Flipkart Health+ ಮೂಲಕ Healthcare ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಫ್ಲಿಪ್‌ಕಾರ್ಟ್!

Suvarna News   | Asianet News
Published : Nov 19, 2021, 07:58 PM ISTUpdated : Nov 19, 2021, 08:06 PM IST
Flipkart Health+ ಮೂಲಕ  Healthcare ಮಾರುಕಟ್ಟೆಗೂ ಎಂಟ್ರಿ ಕೊಟ್ಟ ಫ್ಲಿಪ್‌ಕಾರ್ಟ್!

ಸಾರಾಂಶ

*ಔಷಧ ಡೆಲಿವರಿ-ಆರೋಗ್ಯ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಪ್ರವೇಶ  *ಸಸ್ತಾಸುಂದರ್‌ ಜತೆ ಒಪ್ಪಂದಕ್ಕೆ ಸಹಿ : ಶೀಘ್ರದಲ್ಲಿ ಸೇವೆ ಆರಂಭ *ಮಾರುಕಟ್ಟೆಯಲ್ಲಿ ಈಗಾಗಲೇ ಗುರಿತಿಸಿಕೊಂಡಿರುವ ಕಂಪನಿ *ಮುಂದಿನಿ ದಿನಗಳಲ್ಲಿ ಇ-ಡಯಾಗ್ನೋಸ್ಟಿಕ್ಸ್ ಸೇವೆ ಆರಂಭ!

ಬೆಂಗಳೂರು(ನ.19): ಆನಲೈನ್‌ ಡೆಲಿವರಿ (Online Delivery) ಮಾರುಕಟ್ಟೆಯ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನಬಳಕೆಯ ಯಾವ ವಸ್ತು ಬೇಕಾದರೂ ಈಗ ಜನರು ಆನಲೈನ್‌ ಮೂಲಕ ತರಿಸಬಹುದು. ಇದಕ್ಕೆ ಔಷದಿ ಡೆಲಿವರಿ (Medicine Delivery) ಹೊರತಾಗಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಔಷಧಿ ಮನೆಗೆ ತಲುಪಿಸುವ ಹಲವಾರು ಕಂಪನಿಗಳು ಕೆಲಸ ಮಾಡುತ್ತಿವೆ. ಅನಲೈನ್‌ ಆರ್ಡರ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಔಷಧಿ ಮನೆಗೆ ತಲುಪಿಸುವಷ್ಟು ಈ ಸಂಸ್ಥೆಗಳು ಅಭಿವೃದ್ಧಿ ಹೊಂದಿವೆ. ಇನ್ನು ಈ ರೇಸ್‌ಗೆ  ಇನ್ನೊಂದು ಸೇರ್ಪಡೆವೆಂಬಂತೆ ಶುಕ್ರವಾರ ಫ್ಲಿಪ್‌ಕಾರ್ಟ್  ಹೆಲ್ತ್‌ಕೇರ್ (Flipkart Healthcare) ವಿಭಾಗಕ್ಕೆ  ಪ್ರವೇಶವನ್ನು ನೀಡುವುದಾಗಿ ತಿಳಿಸಿದೆ. ಈ ಬೆನ್ನಲ್ಲೇ ಆನ್‌ಲೈನ್ ಫಾರ್ಮಸಿಯಾದ ಸಸ್ತಾಸುಂದರ್ (Sastasundar) ಮಾರ್ಕೆಟ್‌ಪ್ಲೇಸ್‌ನಲ್ಲಿ ಹೆಚ್ಚಿನ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ತಿಳಿಸಿದೆ.

ವಾಲ್‌ಮಾರ್ಟ್ (Walmart) ನಿಯಂತ್ರಿತ ಇ-ಕಾಮರ್ಸ್ (E Commerce) ಸಂಸ್ಥೆಯು ಫ್ಲಿಪ್‌ಕಾರ್ಟ್ ಹೆಲ್ತ್+ (FlipKart Health+) ಅನ್ನು ಪ್ರಾರಂಭಿಸುವ ಮೂಲಕ ಮೆಡಿಸಿನ್‌ ಡಿಲಿವರಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಅಭಿವೃದ್ಧಿಯ ಭಾಗವಾಗಿ, ಸಸ್ತಾಸುಂದರ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಬಹುಪಾಲು ಪಾಲನ್ನು ಪಡೆಯಲು ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದೆ.

ಔಷಧಿ ಡೆಲಿವರಿ  ಮಾರುಕಟ್ಟೆ ಪ್ರವೇಶಿಸಲು ನಾವು ಉತ್ಸುಕರಾಗಿದ್ದೇವೆ!

ಈಗಾಗಲೇ ಆನಲೈನ್‌ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ SastaSundar.com ಪ್ರಧಾನ ಕಚೇರಿಯು ಕೋಲ್ಕತ್ತಾದಲ್ಲಿದೆ.  490 ಕ್ಕೂ ಹೆಚ್ಚು ಔಷಧಾಲಯಗಳ ನೆಟ್‌ವರ್ಕ್‌ ಹೊಂದಿರುವ ಇದು ಡಿಜಿಟಲ್ ಹೆಲ್ತ್‌ಕೇರ್ ಮತ್ತು ಫಾರ್ಮಸಿ ಪ್ಲಾಟ್‌ಫಾರ್ಮ್ ಹೊಂದಿದೆ.  ಮಿತ್ಸುಬಿಷಿ ಕಾರ್ಪೊರೇಷನ್ ಮತ್ತು ರೋಹ್ಟೋ ಫಾರ್ಮಾಸ್ಯುಟಿಕಲ್ಸ್ ಎಂಬ  ಜಪಾನ್‌ನ ಹೂಡಿಕೆದಾರರಿಂದ ಬೆಂಬಲಿತವಾಗಿದೆ. 

New Google Features: Hinglish, Speech to Text, ವ್ಯಾಕ್ಸಿನ್ ಬುಕ್ಕಿಂಗ್‌

ಫ್ಲಿಪ್‌ಕಾರ್ಟ್‌ನ ಹಿರಿಯ ವಿಪಿ ಮತ್ತು ಕಾರ್ಪೊರೇಟ್ ಡೆವಲಪ್‌ಮೆಂಟ್ ಮುಖ್ಯಸ್ಥ ರವಿ ಅಯ್ಯರ್ (Ravi Iyer) ಮಾತನಾಡಿ  "ಸಸ್ತಾಸುಂದರ್ ಡಾಟ್ ಕಾಮ್‌ನಲ್ಲಿ ಈ ಹೂಡಿಕೆಯ ಮೂಲಕ ಔಷಧಿ ಡೆಲಿವರಿ  ಮಾರುಕಟ್ಟೆ ಪ್ರವೇಶಿಸಲು ನಾವು ಉತ್ಸುಕರಾಗಿದ್ದೇವೆ, ಈಗಾಗಲೇ ಒರಿಜಿನಲ್ ಉತ್ಪನ್ನಗಳು, ತಂತ್ರಜ್ಞಾನದ ಮೂಲಕ ಲಕ್ಷಾಂತರ ಗ್ರಾಹಕರಿಗೆ ವಿಶ್ವಾಸಾರ್ಹ ಪಾಲುದಾರನಾಗಿ ಫ್ಲಿಪ್‌ಕಾರ್ಟ್ ಹೊರಹೊಮ್ಮಿದೆ. ಭಾರತದ ಜನರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು  (Health Care service) ನೀಡುವುದು ತನ್ನ ಗುರಿಯಾಗಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. Flipkart Health+, ಕಂಪನಿಯು ಇ-ಫಾರ್ಮಸಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭವಿಷ್ಯದಲ್ಲಿ ಇ-ಡಯಾಗ್ನೋಸ್ಟಿಕ್ಸ್ (e-diagnostics) ಮತ್ತು ಇ-ಸಮಾಲೋಚನೆ (e-consultation) ಸೇರಿದಂತೆ ಹೊಸ ಆರೋಗ್ಯ ಸೇವೆಗಳನ್ನು ಸೇರಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.

"ಫ್ಲಿಪ್‌ಕಾರ್ಟ್ ಹೆಲ್ತ್+ ತನ್ನ ಪ್ಯಾನ್ ಇಂಡಿಯಾ (Pan India) ವ್ಯಾಪ್ತಿ ಮತ್ತು ತಂತ್ರಜ್ಞಾನದ ಸಾಮರ್ಥ್ಯಗಳ ಮೂಲಕ ಫ್ಲಿಪ್‌ಕಾರ್ಟ್ ಗ್ರೂಪ್‌ನ ಹಾಗೂ ಸಸ್ತಸುಂದರ್‌ನ ಆಳವಾದ ಪರಿಣತಿಯೊಂದಿಗೆ ಗ್ರಾಹಕರಿಗೆ  ಈ ಔಷಧಿ ಮಾರುಕಟ್ಟೆಯಲ್ಲಿಯೇ ಅತ್ಯಂತ  ಉತ್ತಮ ಸೇವೆ ನೀಡಲಿದೆ ಎಂದು ರವಿ ಹೇಳಿದ್ದಾರೆ.

ಸಿಹಿತುಳಸಿ ಹೆಸರಲ್ಲಿ ಡ್ರಗ್ಸ್‌ ಮಾರಾಟ: ಅಮೆಜಾನ್‌ಗೆ ಸಂಕಷ್ಟ

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ (Amazon)  ಅನ್ನು ಬಳಸಿಕೊಂಡು ಮಧುಮೇಹಿಗಳಿಗೆ ಅನುಕೂಲವಾಗುವ ಸಿಹಿ ತುಳಸಿ (Tulasi) ನೆಪದಲ್ಲಿ ಮರಿಜುವಾನಾ (Marijuana) ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವಿಚಾರಣೆಗಾಗಿ ಮಧ್ಯಪ್ರದೇಶ ಪೊಲೀಸರು (Madhya Pradesh Police) ಅಮೆಜಾನ್‌ಗೆ ನೋಟಿಸ್‌ ರವಾನಿಸಿದ್ದಾರೆ. ಈವರೆಗೆ ಕೆಲವು ಪಾರ್ಸಲ್‌ ಕಂಪನಿಗಳು ಡ್ರಗ್ಸ್‌ ಪೂರೈಸುತ್ತಿರುವ ಪ್ರಕರಣಗಳು ವರದಿಯಾಗಿದ್ದವು. ಆದರೆ ಈಗ ಅಮೆಜಾನ್‌ನಂಥ ಕಂಪನಿ ಮೇಲೆ ಇಂಥ ಆರೋಪ ಕೇಳಿಬಂದಿರುವುದು ಸಂಚಲನ ಮೂಡಿಸಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?