
ಕೀವ್ ( ನ.26): ಉಕ್ರೇನ್‌ನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೆಲವು ವೈದ್ಯರು, ಕತ್ತಲೆಯಲ್ಲಿಯೇ ಮಗುವಿನ ಹೃದಯ ಚಿಕಿತ್ಸೆಯನ್ನು ನಡೆಸುತ್ತಿರುವ ವಿಡಿಯೋ ಇದಾಗಿದೆ. ಆಗಿದ್ದೇನೆಂದರೆ, ರಷ್ಯಾವು, ಉಕ್ರೇನ್‌ನ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದರಲ್ಲಿ ಉಕ್ರೇನ್‌ನ ಬಂದರುಗಳು, ರಸ್ತೆಗಳು ಹಾಗೂ ಪವರ್ ಪ್ಲಾಂಟ್‌ಗಳು ಮುಖ್ಯವಾಗಿವೆ. ಇತ್ತೀಚೆಗೆ ರಷ್ಯಾ ಉಡಾವಣೆ ಮಾಡಿದ ಕ್ಷಿಪಣಿಯೊಂದು ಉಕ್ರೇನ್ ವಿದ್ಯುತ್ ಹಂಚಿಕೆ ಮಾಡುವ ಕೇಂದ್ರದಲ್ಲಿ ಬಿದ್ದಿತ್ತು. ಇದರಿಂದಾಗಿ ಅಂದಾಜು ಒಂಡು ಕೋಟಿ ಜನ ಕತ್ತಲೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನವೆಂಬರ್ 24 ರಂದು ಈ ವಿಡಿಯೋ ಮಾಡಲಾಗಿದ್ದು, ಇದನ್ನು ಇರಿನಾ ವೈಚುಕ್ ಎನ್ನುವ ಮಹಿಳೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಷ್ಯಾದ ಸೇನೆಯು ಉಕ್ರೇನ್‌ನ ರಾಜಧಾನಿ ಕೀವ್‌ನ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಇದರಿಂದಾಗಿ ಕೀವ್ ಹಾರ್ಟ್ ಇನ್ಸ್‌ಟಿಟ್ಯೂಟ್‌ನಲ್ಲಿ ವಿದ್ಯುತ್ ಇಲ್ಲದೆ ಹಲವು ದಿನಗಳಾಗಿವೆ. ಇದರ ನಡುವೆಯೂ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಮಗುವಿನ ಹೃದಯ ಶಸ್ತ್ರಚಕಿತ್ಸೆಯನ್ನು ಬಹುತೇಕ ಕತ್ತಲೆಯಲ್ಲಿಯೇ ಮಾಡಿದ್ದಾರೆ. ಸರ್ಜರಿಯ ಪ್ರಮುಖ ಸಮಯದಲ್ಲಿ ಎಮರ್ಜೆನ್ಸಿ ಲೈಟ್ ಅನ್ನು ವೈದ್ಯರು ಬಳಕೆ ಮಾಡಿದ್ದಾರೆ.
ರಷ್ಯಾ ಇದನ್ನೇ ಬಯಸಿದೆ: ಸ್ವತಃ ಕೀವ್ ಹೃದಯ ಸಂಸ್ಥೆಯ ವೈದ್ಯ ಈ ವಿಡಿಯೋ ಮಾಡಿದ್ದಾರೆ. ರಷ್ಯಾ ಸೇನೆಯು ಉಕ್ರೇನ್‌ನ ಮೇಲೆ ದಾಳಿ ಮಾಡುವ ಮೂಲಕ ಜನರು ನರಳುವುದನ್ನೇ ಬಯಸಿದೆ ಎಂದು ಆರೋಪಿಸಿದ್ದಾರೆ. 'ಇಂದು ನಾವು ಕತ್ತಲೆಯಲ್ಲಿ ಮಗುವಿನ ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಇದು ತುರ್ತಾಗಿ ಮಾಡಬೇಕಿದ್ದ ಶಸ್ತ್ರಚಿಕಿತ್ಸೆ ಆಗಿತ್ತು. ಇಲ್ಲಿ ಏನಾಯಿತು ಎನ್ನುವುದು ನಮಗೆ ಗೊತ್ತಿಲ್ಲ. ಅಚಾನಕ್ ಆಗಿ ಆಸ್ಪತ್ರೆಯ ವಿದ್ಯುತ್ ಸಂಪರ್ಕವೇ ಕಟ್ ಆಯಿತು. ಹಾಗಂತ ನಾವು ಶಸ್ತ್ರಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸುವ ಯಾವ ಸಾಧ್ಯತೆ ಕೂಡ ಇರಲಿಲ್ಲ. ಕೊನೆಗೆ ಬ್ಯಾಟರಿ ಲೈಟ್ ಹಾಗೂ ಎಮರ್ಜೆನ್ಸಿ ಲೈಟ್‌ಗಳನ್ನು ಬಳಸಿ ಶಸ್ತ್ರಚಿಕಿತ್ಸೆ ಮಾಡಿದ್ದೆವೇ. ಪುಟ್ಟ ಜನರೇಟರ್ ಮೂಲಕ ಎಮರ್ಜೆನ್ಸಿ ಲೈಟ್ ಉರಿಸಲಾಗಿತ್ತು ಎಂದು ವೈದ್ಯ ಹೇಳಿದ್ದಾರೆ. ಇದೇ ವೇಳೆ ರಷ್ಯಾಗೆ ಟಾಂಟ್ ನೀಡಿದ ವೈದ್ಯ, ನೀವು ಸಂತೋಷವಾಗಿರಿ. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ಇದೇ ಅಲ್ಲವೇ ನಿಮಗೆ ಬೇಕಾಗಿರುವುದು ಎಂದು ಅವರು ಹೇಳಿದ್ದಾರೆ.
ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾ ದಾಳಿ: 2 ದಿನದ ಮಗು ಸೇರಿ 4 ಸಾವು
ಈ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೈದ್ಯರ ಕರ್ತವ್ಯಪರತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಈ ವೈದ್ಯರನ್ನು ಹೀರೋ ಎಂದು ಹೊಗಳಿಸಿದ್ದಾರೆ. 'ಈ ಸರ್ಜನ್‌ಗಳು ನಿಜವಾದ ಹೀರೋಗಳು, ಅತ್ಯುತ್ತಮ ಸ್ನೇಹಿತರು. ಅತ್ಯಂತ ಕಠಿಣ ಸಮಯದಲ್ಲೂ ಜನರಿಗೆ ಸಹಾಯ ಮಾಡುವ ತಮ್ಮ ಬದ್ಧತೆಯನ್ನು ಅವರು ತೋರಿದ್ದಾರೆ' ಎಂದು ಒಬ್ಬರು ಬರೆದಿದ್ದಾರೆ. 'ಈ ಯುದ್ಧದ ಸಮಯದಲ್ಲಿ ಬದುಕಿನ ಪ್ರೀತಿ ಹುಟ್ಟಿಸುವವರು ಈ ವೈದ್ಯರು. ಇವರು ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ವೃತ್ತಿಪರರು, ಅವರು ಕಷ್ಟಕರ ಸಂದರ್ಭಗಳಲ್ಲಿಯೂ ಸಹ ಜನರಿಗೆ ಚಿಕಿತ್ಸೆ ನೀಡುತ್ತಾರೆ' ಎಂದು ಇನ್ನೊಬ್ಬರು ಬರೆದಿದ್ದಾರೆ.
ಮನುಷ್ಯರನ್ನೇ ಕರಗಿಸುವ 'ಪೂರ್ ಮ್ಯಾನ್ ನ್ಯೂಕ್' ಬಾಂಬ್ ಅನ್ನು ಉಕ್ರೇನ್‌ನತ್ತ ಉಡಾಯಿಸಿದ ರಷ್ಯಾ?
73 ಕ್ಷಿಪಣಿ ಉಡಾವಣೆ ಮಾಡಿದ್ದ ರಷ್ಯಾ: ಉಕ್ರೇನ್ ಮೇಲೆ ನವೆಂಬರ್ 23 ರಂದು ರಷ್ಯಾ ಬರೋಬ್ಬರಿ 73 ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಇದರಲ್ಲಿ 10 ಮಂದಿ ಸಾವು ಕಂಡಿದ್ದರೆ, 30 ಮಂದಿ ಗಾಯಾಳುವಾಗಿದ್ದವು. ರಷ್ಯಾದ ದಾಳಿಯ ಕಾರಣದಿಂದಾಗಿ ಪವರ್ ಗ್ರಿಡ್‌ನಂದ ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್‌ನ ಸಂಪರ್ಕವನ್ನು ಕಳೆದ 40 ವರ್ಷದಲ್ಲಿಯೇ ಮೊದಲ ಬಾರಿಗೆ ಕಟ್ ಮಾಡಲಾಗಿದೆ. ಕೀವ್‌ನಲ್ಲಿ ಈಗಾಗಲೇ 1 ಕೋಟಿ ಮಂದಿ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು 30 ಲಕ್ಷ ಮಂದಿ ಮನೆಯಿಲ್ಲದೆ ಚಳಿಯಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ. ಒಬ್ಬ ಮನುಷ್ಯ ಸಾವು ಕಾಣುವಷ್ಟು ಚಳಿ ಉಕ್ರೇನ್‌ನಲ್ಲಿ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ