ಆ್ಯಂಡ್ರಾಯ್ಡ್ ಫೋನ್‌ನಲ್ಲಿ 10 ಫನ್ನಿ ಕೀಬೋರ್ಡ್ ಆ್ಯಪ್‌ಗಳು

By Suvarna News  |  First Published Jun 30, 2020, 5:19 PM IST

ಮೊಬೈಲ್ ಇದ್ದರೆ ಸಾಕು ಪ್ರಪಂಚವೇ ನಮ್ಮ ಕೈಯಲ್ಲಿದ್ದ ಹಾಗೆ ನಾವು ಆಡುತ್ತಿರುತ್ತೇವೆ. ಅವರವರ ಇಷ್ಟಕ್ಕೆ ತಕ್ಕಂತೆ ಮೊಬೈಲ್ ಗಳನ್ನು ಬಳಸುತ್ತಿರುತ್ತಾರೆ. ಇಂದು ಮುಂಜಾನೆ ಎದ್ದಾಗಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್ ಬೇಕೇ ಬೇಕು. ಅವರವರಿಗೆ ಬೇಕಾಗಿದ್ದನ್ನು ಅವರವರು ನೋಡುತ್ತಿರುತ್ತಾರೆ. ಇನ್ನು ಅನೇಕರು ಮೊಬೈಲ್ ಅನ್ನು ಬಳಸುತ್ತಾರೆಯೇ ವಿನಃ ಅದರಲ್ಲಿರುವ ಹೆಚ್ಚುವರಿ ಫೀಚರ್ ಗಳ ತಂಟೆಗೆ ಹೋಗಿರುವುದಿಲ್ಲ. ಮತ್ತೆ ಕೆಲವರು ಅಂಥದ್ದೊಂದು ಆಪ್ಷನ್ ಬಗ್ಗೆ ತಿಳಿದುಕೊಳ್ಳಲೂ ಹೋಗುವುದಿಲ್ಲ. ಆದರೆ, ಕೇವಲ ನಾವು-ನೀವು ಬಳಸುವ ಕೀಬೋರ್ಡ್‌ಗಳಲ್ಲೇ ಅದೆಷ್ಟು ವಿಧಗಳಿವೆ ಗೊತ್ತೇ? ಅವುಗಳನ್ನು ಬಳಸುತ್ತಾ ಹೋದಂತೆ ಒಂಥರಾ ಮಜವಾದ ಅನುಭವವನ್ನು ಕೊಡುತ್ತದೆ. ಅಂತಹ 10 ಕೀಬೋರ್ಡ್ ಆ್ಯಪ್ ಗಳ ಬಗ್ಗೆ ಇಲ್ಲಿದೆ ಮಾಹಿತಿ. 


ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಹೆಚ್ಚೆಚ್ಚು ಫೀಚರ್‌ಗಳು ಸಿಗಲಿದೆ ಎಂಬ ಮಾತಿದೆ. ಅಂದರೆ, ಇಲ್ಲಿ ಅದೇ ಕಂಪನಿಯ ಆ್ಯಪ್ ಗಳನ್ನು ಮಾತ್ರ ಬಳಸಬೇಕೆಂದೇನೂ ಇಲ್ಲ. ಬೇರೆ ಬೇರೆ ಖಾಸಗಿ ಆ್ಯಪ್‌ಗಳೂ ಉಚಿತವಾಗಿ ಬಳಕೆಗೆ ಸಿಗಲಿದೆ. ಹೀಗಾಗಿ ಇಲ್ಲಿ ಆಯ್ಕೆಗೂ ಸಹ ಹೆಚ್ಚೆಚ್ಚು ಆ್ಯಪ್ ಗಳು ಸಿಗುತ್ತವೆ. ಹಾಗಾಗಿ ನೀವು ಮೊಬೈಲ್‌ನಲ್ಲಿ ಬಹುಮುಖ್ಯವಾಗಿ ಬಳಸುವ ಕೀಬೋರ್ಡ್‌ಗೆ ಸಂಬಂಧಿಸಿಯೇ ಅನೇಕ ಆ್ಯಪ್‌ಗಳಿದ್ದು, ಯಾವ ಯಾವುದರಲ್ಲಿ ಏನೇನು ಫೀಚರ್‌ಗಳಿವೆ ಎಂಬುದ ಹುಡುಕ ಹೊರಟರೆ ಒಂದಿಡಿ ದಿನಕ್ಕಂತೂ ಮುಗಿಯದು. ಹೀಗಾಗಿ ಇಲ್ಲಿದೆ 10 ಫನ್ ಕೀಬೋರ್ಡ್‌ಗಳ ಮಾಹಿತಿ.

ಬಬಲ್ ಇಂಡಿಕ್ ಕೀಬೋರ್ಡ್
ಈ ಕೀ ಬೋರ್ಡ್ ಸಂಪೂರ್ಣ ಉಚಿತ. ಇದರಲ್ಲಿ ಸಾಕಷ್ಟು ಇಮೋಜಿಗಳು, ಮೆಮಿಗಳು ಹಾಗೂ ಸ್ಟಿಕ್ಕರ್ ಗಳು ಸಹ ನಿಮ್ಮ ಬಳಕೆಗೆ ಸಿಗಲಿದೆ. ಇದರಲ್ಲಿ ನೀವು ನಿಮ್ಮ ಸೆಲ್ಫೀ ಜೊತೆ ಕಾರ್ಟೂನ್ ಬಬಲ್ ಗಳು ಬರುವಂತೆ ಮಾಡಿಕೊಳ್ಳಬಹುದು. ಇದು ಹಿಂದಿ ಭಾಷೆ ಆಧಾರಿತ ಆ್ಯಪ್ ಆಗಿದ್ದರೂ ಸಹ ಹಲವಾರು ಪ್ರಾದೇಶಿಕ ಭಾಷೆಗಳೂ ಇದರಲ್ಲಿವೆ.



ಇದನ್ನು ಓದಿ: ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!

ಫ್ಲಿಸ್ಕಿ
ಕೀಬೋರ್ಡ್ ನಲ್ಲಿ ಟೈಪ್ ಮಾಡುವಾಗ ವೇಗ ಇರಬೇಕು ಎಂಬ ನಿಟ್ಟಿನಲ್ಲಿ ಸ್ವೈಪ್ ಕೀಬೋರ್ಡ್ ಅನ್ನು ಬಳಸಲಾಗುತ್ತದೆ. ಈ ಕೀಬೋರ್ಡ್ ಸಹ ಅದೇ ರೀತಿ ಬಳಕೆಯಾಗುತ್ತದೆ. ಇದು ನೀವು ಟೈಪಿಸುತ್ತಿದ್ದಂತೆ ತಕ್ಷಣ ಅರ್ಥ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಪದಗಳ ಸಲಹೆಯನ್ನು ನೀಡುವುದಲ್ಲದೆ, ಬ್ಯಾಕ್ ಸ್ಪೇಸ್ ಅನ್ನು ಸಹ ಕೊಡಲಿದೆ.

ಕಿಕಾ ಕೀಬೋರ್ಡ್ 2020
ಇದಂತೂ ಪಕ್ಕಾ ಗ್ರಾಹಕಸ್ನೇಹಿ ಕೀಬೋರ್ಡ್ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ನೂರಕ್ಕೂ ಹೆಚ್ಚು ಮೋಡ್‌ಗಳಿದ್ದು, ಎರಡೂ ಕೈಗಳಲ್ಲಿ ಟೈಪ್ ಮಾಡಲು ಮತ್ತಷ್ಟು ಸರಳ ಮಾರ್ಗವನ್ನು ನೀಡಿದೆ. ಇದರಲ್ಲಿ 60 ಕೀಬೋರ್ಡ್ ಲೇಔಟ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ನಿಮ್ಮದೇ ಫೋಟೋವನ್ನು ಬ್ಯಾಗ್ರೌಂಡ್ ಗೆ ಬಳಸಿಕೊಳ್ಳಬಹುದಾಗಿದೆ. 

ಜಿಬೋರ್ಡ್
ಈ ಕೀಬೋರ್ಡ್ ಗೂಗಲ್ ಸೇವೆಯ ಒಂದು ಭಾಗವಾಗಿದೆ. ಇದರಲ್ಲಿ ಟೈಪ್ ಮಾಡಬೇಕಾಗಿಲ್ಲ, ಕೇವಲ ಬಾಯಲ್ಲಿ ಹೇಳಿದರೆ ಸಾಕು ಅದಾಗೇ ಅಕ್ಷರಗಳು ಟೈಪ್ ಆಗಿಬಿಡುತ್ತವೆ. ಜೊತೆಗೆ ನೀವಿಲ್ಲಿ ಇಮೋಜಿಗಳನ್ನು ಬಹಳ ಬೇಗ ಹುಡುಕಿಕೊಳ್ಳಬಹುದಾಗಿದ್ದು, ಇತರ ಭಾಷೆಗಳಿಗೂ ಬೇಗ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 

ಇದನ್ನು ಓದಿ: ಆ್ಯಂಡ್ರಾಯ್ಡ್, ಐಫೋನ್‌ನಲ್ಲಿ ಅನಿಮೇಟೆಡ್ ಸ್ಟಿಕ್ಕರ್ ಪೀಚರ್ ಕೊಡ್ತಿರೋ ವಾಟ್ಸಪ್

ಟೈಪ್ ವೈಸ್
ಈ ಕೀಬೋರ್ಡ್ ಉಪಯೋಗಿಸುವಾಗ ನಿಮಗೆ ಇಂಟರ್ನೆಟ್ ಸಹಾಯ ಬೇಕೆಂದೇನೂ ಇಲ್ಲ. ಅದಿಲ್ಲದೆಯೇ ನೀವು ಕೆಲಸ ಮಾಡಬಹುದು ಇಲ್ಲವೇ ಡೇಟಾವನ್ನು ಶೇರ್ ಮಾಡಬಹುದಾಗಿದೆ. ಜೊತೆಗೆ ಇದರಲ್ಲಿ ಟೈಪಿಂಗ್ ಎರರ್ ಗಳು ಬಹಳ ಕಡಿಮೆ ಎಂದು ಹೇಳಲಾಗುತ್ತದೆ. 

Tap to resize

Latest Videos


ಗ್ರಾಮರ್ಲಿ ಕೀಬೋರ್ಡ್
ನೀವು ಇಂಗ್ಲಿಷ್ ಬಳಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೀರೆಂದಾದರೆ, ಯಾವುದೇ ತಪ್ಪುಗಳು ಆಗಬಾರದು ಎಂದು ಇಚ್ಛಿಸುವುದಾದರೆ ಈ ಗ್ರಾಮರ್ಲಿ ಕೀಬೋರ್ಡ್ ಉತ್ತಮ ಎಂದು ಹೇಳಲಾಗುತ್ತದೆ. ಇದು ಅಫಿಶಿಯಲ್ ಇ-ಮೇಲ್ ಮತ್ತು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಪೋಸ್ಟ್ ಮಾಡಲು ಅನುಕೂಲ. ಇದು ನಿಮ್ಮ ಅಕ್ಷರ ದೋಷ, ವಾಕ್ಯ ರಚನೆ ತಪ್ಪುಗಳು ಸೇರಿದಂತೆ ಪಂಕ್ಚುಯೇಶನ್‌ಗಳ ಬಗ್ಗೆಯೂ ಗಮನಹರಿಸುತ್ತದೆ.

ಮೈಕ್ರೋಸಾಫ್ಟ್ ಸ್ವಿಫ್ಟ್ ಕೀ
ಇದು ತುಂಬಾ ಹಳೇ ಕೀಬೋರ್ಡ್ ಆಗಿದ್ದರೂ ಈಗ ಮೈಕ್ರೋಸಾಫ್ಟ್ ಇದನ್ನು ಕೊಂಡುಕೊಂಡಿದೆ. ಈ ಕೀಬೋರ್ಡ್ ನಿಮ್ಮ ಟೈಪಿಂಗ್ ಅನ್ನು ಅವಲೋಕಿಸುವುದಲ್ಲದೆ, ನಿಮ್ಮ ಮುಂದಿನ ಆಲೋಚನೆಯ ಪದವನ್ನು ಊಹಿಸಿ ತೋರಿಸುತ್ತದೆ. ಜೊತೆಗೆ ಆಯಾ ಪದಗಳಿಗೆ ತಕ್ಕಂತಹ ಇಮೋಜಿಗಳನ್ನು ನಿಮ್ಮ ಕೈಗಿಡಲಿದೆ. 

ಗೋ (ಜಿಒ) ಕೀಬೋರ್ಡ್
ಈ ಕೀಬೋರ್ಡ್ ನಲ್ಲಿಯೂ ನಿಮಗೆ ಬೇಕಾದ ಬ್ಯಾಗ್ರೌಂಡ್ ಅನ್ನು ನೀವು ಬಳಸಿಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮದೇ ಅವತಾರ್ ಫೋಟೋಗಳನ್ನು ಕ್ರಿಯೇಟ್ ಮಾಡಿಕೊಳ್ಳುವುದಲ್ಲದೆ, ನಿಮ್ಮ ಅವತಾರ್ ಇಮೋಜಿಗಳ ಸ್ಟಿಕ್ಕರ್ ಲೈಬ್ರರಿಯನ್ನೇ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ನಿಮ್ಮ ಫೋನಿನ ಡಿಸ್ ಪ್ಲೇ ಸೈಜ್ ಗೆ ತಕ್ಕಂತೆ ಸರಿಹೊಂದುವ ಕೀಬೋರ್ಡ್ ಅನ್ನೂ ಸಹ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. 

ಇದನ್ನು ಓದಿ: ವಾಟ್ಸಪ್‌ ರೀತಿ ಟ್ವಿಟರ್‌ನಲ್ಲಿ ಇನ್ನು ವಾಯ್ಸ್ ಟ್ವೀಟ್ ಮಾಡಿ! 

ಫೇಸ್‌ಮೋಜಿ ಇಮೋಜಿ
ಇಲ್ಲಿ ಅಡ್ವಾನ್ಸ್ಡ್ ಫೀಚರ್‌ಗಳನ್ನು ಕೊಡಲಾಗಿದ್ದು, ಸಾಕಷ್ಟು ಇಮೋಜಿಗಳು ಬಳಕೆಗೆ ಲಭ್ಯವಾಗಿವೆ. ನಿಮಗೆ ಬೇಕಾದ ಇಮೋಜಿಗಳನ್ನು ಕ್ಷಣಾರ್ಧದಲ್ಲಿ ಹುಡುಕಿ ಕಳಿಹಿಸಬಹುದಾಗಿದೆ. ಸುಮಾರು 3 ಸಾವಿರ ಇಮೋಜಿಗಳು ಹಾಗೂ ಜಿಫ್ ಗಳು ಸಿಗಲಿದ್ದು, ಸಾವಿರಕ್ಕೂ ಹೆಚ್ಚು ಥೀಮ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮಿಂಟ್ ಕೀಬೋರ್ಡ್
ಈ ಕೀಬೋರ್ಡ್ ಅನ್ನು ಮುಖ್ಯವಾಗಿ ಭಾರತೀಯ ಬಳಕೆದಾರರಿಗೆ ಎಂದೇ ಅಭಿವೃದ್ಧಿಪಡಿಸಲಾಗಿದೆ. ಇದು ರೆಡ್‌ಮಿ ಮೊಬೈಲ್ ಬಳಕೆದಾರರಿಗೆ ಸಿಗಲಿದೆ. ಜೊತೆಗೆ ಹೆಚ್ಚು ಆಡು ಮಾತಿನ ಪದಗಳು ಇಲ್ಲಿ ಟೈಪ್ ಮಾಡುವಾಗ ಕಾಣಿಸಿಕೊಳ್ಳುತ್ತದೆ. ಜೊತೆಗೆ ಆಟೋ ಕರೆಕ್ಟ್ ಆಯ್ಕೆಗಳೂ ಸಹ ಇಲ್ಲಿವೆ. ಭಾರತದಲ್ಲಿ ಅನೇಕ ಹಬ್ಬಗಳಿದ್ದು, ಆಯಾ ಹಬ್ಬಗಳಿಗೆ ತಕ್ಕಂತೆ ಸ್ಟಿಕ್ಕರ್ ಗಳೂ ಇಲ್ಲಿ ಲಭ್ಯ ಇರುತ್ತದೆ.

click me!