ಅತ್ಯಾಚಾರ ಆರೋಪ: Danushka Gunathilakaರನ್ನು ಅಮಾನತು ಮಾಡಿದ ಶ್ರೀಲಂಕಾ ಕ್ರಿಕೆಟ್‌

By BK AshwinFirst Published Nov 7, 2022, 1:01 PM IST
Highlights

ಶ್ರೀಲಂಕಾ ಕ್ರಿಕೆಟ್ ಈ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆಸ್ಟ್ರೇಲಿಯಾದಲ್ಲಿ ತಿಳಿಸಲಾದ ನ್ಯಾಯಾಲಯದ ಪ್ರಕರಣದ ಮುಕ್ತಾಯದ ನಂತರ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ದನುಷ್ಕಾ ಗುಣತಿಲಕ ಅವರಿಗೆ ದಂಡ ವಿಧಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಶ್ರಿಲಂಕಾ ಕ್ರಿಕೆಟ್‌ ಹೇಳಿದೆ. 

ಆಸ್ಟ್ರೇಲಿಯಾದಲ್ಲಿ (Australia) ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ನಡೆಯುತ್ತಿರುವ ಬೆನ್ನಲ್ಲೇ ಸಿಡ್ನಿಯಲ್ಲಿ (Sydney) ಅತ್ಯಾಚಾರ ಆರೋಪದ (Rape Charges) ಮೇಲೆ ಬಂಧನಕ್ಕೆ (Arrested) ಒಳಗಾದ ಶ್ರೀಲಂಕಾ  (Sri Lanka) ಕ್ರಿಕೆಟಿಗ ದನುಷ್ಕಾ ಗುಣತಿಲಕಗೆ (Danushka Gunathilaka) ಮತ್ತೊಂದು ಶಾಕ್‌ ಎದುರಾಗಿದೆ.  ತಕ್ಷಣವೇ ಜಾರಿಗೆ ಬರುವಂತೆ ಬ್ಯಾಟರ್ ದನುಷ್ಕಾ ಗುಣತಿಲಕ ಅವರನ್ನು ಶ್ರೀಲಂಕಾ ಕ್ರಿಕೆಟ್ (Sri Lanka Cricket) (ಎಸ್‌ಎಲ್‌ಸಿ) (SLC) ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಿದೆ. ಶ್ರೀಲಂಕಾ ಕ್ರಿಕೆಟ್‌ನ ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲು ನಿರ್ಧರಿಸಿದೆ ಮತ್ತು ಆಸ್ಟ್ರೇಲಿಯಾದಲ್ಲಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹಿನ್ನೆಲೆ ಗುಣತಿಲಕ ಅವರನ್ನು ಬಂಧಿಸಿದ ನಂತರ ಅವರನ್ನು ಯಾವುದೇ ಆಯ್ಕೆಗಳಿಗೆ ಪರಿಗಣಿಸುವುದಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಅಧಿಕೃತ ಹೇಳಿಕೆ ನೀಡಿದೆ.

ಇದಲ್ಲದೆ, ಶ್ರೀಲಂಕಾ ಕ್ರಿಕೆಟ್ ಈ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆಸ್ಟ್ರೇಲಿಯಾದಲ್ಲಿ ತಿಳಿಸಲಾದ ನ್ಯಾಯಾಲಯದ ಪ್ರಕರಣದ ಮುಕ್ತಾಯದ ನಂತರ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ದನುಷ್ಕಾ ಗುಣತಿಲಕ ಅವರಿಗೆ ದಂಡ ವಿಧಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

ಇದನ್ನು ಓದಿ: ರಸ್ತೆಯಲ್ಲಿ ಸಿಗರೇಟ್‌ನೊಂದಿಗೆ ಓಡಾಡಿದ್ದ ಮೂವರು ಲಂಕಾ ಕ್ರಿಕೆಟಿಗರು ಒಂದು ವರ್ಷ ಬ್ಯಾನ್‌..!

ಮಂಡಿರಜ್ಜು ಗಾಯದ ನಂತರ ಗುಣತಿಲಕ ಅವರು ಐಸಿಸಿ ಟಿ2) ವಿಶ್ವಕಪ್‌ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಮೀಸಲು ಆಟಗಾರ ಅಶೆನ್ ಬಂಡಾರ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೂ, ಅವರು ಲಂಕಾ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿ ಉಳಿದರು. 31 ವರ್ಷದ ದನುಷ್ಕಾ ಗುಣತಿಲಕ ಶ್ರೀಲಂಕಾವನ್ನು 46 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ ಮತ್ತು 16.46 ಸರಾಸರಿಯಲ್ಲಿ 741 ರನ್ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಅಂತಿಮ ಗುಂಪಿನ ಪಂದ್ಯದಲ್ಲಿ ಸೋಲಿನ ನಂತರ ಶ್ರೀಲಂಕಾ ತನ್ನ ವಿಶ್ವಕಪ್ ಅಭಿಯಾನವನ್ನು ಮುಗಿಸಿದ್ದು, ತವರಿಗೆ ವಾಪಸ್‌ ತೆರಳಿದೆ. 

ಇದನ್ನೂ ಓದಿ: ಬಯೋ ಬಬಲ್‌ ಉಲ್ಲಂಘಿಸಿ ರಸ್ತೆಯಲ್ಲಿ ಸಿಗರೇಟ್‌ ಹಿಡಿದು ಓಡಾಡಿದ 3 ಲಂಕಾ ಕ್ರಿಕೆಟಿಗರು ಸಸ್ಪೆಂಡ್

ಗುಣತಿಲಕ ಅವರಿಗೆ ಜಾಮೀನು ನಿರಾಕರಿಸಿದ ಸ್ಥಳೀಯ ನ್ಯಾಯಾಲಯ 
ಆಸ್ಟ್ರೇಲಿಯಾದ ಸಿಡ್ನಿಯ ಸ್ಥಳೀಯ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆ ಬಳಿಕ ಗುಣತಿಲಕ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಅವರು ಸರ್ರಿ ಹಿಲ್ಸ್ ಸೆಲ್ಸ್‌ನ ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯದಲ್ಲಿ ವಿಡಿಯೋ ಲಿಂಕ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ವಾಸ್ತವಿಕ ಹಾಜರಾತಿ ಸಮಯದಲ್ಲಿ ಅತ್ಯಾಚಾರ ಆರೋಪ ಹೊತ್ತಿರುವ ದನುಷ್ಕಾ ಗುಣ ತಿಲಕ ಅವರಿಗೆ ಕೈಕೋಳ ಹಾಕಲಾಗಿತ್ತು ಮತ್ತು ಅವರು ಬೂದು ಬಣ್ಣದ ಟಿ-ಶರ್ಟ್ ಹಾಗೂ ನೀಲಿ ಜೀನ್ಸ್ ಧರಿಸಿದ್ದರು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

"ಮುಚ್ಚಿದ ನ್ಯಾಯಾಲಯ" ವಿಚಾರಣೆಯ ಸಂದರ್ಭದಲ್ಲಿ ಶ್ರಿಲಂಕಾ ಕ್ರಿಕೆಟಿಗ ಪರ ವಕೀಲ ಆನಂದ ಅಮರಂಥ್‌ ಜಾಮೀನು ಅರ್ಜಿ ಸಲ್ಲಿಸಿದರು ಮತ್ತು ಮ್ಯಾಜಿಸ್ಟ್ರೇಟ್ ರಾಬರ್ಟ್ ವಿಲಿಯಮ್ಸ್ ಜಾಮೀನು ನಿರಾಕರಿಸಿದರು ಎಂದೂ ವರದಿ ತಿಳಿಸಿದೆ. "ಖಂಡಿತವಾಗಿಯೂ, ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಪರಿಗಣಿಸುತ್ತಿದ್ದೇವೆ ಮತ್ತು ಅದನ್ನು ಸಾಧ್ಯವಾದಷ್ಟು ಬೇಗ ಮಾಡಲಾಗುತ್ತದೆ" ಎಂದು ಅಮರಂಥ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: 6 ಪಂದ್ಯಗಳ ಮಟ್ಟಿಗೆ ಲಂಕಾ ಓಪನರ್ ಸಸ್ಪೆಂಡ್; ಅಷ್ಟಕ್ಕೂ ಮಾಡಿದ್ದೇನು..?

ಶನಿವಾರ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ನಂತರ ಶ್ರೀಲಂಕಾ ತಂಡ ಗುಣತಿಲಕನನ್ನು ಬಿಟ್ಟು  ಆಸ್ಟ್ರೇಲಿಯಾವನ್ನು ತೊರೆದಿತ್ತು.

click me!