ಟೈಫೂನ್ ಲಾನ್‌ ಚಂಡಮಾರುತಕ್ಕೆ ನಲುಗಿದ ಜಪಾನ್‌, ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದ ಜನ!

Published : Aug 16, 2023, 09:17 AM ISTUpdated : Aug 16, 2023, 09:28 AM IST
ಟೈಫೂನ್ ಲಾನ್‌ ಚಂಡಮಾರುತಕ್ಕೆ ನಲುಗಿದ ಜಪಾನ್‌, ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆದ ಜನ!

ಸಾರಾಂಶ

ಪೆಸಿಫಿಕ್‌ ಸಾಗರದಲ್ಲಿ ಸೃಷ್ಟಿಯಾಗಿರುವ ಲಾನ್‌ ಚಂಡಮಾರುತಕ್ಕೆ ಜಪಾನ್ ನಲುಗಿ ಹೋಗಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, . ಗಂಟೆಗೆ 144 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯ ಪರಿಣಾಮದಿಂದಾಗಿ ವಿಮಾನಯಾನ ರದ್ದು ಮಾಡಲಾಗಿದೆ. 

ಟೋಕಿಯೋ: ಪೆಸಿಫಿಕ್‌ ಸಾಗರದಲ್ಲಿ ಸೃಷ್ಟಿಯಾಗಿರುವ ಟೈಫೂನ್ ಲಾನ್‌ (Typhoon Lan) ಚಂಡಮಾರುತ ಜಪಾನ್‌ನ ಪಶ್ಚಿಮ ಭಾಗದಲ್ಲಿರುವ ಕೀ ಪರ್ಯಾಯ ಪ್ರಸ್ಥಭೂಮಿಗೆ ಅಪ್ಪಳಿಸಿದ್ದು, ಭಾರಿ ಮಳೆಗೆ ಕಾರಣವಾಗಿದೆ. ಇದರಿಂದಾಗಿ ಜಪಾನ್‌ನಲ್ಲಿ ಸಂಚಾರ ವ್ಯತ್ಯಯವಾಗಿದ್ದು, 650 ಪ್ರಯಾಣಿಕರು ಇಡೀ ರಾತ್ರಿ ಕನ್ಸಾರಿ ವಿಮಾನ ನಿಲ್ದಾಣದಲ್ಲೇ ಉಳಿಯುವಂತಾಗಿದೆ.

ಭಾರಿ ಮಳೆ, ರಭಸವಾಗಿ ಬೀಸುತ್ತಿರುವ ಗಾಳಿಯಿಂದಾಗಿ ರಸ್ತೆ, ರೈಲು ಸಂಚಾರಗಳು ವ್ಯತ್ಯಯವಾಗಿವೆ. ಗಂಟೆಗೆ 144 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯ ಪರಿಣಾಮದಿಂದಾಗಿ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಧಕ್ಕೆ ಉಂಟಾಗಿದ್ದು, ಪ್ರವಾಸಕ್ಕಾಗಿ ಜಪಾನ್‌ಗೆ ಬಂದಿರುವವರು ತೊಂದರೆಗೆ ಸಿಲುಕಿದ್ದಾರೆ. ಕೇವಲ 6 ಗಂಟೆಗಳಲ್ಲಿ 30 ಸೆಂ.ಮೀ.ನಷ್ಟುಮಳೆಯಾಗಿದ್ದು, ಪಶ್ಚಿಮ ಜಪಾನ್‌ನಲ್ಲಿ ಹಲವು ಪ್ರದೇಶಗಳು ಮುಳುಗಡೆಯಾಗಿವೆ. ವಾಕಯಾಮಾ ಮತ್ತು ಅಯಾಬೆಯಲ್ಲಿ 20 ಸೆಂ.ಮೀ.ನಷ್ಟುಮಳೆಯಾಗಿದೆ. ಒಟ್ಟಾರೆ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಮುಂದಿನ ದಿನಗಳಲ್ಲೂ ಭಾರಿ ಮಳೆಯಾಗಲಿದ್ದು, ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸಾರ್ವಜನಿಕರಿಗೆ ಜಪಾನ್‌ ಆಡಳಿತ ಸೂಚಿಸಿದೆ.

ವಿಶ್ವದ ಮೊದಲ ಸಮುದ್ರದಾಳದ ಹೊಟೇಲ್ ಇದು: ವೀಡಿಯೋ ಶೇರ್ ಮಾಡಿದ ಆನಂದ್

ಟೈಫೂನ್ ನಿಂದಾಗಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಪರಿಣಾಮ ಸುಮಾರು 800 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ವಿದ್ಯುತ್ ಕಡಿತಗೊಂಡಿದೆ.  ಪೆಸಿಫಿಕ್ ಮಹಾಸಾಗರದಿಂದ ಸಮೀಪಿಸುತ್ತಿರುವ, ಟೈಫೂನ್ ಲ್ಯಾನ್ ಟೋಕಿಯೊದ ನೈಋತ್ಯಕ್ಕೆ ಸುಮಾರು 400km (250 ಮೈಲುಗಳು) ವಕಯಾಮಾ ಪ್ರಾಂತ್ಯದ ದಕ್ಷಿಣ ತುದಿಯಲ್ಲಿ ಭೂಕುಸಿತಕ್ಕೆ ಕಾರಣವಾಗಿದೆ.

ಇನ್ನು ಹಲವು ಕಡೆ  ಬಲವಾದ ಗಾಳಿಯ ಪರಿಣಾಮ ಕಟ್ಟಡಗಳು ಕುಸಿದಿದೆ. ಸಮುದ್ರದ ಅಲೆಗಳ ಬಡಿತಕ್ಕೆ ಕಡಲು ಕೊರೆತ ಆರಂಭವಾಗಿದೆ. ಮಧ್ಯ ಮತ್ತು ಪಶ್ಚಿಮ ಜಪಾನ್‌ನಲ್ಲಿ ಸುಮಾರು 90,000 ಮನೆಗಳಿಗೆ ವಿದ್ಯುತ್ ಕಡಿತವಾಗಿ ತೀವ್ರ ಸಂಕಷ್ಟವಾಗಿದೆ.

ಆಸ್ಟ್ರಿಯಾ ರೈತರ ಕೃಷಿ ಪದ್ಧತಿ ಬಗ್ಗೆ ತರಳಬಾಳು ಶ್ರೀಗಳ ಮೆಚ್ಚುಗೆ: ಅಧ್ಯಾಪಕರಿಗೆ ಗೌರವ ಸಮರ್ಪಣೆ

ಮುಂದಿನ 24 ಗಂಟೆಗಳಲ್ಲಿ, ಟೊಯೋಟಾ ಮೋಟರ್‌ನ ಕೇಂದ್ರ ಟೋಕೈ ಪ್ರದೇಶವು ಸುಮಾರು 350 ಮಿಮೀ (13.8 ಇಂಚುಗಳು) ಮಳೆಯಾಗುವ ನಿರೀಕ್ಷೆಯಿದೆ. ಇದು ಆಗಸ್ಟ್ ತಿಂಗಳ ಸರಾಸರಿ ಮಳೆಯ ಸುಮಾರು ಮೂರು ಪಟ್ಟು ಹೆಚ್ಚು. ಟೈಫೂನ್ ಲ್ಯಾನ್ 150 kph (93 mph) ವೇಗದಲ್ಲಿ ಗಾಳಿಯನ್ನು ಹೊಂದಿತ್ತು ಮತ್ತು ಹೊನ್ಶು ಮುಖ್ಯ ದ್ವೀಪದ ಪಶ್ಚಿಮ ಭಾಗದಲ್ಲಿ ಸುಮಾರು 15 kph (9 mph) ವೇಗದಲ್ಲಿ ವಾಯುವ್ಯಕ್ಕೆ ಚಲಿಸುತ್ತಿತ್ತು. ಜಪಾನ್‌ನ ಹವಾಮಾನ ಸಂಸ್ಥೆ ಪ್ರಕಾರ ಇದು ಬುಧವಾರದ ಆರಂಭದಲ್ಲಿ ಜಪಾನ್ ಸಮುದ್ರವನ್ನು ತಲುಪುತ್ತದೆ ಮತ್ತು ಸಮುದ್ರದ ಉದ್ದಕ್ಕೂ ಉತ್ತರಕ್ಕೆ ಮುಂದುವರಿಯುತ್ತದೆ ಎಂದು ಮುನ್ಸೂಚನೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!