ್ರಿಟನ್‌ನಲ್ಲಿ ರಾಜಾಶ್ರಯ ಬಯಸಿದ್ದಾರೆ.

ತಮ್ಮ ತಾಯ್ನಾಡಿನಲ್ಲಿ ಶೋಷಣೆಯ ಭೀತಿಯಿಂದ ಭಯಪಡುವ ಜನರನ್ನು ರಕ್ಷಿಸಲು ಆಶ್ರಯ ನೀಡುವುದೇ ರಾಜಾಶ್ರಯವಾಗಿದೆ. ಹೀಗೆ ಆಶ್ರಯ ಪಡೆದವರನ್ನು ತಾಯ್ನಾಡಿಗೆ ಗಡೀಪಾರು ಮಾಡುವುದು ಸುಲಭವಲ್ಲ.  ಗಡೀಪಾರು ಮಾಡಬೇಕು ಎಂದರೆ ಸಾಕಷ್ಟು ಕೋರ್ಟ್ ಕಚೇರಿ ಪ್ರಕ್ರಿಯೆ ನಡೆಯಬೇಕು. ಇದು ವರ್ಷಾನುಗಟ್ಟಲೇ ನಡೆಯುವ ಪ್ರಕ್ರಿಯೆ. ಇಂಥ ಕಠಿಣ ನಿಯಮ ಬ್ರಿಟನ್‌ನಲ್ಲಿದೆ. ಹೀಗಾಗಿ ಬಹುತೇಕರು ಬ್ರಿಟನ್‌ ಮೊರೆ ಹೋಗುತ್ತಾರೆ.

Latest Videos

undefined

ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಟ್ಟವರ ಪುತ್ರಿಗೆ ಇದೆಂಥಾ ಗತಿ: ಉಕ್ಕಿನ ಮಹಿಳೆಯ ದುರಂತ ವಿದಾಯ

ಈಗಾಗಲೇ ಭಾರತದ ಉದ್ಯಮಿ ವಿಜಯ ಮಲ್ಯ, ನೀರವ್‌ ಮೋದಿ ಬ್ರಿಟನ್‌ನಲ್ಲಿದ್ದಾರೆ. ಪಾಕ್‌ ಮಾಜಿ ಪ್ರಧಾನಿ ನವಾಜ್‌ ಷರೀಫ್‌, ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್‌ ಅಸಾಂಜ್‌ ಕೂಡ ಬ್ರಿಟನ್‌ನಲ್ಲೇ ಇದ್ದರು. ಬ್ರಿಟನ್‌ ಸರ್ಕಾರವು ಕಳೆದ ವರ್ಷ ಆಶ್ರಯಕ್ಕಾಗಿ 1.12 ಲಕ್ಷ ಜನರ ಅರ್ಜಿ ವಿಲೇವಾರಿ ಮಾಡಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಟ್ಟವರ ಪುತ್ರಿಗೆ ಇದೆಂಥಾ ಗತಿ: ಉಕ್ಕಿನ ಮಹಿಳೆಯ ದುರಂತ ವಿದಾಯ

ಬಾಂಗ್ಲಾ ದಂಗೆಯ ಕ್ಷಣ ಕ್ಷಣದ ಮಾಹಿತಿ 

  • ಜು. 3: ಕೆಲ ಮೀಸಲು ರದ್ದುಪಡಿಸಿ 1971ರ ಬಾಂಗ್ಲಾ ವಿಮೋಚನಾ ಹೋರಾಟಗಾರರ ಕುಟುಂಬಕ್ಕೆ 30% ಉದ್ಯೋಗ ಮೀಸಲು ನೀಡಿದ ಹಸೀನಾ, ಪ್ರತಿಭಟನೆ ಶುರು.
  • ಜು.16: ಹಿಂಸೆಗೆ ತಿರುಗಿದ ಪ್ರತಿಭಟನೆ, ಬಾಂಗ್ಲಾದೇಶದಲ್ಲಿನ ಎಲ್ಲ ವಿವಿಗಳ ಬಂದ್‌ಗೆ ಹಸೀನಾ ಸರ್ಕಾರ ಆದೇಶ. ವಿದ್ಯಾರ್ಥಿಗಳಿಂದ ಇನ್ನಷ್ಟು ಪ್ರತಿಭಟನೆ, ಹಿಂಸಾಚಾರ.
  • ಜು.18: ದೇಶಾದ್ಯಂತ ತೀವ್ರಗೊಂಡ ಹಿಂಸಾಚಾರ, 200 ಗಡಿ ದಾಟಿದ ಸಾವು. ಟೀವಿ ಕಚೇರಿಗೆ ಬೆಂಕಿ, ಜೈಲಿಗೆ ನುಗ್ಗಿ ಕೈದಿಗಳನ್ನು ಬಿಡಿಸಿದ ಪ್ರತಿಭಟನಾಕಾರರು
  • ಜು.21: ಬಾಂಗ್ಲಾ ವಿಮೋಚನಾ ಹೋರಾಟದ ಕುಟುಂಬಗಳಮೀಸಲನ್ನು ಶೇ.30ರಿಂದ ಶೇ.5ಕ್ಕೆ ಇಳಿಸಲು ಬಾಂಗ್ಲಾದೇಶ ಸುಪ್ರೀಂಕೋರ್ಟ್ ಆದೇಶ: ಆದರೆ ಮೀಸಲು ಪೂರ್ಣ ಪ್ರಮಾಣದಲ್ಲಿ ರದ್ದು ಮಾಡಲು ಆದೇಶಿಸದ ಕೋರ್ಟ್
  • ಅ.3: ಬಾಂಗ್ಲಾ ವಿದ್ಯಾರ್ಥಿ ಹಿಂಸೆಗೆ ಮೂಲ ಕಾರಣಕರ್ತವಾದ ಜಮಾತ್ ಎ ಇಸ್ಲಾಮಿ ಪಕ್ಷ ನಿಷೇಧಕ್ಕೆ ಹಸೀನಾ ಸರ್ಕಾರ ನಿರ್ಧಾರ, ಹಿಂಸೆಯಲ್ಲಿ ಪಾಲ್ಗೊಂಡವರ ಬಿಡುಗಡೆಗೆ ನಕಾರ
  • ಆ.4: ಬಂಧಿತರ ಬಿಡುಗಡೆ ಬೇಡಿಕೆ ಈಡೇರದ ಕಾರಣ ಮರುಕಳಿಸಿದ ವಿದ್ಯಾರ್ಥಿ ಹಿಂಸೆ, ಪ್ರಧಾನಿ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಹಿಂಸಾಚಾರ, ಸುಮಾರು 100 ಮಂದಿ ಬಲಿ
  • ಅ.5: ಪ್ರಧಾನಿ ಮನೆಗೇ ನುಗ್ಗಿ ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು; ಪರಿಸ್ಥಿತಿ ಅರಿತು ಹಸೀನಾ ರಾಜೀನಾಮೆ, ಪಲಾಯನ
click me!