ಐಸ್‌ ವಾಟರ್‌ ನಲ್ಲಿ ಮುಖ ಮುಳುಗಿಸೊದ್ರಿಂದ ಆಗುವ ಲಾಭ ಏನು? ಯಾವಾಗ ಹೀಗೆ ಮಾಡ್ಬೇಕು ಗೊತ್ತಾ?

Published : Oct 14, 2026, 11:42 AM IST
Ice water

ಸಾರಾಂಶ

ಎಲ್ಲರಿಗೂ ತಮ್ಮ ಸ್ಕಿನ್ ಹೆಲ್ದಿಯಾಗಿ, ಫ್ರೆಶ್ ಆಗಿ, ಗ್ಲೋಯಿಂಗ್ ಆಗಿ ಕಾಣ್ಬೇಕು ಎನ್ನುವ ಆಸೆ ಇರುತ್ತೆ. ಇದಕ್ಕಾಗಿ ಹಲವರು ಬೇರೆ ಬೇರೆ ಬ್ಯೂಟಿ ಪ್ರಾಡಕ್ಟ್ಸ್ ಮತ್ತು ಟ್ರೀಟ್ಮೆಂಟ್ಗಳನ್ನು ಬಳಸ್ತಾರೆ. ಕೆಲವರು ಐಸ್‌ ವಾಟರ್‌ ಬಳಸ್ತಾರೆ. ಅದ್ರಿಂದ ಏನು ಲಾಭ?

ಮುಖದ ಸೌಂದರ್ಯಕ್ಕೆ ಪ್ರತಿಯೊಬ್ಬರೂ ಮಹತ್ವ ನೀಡ್ತಾರೆ. ಎಲ್ಲರ ಮುಂದೆ ಸುಂದರವಾಗಿ ಕಾಣ್ಬೇಕು ಅಂತ ನಾನಾ ಪ್ರಯತ್ನ ನಡೆಸ್ತಾರೆ. ಅದ್ರಲ್ಲಿ ಐಸ್‌ ವಾಟರ್‌ ನಲ್ಲಿ ಮುಖ ಇಟ್ಟುಕೊಳ್ಳುವುದು ಸೇರಿದೆ. ಈ ಐಸ್‌ ವಾಟರ್‌ ನಲ್ಲಿ ಮುಖ ಮುಳುಗಿಸಿದ್ರೆ ಏನಾಗುತ್ತೆ ಎಂಬ ಮಾಹಿತಿ ಇಲ್ಲಿದೆ.

ಐಸ್ ವಾಟರ್ನಲ್ಲಿ ಮುಖ ಮುಳುಗಿಸಿದ್ರೆ ಏನಾಗುತ್ತೆ?

ತಜ್ಞರ ಪ್ರಕಾರ, ತಣ್ಣನೆಯ ನೀರು ಮುಖಕ್ಕೆ ತಾಜಾತನ ನೀಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದಾಗ ಮುಖದ ಮೇಲೆ ಕಾಣಿಸಿಕೊಳ್ಳುವ ಪಫಿನೆಸ್ ಮತ್ತು ಕಣ್ಣಿನ ಸುತ್ತಲಿನ ಊತವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುತ್ತದೆ. ಇದರಿಂದ ಮುಖ ಫ್ರೆಶ್ ಆಗಿ ಕಾಣುತ್ತದೆ. ಅಲ್ಲದೆ, ತಣ್ಣನೆಯ ನೀರಿನಿಂದ ಚರ್ಮದ ಮೇಲ್ಮೈ ತಾತ್ಕಾಲಿಕವಾಗಿ ಬಿಗಿಯಾದ ಅನುಭವ ನೀಡುತ್ತದೆ. ಆದರೆ, ಇದರಿಂದ ಸ್ಕಿನ್ ಪೋರ್ಸ್ ಶಾಶ್ವತವಾಗಿ ಚಿಕ್ಕದಾಗುತ್ತವೆ ಅಥವಾ ಮುಖಕ್ಕೆ ಖಾಯಂ ಗ್ಲೋ ಬರುತ್ತದೆ ಎಂಬುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ.

ಐಸ್ ವಾಟರ್ನಲ್ಲಿ ಮುಖ ಯಾವಾಗ ಮುಳುಗಿಸಬೇಕು?

ಸಾಮಾನ್ಯವಾಗಿ ಬೆಳಗ್ಗೆ ಮುಖದ ಪಫಿನೆಸ್ ಕಡಿಮೆ ಮಾಡಿಕೊಳ್ಳಲು ಕೆಲವರು ಈ ವಿಧಾನವನ್ನು ಬಳಸುತ್ತಾರೆ. ಆದರೆ, ಮುಖವನ್ನು ಹೆಚ್ಚು ಸಮಯ ಐಸ್ ವಾಟರ್ನಲ್ಲಿ ಮುಳುಗಿಸಬಾರದು. ತುಂಬಾ ತಣ್ಣನೆಯ ನೀರು ಅಥವಾ ಐಸ್ಗೆ ದೀರ್ಘಕಾಲ ಚರ್ಮವನ್ನು ಒಡ್ಡುವುದರಿಂದ ಡ್ರೈನೆಸ್, ಸ್ಕಿನ್ ಇರಿಟೇಷನ್ ಮತ್ತು ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಮುಖದಲ್ಲಿ ಪಿಂಪಲ್ಸ್, ಕೆಂಪು ದದ್ದುಗಳು ಅಥವಾ ರ್ಯಾಶಸ್ ಇದ್ದರೆ, ಐಸ್ ವಾಟರ್ ಬಳಸುವ ಮೊದಲು ಎಚ್ಚರಿಕೆ ವಹಿಸಿ. ಸೆನ್ಸಿಟಿವ್ ಸ್ಕಿನ್ ಇರುವವರು ಕೂಡ ಈ ವಿಧಾನವನ್ನು ತಪ್ಪಿಸಬೇಕು.

ಐಸ್ ವಾಟರ್ ಬಳಸುವಾಗ ಈ ವಿಷಯ ನೆನಪಿರಲಿ

ಮುಖಕ್ಕೆ ಗ್ಲೋ ತರಲು ಐಸ್ ವಾಟರ್ ಮಾತ್ರ ಸಾಕಾಗುವುದಿಲ್ಲ. ಪ್ರತಿದಿನ ಸ್ಕಿನ್ ಕ್ಲೀನಿಂಗ್, ಮಾಯಿಶ್ಚರೈಸರ್ ಮತ್ತು ಸನ್ಸ್ಕ್ರೀನ್ ಬಳಸುವುದು ಮುಖ್ಯ. ಐಸ್ ಅನ್ನು ನೇರವಾಗಿ ಮುಖದ ಮೇಲೆ ಉಜ್ಜಬೇಡಿ. ಮುಖವನ್ನು ಐಸ್ ನೀರಿನಲ್ಲಿ ದೀರ್ಘಕಾಲ ಮುಳುಗಿಸುವುದನ್ನೂ ತಪ್ಪಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

1 ಕಪ್ ಅವಲಕ್ಕಿ-ರವೆಯಿದ್ರೆ 10 ನಿಮಿಷದಲ್ಲಿ ರೆಡಿಯಾಗುತ್ತೆ ಹೂವಷ್ಟೇ ಸಾಫ್ಟ್ ಆದ ಈ ಸ್ಪಾಂಜ್ ತಿಂಡಿ
ಹಿಟ್ಟಿಗೆ ಈ ಪದಾರ್ಥ ಹಾಕಿ ನೋಡ್ರಿ.. ಹುಳಿನೂ ಮಾಯ, ದೋಸೆ-ಇಡ್ಲಿನೂ ಹೂವಿನಂತೆ ಸಾಫ್ಟ್ ಆಗುತ್ತೆ!