ನಿನ್ನೆ ಇಡೀ ದಿನ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆಗಿದ್ದು ಪರಾಗ ಅಗರ್‌ವಾಲ್ ಪರ್ಸನಲ್ ಮ್ಯಾಟರ್. ಜೊತೆಗೆ ಆತನಿಗೆ ಸಂಬಳ ಎಷ್ಟು ಅನ್ನೋದು . ಅಷ್ಟಕ್ಕೂ ಈ ಪರಾಗ ಅಗರ್‌ವಾಲ್ ಎಂಬಾತ ಎಲ್ಲಿಯವರು, ಅವರ ಕತೆ ಏನು?
ಟ್ವಿಟ್ಟರ್‌ನ (Twitter) ಹಿಂದಿನ ಸಿಇಓ ಜಾಕ್ ಡೊರ್ಸೇ (Jack Dorsey) ಸೋಮವಾರ ಟ್ವಿಟ್ಟರ್‌ನಲ್ಲಿ ಒಂದು ಮಹತ್ವದ ಸಂದೇಶ ಹಾಕಿದ್ದರು. ಅದು ಆತನ ರೆಸಿಗ್ನೇಶನ್ ಆಗಿತ್ತು. ಜೊತೆಗೆ ಕಂಪನಿ ಭಾರತೀಯನೊಬ್ಬನನ್ನು ಸಿಇಓ (CEO) ಸ್ಥಾನಕ್ಕೆ ಆಯ್ಕೆ ಮಾಡಿಕೊಂಡಿದೆ ಎಂಬ ಸಂಗತಿಯನ್ನೂ ಆತ ಬಹಿರಂಗ ಪಡಿಸಿದರು. ಆ ಹೊಸ ಬಾಸ್ ಮತ್ಯಾರೂ ಅಲ್ಲ, ಪರಾಗ್ ಅಗರ್‌ವಾಲ್ (Parag Agarwal). ಡೋರ್ಸೇ ಕೆಳಗಿಳಿದ ಕೂಡಲೇ ತನ್ನ ಹೊಸ ಬಾಸ್ ಚೇರ್‌ನಲ್ಲಿ ಕೂತ ಪರಾಗ ಕಂಪನಿಯನ್ನು ಅತ್ಯುತ್ತಮವಾಗಿ ಬೆಳೆಸುವ, ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡುವ ಭರವಸೆ ನೀಡಿದರು.
ಯಾವಾಗ ಡೊರ್ಸೇ ಪರಾಗ ಅವರ ಹೆಸರನ್ನು ಉಲ್ಲೇಖಿಸಿತೋ ಆವಾಗಿನಿಂದ ಎಲ್ಲೆಡೆ ಪರಾಗ್‌ದೇ ಹವಾ. ಗೂಗಲ್‌ನಲ್ಲಿ (Google) ಆತನ ಬಗೆಗೇ ಸರ್ಚ್. ಪರಾಗ ಹೊಸ ಸಂಬಳ ಎಷ್ಟು, ಆತನ ಪತ್ನಿ ಯಾರು, ಅವರ ಮನೆ ಎಲ್ಲಿರೋದು, ಆತ ಓದಿದ್ದೆಲ್ಲ ಇತ್ಯಾದಿ ವಿವರಗಳನ್ನು ಜನ ಬಹಳ ಕುತೂಹಲದಿಂದ ಸರ್ಚ್ ಮಾಡುತ್ತಿದ್ದರು. ಜೊತೆಗೆ ಪರಾಗ್ ಪತ್ನಿ ವಿನೀತಾಗೆ ಸಂದೇಶ ರವಾನಿಸುತ್ತಿದ್ದರು. ನಮ್ಮ ನಲ್ಮೆಗಳನ್ನು ಪರಾಗ್‌ಗೆ ತಿಳಿಸಿ ಅನ್ನುವ ಭಾರತೀಯರ ಅತ್ಯಧಿಕ ಸಂದೇಶಗಳವು. ಇನ್ನೂ ಕೆಲವು ಭಾರತೀಯರು ಪರಾಗ್ ಇನ್ನೂ ಸಾಕಷ್ಟು ಭಾರತೀಯರನ್ನು ಟ್ವಿಟರ್‌ನಲ್ಲಿ ಪಾಲೋ ಮಾಡಬೇಕು ಅಂತೆಲ್ಲ ತಲೆಹರಟೆ ಶುರು ಮಾಡಿದರು. ಒಟ್ಟಾರೆ ಟ್ವಿಟರ್ ಗೆ ಭಾರತೀಯನೊಬ್ಬ ಬಾಸ್ ಆಗಿ ಆಯ್ಕೆಯಾದದ್ದು ಆ ಬಾಸ್ ಫ್ಯಾಮಿಲಿಯಲ್ಲಿ ಎಷ್ಟು ಸಂಭ್ರಮ ಸೃಷ್ಟಿಸಿತ್ತೋ ಅಷ್ಟೇ ಸಂಭ್ರಮ ನಮ್ಮ ಇಂಡಿಯನ್ ನೆಟಿಜನ್ಸ್ ಗೂ ಇದ್ದಂತಿತ್ತು.
Twitterಗೆ ಭಾರತೀಯ ಮೂಲದ ಪರಾಗ್ ಮುಖ್ಯಸ್ಥ, ಡೋರ್ಸಿಗೆ ಬಲವಂತದ ನಿವೃತ್ತಿ!
ಪರಾಗ್ ಹುಟ್ಟಿದ್ದು ೧೯೮೪ರಲ್ಲಿ ಮಹಾರಾಷ್ಟ್ರದ ಮುಂಬೈಯಲ್ಲಿ. ಈತನ ತಂದೆ ಅಟಾಮಿಕ್ ಎನರ್ಜಿ ಡಿಪಾರ್ಟ್ ಮೆಂಟ್‌ನಲ್ಲಿ ಸೀನಿಯರ್ ಆಫೀಸರ್ ಆಗಿದ್ದವರು. ತಾಯಿ ನಿವೃತ್ತ ಶಾಲಾ ಶಿಕ್ಷಕಿ. ಪರಾಗ್ ಆರಂಭಿಕ ವಿದ್ಯಾಭ್ಯಾಸ ಅಟಾಮಿಕ್ ಎನರ್ಜಿ ಸೆಂಟ್ರಲ್ ಸ್ಕೂಲ್‌ನಲ್ಲಾಯಿತು. ಬಾಲ್ಯದಲ್ಲೇ ಈತ ಪ್ರತಿಭಾವಂತ. ೨೦೦೧ರಲ್ಲಿ ಟರ್ಕಿಯಲ್ಲಿ ನಡೆದ ಇಂಟರ್‌ನ್ಯಾಶನಲ್ ಫಿಸಿಕ್ಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಪದಕ ಗೆಲ್ಲುವ ಮೂಲಕ ಗಮನ ಸೆಳೆದ. ಮುಂದೆ ಮುಂಬೈಯ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಡಿಗ್ರಿ ಪಡೆದ. ಐಐಟಿಯಲ್ಲಿ ೭೭ ನೇ ರ್ಯಾಂಕ್ ಪರಾಗ್ ಗೆ ಸಂದಿತ್ತ. ೨೦೦೫ರಲ್ಲಿ ಅಮೆರಿಕಾದ ಸ್ಟಾನ್‌ಫರ್ಡ್ ಯೂನಿವರ್ಸಿಟಿಯಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದ ಪ್ರತಿಭಾವಂತ ಪರಾಗ್.
ಪರಾಗ್ ತನ್ನ ಜಾಣ್ಮೆ, ಕ್ರಿಯಾಶೀಲತೆಯಿಂದ ಸದಾ ಗಮನ ಸೆಳೆಯುತ್ತಿದ್ದವರು. ೨೦೧೭ರಲ್ಲಿ ಇವರು ಚೀಫ್ ಟೆಕ್ನಾಲಜಿ ಆಫೀಸರ್ (ಸಿಟಿಓ) ಆಗಿ ಟ್ವಿಟ್ಟರ್‌ಗೆ ಸೇರಿದರು. ಅದಕ್ಕೂ ಮೊದಲು ಇದೇ ಕಂಪನಿಯಲ್ಲಿ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ದುಡಿದಿದ್ದರು. ಆದರೆ ಇವರ ಲೀಡರ್‌ಶಿಪ್ ಕ್ವಾಲಿಟಿ ಕಂಪನಿಗೆ ಬಹಳ ಇಷ್ಟವಾಗಿ ಬಹುಬೇಗ ಚೀಫ್ ಟೆಕ್ನಿಕಲ್ ಆಫೀಸರ್ ಹುದ್ದೆಗೇರುವಂತಾಯ್ತು. ಇದೀಗ ಸಿಇಓ ಸಹ ಆಗಿದ್ದಾರೆ.
ಚೀನಾದ ಸಾಲದ ಬಲೆಗೆ ಸಿಕ್ಕಿದ ಉಗಾಂಡ: ಏಕೈಕ ವಿಮಾನ ನಿಲ್ದಾಣವೂ ಡ್ರ್ಯಾಗನ್ ವಶಕ್ಕೆ?
ಸಣ್ಣ ಪುಟ್ಟ ವಿವಾದಗಳೂ ಪರಾಗ್ ಮೇಲಿದೆ. ಸಂಪ್ರದಾಯವಾದಿಗಳ ಟೀಕೆಗೆ ಅವರು ಹಿಂದೊಮ್ಮೆ ಗುರಿಯಾಗಿದ್ದರು. 'ಶ್ವೇತವರ್ಣೀಯರು, ಮುಸ್ಲಿಮರು ಮತ್ತು ಉಗ್ರಗಾಮಿಗಳ ಮಧ್ಯೆ ವ್ಯತ್ಯಾಸ ಗುರುತಿಸದೇ ಹೋದರೆ, ನಾನ್ಯಾಕೆ ಶ್ವೇತವರ್ಣೀಯರು ಮತ್ತು ರೇಸಿಸ್ಟ್‌ಗಳ (ವರ್ಣಬೇಧ ನೀತಿಯನ್ನು ಅನುಸರಿಸುವವರ) ಮಧ್ಯೆ ಬೇಧ ಮಾಡಲಿ?' ಎಂಬ ಇವರ ಮಾತುಗಳು ಕೆಲವು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ತುತ್ತಾಗಿತ್ತು.
ಇನ್ನೂ ಮೂವತ್ತೇಳರ ಹರೆಯದ ಈ ಯುವ ಬಾಸ್ ತನ್ನ ಒಳ್ಳೆಯ ಗುಣಗಳಿಂದಲೂ ಗಮನ ಸೆಳೆದವರು. ಪತ್ನಿ ಹೆಸರು ವಿನೀತಾ. ಕ್ಯಾಪಿಟಲ್ ಫರ್ಮ್ ಒಂದರಲ್ಲಿ ಪಾಲುದಾರರಾಗಿದ್ದಾರೆ. ಈ ದಂಪತಿಗೆ ಒಬ್ಬ ಮಗನೂ ಇದ್ದಾನೆ.
ಪರಾಗ್ ಟ್ವಿಟರ್‌ಅನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯುತ್ತಾರೆ ಅನ್ನುವ ನಿರೀಕ್ಷೆ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ. ಇಡೀ ವಿಶ್ವ ಹೊಸ ಯುವ ಭಾರತೀಯ ಮಾಡುವ ಮ್ಯಾಜಿಕ್‌ಅನ್ನೇ ಎದುರು ನೋಡುತ್ತಿದೆ.