ಯುವಕನ ಜೊತೆ ಜೊತೆ ಮರವೇರಿದ ಕರಡಿ: ಜೀವ ಬಾಯಿಗೆ ಬರೋದೊಂದೇ ಬಾಕಿ

By Anusha Kb  |  First Published Apr 12, 2023, 6:34 PM IST

 ಇಲ್ಲೊಂದು ಕಡೆ ಟ್ರಕ್ಕಿಂಗ್ ಹೊರಟವನಿಗೆ ಕರಡಿಯೊಂದು ಎದುರಾಗಿದ್ದು ಕರಡಿ ಕಂಡು ಮರ ಹತ್ತಿದ ಯುವಕನ ಜೊತೆ ಜೊತೆಗೆ ಕರಡಿಯೂ ಮರ ಹತ್ತಿದೆ. ಆಮೇಲೇನಾಯ್ತೋ ಗೊತ್ತಿಲ್ಲ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯದ ಬಡಿತವನ್ನು ಹೆಚ್ಚಿಸಿದೆ. 


ಕೆಲವರಿಗೆ ಏಕಾಂಗಿಯಾಗಿ ಕಾಡು ಸುತ್ತುವ ಅಪರಿಚಿತ ಪ್ರದೇಶಗಳನ್ನು  ನೋಡುವ ಅಭ್ಯಾಸವಿರುತ್ತದೆ.  ಆದರೆ ಗೊತ್ತಿಲ್ಲದ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗುವ ಮುನ್ನ ಆ ಪ್ರದೇಶದ ಬಗ್ಗೆ ತಿಳಿದುಕೊಳ್ಳವುದು ಒಳಿತು.  ತಿಳಿಯದೇ ಯಾವುದೋ ಜೋಶ್‌ನಿಂದ ಗೊತ್ತಿಲ್ಲದ ಸ್ಥಳದಲ್ಲಿ ಏಕಾಂಗಿಯಾಗಿ ಸಂಚಾರಕ್ಕೆ ಹೊರಟರೇ ಅಪಾಯ ಕಾದಿಟ್ಟ ಬುತ್ತಿ,  ಇಲ್ಲೊಂದು ಕಡೆ ಟ್ರಕ್ಕಿಂಗ್ ಹೊರಟವನಿಗೆ ಕರಡಿಯೊಂದು ಎದುರಾಗಿದ್ದು ಕರಡಿ ಕಂಡು ಮರ ಹತ್ತಿದ ಯುವಕನ ಜೊತೆ ಜೊತೆಗೆ ಕರಡಿಯೂ ಮರ ಹತ್ತಿದೆ. ಆಮೇಲೇನಾಯ್ತೋ ಗೊತ್ತಿಲ್ಲ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಹೃದಯದ ಬಡಿತವನ್ನು ಹೆಚ್ಚಿಸಿದೆ. 

ಈ ವಿಡಿಯೋವನ್ನು OddIy Terrifying ಎಂಬ ಟ್ವಿಟ್ಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದ್ದು,  2 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹೈಕಿಂಗ್ (ಟ್ರಕ್ಕಿಂಗ್) ಹೊರಟ ಯುವಕನೋರ್ವನಿಗೆ ಕರಡಿಯೊಂದು ಎದುರಾಗಿದೆ. ಅದನ್ನು ನೋಡಿದ ಯುವಕ ಅಲ್ಲೇ ಇದ್ದ ಮರವನ್ನು ಏರಿದ್ದಾನೆ. ಆದರೆ ಕರಡಿ ಕೂಡ ಒಟ್ಟೊಟ್ಟಿಗೆ ಅರ್ಧದವರೆಗೆ ಮರ ಏರಿದ್ದು, ಹೈಕರ್‌ಗೆ ಜೀವ ಬಾಯಿಗೆ ಬರುವಂತೆ ಮಾಡಿದೆ.  ಮರವೇರುವ ಜೊತೆ ಜೊತೆಗೆ ಹೈಕರ್ ಕಾಲಿಡಿದು ಕೈಯಲ್ಲಿ ಪರಚಿ ಕೆಳಗೆಳೆದು ಹಾಕಲು ಕರಡಿ ನೋಡುತ್ತಿದ್ದು, ಆತನ ಜೊತೆ ಜೊತೆಗೆ ಮೇಲೇರುತ್ತಿದೆ. ಆದರೆ ಕೆಲ ಕ್ಷಣಗಳಲ್ಲಿ ಕರಡಿಗೆ ಸುಸ್ತಾಗಿದ್ದು, ಕರಡಿ ಮರದಿಂದ ಕೆಳಗಿಳಿದ್ದು, ಹೈಕರ್‌ಗೆ ಹೋದ ಜೀವ ಬಂದಂತಾಗಿದೆ.  26 ಸೆಕೆಂಡ್‌ಗಳ ಈ ವಿಡಿಯೋವನ್ನು 8.6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು,  ಈ ವಿಡಿಯೋ ನೋಡುಗರಲ್ಲೂ ಆತಂಕ ತಲ್ಲಣವನ್ನು ಸೃಷ್ಟಿಸಿದೆ. 

Tap to resize

Latest Videos

Viral News: ಎರಡು ವರ್ಷದಿಂದ ನಾಯಿ ಅಂದ್ಕೊಂಡು ಕರಡಿ ಸಾಕಿದ್ರು!

ಆನೇಕರು ಈ ದೃಶ್ಯವನ್ನು ವೀಡಿಯೋ ಮಾಡಿದವರು ಯಾರು ಎಂದು ಪ್ರಶ್ನಿಸಿದ್ದಾರೆ.  ಅಲ್ಲೇ ಇದ್ದ ಇನ್ನೊಂದು ಕರಡಿ ಈ ದೃಶ್ಯವನ್ನು ಚಿತ್ರಿಕರಿಸಿತೆ ಎಂದು ಮತ್ತೊಬ್ಬರು ತಮಾಷೆಯಾಗಿ ಕೇಳಿದ್ದಾರೆ.  ಅದೇನೆ ಇರಲಿ ಗೊತ್ತಿಲ್ಲದ ಪ್ರದೇಶಗಳಿಗೆ ಭೇಟಿ ನೀಡುವ ಮೊದಲು ಆ ಪ್ರದೇಶದ ಬಗ್ಗೆ ಅರಿವುದೊಳಿತು. 

ಹುಲಿಯ ಬಾಯಿಂದ ಕಾಡುಕೋಣ ಜಸ್ಟ್ ಎಸ್ಕೇಪ್... ರೋಚಕ ವಿಡಿಯೋ ವೈರಲ್

ಕಾಡುಕೋಣವೊಂದು ಹುಲಿಯೊಂದರ ಬೇಟೆಯಿಂದ ತಪ್ಪಿಸಿಕೊಂಡು ಓಡುತ್ತಿರುವ ರೋಚಕ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ  ಸುರೇಂದ್ರ ಮೆಹ್ರಾ ಅವರು ಪೋಸ್ಟ್ ಮಾಡಿದ್ದು,  ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  

ವಿಡಿಯೋದಲ್ಲಿ ಹುಲಿಯೊಂದು ಹಿಂಡಿನಿಂದ ದೂರವಾಗಿ ಒಂಟಿಯಾಗಿರುವ ಕಾಡುಕೋಣವನ್ನು ಓಡಿಸಿಕೊಂಡು ಹೋಗುತ್ತಿದೆ. ಹುಲಿ ತನ್ನನ್ನು ಓಡಿಸಿಕೊಂಡು ಬರುತ್ತಿರುವುದನ್ನು ನೋಡಿದ ಕಾಡುಕೋಣ ಬದುಕಿದೆಯಾ ಬಡಜೀವ ಎಂಬಂತೆ ಜೀವ ಕೈಯಲ್ಲಿಡಿದು ಓಡುತ್ತಿರುವ ವೀಡಿಯೋ ವೈರಲ್ ಆಗಿದೆ.  ಒಡಿಶಾದ ಕಾಡೊಂದರಲ್ಲಿ ಸೆರೆಯಾದ ವಿಡಿಯೋ ಇದಾಗಿದೆ.  ಸ್ವಲ್ಪ ದೂರ ಕಾಡುಕೋಣವನ್ನು ಓಡಿಸಿಕೊಂಡು ಹೋದ ಹುಲಿರಾಯ ಅದು ದೂರ ದೂರ ಸಾಗುತ್ತಿದ್ದಂತೆ ಸುಮ್ಮನಾಗಿದ್ದು, ಹೋದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಬಂದಿದೆ.  ಇದು ಕೇವಲ ಟ್ರಯಲ್ ರನ್?  ಹುಲಿಯೊಂದು ಕಾಡುಕೋಣ (Indian Gaur)ವನ್ನು ಬೆನ್ನಟ್ಟುತ್ತಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ ಸುರೇಂದ್ರ ಮೆಹ್ರಾ ಬರೆದುಕೊಂಡಿದ್ದಾರೆ. 

ಕ್ಯಾಮರಾಗೆ ಹಿಮ ಚಿರತೆಯ ಸಖತ್ ಫೋಸ್: ಕ್ಲೋಸ್ ಅಪ್ ವಿಡಿಯೋ ವೈರಲ್

ಈ ವಿಡಿಯೋವನ್ನು ಮತ್ತೊಬ್ಬ ಐಎಎಸ್‌ ಅಧಿಕಾರಿ ಸುಪ್ರಿಯಾ ಸಾಹು ಕೂಡ ಶೇರ್ ಮಾಡಿಕೊಂಡಿದ್ದು, ಕಾಡಿನಲ್ಲಿ ಸುರಕ್ಷಿತವಾಗಿ ಬದುಕುವುದು ಪರಭಕ್ಷಕ ಪ್ರಾಣಿ ಹಾಗೂ ಬೇಟೆಗೆ ಆಹಾರವಾಗುವ ಪ್ರಾಣಿ ಎರಡಕ್ಕೂ ಕಷ್ಟ ಎಂದು ಬರೆದುಕೊಂಡಿದ್ದಾರೆ.  ಹುಲಿಯ ಉದ್ದೇಶ ಬರೀ ಬೇಟೆಯಾಗಿರಲಿಲ್ಲ. ಈ ಕಾಡುಕೋಣವನ್ನು ಓಡಿಸುವುದಾಗಿತ್ತು. ಒಂದು ವೇಳೆ ಅದು ಬೇಟೆ ಬಯಸಿದ್ದರೆ ಅದನ್ನು ಬೇಟೆಯಾಡದೇ ಬಿಡುತ್ತಿರಲಿಲ್ಲ ಎಂದು ಒಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.  ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. 

ಕಾಮೆಂಟ್ ವಿಭಾಗದಲ್ಲಿ, ಇಂಟರ್ನೆಟ್ ಬಳಕೆದಾರರು ಹುಲಿ ಕಾಡುಕೋಣವನ್ನು ಬೆನ್ನಟ್ಟಿದ ಹಿಂದಿನ ಕಾರಣವನ್ನು ಊಹಿಸಿದ್ದಾರೆ. ಕೆಲವರು ಇದನ್ನು ಪ್ರಾದೇಶಿಕ ಸಮಸ್ಯೆ (ಅಂದರೆ ಗಡಿ ವ್ಯಾಪ್ತಿಗೆ ಸಂಬಂಧಿಸಿದ ಗಲಾಟೆ)ಎಂದು ಕರೆದರೆ, ಇತರರು ಇದನ್ನು ಬದುಕುಳಿಯುವ ಹೋರಾಟ ಎಂದು ಕರೆದರು. ಕಾಡುಪ್ರಾಣಿಗಳಿಗೂ ಮನುಷ್ಯರಂತೆ ಗಡಿ ವ್ಯಾಪ್ತಿ ಸರಹದ್ದುಗಳಿದ್ದು, ತನ್ನ ಸರಹದ್ದಿನ ಒಳಗೆ ಬರುವ ಇತರ ಪ್ರಾಣಿಗಳನ್ನು ಅವು ಬೆನ್ನಟ್ಟುತ್ತವೆ. ಇದೇ ಕಾರಣಕ್ಕೆ ಹುಲಿಗಳ ಮಧ್ಯೆ ಘೋರ ಕಾಳಗಗಳಾಗುತ್ತವೆ. ಹುಲಿಗಳು ಮರಗಳ ಮೇಲೆ ಗೆರೆ ಎಳೆದು ತನ್ನ ವ್ಯಾಪ್ತಿಯನ್ನು ಖಾತರಿಪಡಿಸುತ್ತವೆಯಂತೆ, ಅದೇ ರೀತಿ ಬಿದಿನಾಯಿಗಳ ಬಗ್ಗೆ ನಿಮಗೆ ಗೊತ್ತೇ ಇದೆ.  ಆ ಬೀದಿಯ ನಾಯಿ ಈ ಬೀದಿಗೆ ಬಂದರೆ ಈ ಬೀದಿಯಲ್ಲಿರುವ ನಾಯಿಗಳೆಲ್ಲಾ ಸೇರಿ ಮುಗಿ ಬೀಳುತ್ತವೆ.  ಹುಲಿಗಳು ಗೆರೆ ಎಳೆದು ಬೌಂಡರಿ ಗುರುತಿಸಿದರೆ ನಾಯಿಗಳು ಮೂತ್ರ ವಿಸರ್ಜಿಸಿ ತಮ್ಮ ಗಡಿಯನ್ನು ಖಚಿತಪಡಿಸುತ್ತವೆ. ಇವೆಲ್ಲಾ ಪ್ರಾಣಿ ಪ್ರಪಂಚದ ವಿಶಿಷ್ಟವೆನಿಸುವ ನಡವಳಿಕೆಗಳಾಗಿವೆ. 

Terrifying encounter between hiker and bear 😳 pic.twitter.com/WnryATSD86

— OddIy Terrifying (@OTerrifying)

 

click me!