ಎಸಿ ನೀರನ್ನು ಹಾಳು ಮಾಡ್ಬೇಡಿ, ಮನೆಯ ಈ ಕೆಲಸಗಳಿಗೆ ಬಳಸಿ!

Published : Aug 25, 2026, 07:39 PM IST
AC water

ಸಾರಾಂಶ

AC water usage : ಎಸಿಯಿಂದ ಹೊರ ಬರುವ ನೀರು ವ್ಯರ್ಥವಾಗುತ್ತೆ. ನಿಮ್ಮ ಮನೆಯಲ್ಲೂ ಇದೇ ಆಗ್ತಿದೆ ಅಂದ್ರೆ ಇನ್ಮುಂದೆ ಅದನ್ನು ಸರಿಯಾಗಿ ಬಳಸಿಕೊಳ್ಳಿ. ಎಸಿ ನೀರಿನಿಂದ ಏನೆಲ್ಲ ಮಾಡ್ಬಹುದು ಗೊತ್ತಾ?

ಏರ್ ಕಂಡಿಷನರ್ ನಿಂದ ಹೊರಬರುವ ನೀರನ್ನು ಬಹಳಷ್ಟು ಜನ ಸುಮ್ಮನೆ ವ್ಯರ್ಥ ಮಾಡ್ತಾರೆ. ಅದು ಕೊಳಕು ನೀರು ಎನ್ನುವ ಭಾವನೆ ಅನೇಕರಲ್ಲಿದೆ. ಮತ್ತೆ ಕೆಲವರಿಗೆ ಅದನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿಲ್ಲ. ಇಂದು ನಾವು ಎಸಿ ನೀರನ್ನು ಹೇಗೆಲ್ಲ ಬಳಸಿಕೊಳ್ಬಹುದು ಎಂಬುದನ್ನು ಹೇಳ್ತೇವೆ.

ಎಸಿ ನೀರಿನ ಬಳಕೆ ಹೀಗೆ

ಪ್ರತಿಯೊಬ್ಬರ ಮನೆಯನ್ನೂ ಈಗ ಎಸಿ ಪ್ರವೇಶ ಮಾಡಿದೆ. ಬೇಸಿಗೆಯಲ್ಲಿ ಎಸಿ ಬಳಸುವವರ ಸಂಖ್ಯೆ ಹೆಚ್ಚು. ಪ್ರತಿ ದಿನ ಎಸಿ ಬಳಸುವವರು ನಮ್ಮಲ್ಲಿದ್ದಾರೆ. ಆದ್ರೆ ಎಸಿಯಿಂದ ಬರುವ ನೀರನ್ನು ಏನು ಮಾಡ್ಬೇಕು ಎಂಬುದು ಗೊತ್ತಿಲ್ಲದ ಕಾರಣ ಅನೇಕರು ಈ ನೀರನ್ನು ಹಾಗೆ ಹಾಳು ಮಾಡ್ತಾರೆ. ನೀವು ಇದನ್ನು ನಿಮ್ಮ ಮನೆಯ ಕೆಲಸಕ್ಕೆ ಬಳಸಬಹುದು.

ಎಸಿಯಿಂದ ಹೊರಬರುವ ನೀರು ಕೊಳಕಾಗಿರೋದಿಲ್ಲ. ಸಾಮಾನ್ಯವಾಗಿ ಧೂಳು ಮತ್ತು ಮಲಿನತೆ ಕಡಿಮೆ ಇರುವ ನೀರಾಗಿರುತ್ತದೆ. ಇದನ್ನು ಮನೆಯನ್ನು ಸ್ವಚ್ಛಗೊಳಿಸಲು, ನೆಲ ಒರೆಸಲು ನೀವು ಎಸಿ ನೀರನ್ನು ಬಳಸಬಹುದು. ನೀವು ಕೆಲ ಬಟ್ಟೆಗಳನ್ನು ಕ್ಲೀನ್‌ ಮಾಡಲು ಕೂಡ ಎಸಿ ನೀರನ್ನು ಬಳಸಬಹುದು. ಹಾಗೆಯೇ ಎಸಿ ನೀರು ಸೂಕ್ತವಾಗಿರುವ ಗಿಡಗಳಿಗೆ ನೀವು ಇದೇ ನೀರನ್ನು ಹಾಕಬಹುದು. ಗಿಡಕ್ಕೆ ಹಾಕುವ ಮೊದಲು ಎಸಿ ನೀರು ಯಾವ ಗಿಡಕ್ಕೆ ಸೂಕ್ತ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.

ಆದರೆ ಒಂದು ವಿಷಯ ನೆನಪಿರಲಿ. ಎಸಿ ನೀರನ್ನು ಇನ್ವರ್ಟರ್ ಅಥವಾ ವಾಹನದ ಬ್ಯಾಟರಿಯಲ್ಲಿ ಬಳಸಬಾರದು. ಬ್ಯಾಟರಿಗೆ ತಯಾರಿಸಲಾದ ಸೂಕ್ತ ಡಿಸ್ಟಿಲ್ಡ್ ವಾಟರ್ನ್ನೇ ಬಳಸಬೇಕು. ಎಸಿ ನೀರನ್ನು ಸಂಗ್ರಹಿಸಲು ಮಾರುಕಟ್ಟೆಯಲ್ಲಿ ಎಸಿ ವಾಟರ್‌ ಕಲೆಕ್ಷನ್‌ ಟ್ಯಾಂಕ್ ಎಂಬ ಸಣ್ಣ ಟ್ಯಾಂಕ್ಗಳು ಸಿಗುತ್ತವೆ. ಇವುಗಳಲ್ಲಿ ಮುಚ್ಚಳ ಮತ್ತು ನೀರು ತೆಗೆದುಕೊಳ್ಳಲು ಟ್ಯಾಪ್ ಕೂಡ ಇರುತ್ತದೆ. ಈ ಟ್ಯಾಂಕ್ಗಳಲ್ಲಿ ಎಸಿಯಿಂದ ಹೊರಬರುವ ನೀರು ಸಂಗ್ರಹಿಸಬೇಕು. ಟ್ಯಾಪ್ ಇರುವುದರಿಂದ ಅಗತ್ಯವಿದ್ದಾಗ ನೀರನ್ನು ಸುಲಭವಾಗಿ ಬಳಸಬಹುದು.

ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ಗಳಲ್ಲಿಯೂ ಇಂತಹ ಟ್ಯಾಂಕ್ಗಳು ಲಭ್ಯವಿವೆ. ಬೆಲೆ ಟ್ಯಾಂಕ್ನ ಗುಣಮಟ್ಟ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎರಡೇ ಚಮಚ ಎಣ್ಣೆ ಬಳಸಿ ಬದನೇಕಾಯಿ, ಆಲೂಗಡ್ಡೆಯ ಕ್ರಿಸ್ಪಿ, ಟೇಸ್ಟಿ ಫ್ರೈ ಮಾಡೋದು ಹೇಗೆ ಗೊತ್ತಾ
ಮಣೆ ಇಲ್ಲದೆಯೂ ಮಾಡಬಹುದು ಪರ್ಫೆಕ್ಟ್ ಆದ ಗುಂಡಗಿನ ಚಪಾತಿ, ರೊಟ್ಟಿ.. ಇಲ್ಲಿವೆ 4 ಸ್ಮಾರ್ಟ್ ಟ್ರಿಕ್ಸ್