ವೋಡಾಫೋನ್-ಐಡಿಯಾ ಡೇಟಾ ಡಬಲ್ ಧಮಾಕಾ

By Suvarna NewsFirst Published Apr 27, 2020, 3:38 PM IST
Highlights

ಈ ದುನಿಯಾವೇ ಹಾಗೆ ಎಲ್ಲ ಚೌಕಾಸಿ. ಕಡಿಮೆ ದರದಲ್ಲಿ ಯಾವುದು ಬೆಸ್ಟ್ ಸಿಗುತ್ತದೆ ಎಂಬುದನ್ನು ನೋಡುವ ಕಾಲವಿದು. ಅದೂ ಈ ಕೊರೋನಾ ಸಂಕಷ್ಟದಲ್ಲಂತೂ ಕೇಳಬೇಕೆ? ಎಷ್ಟು ಉಳಿಸಿಕೊಳ್ಳುತ್ತೇವೆಯೋ ಅಷ್ಟು ಗಳಿಸಿಕೊಂಡಂತೆ ಎನ್ನುವಂತೆ ಪಾಠ ಕಲಿಸಿಕೊಟ್ಟಿದೆ. ಹೀಗಾಗಿ ಉದ್ಯಮಗಳೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆಫರ್ ನೀಡಬೇಕಾದ ಅನಿವಾರ್ಯತೆ ಇದೆ. ಈಗ ಜಿಯೋ ಯುಗದಲ್ಲಿ ಉಳಿದುಕೊಳ್ಳಲು ಹೆಣಗಾಡುತ್ತಿರುವ ವೋಡಾಫೋನ್-ಐಡಿಯಾ ಡಬಲ್ ಡೇಟಾ ಆಫರ್ ಕೊಟ್ಟಿದೆ. 

ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಅಂತ ಕರೆಯೋ ಬದಲು ಈಗ ಕೊರೋನಾ ಕಾಲ ಎಂದು ಹೇಳಿಕೊಳ್ಳಬಹುದು. ಮೊದಲ ಮೂರು ಕಾಲದಲ್ಲಿ ಹೊರಹೋಗಬಹುದಾಗಿದ್ದರೂ ಈ ಕೊರೋನಾ ಎಂಬ ಕ್ವಾರಂಟೇನ್ ಯುಗದಲ್ಲಿ ಅದು ಸ್ವಲ್ಪ ಕಷ್ಟ. ಹೀಗಾಗಿ ಬಹುತೇಕರು ವರ್ಕ್ ಫ್ರಂ ಹೋಂ ಮೊರೆಹೋಗಿದ್ದಾರೆ. ಇನ್ನು ಕೆಲವರಿಗೆ ಹೊತ್ತೂ ಹೋಗದೆ ಮೊಬೈಲ್ ಮೊರೆ ಹೋಗುತ್ತಾರೆ. ಆದರೆ, ಇದ್ಯಾವುದೇ ಇದ್ದರೂ  ಇಂಟರ್ನೆಟ್ ಡೇಟಾ ಸಿಕ್ಕಾಪಟ್ಟೆ ಬೇಕು. ಇದರಿಂದ ಟೆಲಿಕಾಂ ಕಂಪನಿಗಳು ಭರ್ಜರಿ ಆಫರ್‌ಗಳನ್ನೇ ಕೊಡುತ್ತಿವೆ. ಈಗ ವೋಡಾಫೋನ್-ಐಡಿಯಾ ಸರದಿ.

ಇದು ತನ್ನ ಪ್ರೀ-ಪೇಯ್ಡ್ ಗ್ರಾಹಕರಿಗೆ ಡಬಲ್ ಧಮಾಕಾವನ್ನೇ ನೀಡಿದೆ. ತನ್ನ ಬಹುತೇಕ ಪ್ಲಾನ್‌ಗಳಲ್ಲಿ ದುಪ್ಪಟ್ಟು ಡೇಟಾವನ್ನು ನೀಡಿದೆ. ಇತ್ತೀಚೆಗಷ್ಟೇ ತನ್ನ 399 ರೂ. ಹಾಗೂ 599 ರೂ. ಪ್ಲಾನ್‌ಗಳಿಗೆ ಡಬಲ್ ಡೇಟಾವನ್ನು ನೀಡಿತ್ತು. ಈಗ 299 ರೂ., 499 ರೂ. ಮತ್ತು 699 ರೂಪಾಯಿಯ ನೂತನ ಡಬಲ್ ಡೇಟಾ ಪ್ಯಾಕ್ ಅನ್ನು ನೀಡುತ್ತಿದೆ. 

ಇದನ್ನೂ ಓದಿ: ಫೋಟೋ ನೋಡಿ ಕಾರು ರಿಪೇರಿ, ಇದೊಂಥರ ಡಿಜಿಟಲ್ ಮಾರ್ಕೆಟಿಂಗ್!

ಬರೀ ಡಬಲ್ ಡೇಟಾವನ್ನಷ್ಟೇ ನೀಡದೆ ಇನ್ನೂ ಕೆಲವು ಸ್ಪೆಷಲ್ ಆಫರ್‌ಗಳನ್ನು ನೀಡಿದೆ. ಸಬ್ಸ್‌ಕ್ರೈಬರ್‌ಗಳಿಗೆ ವೊಡಾಫೋನ್ ಪ್ಲೇ, ಝೀ5 ಮತ್ತು ಐಡಿಯಾ ಸಿನಿಮಾ ಹಾಗೂ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. 

ಕರ್ನಾಟಕಕ್ಕಿಲ್ಲ ಈ ಪ್ಲಾನ್!?
ಕಂಪನಿಯು ತನ್ನ 399 ರೂ. ಹಾಗೂ 599 ರೂಪಾಯಿ ಪ್ಲಾನ್ ಗಳ ಡಬಲ್ ಡೇಟಾ ಆಫರ್ ಅನ್ನು ಈ 9 ರಾಜ್ಯಗಳಾದ ದೆಹಲಿ, ಮಧ್ಯಪ್ರದೇಶ, ಮುಂಬೈ, ಕೋಲ್ಕತ್ತಾ, ಪಶ್ಚಿಮ ಬಂಗಾಳ, ಒಡಿಸ್ಸಾ, ಅಸ್ಸಾಂ, ರಾಜಸ್ಥಾನ ಹಾಗೂ ಜಮ್ಮು-ಕಾಶ್ಮೀರ ವ್ಯಾಪ್ತಿಗೆ ಮಾತ್ರ ನೀಡುತ್ತಿದೆ. ಹೀಗಾಗಿ ಈ ಆಫರ್ ಕರ್ನಾಟಕಕ್ಕೆ ಸದ್ಯಕ್ಕಂತೂ ಇದ್ದಂಗೆ ಕಾಣುತ್ತಿಲ್ಲ.

ಅಷ್ಟಕ್ಕೂ ಸಿಗುತ್ತೆ ಹೈಸ್ಪೀಡ್ ಡೇಟಾ
ಈಗ ಘೋಷಿಸಲಾಗಿರುವ 299, 449 ಮತ್ತು 699 ರೂಪಾಯಿ ಪ್ರೀಪೇಯ್ಡ್ ಪ್ಲಾನ್‌ನಲ್ಲಿ ಹೆಚ್ಚುವರಿಯಾಗಿ 2 ಜಿಬಿ 4ಜಿ ಡೇಟಾವನ್ನು ನೀಡಲಾಗುತ್ತಿದೆ, ಇದರಿಂದ ಬಳಕೆದಾರರು ಒಟ್ಟಾರೆ 4ಜಿಬಿ ಡೇಟಾವನ್ನು ಹೊಂದಲಿದ್ದು, ಹೈಸ್ಪೀಡ್ ಅನುಭವವನ್ನು ಹೊಂದಲಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಜೊತೆಗೆ ಸ್ಥಳೀಯ, ಎಸ್‌ಟಿಡಿ ಹಾಗೂ ರೋಮಿಂಗ್‌ನಲ್ಲಿ ಅನಿಯಮಿತ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಇದರ ಜೊತೆಗೆ ಪ್ರತಿ ದಿನಕ್ಕೆ 100 ಎಸ್ ಎಂ ಎಸ್ ಮೆಸೇಜ್ ಸೌಲಭ್ಯವೂ ಇದೆ.  

ಇದನ್ನೂ ಓದಿ: ಎಚ್ಚರ ತಪ್ಪಿದ್ರೆ ಹುಷಾರ್, ಸ್ವಲ್ಪ ಯಾಮಾರಿದ್ರೂ ಕೀ-ಲೆಸ್ ಹೋಗಿ ಕಾರ್ ಲೆಸ್ ಆಗ್ತೀರಾ!

ಇನ್ನು 299 ರೂಪಾಯಿ ಪ್ಲಾನ್ ಹೊಂದಿದವರಿಗೆ 28 ದಿನಗಳ ವ್ಯಾಲಿಡಿಟಿ, 499 ರೂ. ಹಾಗೂ 699 ರೂಪಾಯಿಗಳ ಪ್ಲಾನ್ ಹೊಂದಿದವರಿಗೆ ಕ್ರಮವಾಗಿ 56 ಹಾಗೂ 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಕಲ್ಪಿಸಲಾಗಿದೆ. 

ನಷ್ಟದಲ್ಲಿದ್ದ ವೋಡಾಫೋನ್
ಜಿಯೋ ಮಾರುಕಟ್ಟೆ ಪ್ರವೇಶಿಸಿ ಭಾರಿ ಅಗ್ಗದ ದರದಲ್ಲಿ ಡೇಟಾ ಹಾಗೂ ಕರೆ ಸೌಲಭ್ಯವನ್ನು ನೀಡಲು ಪ್ರಾರಂಭಿಸಿದ ಮೇಲೆ ಪೈಪೋಟಿಗಳಿದ ಟೆಲಿಕಾಂ ಕಂಪನಿಗಳಾದ ವೋಡಾಫೋನ್ ಹಾಗೂ ಏರ್‌ಟೆಲ್ ಈಗಾಗಲೇ ಭಾರಿ ನಷ್ಟಕ್ಕೆ ಸಿಲುಕಿವೆ. 2019ರ ಎರಡನೇ ತ್ರೈಮಾಸಿಕದಲ್ಲಿ ವೋಡಾಫೋನ್-ಐಡಿಯಾ ನೀಡಿರುವ ಮಾಹಿತಿ ಪ್ರಕಾರ ಒಟ್ಟಾರೆ 50,921 ಕೋಟಿ ರೂ. ನಷ್ಟ ಅನುಭವಿಸಿತ್ತು. 

ಇನ್ನು ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಕುರಿತ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ವೋಡಾಫೋನ್-ಐಡಿಯಾ 53,000 ಕೋಟಿ ರೂ. ಬಾಕಿ ಮೊತ್ತವನ್ನು ಬಡ್ಡಿ ಸೇರಿಸಿ ಕಟ್ಟಬೇಕಿತ್ತು. ದೂರ ಸಂಪರ್ಕ ಇಲಾಖೆ ಕೂಡಲೇ ಬಾಕಿ ಮೊತ್ತ ಪಾವತಿಸುವಂತೆ ಕಂಪನಿ ಮೇಲೆ ಒತ್ತಡ ಹಾಕಿತ್ತು. ಕೊನೆಗೆ ಸರ್ಕಾರದ ಜೊತೆ ಕಂತಿನ ಮೂಲಕ ಪಾವತಿಗೆ ಮಾತುಕತೆ ಸಹ ನಡೆದಿತ್ತು. ಅದರ ಭಾಗವಾಗಿ ಮೊದಲ ಕಂತಾಗಿ 2,500 ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿಸಿದ್ದ ವೋಡಾಫೋನ್-ಐಡಿಯಾ ಶೀಘ್ರ ಉಳಿದ ಕಂತುಗಳನ್ನೂ ಕಟ್ಟುವುದಾಗಿ ಹೇಳಿಕೊಂಡಿತ್ತು. 

ಇದನ್ನೂ ಓದಿ: ಲಾಕ್‌ಡೌನ್ ಮುಗಿದರೆ ವಿಮಾನಯಾನದಲ್ಲೂ ಸೋಷಿಯಲ್ ಡಿಸ್ಟೆನ್ಸ್; ಇಲ್ಲಿದೆ ಸೂತ್ರ!

ಈ ಮಧ್ಯೆ ಪೈಪೋಟಿಗಳ ನಡುವೆ ಗ್ರಾಹಕರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಬೇರೆ. ಹೊಸ ಹೊಸ ಆಫರ್ ನೀಡುವ ಮೂಲಕ ಅಗ್ಗದ ಬೆಲೆಗೆ ಕೊಡಬೇಕಾದ ಸ್ಥಿತಿ ಬೇರೆ. ಹೀಗೆ ಆಗುವುದರಿಂದ ಲಾಭದ ಪ್ರಮಾಣದಲ್ಲೂ ಖೋತಾ ಆಗುವುದಲ್ಲದೆ, ನಷ್ಟದ ಪ್ರಮಾಣ ಹಾಗೆಯೇ ಮುಂದುವರಿಯಲಿದೆ ಎನ್ನುತ್ತಾರೆ ತಜ್ಞರು.

click me!