ವರ್ಚುವಲ್ ಕೋರ್ಟ್ ವಿಚಾರಣೆ, ಅಂಡರ್‌ವೇರ್‌ನಲ್ಲೇ ಹಾಜರಾದ ಮಹಿಳಾ ಜಡ್ಜ್, ವಿಡಿಯೋ ವೈರಲ್

Published : Nov 26, 2022, 05:44 PM ISTUpdated : Nov 26, 2022, 05:46 PM IST
ವರ್ಚುವಲ್ ಕೋರ್ಟ್ ವಿಚಾರಣೆ, ಅಂಡರ್‌ವೇರ್‌ನಲ್ಲೇ ಹಾಜರಾದ ಮಹಿಳಾ ಜಡ್ಜ್, ವಿಡಿಯೋ ವೈರಲ್

ಸಾರಾಂಶ

ಕೋರ್ಟ್ ವಿಚಾರಣೆಗಳು ವರ್ಚುವಲ್ ಮೂಲಕ ನಡೆಯುತ್ತಿರುವುದು ಹೊಸದೇನಲ್ಲ. ಹಲವು ಪ್ರಕರಣಗಳ ವಿಚಾರಣೆ ವರ್ಚುವಲ್ ಮೂಲಕವೇ ನಡೆಯುತ್ತದೆ. ಹೀಗೆ ವರ್ಚುವಲ್ ವಿಚಾರಣೆ ವೇಳೆ ಮಹಿಳಾ ಜಡ್ಜ್, ಅಂಡರ್‌ವೇರ್‌ನಲ್ಲಿ ಹಾಜರಾಗಿದ್ದಾರೆ. ಇಷ್ಟೇ ಅಲ್ಲ ಸಿಗರೇಟ್ ಅಮಲಿನಲ್ಲಿ ಏನಾಗಿದೆ ಅನ್ನೋವಷ್ಟರಲ್ಲೇ ಜಡ್ಜ್ ವಿಡಿಯೋ ವೈರಲ್ ಆಗಿದೆ.

ಕೊಲಂಬಿಯಾ(ನ.26):  ಕೊರೋನಾ ವಕ್ಕರಿಸಿದ ಬಳಿಕ ಕೋರ್ಟ್ ವಿಚಾರಣೆಗಳು ಹೆಚ್ಚಾಗಿ ವರ್ಚುವಲ್ ಮೂಡ್‌ಗೆ ತಿರುಗಿದೆ. ಸದ್ಯ ಕೊರೋನಾ ಇಳಿಕೆಯಾಗಿ ನಿರ್ಬಂಧಗಳು ಸಡಿಲಗೊಂಡಿದ್ದರೂ ವರ್ಚುವಲ್ ಮೂಡ್ ವಿಚಾರಣೆಗಳು ನಡೆಯುತ್ತಿದೆ. ಹೀಗೆ ಕಾರು ಬಾಂಬ್ ದಾಳಿ ಭಯೋತ್ಪಾದನಾ ಪ್ರಕರಣದ ವಿಚಾರಣೆ ಜೂಮ್ ವಿಡಿಯೋ ಕಾಲ್ ಮೂಲಕ ನಡೆಯುತ್ತಿತ್ತು. ಈ ವೇಳೆ ಮಹಿಳಾ ಜಡ್ಜ್ ಸೂಟ್ ಹಾಕಿ ಹಾಜರಾಗಿದ್ದಾರೆ. ಆದರೆ ಸಿಗರೇಟು ಅಮಲಿನಲ್ಲಿ ಏನು ಮಾತನಾಡುತ್ತಿದ್ದೇನೆ ಅನ್ನೋದನ್ನೇ ಮರೆತಿದ್ದಾರೆ. ವಿಡಿಯೋ ಕಾಲ್‌ನಲ್ಲಿರುವಾಗಲೇ ಬೆಡ್‌ಗೆ ಜಾರಿದ್ದಾರೆ. ಇದರಿಂದ ಮಹಿಳಾ ಜಡ್ಜ್ ಕೇವಲ ಅಂಡರ್‌ವೇರ್‌ನಲ್ಲಿ ವಿಚಾರಣೆಗೆ ಹಾಜರಾಗಿರುವುದು ಬೆಳಕಿಗೆ ಬಂದಿದೆ. ಕೆಲ ಸೆಕೆಂಡ್‌ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಈ ಘಟನೆ ನಡೆದಿರುವುದು ಕೊಲಂಬಿಯಾದಲ್ಲಿ. ನಗರದಲ್ಲಿ ನಡೆದ ಕಾರು ಬಾಂಬ್ ಭಯೋತ್ಪದನಾ ದಾಳಿ ಕುರಿತು ವಿಚಾರಣೆ ಜೂಮ್ ವಿಡಿಯೋ ಕಾಲ್ ಮೂಲಕ ನಡೆದಿದೆ. ಈ ವೇಳೆ ಅತೀವ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕಿದ್ದ ಮಹಿಳಾ ಜಡ್ಜ್ ವಿವಿಯನ್ ಪೊಲಾನಿಯಾ, ರಿಲಾಕ್ಸ್ ಆಗಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಗರೇಟಿನ ಅಮಲಿನಲ್ಲಿ ತೂರಾಡುತ್ತಾ, ಹರಸಾಹಸಪಟ್ಟು ಜೂಮ್ ಕಾಲ್ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಲ್ಯಾಪ್‌ಟಾಪ್ ಟೇಬಲ್ ಮೇಲಿಟ್ಟು, ಬೆಡ್‌ನಲ್ಲಿ ಕುಳಿತು ವಿಚಾರಣೆ ಹಾಜರಾದ ಜಡ್ಜ್, ಒಂದೆಡೆರು ಶಬ್ದ ಮಾತನಾಡಿ ಅಮಲಿನಲ್ಲಿ ಬೆಡ್‌ನಲ್ಲಿ ಮಲಗಿದ್ದಾರೆ. ಇದರಿಂದ ಮಹಿಳಾ ಜಡ್ಜ್ ಕೇವಲ ಅಂಡರ್‌ವೇರ್‌ನಲ್ಲಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ.

Twitter ಖಾತೆ ಅಮಾನತಿಗೆ ಎಲಾನ್‌ ಮಸ್ಕ್‌ರನ್ನು ವಿಚಾರಣೆಗೆ ಕರೆಸಿ ಎಂದು ಅರ್ಜಿ: ಕೋರ್ಟ್‌ನಿಂದ 25 ಸಾವಿರ ರೂ. ದಂಡ

ಮಹಿಳಾ ಜಡ್ಡ್ ಟಾಪ್ ಮಾತ್ರ ಧರಿಸಿ, ಇನ್ನು ಅಂಡರ್‌ವೇರ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ. ಮಹತ್ವದ ವಿಚಾರಣೆಯಲ್ಲಿ ಸಿಗರೇಟು ಸೇದುತ್ತಾ, ಬೇಜಾವ್ದಾರಿಯಿಂದ ವರ್ತಿಸಿದ ಮಹಿಳಾ ಜಡ್ಜ್ ವಿರುದ್ಧ ಸಾಲಿಸಿಟ್ ಜನರಲ್ ಗರಂ ಆಗಿದ್ದಾರೆ. ನ್ಯಾಯಾಧೀಶರ ಶಿಸ್ತು ಸಮಿತಿ ಮಹಿಳಾ ಜಡ್ಜ್‌ಗೆ 3 ತಿಂಗಳ ಕಾಲ ಅಮಾನತು ಶಿಕ್ಷೆ ನೀಡಲಾಗಿದೆ.

 

 

ಇದೀಗ ಈ ಮಹಿಳಾ ಜಡ್ಜ್ ನೀಡಿರುವ ಆದೇಶಗಳ ಕುರಿತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಈ ಹಿಂದೆ ಹಲವು ಬಾರಿ ವ್ಯತಿರಿಕ್ತ ಆದೇಶಗಳನ್ನು ನೀಡಿರುವುದು ಇದೀಗ ತೀವ್ರ ಅಸಮಾಧಾನಕ್ಕೂ ಕಾರಣಾಗಿದೆ. ಈ ಮಹಿಳಾ ಜಡ್ಜ್ ನಶೆಯ ಅಮಲಿನಲ್ಲೇ ತೀರ್ಪುಗಳನ್ನು, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

 

ಬಾಂಬೆ ಹೈಕೋರ್ಟ್‌ ಹೆಸರನ್ನೇ ಬದಲಿಸಲು ಕೋರಿದ ಅರ್ಜಿ ತಿರಿಸ್ಕರಿಸಿದ ಸುಪ್ರೀಂ ಕೋರ್ಟ್!

ವಿಚಾರಣೆಯಲ್ಲೇ ಇತರ ನ್ಯಾಯಾಧೀಶರು ಗರಂ ಆಗಿದ್ದಾರೆ. ವಿಡಿಯೋ ಕಾಲ್‌ನಲ್ಲೇ ಜಡ್ಜ್‌ಗೆ ತಾಕೀತು ಮಾಡಿದ್ದಾರೆ. ನಶೆಯಲ್ಲಿ ತನ್ನ ತಪ್ಪಿನ ಅರಿವಾದಾಗ ನೇರವಾಗಿ ಲ್ಯಾಪ್‌ಟಾಪ್ ಆಫ್ ಮಾಡಿದ ಮಹಿಳಾ ಜಡ್ಜ್, ಯಾರ ಫೋನ್‌ಗೆ ಉತ್ತರಿಸಿಲ್ಲ. ಅಷ್ಟರಲ್ಲೇ ಬಾರ್ ಕೌನ್ಸಿಲ್ 3 ತಿಂಗಳ ಅಮಾನತು ಶಿಕ್ಷೆ ಇಮೇಲ್ ರವಾನಿಸಲಾಗಿದೆ. 

ಇಮ್ರಾನ್‌ ಮೇಲೆ ಮತ್ತೆ ದಾಳಿ: ಗುಪ್ತಚರ ವರದಿ ಆಧರಿಸಿ ಜಡ್ಜ್‌ ಕಳವಳ
ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಇನ್ನೊಂದು ದಾಳಿ ಯತ್ನ ನಡೆಯುವ ಸಾಧ್ಯತೆಯಿದೆ ಎಂದು ಇಸ್ಲಾಮಾಬಾದ್‌ ಹೈಕೋರ್ಚ್‌ನ ಜಡ್ಜ್‌ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಕರಣವೊಂದರ ವಿಚಾರಣೆ ವೇಳೆ ಗುಪ್ತಚರ ಮಾಹಿತಿ ಆಧರಿಸಿ ಈ ಮಾಹಿತಿ ಬಹಿರಂಗಪಡಿಸಿದ ನ್ಯಾಯಾಧೀಶರು, ದೇಶದ ಮಾಜಿ ಪ್ರಧಾನಿಯೊಬ್ಬರಿಗೆ ಹೆಚ್ಚಾಗುತ್ತಿರುವ ಜೀವ ಬೆದರಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ನ್ಯಾಯಾಧೀಶರು ಸರ್ಕಾರಕ್ಕೆ ಸೂಚಿಸಿದರು. ನ.3ರಂದು ವಜೀರಾಬಾದ್‌ನಲ್ಲಿ ರಾರ‍ಯಲಿ ಉದ್ದೇಶಿಸಿ ಭಾಷಣ ಮಾಡುವ ವೇಳೆ ಇಮ್ರಾನ್‌ ಮೇಲೆ ಗುಂಡಿನ ದಾಳಿ ನಡೆದಿತ್ತು. ಬಳಿಕ ಇಮ್ರಾನ್‌ ಶಸ್ತ್ರಚಿಕಿತ್ಸೆಗೂ ಒಳಪಟ್ಟಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ