T20 World cup ಸೂಪರ್ 12 ಹಂತಕ್ಕೆ ಲಗ್ಗೆ ಇಟ್ಟ ಜಿಂಬಾಬ್ವೆ, ಐರ್ಲೆಂಡ್, ಘಟಾನುಘಟಿ ತಂಡಕ್ಕೆ ಶಾಕ್!

By Suvarna News  |  First Published Oct 21, 2022, 6:05 PM IST

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತಕ್ಕೆ ಎರಡು ತಂಡಗಳು ಲಗ್ಗೆ ಇಟ್ಟಿದೆ. ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಅರ್ಹತಾ ಸುತ್ತಿನಲ್ಲಿ ಯಶಸ್ವಿಯಾಗಿದೆ. ಆದರೆ ವೆಸ್ಟ್ ಇಂಡೀಸ್ ಸೇರಿದಂತೆ ಘಟಾನುಘಟಿ ತಂಡಗಳಿಗೆ ಶಾಕ್ ಎದುರಾಗಿದೆ. ಇದೀಗ ನವೆಂಬರ್ 6 ರಂದು ಜಿಂಬಾಬ್ವೆ ಹಾಗೂ ಟೀಂ ಇಂಡಿಯಾ ಹೋರಾಟ ನಡೆಸಲಿದೆ.


ಸಿಡ್ನಿ(ಅ.21): ಟಿ20 ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಸೇರಿದಂತೆ ಪ್ರಮುಖ ತಂಡಗಳು ಆಘಾತ ಅನುಭವಿಸಿದೆ. ಆದರೆ ದಿಟ್ಟ ಹೋರಾಟ ಮೂಲಕ ಎಲ್ಲರ ಮನಗೆದ್ದ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತಕ್ಕೆ ಲಗ್ಗೆ ಇಟ್ಟಿದೆ. ಇದೀಗ ನವೆಂಬರ್ 6 ರಂದು ಜಿಂಬಾಬ್ವೆ ತಂಡ ಟೀಂ ಇಂಡಿಯಾ ವಿರುದ್ಧ ಹೋರಾಟ ನಡೆಸಲಿದೆ. ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ತಂಡ ಆಡಿದ 3 ಪಂದ್ಯದಲ್ಲಿ 2ರಲ್ಲಿ ಗೆಲುವು ದಾಖಲಿಸಿತ್ತು. ಈ ಮೂಲಕ ಬಿ ಗುಂಪಿನಲ್ಲಿ ಮೊದಲ ಸ್ಥಾನಕ್ಕೇರಿತ್ತು. ಇನ್ನು ಐರ್ಲೆಂಡ್ ತಂಡ ಕೂಡ ಮೂರಲ್ಲಿ 2 ಪಂದ್ಯ ಗೆದ್ದ ಅರ್ಹತೆ ಪಡೆದುಕೊಂಡಿದೆ. ಎ ಗುಂಪಿನಲ್ಲಿ ಶ್ರೀಲಂಕಾ ಹಾಗೂ ನೆದರ್ಲೆಂಡ್ ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿದೆ.  ವೆಸ್ಟ್ ಇಂಡೀಸ್, ಸ್ಕಾಟ್‌ಲೆಂಡ್, ಯುನೈಟೆಡ್ ಅರಬ್ ಎಮಿರೈಟ್ಸ್ ಹಾಗೂ ನಮಿಬಿಯಾ ತಂಡಗಳು ಅರ್ಹತಾ ಸುತ್ತಿನಿಂದ ಹೊರಬಿದ್ದಿದೆ. 

ಬಿ ಗುಂಪಿನಿಂದ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಅರ್ಹತೆ ಪಡೆದಿದೆ. ಜಿಂಬಾಬ್ವೆ ಗ್ರೂಪ್ 12 ಎರಡನೇ ಗುಂಪಿನಲ್ಲಿ ಸ್ಥಾನ ಪಡೆದರೆ, ಐರ್ಲೆಂಡ್ ತಂಡ ಗ್ರೂಪ್ 12 ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ಗ್ರೂಪ್ 12 ಎರಡನೇ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಭಾರತ ಹೊರತು ಪಡಿಸಿದರೆ, ಪಾಕಿಸ್ತಾನ, ಸೌತ್ ಆಫ್ರಿಕಾ, ನೆದರ್ಲೆಂಡ್, ಜಿಂಬಾಬ್ವೆ, ಬಾಂಗ್ಲಾದೇಶ ತಂಡಗಳಿವೆ. ಇನ್ನು ಗ್ರೂಪ್ 12 ಮೊದಲ ಗುಂಪಿನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಆಫ್ಘಾನಿಸ್ತಾನ, ಆಸ್ಟ್ರೇಲಿಯಾ ತಂಡಗಳಿವೆ.  

Tap to resize

Latest Videos

undefined

ಪಾಕ್ ಬ್ಯಾಟರ್ ಶಾನ್ ಮಸೂದ್ ತಲೆಗೆ ಅಪ್ಪಳಿಸಿದ ಚೆಂಡು, ಆಸ್ಪತ್ರೆಗೆ ದಾಖಲು..! ಪಾಕ್ ತಂಡ ಕಂಗಾಲು

ಸೂಪಪರ್ 12 ಹಂತದ ಪಂದ್ಯಗಳು ನಾಳೆಯಿಂದ(ಅ.22) ಆರಂಭಗೊಳ್ಳುತ್ತಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಟ ನಡಸಲಿದೆ. ಈ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದೆ.

ಎ ಗಂಪಿನಿಂದ ಶ್ರೀಲಂಕಾ ಹಾಗೂ ನೆದರ್ಲೆಂಡ್ ಅರ್ಹತೆ!
ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌-12 ಹಂತಕ್ಕೆ ಶ್ರೀಲಂಕಾ ಹಾಗೂ ನೆದರ್‌ಲೆಂಡ್‌್ಸ ತಂಡಗಳು ಪ್ರವೇಶ ಪಡೆದಿವೆ. ಯುಎಇ ಹಾಗೂ ನಮೀಬಿಯಾ ಹೊರಬಿದ್ದಿವೆ. ಗುರುವಾರ ‘ಎ’ ಗುಂಪಿನ ಅಂತಿಮ 2 ಪಂದ್ಯಗಳು ಭಾರೀ ರೋಚಕತೆಯಿಂದ ಕೂಡಿದ್ದವು. ನೆದರ್‌ಲೆಂಡ್‌್ಸ ವಿರುದ್ಧ ಶ್ರೀಲಂಕಾ 16 ರನ್‌ಗಳ ಜಯ ಸಾಧಿಸಿ, ಪ್ರಧಾನ ಸುತ್ತಿನಲ್ಲಿ ಸ್ಥಾನ ಖಚಿತಪಡಿಸಿಕೊಂಡರೆ, ನಮೀಬಿಯಾವನ್ನು ಸೋಲಿಸಿದ ಯುಎಇ ತಂಡ ನೆದರ್‌ಲೆಂಡ್‌್ಸಗೆ ದೊಡ್ಡ ಸಹಾಯ ಮಾಡಿತು. ಮೊದಲ ಪಂದ್ಯದಲ್ಲೇ ನಮೀಬಿಯಾಗೆ ಶರಣಾಗಿ ಟೂರ್ನಿಯಿಂದ ಹೊರಬೀಳುವ ಆತಂತಕ್ಕೆ ಗುರಿಯಾಗಿದ್ದ ಶ್ರೀಲಂಕಾ ತನ್ನ ಮುಂದಿನ 2 ಪಂದ್ಯಗಳಲ್ಲಿ ಜಯಿಸಿ ‘ಎ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಲಂಕಾ 6 ವಿಕೆಟ್‌ಗೆ 162 ರನ್‌ ಕಲೆಹಾಕಿತು. ವಿಕೆಟ್‌ ಕೀಪರ್‌ ಕುಸಾಲ್‌ ಮೆಂಡಿಸ್‌ 44 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ನೊಂದಿಗೆ 79 ರನ್‌ ಸಿಡಿಸಿದರು.

T20 World Cup ಟೂರ್ನಿಯಲ್ಲಿ ಅತಿಹೆಚ್ಚು ರನ್ ಬಾರಿಸುವ ಬ್ಯಾಟರ್‌ ಬಗ್ಗೆ ಭವಿಷ್ಯ ನುಡಿದ ಸೆಹ್ವಾಗ್..!

ಇದಕ್ಕುತ್ತರವಾಗಿ ನೆದರ್‌ಲೆಂಡ್‌್ಸ 9 ವಿಕೆಟ್‌ಗೆ 146 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟರ್‌ ಮ್ಯಾಕ್ಸ್‌ ಒ’ಡೌಡ್‌ 53 ಎಸೆತದಲ್ಲಿ 71 ರನ್‌ ಗಳಿಸಿದ್ದನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಹೋರಾಟ ಕಂಡುಬರಲಿಲ್ಲ. ಸ್ಕೋರ್‌: ಲಂಕಾ 20 ಓವರಲ್ಲಿ 162/6(ಮೆಂಡಿಸ್‌ 79, ಅಸಲಂಕ 31, ಮೀಕೆರೆನ್‌ 2-25), ನೆದರ್‌ಲೆಂಡ್‌್ಸ 20 ಓವರಲ್ಲಿ 146/9(ಡೌಡ್‌ 71, ಎಡ್ವರ್ಡ್ಸ್ 21, ಹಸರಂಗ 3-28)
 

click me!