T20 World Cup 2022 ಇಂಡೋ ಪಾಕ್ ಪಂದ್ಯಕ್ಕೆ ಮಳೆ ಭೀತಿ, ರಿಸರ್ವ್ ಡೇ ಇದೆಯಾ?

By Suvarna NewsFirst Published Oct 21, 2022, 8:27 PM IST
Highlights

ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಟೂರ್ನಿ ಪಂದ್ಯಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಆದರೆ ಭಾನುವಾರ ಮಳೆಯ ಲಕ್ಷಣಗಳು ಗೋಚರಿಸುತ್ತಿದೆ. ಹೀಗಾಗಿ ಪಂದ್ಯ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ, ರಿಸರ್ವ್ ಡೇನಲ್ಲಿ ಪಂದ್ಯ ನಡೆಯುತ್ತಾ? ಇಲ್ಲಿದೆ ಐಸಿಸಿ ನೀಡಿದ ಮಾಹಿತಿ.

ಸಿಡ್ನಿ(ಅ.21): ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಟೂರ್ನಿ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಇದೇ ಭಾನುವಾರ(ಅಕ್ಟೋಬರ್ 23) ಇಂಡೋ ಪಾಕ್ ಹೋರಾಟ ನಡೆಯಲಿದೆ. ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಆದರೆ ಹವಾಮಾನ ವರದಿ ಪ್ರಕಾರ ಭಾನುವಾರ ಮೆಲ್ಬೋರ್ನ್‍‍‌ನಲ್ಲಿ ಮಳೆ ಸಂಭವ ಹೆಚ್ಚಿದೆ. ಇಡೀ ದಿನ ಮಳೆ ಬರುವ ಸಾಧ್ಯತೆಯನ್ನು ವರದಿ ಹೇಳುತ್ತಿದೆ. ಹೀಗಾಗಿ ಪಂದ್ಯಕ್ಕೆ ಮಳೆರಾಯ ಅನುವು ಮಾಡಿಕೊಡುವ ಸಾಧ್ಯತೆಗಳು ಕ್ಷೀಣಿಸುತ್ತಿದೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಒಂದು ವೇಳೆ ಮಳೆ ಪಂದ್ಯ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ, ರಿಸರ್ವ್ ಡೇನಲ್ಲಿ ಪಂದ್ಯ ನಡೆಯುತ್ತಾ ಅನ್ನೋ ಪ್ರಶ್ನೆಗಳನ್ನು ಹಲವರು ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಸಾಂಪ್ರದಾಯಿಕ ಎದುರಾಳಿಗಳ ಹೋರಾಟಕ್ಕೆ ಯಾವುದೇ ರಿಸರ್ವ್ ಡೇ ಮೀಸಲಿಟ್ಟಿಲ್ಲ. ಹೀಗಾಗಿ ಮಳೆಯಿಂದ ಪಂದ್ಯ ಸಂಪೂರ್ಣವಾಗಿ ರದ್ದಾದರೆ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಳ್ಳಲಿದೆ.

ಐಸಿಸಿ ಟಿ20 ಟೂರ್ನಿಯ ಗ್ರೂಪ್ ಹಂತದ ಯಾವುದೇ ಪಂದ್ಯಕ್ಕೂ ರಿಸರ್ವ್ ಡೇ ಇಲ್ಲ. ಸೆಮಿಫೈನಲ್, ಫೈನಲ್ ಸೇರಿದಂತೆ ಪ್ರಮುಖ ಹಂತದ ಪಂದ್ಯಗಳಿಗೆ ಮೀಸಲು ದಿನ ಇಡಲಾಗಿದೆ. ಆದರೆ ಗ್ರೂಪ್ ಹಂತದ ಪಂದ್ಯಗಳಿಗೆ ಇಲ್ಲ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಗ್ರೂಪ್ ಹಂತದ ಪಂದ್ಯ ಮಳೆಯಿಂದ ರದ್ದಾದರೆ ರಿಸರ್ವ್ ಡೇನಲ್ಲಿ ಪಂದ್ಯ ನಡೆಯುವುದಿಲ್ಲ. 

Asia Cup 2023: ಭಾರತಕ್ಕೆ ಪರೋಕ್ಷ ಬೆದರಿಕೆಯೊಡ್ಡಿದ ಪಾಕಿಸ್ತಾನ..!

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ!
ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಹಾಗೂ ಟೂರ್ನಿಯ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್‌ ಸ್ಪೋಟ್ಸ್‌ರ್‍ ಸಂಸ್ಥೆಗೆ ತಲೆಬಿಸಿ ಶುರುವಾಗಿದೆ. ಅ.23ರಂದು ಬದ್ಧವೈರಿಗಳ ನಡುವಿನ ಸೂಪರ್‌-12 ಹಂತದ ಪಂದ್ಯಕ್ಕೆ ಐತಿಹಾಸಿಕ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ(ಎಂಸಿಜಿ) ಆತಿಥ್ಯ ವಹಿಸಬೇಕಿದೆ. ಆದರೆ ಆ ದಿನ ಮೆಲ್ಬರ್ನ್‌ನಲ್ಲಿ ಶೇ.90ರಷ್ಟುಮಳೆ ಬೀಳುವ ಮುನ್ಸೂಚನೆ ಇದೆ. ಮಧ್ಯಾಹ್ನದಿಂದ ಸಂಜೆವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಪಂದ್ಯ ರದ್ದಾದರೂ ಆಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅ.23ರಂದು ಆಸ್ಪ್ರೇಲಿಯಾ ಕಾಲಮಾನ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ) ಪಂದ್ಯ ಆರಂಭಗೊಳ್ಳಬೇಕಿದೆ. ಆ ದಿನ 10ರಿಂದ 25 ಮಿಲಿ ಮೀಟರ್‌ ಮಳೆ ಮುನ್ಸೂಚನೆಯನ್ನು ಅಲ್ಲಿನ ಹವಾಮಾನ ಇಲಾಖೆ ನೀಡಿದೆ. ಪಂದ್ಯ ಫಲಿತಾಂಶ ಕಾಣಲು ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ 5 ಓವರ್‌ ಆಟ ನಡೆಯಬೇಕು. ಇಲ್ಲವಾದಲ್ಲಿ ಪಂದ್ಯ ರದ್ದು ಎಂದು ಪರಿಗಣಿಸಿ ಅಂಕ ಹಂಚಲಾಗುತ್ತದೆ. ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನದ ವ್ಯವಸ್ಥೆ ಇಲ್ಲ, ಆದರೆ ಸೆಮಿಫೈನಲ್‌ ಹಾಗೂ ಫೈನಲ್‌ಗೆ ಮೀಸಲು ದಿನವನ್ನು ಐಸಿಸಿ ನಿಗದಿ ಪಡಿಸಿದೆ. ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಮಾತ್ರವಲ್ಲ, ಅ.22ರಂದು ಸಿಡ್ನಿಯಲ್ಲಿ ನಡೆಯಬೇಕಿರುವ ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ನಡುವಿನ ಸೂಪರ್‌-12 ಹಂತದ ಮೊದಲ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

click me!