ಮೊಮ್ಮಗನ ಮದ್ವೆಲಿ 96 ವರ್ಷದ ತಾತನ ಸಖತ್ ಡಾನ್ಸ್‌: ವೈರಲ್ ವೀಡಿಯೋ

Published : Apr 13, 2023, 06:37 PM ISTUpdated : Apr 13, 2023, 06:38 PM IST
ಮೊಮ್ಮಗನ ಮದ್ವೆಲಿ 96 ವರ್ಷದ ತಾತನ ಸಖತ್ ಡಾನ್ಸ್‌: ವೈರಲ್ ವೀಡಿಯೋ

ಸಾರಾಂಶ

96 ವರ್ಷದ  ಹಣ್ಣು ಹಣ್ಣಾದ ವೃದ್ಧರೊಬ್ಬರು ತಮ್ಮ ಮೊಮ್ಮಗನೋರ್ವನ ಮದುವೆಯಲ್ಲಿ ಸಖತ್ ಆಗಿ ಡಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ನೇಪಾಳದ ವಿಡಿಯೋ ಇದಾಗಿದೆ.

ಕಠ್ಮಂಡು: ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು  ಅನೇಕರು ಈಗಾಗಲೇ ಸಾಬೀತುಪಡಿಸಿದ್ದಾರೆ. ಅನೇಕ ಹಿರಿ ಜೀವಗಳು ತಮ್ಮ ವಯಸ್ಸನ್ನು ಮರೆತು ಪುಟ್ಟ ಮಕ್ಕಳಂತೆ ಖುಷಿ ಖುಷಿಯಾಗಿ ಜಾಲಿ ಮಾಡುವುದನ್ನು ಕಾಣಬಹುದು. ಹಾಗೆಯೇ ಈಗ 96 ವರ್ಷದ  ಹಣ್ಣು ಹಣ್ಣಾದ ವೃದ್ಧರೊಬ್ಬರು ತಮ್ಮ ಮೊಮ್ಮಗನೋರ್ವನ ಮದುವೆಯಲ್ಲಿ ಸಖತ್ ಆಗಿ ಡಾನ್ಸ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ನೇಪಾಳದ ವಿಡಿಯೋ ಇದಾಗಿದ್ದು,  ಎವ್ರಿಥಿಂಗ್ ಅಬೌಟ್ ನೇಪಾಳ್ ಎಂಬ ಪೇಜ್‌ನಿಂದ ಈ ವಿಡಿಯೋ  ವೈರಲ್ ಆಗಿದೆ. 

ಪ್ರೀತಿಯನ್ನು ಸಂಭ್ರಮಿಸುವುದಕ್ಕೆ ವಯಸ್ಸು ಕೇವಲ ಸಂಖ್ಯೆಯಷ್ಟೇ, ತನ್ನ ಮೊಮ್ಮಗನ ಮದುವೆಯಲ್ಲಿ 96 ವರ್ಷದ ವೃದ್ಧರೊಬ್ಬರು ಸಖತ್ ಆಗಿ ಡಾನ್ಸ್ ಮಾಡುವುದನ್ನು ನೋಡಿ ಎಂದು ಬರೆದು ವೀಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ವಿಡಿಯೋದಲ್ಲಿ ನೇಪಾಳಿ ಟೋಪಿ ಹಾಗೂ ಧಿರಿಸು ಧರಿಸಿದ ವೃದ್ಧರೊಬ್ಬರು ನೆಟ್ಟಗೆ ನಿಲ್ಲಲಾಗದಿದ್ದರು, ಖುಷಿ ಖುಷಿಯಿಂದಲೇ  ಡಾನ್ಸ್ ಮಾಡುತ್ತಿದ್ದರೆ, ಅವರ ಜೊತೆ ಇನ್ನು ಅನೇಕರು ಕುಣಿಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. 76 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ನೇಪಾಳದ ಸಂಪ್ರದಾಯಿಕ ಹಾಡಿಗೆ ವೃದ್ಧರು ಡಾನ್ಸ್ ಮಾಡುತ್ತಿದ್ದಾರೆ. 

ಕಚ್ಚೆ ಸೀರೆಯುಟ್ಟು ಅಜ್ಜಿಯ ಜಬರ್ದಸ್ತ್ ಡಾನ್ಸ್‌: ವೈರಲ್ ವೀಡಿಯೋ

ವಯಸ್ಸು ಮಾಗುತ್ತಿದ್ದಂತೆ ಮತ್ತೆ ವೃದ್ಧರು ಮಕ್ಕಳಂತಾಗುತ್ತಾರೆ.  ಹೀಗಾಗಿ ಮಕ್ಕಳಿಗಿಂತ ಅಜ್ಜ ಅಜ್ಜಿ ಮಗ ಮೊಮ್ಮಕ್ಕಳ ಮಧ್ಯೆ ಬಾಂಧವ್ಯ ಉತ್ತಮವಾಗಿರುತ್ತದೆ. ಮಕ್ಕಳ ಜೊತೆ ಹೊಂದಾಣಿಕೆ ಆಗದಿದ್ದರು, ಅಜ್ಜ ಅಜ್ಜಿ ಮೊಮ್ಮಕ್ಕಳ ಕಾರಣಕ್ಕೆ ಮಕ್ಕಳೊಂದಿಗೆ ಇರಲು ಬಯಸುತ್ತಾರೆ.  ಇತ್ತೀಚೆಗೆ ವಯಸ್ಸನ್ನು ಮೀರಿ ವೃದ್ಧರು ಸಾಧನೆ ಮಾಡ್ತಿರುವುದು ಸಾಮಾನ್ಯವಾಗಿದೆ.  ಕೆಲ ದಿನಗಳ ಹಿಂದೆ ವೃದ್ಧರೊಬ್ಬರು ತಮ್ಮ ಇಳಿವಯಸ್ಸಿನಲ್ಲಿ ಪದವಿ ಪಡೆದ ವಿಚಾರ ಸಾಕಷ್ಟು ವೈರಲ್ ಆಗಿತ್ತು.

ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡಿದ ವೃದ್ಧೆ, ನೋಡಿದ್ರೆ ಮೈ ಜುಂ ಅನ್ನುತ್ತೆ!

ವಯೋವೃದ್ಧರು ಸಾಹಸ ಕಾರ್ಯಗಳಲ್ಲಿ ಭಾಗಿಯಾಗುವ ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ವಯಸ್ಸು (Age) ಕೇವಲ ಒಂದು ಸಂಖ್ಯೆಯಷ್ಟೇ. ಇದು ಸಾಧನೆಗೆ (Achievement) ಅಡ್ಡಿಯಾಗೋದಿಲ್ಲ ಅನ್ನೋದನ್ನು ಇಂಥಾ ವೀಡಿಯೋಗಳು ಸಾಬೀತುಪಡಿಸುತ್ತವೆ. ಅದೇ ರೀತಿ 67 ವರ್ಷದ ವೃದ್ಧೆಯೊಬ್ಬರು ತಮ್ಮ ಉತ್ಸಾಹಕಾರಿ ಸಾಹಾಸಕಾರ್ಯದಿಂದ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. 67 ವರ್ಷದ ವೃದ್ಧೆ ಸೀರೆಯುಟ್ಟು ಫುಲ್ ಎನರ್ಜಿಟಿಕ್ ಆಗಿ ರೋಪ್ ಸೈಕ್ಲಿಂಗ್ ಮಾಡಿದ್ದಾರೆ. ವೃದ್ಧೆ ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸುವ ವೀಡಿಯೊ ವೈರಲ್ ಆಗಿದ್ದು, ಎಲ್ಲರೂ ಮೆಚ್ಚುಗೆ (Compliment) ಸೂಚಿಸುತ್ತಿದ್ದಾರೆ.

ತಾಜ್‌ಮಹಲ್ ನೋಡಲು ಸ್ಟ್ರೆಚರ್‌ನಲ್ಲಿ ಅಮ್ಮನ ಕರೆತಂದ ಮಗ

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್, ವೃದ್ಧೆಯ ಧೈರ್ಯಕ್ಕೆ ನೆಟ್ಟಿಗರು ಫಿದಾ
ಶೈ ನು (@yathrikan_200) ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋಗೆ 'ನನಗೆ ಭಯವಿಲ್ಲ ಮಗ, ನಾನು ಸೈಕಲ್ ಓಡಿಸುತ್ತೇನೆ ಎಂದು 67 ನೇ ವಯಸ್ಸಿನಲ್ಲಿ ಆ ತಾಯಿ ರೋಪ್ ಸೈಕ್ಲಿಂಗ್ ಮಾಡಬೇಕೆಂಬ ತಮ್ಮ ಆಸೆಯನ್ನು ಹೇಳಿಕೊಂಡರು. ನಾವು ತಕ್ಷಣ ಅವರಿಗೆ ರೋಪ್‌ ಸೈಕ್ಲಿಂಗ್ ಮಾಡಲು ವ್ಯವಸ್ಥೆ ಮಾಡಿದೆವು' ಎಂಬ ಶೀರ್ಷಿಕೆ ನೀಡಲಾಗಿದೆ. ವೃದ್ಧೆ ಹಳದಿ ಸೀರೆಯನ್ನು ಧರಿಸಿ ನಿರ್ಭಯವಾಗಿ ಡೇರ್‌ಡೆವಿಲ್ ಸ್ಟಂಟ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಹೆಲ್ಮೆಟ್ ಮತ್ತು ಸುರಕ್ಷತಾ ಡ್ರೆಸ್ ಧರಿಸಿ, ವೃದ್ಧೆ ತೆಳುವಾದ ಹಗ್ಗದ ಮೇಲೆ ಸುಲಭವಾಗಿ ಸೈಕಲ್ ತುಳಿಯುತ್ತಾರೆ ಮತ್ತು ಸವಾಲನ್ನು ಪೂರ್ಣಗೊಳಿಸುತ್ತಾರೆ. 

ಕ್ಲಿಪ್ Instagram ನಲ್ಲಿ ಸಾವಿರಾರು ವೀವ್ಸ್‌ ಗಳಿಸಿದೆ. ವೀಡಿಯೊವನ್ನು ವೀಕ್ಷಿಸಿದ ಇಂಟರ್ನೆಟ್ ಬಳಕೆದಾರರು ವೃದ್ಧೆ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಒಬ್ಬ ಬಳಕೆದಾರರು 'ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ಈ 67 ವರ್ಷದ ವೃದ್ಧೆ ಅದನ್ನು ಸರಿ ಎಂದು ಸಾಬೀತುಪಡಿಸಿದ್ದಾರೆ' ಎಂದು ಶ್ಲಾಘಿಸಿದ್ದಾರೆ. 

ಎಂಭತ್ತನೇ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡಿದ ಅಜ್ಜಿ
ಇತ್ತೀಚೆಗೆ, ಯುವತಿಯೊಬ್ಬಳು ತನ್ನ ದಿವಂಗತ ಅಜ್ಜಿ 80 ನೇ ವಯಸ್ಸಿನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿರೋ ವೀಡಿಯೋ ಹಂಚಿಕೊಂಡಿದ್ದಳು. ಇಂಟರ್‌ನೆಟ್‌ನಲ್ಲಿ ವೀಡಿಯೋ ವೈರಲ್ ಆಗಿತ್ತು. ವೀಡಿಯೊ ಇಂಟರ್ನೆಟ್ ಬಳಕೆದಾರರಿಗೆ ಸ್ಫೂರ್ತಿ ಮತ್ತು ಭಾವನಾತ್ಮಕತೆಯನ್ನುಂಟು ಮಾಡಿತ್ತು.  ಅಜ್ಜಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡುವುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ (Views)ಗಳನ್ನು ಪಡೆದುಕೊಂಡಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!