
ಲಾಹೋರ್: ಧರ್ಮನಿಂದನೆ ಆರೋಪ ಹೊರಿಸಿ ಪಾಕಿಸ್ತಾನದಲ್ಲಿ ಉದ್ರಿಕ್ತ ಮುಸ್ಲಿಮರ ಗುಂಪು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ನಲ್ಲಿ 5 ಚರ್ಚ್‌ಗಳು ಹಾಗೂ ಆಸುಪಾಸಿನ ಸ್ಥಳಗಳ ಮೇಲೆ ದಾಳಿ ನಡೆಸಿ ಚರ್ಚ್‌ಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ನಡೆದಿದೆ. ಕ್ರೈಸ್ತ ಯುವಕ ಹಾಗೂ ಆತನ ಸೋದರಿ ಕುರಾನ್ ಅನ್ನು ಅಪವಿತ್ರಗೊಳಿಸಿದ್ದಲ್ಲದೆ ಇಸ್ಲಾಂ ಬಗ್ಗೆ ಆಕ್ಷೇಪಾರ್ಹ ಟೀಕೆ-ಟಿಪ್ಪಣಿ ಮಾಡಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಉದ್ರಿಕ್ತರು ಹಿಂಸೆಗೆ ಇಳಿದಿದ್ದಾರೆ.
ಈ ದಾಳಿಯಲ್ಲಿ ಗುಂಪುಗಳು ಚರ್ಚ್‌ಗೆ ನುಗ್ಗಿ ಬೈಬಲ್‌ಗಳನ್ನು ಹರಿದು ಬೆಂಕಿ ಹೊತ್ತಿಸಿ, ಪಾದ್ರಿಗಳ ಮೇಲೆ ಹಲ್ಲೆ ನಡೆಸಿವೆ. ಇನ್ನು ಜೊತೆಗೆ ಇಸ್ಲಾಂ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎನ್ನಲಾದ ಚರ್ಚ್‌ನ ಕ್ಲೀನರ್‌ನ ಮನೆಯನ್ನು ಧ್ವಂಸಗೊಳಿಸಿದೆ. ಈ ಕುರಿತು ಚರ್ಚ್‌ನ ಪಾದ್ರಿ (father of the church) ಪೊಲೀಸರಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪಾಕಿಸ್ತಾನ ಸರ್ಕಾರ, ಲಾಹೋರ್‌ನಿಂದ (Lahore) 130 ಕಿ.ಮೀ. ದೂರದಲ್ಲಿರುವ ಫೈಸಲಾಬಾದ್‌ಗೆ ಸೇನಾಪಡೆಗಳನ್ನು ಕರೆತಂದು ಶಾಂತಿ ಮರುಸ್ಥಾಪನೆಗೆ ಯತ್ನಿಸುತ್ತದೆ. ಒಟ್ಟಾರೆ ಈ ಘಟನೆಯು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಕ್ರೈಸ್ತ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಯುರೋಪ್‌ನಲ್ಲಿ ಕ್ರೈಸ್ತ ಧರ್ಮದ ಮೇಲಿನ ನಂಬಿಕೆ ಕ್ಷೀಣ, ನೈಟ್‌ಕ್ಲಬ್ ಆಗಿ ಬದಲಾಗುತ್ತಿದೆ ಚರ್ಚ್!
ಕುಡಿದ ಅಮಲಿನಲ್ಲಿ ‘ನಾನೇ ದೇವರು’ ಎಂದು ಚರ್ಚ್‌ಗೆ ನುಗ್ಗಿ ದಾಂಧಲೆ: ಆರೋಪಿ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ