Digital India: ಮಾಸಿಕ 2 ಬಿಲಿಯನ್ ಟ್ರಾನ್ಸಾಕ್ಷನ್ ದಾಟಿದ PhonePe!

By Suvarna NewsFirst Published Nov 19, 2021, 9:53 PM IST
Highlights
  • UPI P2P ಮತ್ತು P2M ವಹಿವಾಟುಗಳಲ್ಲಿ PhonePe ಸಂಚಲನ 
  • ರೀಚಾರ್ಜ್‌ಗಳು, ಬಿಲ್ ಪಾವತಿಯಲ್ಲಿ ಹೆಚ್ಚಿನ  ವಹಿವಾಟು 
  • 2 ಬಿಲಿಯನ್ ವಹಿವಾಟು, ಡಿಜಿಟಲ್ ಇಂಡಿಯಾ ಕ್ರಾಂತಿ

ಬೆಂಗಳೂರು(ನ.19):  ಭಾರತದ ಪ್ರಮುಖ ಡಿಜಿಟಲ್ ಪಾವತಿ(Digital Payment) ವೇದಿಕೆಯಾದ PhonePe  ಎರಡು ಬಿಲಿಯನ್ ವಹಿವಾಟುಗಳನ್ನು ದಾಟಿರುವುದಾಗಿ ಘೋಷಿಸಿದೆ. UPI ವಹಿವಾಟುಗಳಲ್ಲಿ PhonePe ಮಾರುಕಟ್ಟೆ ಮುಂಚೂಣಿಯಲ್ಲಿದೆ, ಇದು ದೇಶದಲ್ಲಿ ಅತಿ ಹೆಚ್ಚು ಪಿ2ಪಿ ಮತ್ತು ವ್ಯಾಪಾರಿ ವಹಿವಾಟುಗಳನ್ನು ನಡೆಸುತ್ತದೆ. ಇದು ಬಿಬಿಎಸ್ ಮೂಲಕ ರೀಚಾರ್ಜ್(reacharge) ಮತ್ತು ಬಿಲ್ ಪಾವತಿ(Bill payment) ವಹಿವಾಟುಗಳಲ್ಲಿ ಅಗ್ರ ಸ್ಥಾನವನ್ನು ಸಹ ಹೊಂದಿದೆ. ಈ ವರ್ಷದ ಫೆಬ್ರವರಿಯಲ್ಲಿ PhonePe  1 ಬಿಲಿಯನ್ ಮಾಸಿಕ ವಹಿವಾಟಿನ ಗಡಿಯನ್ನು ದಾಟಿತ್ತು, ಮತ್ತು ಈಗ ಕೇವಲ 8 ತಿಂಗಳಲ್ಲಿ 2 ಬಿಲಿಯನ್ ಮೈಲಿಗಲ್ಲನ್ನು ಮುಟ್ಟಿದೆ, ಈ ಮೂಲಕ ಭಾರತದ ಪ್ರಮುಖ ಫಿನ್ ಟೆಕ್ ಪ್ಲಾಟ್‌ಫಾರ್ಮ್‌ ಆಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 

PhonePe ಯು ಟೈರ್ 2, ಟೈರ್ 3 ನಗರಗಳು ಮತ್ತು ಅದಕ್ಕಿಂತ ಕಡಿಮೆ ಇರುವ ನಗರಗಳಲ್ಲಿ ಮತ್ತಷ್ಟು . ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.  ಈ ಗಮನಾರ್ಹ ಬೆಳವಣಿಗೆಯು ಅತ್ಯುನ್ನತ ಎಂಡ್-ಟು-ಎಂಡ್ ಯಶಸ್ಸಿನ ದರಗಳು ಮತ್ತು ಉನ್ನತ ಉತ್ಪನ್ನ ಅನುಭವ ಬಳಕೆದಾರರ ಬಲವಾದ ಆದ್ಯತೆ ಎಂಬುದನ್ನು ಸೂಚಿಸುತ್ತದೆ. PhonePe  145 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರು, $600 ಬಿಲಿಯನ್ ವಾರ್ಷಿಕ ಒಟ್ಟು ಪಾವತಿಮೌಲ್ಯ (TVP) ಮತ್ತು ಡಿಜಿಟಲ್ ವಹಿವಾಟುಗಳನ್ನು(Digital Transaction) 19000 ಕ್ಕೂ ಹೆಚ್ಚು ಪಿನ್ ಕೋಡ್ ಗಳಿಂದ ಪಡೆದಿದೆ, ಇದು ಇದು ದೇಶದ 99% ಕ್ಕಿಂತ ಹೆಚ್ಚು.

Paytm ಐಪಿಒಗೆ ಮೊದಲ ದಿನವೇ ಭರ್ಜರಿ ಶಾಕ್‌

ಕಳೆದ ತಿಂಗಳು PhonePe ಗೆ ಅತಿ ದೊಡ್ಡ ಮೈಲಿಗಲ್ಲಾಗಿದೆ, ಏಕೆಂದರೆ ನಾವು ಇಲ್ಲಿಯವರೆಗೆ ನಮ್ಮ ಅತ್ಯಧಿಕ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ ಮತ್ತು ಭಾರತದ ಪ್ರಮುಖ ಪಾವತಿ ಪ್ಲಾಟ್‌ಫಾರ್ಮ್‌ ಆಗಿ ನಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದ್ದೇವೆ. ನಮ್ಮ ವಹಿವಾಟಿನ 80% ರಷ್ಟು ಟೈರ್ 2, ಟೈರ್‌ 3 ನಗರಗಳು ಮತ್ತು ಅದಕ್ಕಿಂತ ಕಡಿಮೆ ನಗರಗಳಲ್ಲಿ ಬರುತ್ತವೆ ಎಂಬ ಅಂಶವು ಡಿಜಿಟಲ್ ಪಾವತಿಗಳು ದೇಶದ ಉದ್ದಗಲಕ್ಕೆ ನಿಜವಾಗಿಯೂ ವ್ಯಾಪಿಸಿದೆ ಎಂಬುದನ್ನು ತೋರಿಸುತ್ತದೆ. ನಾವು ಬಿಲಿಯನ್+ ಭಾರತೀಯರಿಗೆ ಹೆಚ್ಚು ಆದ್ಯತೆಯ ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳ ತಾಣವನ್ನು ನಿರ್ಮಿಸುವುದನ್ನು ಮುಂದುವರಿಸುವ ಮೂಲಕ ಬದುಕನ್ನು ಮತ್ತಷ್ಟು ಧನಾತ್ಮಕಗೊಳಿಸುತ್ತೇವೆ ಎಂದು  PhonePe ನ ಸಂಸ್ಥಾಪಕ ಮತ್ತು CEO ಸಮೀರ್ ನಿಗಮ್ ಹೇಳಿದ್ದಾರೆ.

ಎತ್ತಿನ ಮೇಲೆ QR Code: Digital ಕ್ರಾಂತಿಗೆ ಉದಾಹರಣೆ ಎಂದ ನಿರ್ಮಲಾ ಸೀತಾರಾಮನ್!

PhonePe 335 ಮಿಲಿಯನ್‌ಗೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದ ಭಾರತದ ಅತಿ ದೊಡ್ಡ ಪೇಮೆಂಟ್‌ ವೇದಿಕೆಯಾಗಿದೆ.PhonePe ಉಪಯೋಗಿಸಿ ಬಳಕೆದಾರರು ಹಣವನ್ನು ಕಳಿಸಬಹುದು ಮತ್ತು ಪಡೆಯಬಹುದು, ಮೊಬೈಲ್‌ ರೀಚಾರ್ಜ್‌, DTH, ಡೇಟಾ ಕಾರ್ಡ್‌ಗಳು, ಅಂಗಡಿಗಳಲ್ಲಿ ಪಾವತಿಸುವುದು, ಯುಟಿಲಿಟಿ ಪಾವತಿಗಳು, ಚಿನ್ನವನ್ನು ಖರೀದಿಸಬಹುದು ಮತ್ತು ಹೂಡಿಕೆ ಮಾಡಬಹುದು. PhonePe 2017 ರಲ್ಲಿ 24 ಕ್ಯಾರೆಟ್ ಚಿನ್ನವನ್ನು ಸುರಕ್ಷಿತವಾಗಿ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಸಲು ಸುರಕ್ಷಿತ ಮತ್ತು ಅನುಕೂಲಕರ ಆಯ್ಕೆಯನ್ನು ಒದಗಿಸುವ ಮೂಲಕ ಆರಂಭವಾಯಿತು. PhonePe ಹಲವಾರು ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಉತ್ಪನ್ನಗಳನ್ನು, ತೆರಿಗೆ ಉಳಿತಾಯ ಫಂಡ್‌ಗಳು, ಲಿಕ್ವಿಡ್‌ ಫಂಡ್‌ಗಳು, ಅಂತರರಾಷ್ಟ್ರೀಯ ಪ್ರಯಾಣ ವಿಮೆ ಮತ್ತು ಕೋವಿಡ್‌ -19 ಗೆ ಸಂಬಂಧಿಸಿದ ವಿಮೆಯನ್ನು ಪ್ರಾರಂಭಿಸಿದೆ. ಅಲ್ಲದೇ PhonePe ಯನ್ನು‌ ಭಾರತದಾದ್ಯಂತ 22 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಸ್ವೀಕರಿಸಲಾಗಿದೆ.

 

click me!