ಟ್ವಿಟರ್‌ನಲ್ಲಿ ಬರಲಿದೆ ಎಡಿಟ್ ಬಟನ್, ಆದರೆ ಒಂದು ಕಂಡೀಷನ್!

By Suvarna News  |  First Published Jul 3, 2020, 2:17 PM IST

ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್‌ಗೆ ಅಗ್ರಸ್ಥಾನವಿದೆ. ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿ ಕೂಡ ಟ್ವಿಟರ್ ಖಾತೆ ಹೊಂದಿದ್ದು, ಟ್ವೀಟ್ ಮೂಲಕ ಸದ್ದು ಮಾಡುತ್ತಾರೆ. ಇತರ ಜಾಲತಾಣಗಳಲ್ಲಿ ಇರುವಂತೆ ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಇಲ್ಲ. ಬಳಕೆ ದಾರರು ಹಲವು ಬಾರಿ ಮನವಿ ಮಾಡಿದರೂ ಟ್ವಿಟರ್ ಕಿವಿಗೆ ಹಾಕಿಕೊಂಡಿಲ್ಲ. ಇದೀಗ ದೀಢೀರ್ ಆಗಿ ಟ್ವಿಟರ್ ಎಡಿಟ್ ಆಯ್ಕೆ ನೀಡುವುದಾಗಿ ಹೇಳಿದೆ. ಆದರೆ ಒಂದು ಕಂಡೀಷನ್ ವಿಧಿಸಿದೆ.


ನವದೆಹಲಿ(ಜು.03): ಪ್ರಸ್ತುತ ಜಗತ್ತಿನಲ್ಲಿ ನೀವು ಯಾವ ಕೆಲಸ ಮಾಡುತ್ತಿದ್ದರೂ ನಿಮ್ಮಲ್ಲಿ ಸಾಮಾಜಿಕ ಜಾಲತಾಣ, ಚಾಟಿಂಗ್ ಆ್ಯಪ್ ಇರಲೇಬೇಕು ಅನ್ನುವಷ್ಟರ ಮಟ್ಟಿಗೆ  ಸೋಶಿಯಲ್ ಮೀಡಿಯಾ ನಮ್ಮನ್ನು ಆವರಿಸಿ ಬಿಟ್ಟಿದೆ. ಪ್ರಮುಖವಾಗಿ ಟ್ವಿಟರ್ ಇದೀಗ ಅಗ್ರಸ್ಥಾನದಲ್ಲಿ ನಿಂತಿದೆ. ಆದರೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿ ಪೋಸ್ಟ್ ಮಾಡಿದ ಬಳಿಕ ಮತ್ತೆ ಎಡಿಟ್ ಮಾಡುವ ಆಯ್ಕೆ ಇಲ್ಲ. ಫೇಸ್‌ಬುಕ್ ಸೇರಿದಂತೆ ಇತರ ಸೋಶಿಯಲ್ ಮಿಡಿಯಾದಲ್ಲಿ ಎಡಿಟ್ ಆಯ್ಕೆಗಳಿವೆ. ಹೀಗಾಗಿ ಟ್ವಿಟರ್ ಬಳಕೆ ದಾರರು ಹಲವು ವರ್ಷಗಳಿಂದ ಎಡಿಟನ್ ಬಟನ್‌ಗೆ ಮನವಿ ಮಾಡುತ್ತಲೇ ಇದ್ದಾರೆ. ಇದೀಗ ಟ್ವಿಟರ್ ಗ್ರೀನ್ ಸಿಗ್ನಲ್ ನೀಡಿದೆ.

ವಾಟ್ಸಪ್‌ ರೀತಿ ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಟ್ವೀಟ್ ಮಾಡಿ!.

Tap to resize

Latest Videos

ಮಾಡಿದ ಟ್ವೀಟ್‌ನಲ್ಲಿ ತಪ್ಪುಗಳನ್ನು ಅಥವಾ ಟ್ವೀಟ್ ಬದಲಾಯಿಸಲು ಎಡಿಟ್ ಬಟನ್ ಬೇಕು ಅನ್ನೋದು ಹಲವರ ಮನವಿ. ಈ ಮನವಿಗೆ ಸ್ಪಂದಿಸಿರವ ಟ್ವಿಟರ್ ಇಜೀಗ ಎಡಿಟ್ ಆಯ್ಕೆ ನೀಡಲು ಮುಂದಾಗಿದೆ. ಆದರೆ ಒಂದು ಕಂಡೀಷನ್ ಕೂಡ ಹಾಕಿದೆ. ಎಲ್ಲರೂ ಮಾಸ್ಕ್ ಹಾಕಿದ ದಿನ ಟ್ವಿಟರ್‌ನಲ್ಲಿ ಎಡಿಟ್ ಆಯ್ಕೆ ಜಾರಿಯಾಗಲಿದೆ ಎಂದು ಟ್ವಿಸ್ಟ್ ನೀಡಿದೆ.

 

You can have an edit button when everyone wears a mask

— Twitter (@Twitter)

ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!.

ವಿಶ್ವದಲ್ಲಿ 320 ಮಿಲಿಯನ್ ಸಕ್ರಿಯ ಟ್ವಿಟರ್ ಬಳಕೆದಾರರಿದ್ದಾರೆ. ಇವರೆಲ್ಲರ ಬೇಡಿಕೆ ಎಡಿಟ್ ಬಟನ್ ಆಗಿತ್ತು. ಆದರೆ ಎಲ್ಲರೂ ಮಾಸ್ಕ್ ಹಾಕಿದ ದಿನ ಎಡಿನ್ ಬಟನ್ ಬರಲಿದೆ ಎಂದು ಟ್ವಿಟರ್ ಸಂದೇಶ ರವಾನಿಸಿದೆ. ಈ ಮೂಲಕ ಎಲ್ಲರೂ ಮಾಸ್ಕ್ ಹಾಕಿಕೊಂಡು ಕೊರೋನಾ ವೈರಸ್‌ ಮಹಾಮಾರಿಯಿಂದ ಮುಕ್ತರಾಗಿ ಅನ್ನೋ ಸಂದೇಶ ರವಾನಿಸಿದೆ.
 

click me!