ಸುಂದರಿಯರ 'ಟಾಪ್‌ಲೆಸ್‌ ಬಾಡಿಚೆಕ್‌' ವಿವಾದ, ಮಿಸ್‌ ಯುನಿವರ್ಸ್‌ನಿಂದ ಇಂಡೋನೇಷ್ಯಾ ಔಟ್‌!

By Santosh Naik  |  First Published Aug 16, 2023, 8:09 PM IST

ಮಿಸ್‌ ಯುನಿವರ್ಸ್‌ಗೆ ಸ್ಪರ್ಧೆ ಮಾಡಲು ಇಚ್ಛಿಸುವ ಸ್ಪರ್ಧಿಗಳ ಟಾಪ್‌ಲೆಸ್‌ ಬಾಡಿಚೆಕ್‌ ಇಂಡೋನೇಷ್ಯಾದ ಸಾರಿ ಪೆಸಿಪಿಕ್‌ ಹೋಟೆಲ್‌ನ ಬಾಲ್‌ ರೂಮ್‌ನಲ್ಲಿ ನಡೆಯುತ್ತಿತ್ತು. ಈ ವೇಳೆ 12ಕ್ಕೂ ಅಧಿಕ ಅಧಿಕಾರಿಗಳು ಹಾಜರಿರುತ್ತಿದ್ದರು. ಅದರಲ್ಲಿ ಹೆಚ್ಚಿನವರು ಪುರುಷರೇ ಆಗಿದ್ದರು ಎಂದು ಸ್ಪರ್ಧಿಗಳು ತಿಳಿಸಿದ್ದಾರೆ.
 


ನವದೆಹಲಿ (ಆ.16): ಮುಂದಿನ ನವೆಂಬರ್‌ನಲ್ಲಿ ನಡೆಯಲಿರುವ 2023ರ ಮಿಸ್ ಯುನಿವರ್ಸ್‌ಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಇದರ ನಡುವೆ ಮಿಸ್‌ ಯುನಿವರ್ಸ್‌ ಸಂಘಟಕರು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಇಂಡೋನೇಷ್ಯಾ ದೇಶವನ್ನು ಸ್ಪರ್ಧೆಯಿಂದ ನಿಷೇಧ ಮಾಡಿದೆ. ಇದಕ್ಕೆ ಕಾರಣ, ಇಂಡೋನೇಷ್ಯಾದಿಂದ ಸ್ಪರ್ಧೆ ಮಾಡುವ ಮಿಸ್‌ ಯುನಿವರ್ಸ್‌ ಸ್ಪರ್ಧಿಗಳಿಗೆ ಸ್ಥಳೀಯ ಸಂಘಟಕರು ಟಾಪ್‌ಲೆಸ್‌ ಬಾಡಿಚೆಕ್‌ ಮಾಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಸ್ಥಳೀಯ ಪೊಲೀಸರಿಗೆ ಈವರೆಗೂ ಏಳು ಸುಂದರಿಯರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಜುಲೈ 29 ರಿಂದ ಆಗಸ್ಟ್‌ 3ರವರರೆಗೆ ರಾಜಧಾನಿ ಜಕಾರ್ತದಲ್ಲಿ ಮಿಸ್‌ ಯುನಿವರ್ಸ್‌ ಇಂಡೋನೇಷ್ಯಾ ಸ್ಪರ್ಧೆ ನಡೆದಿತ್ತು. ಈ ಶೋನ ಗ್ರ್ಯಾಂಡ್‌ ಫೈನಲ್‌ ಇವೆಂಟ್‌ಗೂ ಮುನ್ನ ಫೈನಲ್‌ನಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಒಳಉಡುಪುಗಳನ್ನು ತೆಗೆದುಹಾಕುವಂತೆ ಸೂಚನೆ ನೀಡಲಾಗಿತ್ತು. ಇದನ್ನು ಪ್ರಶ್ನೆ ಮಾಡಿದಾಗ ಇದು ಬಾಡಿ ಚೆಕ್‌ ಎಂದು ಸಂಘಟಕರು ಹೇಳಿದ್ದು, ತೊಡೆಯ ಮೇಲೆ ಯಾವುದಾದರೂ ಮಾರ್ಕ್‌ಗಳಿವೆಯೇ ಅಥವಾ ಕೊಬ್ಬುಗಳಿವೆಯೇ ಎನ್ನುವುದನ್ನು ಚೆಕ್‌ ಮಾಡಬೇಕು ಎಂದು ಹೇಳಿದ್ದರು ಎಂದು ವಕೀಲರು ತಿಳಿಸಿದ್ದಾರೆ.

ಸಾರಿ ಪೆಸಿಪಿಕ್‌ ಹೋಟೆಲ್‌ನ ಬಾಲ್‌ರೂಮ್‌ನಲ್ಲಿ ಟಾಪ್‌ಲೆಸ್‌ ಬಾಡಿ ಚೆಕ್‌ ನಡೆದಿದೆ. ಇದೇ ಹೋಟೆಲ್‌ನಲ್ಲಿ ಸ್ಪರ್ಧೆ ನಡೆದಿತ್ತು. ಈ ವೇಳೆ 12ಕ್ಕಿಂತ ಅಧಿಕ ಅಧಿಕಾರಿಗಳು ಹಾಜರದಿದ್ದರು ಅದರಲ್ಲಿ ಹೆಚ್ಚಿನವರು ಪುರುಷರು ಆಗಿದ್ದರು ಎಂದು ತಿಳಿಸಲಾಗಿದೆ. ಅದರಲ್ಲೂ ಐವರು ಸ್ಪರ್ಧಿಗಳು ತಮ್ಮ ಟಾಪ್‌ಲೆಸ್‌ ಫೋಟೋಗಳನ್ನು ಅವರು ತೆಗೆದುಕೊಂಡಿದ್ದಾರೆ ಎಂದು ದೂರಿದ್ದಾರೆ. 'ಕೆಲವೊಂದು ಸಾಕ್ಷ್ಯಗಳು ಈಗಾಗಲೇ ಸಿಕ್ಕಿವೆ. ಸಂಘಟಕರು ಬಾಡಿಚೆಕ್‌ ಮಾಡುತ್ತಿರುವ ವಿಡಿಯೋಗಳು ಕೂಡ ನಮ್ಮ ಬಳಿ ಇದೆ' ಎಂದು ವಕೀಲರು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಪಶ್ಚಿಮ ಜಾವಾ ಪ್ರಾಂತ್ಯವನ್ನು ಪ್ರತಿನಿಧಿಸಿದ 23 ವರ್ಷದ ಮಾಡೆಲ್ ಪ್ರಿಸ್ಕಿಲಾ ರಿಬ್ಕಾ ಜೆಲಿಟಾ ಈ ಬಗ್ಗೆ ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ಟಾಪ್‌ಲೆಸ್‌ ಬಾಡಿಚೆಕ್‌ನ ಕರಾಳತೆಯನ್ನು ತಿಳಿಸಿದ್ದಾರೆ.  'ನನ್ನ ಬ್ರಾ ಬಿಚ್ಚುವಂತೆ ಅವರು ತಿಳಿಸಿದಾಗ ನಿಜಕ್ಕೂ ಆಘಾತವಾಗಿತ್ತು. ಆದರೆ, ಅಲ್ಲಿ ಆ ಕ್ಷಣದಲ್ಲಿ ನಾನು ಮಾತನಾಡುವುದಾಗಲಿ, ನಿರಾಕರಿಸುವುದಾಗಲಿ ಸಾಧ್ಯವಿರಲಿಲ್ಲ. ಬ್ರಾ ಅನ್ನು ಬಿಚ್ಚಿ ನನ್ನ ಕೈಗಳಿಂದ ಅವುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನ ಮಾಡಿದಾಗ, ಅಧಿಕಾರಿಗಳು ನನ್ನ ಮೇಲೆ ಕೂಗಾಡಲು ಆರಂಭಿಸಿದರು' ಎಂದು ತಿಳಿಸಿದ್ದಾರೆ.

ಈ ಹಂತದಲ್ಲಿ ನನಗೆ ಸಂಪೂರ್ಣವಾಗಿ ಗೊಂದಲವಾಗಿತ್ತು. ನವರ್ಸ್‌ ಹಾಗೂ ಅವಮಾನದಿಂದ ಕುಗ್ಗಿಹೋಗಿದ್ದೆ. ಒಂದು ಹಂತದಲ್ಲಿ ನನ್ನ ಒಳ ಉಡುಪು ತೆಗೆದು ಎಡಗಾಲನ್ನು ಮುಂದೆ ಇರುವ ಕುರ್ಚಿಯ ಮೇಲೆ ಇರಿಸುವಂತೆ ತಿಳಿಸಿದ್ದರು ಎಂದಿದ್ದಾರೆ. ತೊಡೆಯ ಭಾಗದಲ್ಲಿ ಕೊಬ್ಬುಗಳಿವೆಯೇ ಎಂದು ಪರಿಶೀಲಿಸಲು ಈ ರೀತಿ ಮಾಡುತ್ತಿರುವುದಾಗಿ ಅವರು ತಿಳಿಸಿದ್ದರು ಎಂದು ಜೆಲಿಟಾ ಮಾತನಾಡಿದ್ದಾರೆ.

ಇನ್ನು ಬಾಡಿಚೆಕ್‌ ಸುದ್ದಿ ವೈರಲ್‌ ಆದ ಬೆನ್ನಲ್ಲಿಯೇ, ನ್ಯೂಯಾರ್ಕ್‌ ಮೂಲದ ಮಿಸ್‌ ಯುನಿವರ್ಸ್‌ ಸಂಸ್ಥೆ ಇಂಡೋನೇಷ್ಯಾದೊಂದಿಗಿನ ಎಲ್ಲಾ ರೀತಿಯ ಸಂಪರ್ಕವನ್ನು ಕಡಿದುಕೊಂಡಿದೆ. 'ಮಿಸ್‌ ಯುನಿವರ್ಸ್‌ ಇಂಡೋನೇಷ್ಯಾದಲ್ಲಿ ಆಗಿರುವ ಘಟನೆ ನಮಗೆ ಗೊತ್ತಾಗಿದೆ. ನಮ್ಮ ಅರ್ಹತೆಗೆ ಹಾಗೂ ಮೌಲ್ಯಕ್ಕೆ ಅನುಗುಣವಾಗಿ ಇಂಡೋನೇಷ್ಯಾ ನಡೆದುಕೊಂಡಿಲ್ಲ' ಎಂದು ಮಿಸ್‌ ಯುನಿವರ್ಸ್‌ ಸಂಸ್ಥೆ ಟ್ವಿಟರ್‌ನಲ್ಲಿ ಬರೆದುಕೊಂಡಿದೆ. ಇಂಡೋನೇಷ್ಯಾದ ಫ್ರಾಂಚೈಸಿಯು ನೆರೆಯ ದೇಶದ ಸ್ಪರ್ಧೆಯ ಪರವಾನಗಿಯನ್ನು ಹೊಂದಿರುವುದರಿಂದ ಈ ವರ್ಷದ ವಿಶ್ವ ಸುಂದರಿ ಮಲೇಷ್ಯಾವನ್ನು ರದ್ದುಗೊಳಿಸುವುದಾಗಿ ಸಂಸ್ಥೆ ಹೇಳಿದೆ. ಇಂಡೋನೇಷ್ಯಾ 2023 ರ ಟೈಟಲ್ ಹೋಲ್ಡರ್ ಆಗಿರುವ ಫ್ಯಾಬಿಯೆನ್ನೆ ನಿಕೋಲ್ ಗ್ರೋನೆವೆಲ್ಡ್ ಅವರನ್ನು ಈ ವರ್ಷದ ನವೆಂಬರ್‌ನಲ್ಲಿ ಎಲ್ ಸಾಲ್ವಡಾರ್‌ನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಲು ವ್ಯವಸ್ಥೆ ಮಾಡುವುದಾಗಿ ಅದು ಹೇಳಿದೆ.

 

Latest Videos

undefined

ದೇಹ ತಪಾಸಣೆ ಹೆಸರಲ್ಲಿ ಬಟ್ಟೆ ಕಳಚಿಸಿದರು: ಕಣ್ಣೀರಿಟ್ಟ ಮಿಸ್ ಯೂನಿವರ್ಸ್ ಸ್ಪರ್ಧಿಗಳು!

ಆದರೆ, ದೂರು ಸಲ್ಲಿಕೆ ಮಾಡಿದ ಸ್ಪರ್ಧಿಗಳಲ್ಲಿ  ಫ್ಯಾಬಿಯೆನ್ನೆ ನಿಕೋಲ್ ಗ್ರೋನೆವೆಲ್ಡ್ ಅವರ ಹೆಸರಿಲ್ಲ.ಜೆಲಿಟಾಳ ತಾಯಿ ಮಾರಿಯಾ ನಪಿಟುಪುಲು, ಇನ್ಸ್ಟಾಗ್ರಾಮ್ನಲ್ಲಿ ತನ್ನ ಮಗಳ ಪೋಸ್ಟ್ ಅನ್ನು ಓದಿದ ನಂತರವೇ ತನ್ನ ಮಗಳಿಗೆ ಏನಾಯಿತು ಎಂದು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

27 ವರ್ಷಗಳ ಬಳಿಕ ಮಿಸ್‌ ವರ್ಲ್ಡ್‌ಗೆ ಆತಿಥ್ಯ ವಹಿಸಿಕೊಳ್ಳಲಿದೆ ಭಾರತ!

 

click me!