ಆಸ್ಪತ್ರೆಗ ಹೊರಟ್ಟಿದ್ದ ಜೋಡಿ ಮಾರ್ಗಮಧ್ಯೆ ಶೌಚಾಲಯಕ್ಕಾಗಿ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಮ್ಯಾಕ್ ಡೊನಾಲ್ಡ್‌ನ ಉತ್ಪನ್ನದ ಹೆಸರಿಟ್ಟಿದ್ದಾರೆ.
ನಮ್ಮ ದೇಶದಲ್ಲಿ ಬಸ್‌ನಲ್ಲಿ ರೈಲಿನಲ್ಲಿ, ರಸ್ತೆ ಬದಿ, ಆಟೋದಲ್ಲಿ ಆಂಬುಲೆನ್ಸ್‌ನಲ್ಲಿ ಮಹಿಳೆಯರು ಮಗುವಿಗೆ ಜನ್ಮ ನೀಡಿದ ಹಲವು ಘಟನೆಗಳು ನಡೆದಿವೆ. ಆದರೆ ದೂರದ ಅಮೆರಿಕಾದಲ್ಲಿ ಮ್ಯಾಕ್ ಡೊನಾಲ್ಡ್ ಶೌಚಾಲಯದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಗ ಹೊರಟ್ಟಿದ್ದ ಜೋಡಿ ಮಾರ್ಗಮಧ್ಯೆ ಶೌಚಾಲಯಕ್ಕಾಗಿ ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಮ್ಯಾಕ್ ಡೊನಾಲ್ಡ್‌ನ ಉತ್ಪನ್ನದ ಹೆಸರಿಟ್ಟಿದ್ದಾರೆ.
ನಂದಿ ಅರಿಯಾ ಮೊರೆಮಿ ಫಿಲಿಪ್ಸ್ (Nandi Ariyah Moremi Phillips) ಎಂಬುವವರೇ ಮ್ಯಾಕ್ ಡೊನಾಲ್ಡ್ ಶೌಚಾಲಯದಲ್ಲಿ ಜನಿಸಿದ ಮಹಿಳೆ ಆಗಿದ್ದು, ಆಕೆಗೆ ಮ್ಯಾಕ್‌ಡೊನಾಲ್ಡ್ ಉತ್ಪನ್ನವಾದ ನುಗೆಟ್ ಹೆಸರನ್ನು ನಿಕ್ ನೇಮ್ ಆಗಿ ಪೋಷಕರು ಇಟ್ಟಿದ್ದಾರೆ. ಅಲಾಂಡ್ರಿಯಾ ವರ್ತಿ (Alandria Worthy) ಎಂಬುವವರೇ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಈ ಮಹಿಳೆ ತನ್ನ ಗೆಳೆಯ ಡಿಯಾಂಡ್ರೆ ಫಿಲಿಪ್ಸ್ (Deandre Phillips) ಜೊತೆ ಅಟ್ಲಾಂಟದ ಆಸ್ಪತ್ರೆಗೆ ಹೊರಟಿದ್ದರು. ದಾರಿಮಧ್ಯೆ ಮಹಿಳೆಗೆ ಅರ್ಜೆಂಟ್ ಆಗಿ ಶೌಚಾಲಯಕ್ಕೆ ಹೋಗಬೇಕಿನಿಸಿದ್ದು, ಸಮೀಪದ ಮ್ಯಾಕ್ ಡೊನಾಲ್ಡ್‌ಗೆ ಹೋಗಿದ್ದು, ಅಲ್ಲಿನ ಶೌಚಾಲಯದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನವಂಬರ್ 23 ರಂದು ಈ ಘಟನೆ ನಡೆದಿದೆ.
ತಾಯ್ತನದ ಸುಖ ಅನುಭವಿಸಲಿಲ್ಲ, ಹೆರಿಗೆ ನೋವಿಲ್ಲ, ಕೋಮಾದಲ್ಲೇ ಅಮ್ಮನಾದ ಮಹಿಳೆ!
ಮಹಿಳೆ ಶೌಚಾಲಯಕ್ಕೆ ಹೋದ ನಂತರ ಡೊನಾಲ್ಡ್ ರೆಸ್ಟೋರೆಂಟ್‌ನ ಮ್ಯಾನೇಜರ್ ಟುನೀಶಿಯಾ ವುಡ್ವರ್ಡ್ (Tunisia Woodward) ಕೂಡ ಶೌಚಾಲಯಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸ್ಥಿತಿ ನೋಡಿ ಗಾಬರಿಯಾಗಿದ್ದಾರೆ. ಗರ್ಭಿಣಿ ಮಹಿಳೆ ಅಲಾಂಡ್ರಿಯಾ ವರ್ತಿಗೆ ಅಲ್ಲಿ ವಾಟರ್ ಬ್ರೋಕ್ ಆಗಿದ್ದು, ಅವರು ಅಲ್ಲಿ ಸಹಾಯಕ್ಕಾಗಿ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದರು ಎಂದು ಮ್ಯಾನೇಜರ್ ಹೇಳಿದ್ದಾರೆ. ನಾನು ಹೆರಿಗೆ ನೋವಿನಿಂದ ಬಳಲುತ್ತಿದ್ದೇನೆ. ಯಾರಾದರೂ ಕಾರಿನಲ್ಲಿರುವ ವ್ಯಕ್ತಿಗೆ ವಿಚಾರ ತಿಳಿಸಿ ಎಂದು ಗರ್ಭಿಣಿ ಮಹಿಳೆ ಅಲಾಂಡ್ರಿಯಾ ವರ್ತಿ ಬೊಬ್ಬೆ ಹೊಡೆಯುತ್ತಿದ್ದರು ಎಂದು ಮ್ಯಾನೇಜರ್ ಹೇಳಿದ್ದಾರೆ.
ಕೂಲ್ ಡ್ರಿಂಕ್ಸ್ ನಲ್ಲಿ ಸತ್ತ ಹಲ್ಲಿ, ಅಹಮದಾಬಾದ್ ಮೆಕ್ ಡೊನಾಲ್ಡ್ ಸೀಲ್ ಮಾಡಿದ ಅಧಿಕಾರಿಗಳು!
ನಂತರ ಮ್ಯಾಕ್ ಡೊನಾಲ್ಡ್ ಮ್ಯಾನೇಜರ್ ತನ್ನ ಸಹೋದ್ಯೋಗಿಗಳಾದ ಶಾಕ್ವೆರಿಯಾ ಕೈಗ್ಲರ್ (Sha'querria Kaigler) ಹಾಗೂ ಕೀಶಾ ಬ್ಲೂ-ಮುರ್ರೆ (Keisha Blue-Murray) ಅವರನ್ನು ಸಹಾಯಕ್ಕೆ ಕರೆದಿದ್ದಾರೆ. ಇವರ ಸಹಾಯದೊಂದಿಗೆ ಮಹಿಳೆ 15 ನಿಮಿಷದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲೇ ಇದ್ದ ಮತ್ತೊಬ್ಬ ಸಹೋದ್ಯೋಗಿ 911ಗೆ (ತುರ್ತು ಸಹಾಯವಾಣಿ)ಗೆ ಕರೆ ಮಾಡಿದ್ದು, ಮತ್ತುಳಿದವರು ಮಗುವಿನ ತಂದೆಗೆ ವಿಚಾರ ತಿಳಿಸಿದ್ದಾರೆ. ಅಲ್ಲದೇ ಮ್ಯಾಕ್‌ನಲ್ಲಿದ್ದ ಮಹಿಳೆಯರು ಅವರ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಮಗುವಿಗೆ ನಂದಿ ಅರಿಯಾ ಮೊರೆಮಿ ಫಿಲಿಪ್ಸ್ ಎಂದು ಹೆಸರಿಡಲಾಗಿದ್ದು, ಮಗು ಆರೋಗ್ಯವಾಗಿದೆ. ಅಲ್ಲದೇ ಆಕೆಗೆ ಲಿಟ್ಲ್ ನುಗೆಟ್ ಎಂಬ ಮ್ಯಾಕ್ ಉತ್ಪನ್ನದ ಹೆಸರಿಡಲಾಗಿದೆ.
50 ವರ್ಷಗಳಿಂದ ನಿರಂತರ ಬರ್ಗರ್ ತಿಂದು ಗಿನ್ನೆಸ್ ಪುಟ ಸೇರಿದ
ಈ ಬಗ್ಗೆ ಮಾತನಾಡಿದ ಮ್ಯಾಕ್ ಡೊನಾಲ್ಡ್ ಮ್ಯಾನೇಜರ್, ನಾವೆಲ್ಲರೂ ತಾಯಂದಿರು, ಹೀಗಾಗಿ ನಾವು ಜೊತೆಯಾಗಿ ಆಕೆಗೆ ಸಹಾಯ ಮಾಡಿದರು. ಅಲ್ಲದೇ ನಾವು ಮಗುವಿನ ತಂದೆ ಮಗುವನ್ನು ಎತ್ತಿಕೊಳ್ಳಲಿ ಎಂದು ಬಯಸಿದೆವು. ಅವರೂ ಹಾಗೆ ಮಾಡಿದರು ಎಂದು ವುಡ್‌ವರ್ಡ್ ಹೇಳಿದರು. ಅಲ್ಲೇ ಈ ಗರ್ಭಿಣಿ (Pragnent) ಮಹಿಳೆಗೆ ಹೆರಿಗೆಗೆ ಸಹಾಯ ಮಾಡಿದ ಮ್ಯಾಕ್ ಡೊನಾಲ್ಡ್ ಸಿಬ್ಬಂದಿಗೆ ಪ್ರತಿಯೊಬ್ಬರಿಗೂ 250 ಡಾಲರ್ ಮೊತ್ತದ ಗಿಫ್ಟ್ ಕಾರ್ಡ್ ಕೊಡುಗೆ ನೀಡಲಾಗುವುದು ಎಂದು ಈ ಮ್ಯಾಕ್ ಡೊನಾಲ್ಡ್ ಪ್ರಾಂಚೈಸ್‌ನ ಮಾಲೀಕ ಸ್ಟೀವ್ ಅಕ್ನಿಬೊರೊ ಹೇಳಿದ್ದಾರೆ.
ಹೆರಿಗೆ ಆಸ್ಪತ್ರೆ ಮುಂದೆಯೇ ರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ