ಜೂ.24ಕ್ಕೆ ಹೊಸ ವಿಂಡೋಸ್ 11 ಲಾಂಚ್, ಡಾರ್ಕ್ ಮೋಡ್ ಇರಲಿದೆಯಾ?

By Suvarna News  |  First Published Jun 17, 2021, 5:10 PM IST

ಟೆಕ್ ದೈತ್ಯ ಕಂಪನಿಯಾಗಿರುವ ಮೈಕ್ರೋಸಾಫ್ಟ್ ಶುಭ ಸುದ್ದಿಯನ್ನು ನೀಡಿದೆ, ಜೂನ್ 24ಕ್ಕೆ ಹೊಸ ತಲೆಮಾರಿನ ವಿಂಡೋಸ್ 11  ಆಪರೇಟಿಂಗ್ ಸಾಫ್ಟ್‌ವೇರ್ ಅನಾವರಣ ಮಾಡಲಿದೆ. ಈ ವಿಂಡೋಸ್ 11 ಮರು ವಿನ್ಯಾಸಹೊಂದಿದ್ದು, ಬಳಕೆದಾರರ ಸ್ನೇಹಿಯಾಗಿರಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.


ಟೆಕ್ ದೈತ್ಯ ಮೈಕ್ರೋಸಾಫ್ಟ್, ಹೊಸ ತಲೆಮಾರಿನ ವಿಂಡೋಸ್ ಆಪರೇಟಿಂಗ್ ಸಾಫ್ಟ್‌ವೇರ್ ಬಿಡುಗಡೆಯನ್ನು ಅಧಿಕೃತಗೊಳಿಸಿದೆ. ಈ ವಿಂಡೋಸ್ 11 ಸಾಫ್ಟ್‌ವೇರ್ ಅನ್ನು ಕಂಪನಿಯು ಜೂನ್ 24ರಂದು ವರ್ಚುವಲ್ ಕಾರ್ಯಕ್ರಮದ ಮೂಲಕ ಲೋಕಾರ್ಪಣೆ ಮಾಡಲಿದೆ.

ವಿಂಡೋಸ್ 11 ಬಿಡುಗಡೆಯ ಮೊದಲೇ ಅದಕ್ಕೆ ಸಂಬಂಧಿಸಿದ ಒಂದಿಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಬಹುಶಃ ಈ ವಿಂಡೋಸ್ 11ನಲ್ಲಿ ಸ್ಟಾರ್ಟ್ ಮೆನು ಮರುವಿನ್ಯಾಸ ಸೇರಿದಂತೆ ಅನೇಕ ಬದಲಾವಣೆಗಳನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ. ಇದರ ಜೊತೆಗೆ ಟಾಸ್ಕ್‌ಬಾರ್‌ನಲ್ಲಿ ಹೊಸ ವಿಡ್ಜೆಟ್‌ಗಳನ್ನು ಈ ವಿಂಡೋಸ್ 11 ಹೊಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

Tap to resize

Latest Videos

undefined

ಹೊಸ ಸೆನ್ಸೇಷನ್, ಕ್ಲಬ್‌ಹೌಸ್ ಹೌಸ್‌ಫುಲ್; ಏನಿದು ಆ್ಯಪ್? ಹೇಗೆ ಕೆಲಸ ಮಾಡುತ್ತದೆ?

ಆನ್‌ಲೈನ್ ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಮೈಕ್ರೋಸಾಫ್ಟ್ ಈ ಹಿಂದೆ ಡ್ಯುಯಲ್ ಸ್ಕ್ರೀನ್‌ಗಳಿಗಾಗಿ ನಿರ್ಮಿಸಿದ್ದ ವಿಂಡೋಸ್ 10ಎಕ್ಸ್ ಒಎಸ್‌ ಸಾಫ್ಟ್‌ವೇರ್, ಈ ಹೊಸ ವಿಂಡೋಸ್ 11 ಆಪರೇಟಿಂಗ್ ಸಾಫ್ಟ್‌ವೇರ್ ಸಾಕಷ್ಟು ಪ್ರಭಾವ ಬೀರಿದೆ. ಅಲ್ಲಿಯ ಅನೇಕ ವಿನ್ಯಾಸಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ ಎನ್ನಲಾಗುತ್ತಿದೆ. ಆಪ್‌ ಐಕಾನ್‌ಗಳು ಈಗ ಟಾಸ್ಕ್‌ಬಾರ್‌ನ ಸೆಂಟರ್‌ನಲ್ಲಿ ಕಂಡುಬರಲಿವೆ. ಹೊಸ ಸ್ಟಾರ್ಟ್ ಬಟನ್ ಮತ್ತು ಮೆನುಗಳನ್ನು ಒಂದುಗೂಡಿಸಲಾಗಿದೆ. ನೀವು ಆಪ್ ಐಕಾನ್‌ಗಳನ್ನು ಮತ್ತು ಸ್ಟಾರ್ಟ್ ಮೆನುವನ್ನು ಟಾಸ್ಕ್‌ಬಾರ್‌ನ ಮಧ್ಯೆದಲ್ಲಿ ಇಡಬಹುದು ಇಲ್ಲವೇ ಎಡಕ್ಕೆ ತಂದು ಕೂಡಿಸಬಹುದು. ಈ ರೀತಿಯ ಅನೇಕ ಬದಲಾವಣೆಗಳನ್ನು ಬಳಕೆದಾರರು ವಿಂಡೋಸ್ 11ನಿಂದ ನಿರೀಕ್ಷಿಸಬಹುದಾಗಿದೆ.

ಈ ವಿಂಡೋಸ್ 11 ಒಎಸ್‌ನಲ್ಲಿ ಸ್ಟಾರ್ಟ್‌ ಮೆನುವಿನಲ್ಲಿ ಲೈವ್ ಟೈಲ್ಸ್‌ಗಳಿಲ್ಲ. ಆಪ್‌ ಮತ್ತು ಇತ್ತೀಚಿನ ಫೈಲ್‌ಗಳನ್ನು ಪಿನ್ ಮಾಡಲು ಅನುಕೂಲವಾಗುವಂತೆ ಹಾಗೂ ಶಟ್‌ಡೌನ್, ರಿಸ್ಟಾರ್ಟ್ ಆಯ್ಕೆಗಳನ್ನು ತುಂಬ ಸರಳೀಕರಿಸಲಾಗಿದೆ. 
 

ಡಾರ್ಕ್ ಮೋಡ್ ಇರಲಿದೆಯಾ?
ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ವಿಂಡೋಸ್ 11 ಸಿಸ್ಟಮ್ ವೈಡ್ ಡಾರ್ಕ್ ಮೋಡ್‌ನಲ್ಲಿ ಬರುವ ಸಾಧ್ಯತೆ ಇದೆ. ಬಹುಶಃ ಇದೊಂದು ಕ್ರಾಂತಿಕಾರಕ ಬದಲಾವಣೆಯಾಗಬಹುದು. ಈ ಹೊಸ ಜಮಾನದಲ್ಲಿ ಡಾರ್ಕ್ ಮೋಡ್ ಎಂಬುದು ಅಗತ್ಯವಾಗಿದೆ. ಬಳಕೆದಾರರ ಹಿತದೃಷ್ಟಿಯಿಂದ ಇದೊಂದು ಒಳ್ಳೆಯ ಕ್ರಮವಾಗಲೂಬಹುದು. 

 

check out our full Windows 11 hands-on for more. And yes, there's a dark mode and you can move the Start menu back to the left side

💻 Lots more information here: https://t.co/VDS08QPsl5 pic.twitter.com/3wP57DEJak

— Tom Warren (@tomwarren)

 

ಇದರ ಜೊತೆಗೆ, ಬಳಕೆದಾರರ ಇಂಟರ್ಫೇಸ್ ಕ್ಲೀನರ್ ಆಗಿದೆ. ಅದು ಮರುವಿನ್ಯಾಸಗೊಳಿಸಲಾದ ಆಪ್ ಐಕಾನ್ ಹೊಂದಿದ್ದು ಮತ್ತು ಮೂಲೆಗಳು ದುಂಡಾಗಿರುವುದನ್ನು ಕಾಣಬಹುದಾಗಿದೆ. ಹಾಗೆಯೇ, ಹೊಸ ವಿಂಡೋಸ್ ಆಪ್ ಸ್ಟೋರ್ ಬಗ್ಗೆ ಇನ್ನೂ ಹೇಳಿಲ್ಲವಾದರೂ ಅಂತಿಮ ಆವೃತ್ತಿಯಲ್ಲಿ ಅದು ಸೇರ್ಪಡೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
 

ಬಿಲ್ಡ್ 2021 ಸಮಾವೇಶದಲ್ಲಿ ಮಾತನಾಡಿದ್ದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾಡೆಲ್ಲಾ, ಮುಂಬರುವ ವಿಂಡೋಸ್ ಅಪ್‌ಡೇಟ್, ಕಳೆದ ದಶಕದಲ್ಲೇ ವಿಂಡೋಸ್ ಕಂಡ ಅಪ್‌ಡೇಟ್ ಪೈಕಿ ಅತ್ಯಂತ ಮಹತ್ವದ ಅಪ್‌ಡೇಟ್ ಆಗಿರಲಿದೆ. ಡೆವಲಪರ್ಸ್ ಮತ್ತು ಕ್ರಿಯೇಟರ್ಸ್‌ಗೆ ಆರ್ಥಿಕ ಅವಕಾಶಗಳ ಬಾಗಿಲನ್ನು ಇದು ತೆರೆಯಲಿದೆ ಎಂದು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಒನ್‌ಪ್ಲಸ್ ನಾರ್ಡ್ ಸಿಇ 5ಜಿ ಬಿಡುಗಡೆ, ಬೆಲೆ 22,999 ರೂ.ನಿಂದ ಆರಂಭ

ಹೊಸ ವಿಂಡೋಸ್ 11 ವೆಬ್ ಕಂಟೆಂಟ್, ನ್ಯೂಸ್ ಮತ್ತು ಹವಾಮಾನ ಮಾಹಿತಿಯನ್ನು ತಕ್ಷಣಕ್ಕೆ ಪಡೆದುಕೊಳ್ಳಲು ಸಾಧ್ಯವಾಗುವಂಥ ವಿಡ್ಜೆಟ್ ಐಕಾನ್‌ಗಳನ್ನು ಹೊಂದಿರಲಿದೆ.  ಎಲ್ಲಾ ಅಪ್ಲಿಕೇಶನ್‌ಗಳಲ್ಲಿನ ಮ್ಯಾಕ್ಸಿಮೈಸ್ ಬಟನ್‌ನಿಂದ ನೀವು ಅಕ್ಸೆಸ್ ಪಡೆದುಕೊಳ್ಳಬಹುದಾದ ಹೊಸ ಕಿರು ನಿಯಂತ್ರಣಗಳಿವೆ.
 
ನೀವು ತ್ವರಿತವಾಗಿ ವಿಂಡೋಸ್ ಅನ್ನು ಬದಿಯಿಂದ ಬದಿಗೆ ಸ್ನ್ಯಾಪ್ ಅಥವಾ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಅರೆಂಜ್ ಮಾಡಿಕೊಳ್ಳಬಹುದಾಗಿದೆ. ಎಕ್ಸ್ಬಾಕ್ಸ್ ಗೇಮ್ ಪಾಸ್, ಎಕ್ಸ್ ಬಾಕ್ಸ್ ನೆಟ್ವರ್ಕ್ ಮತ್ತು ಎಕ್ಸ್‌ಬಾಕ್ಸ್ ಸ್ಟೋರ್‌ಗೆ ತ್ವರಿತವಾಗಿ ಅಕ್ಸೆಸ್ ದೊರೆಯುವಂತೆ ಮಾಡುವ ಮೂಲಕ ವಿಂಡೋಸ್ 11 ಅನ್ನು ಎಕ್ಸ್‌ಬಾಕ್ಸ್ ಸ್ನೇಹಿ ಮಾಡುವ ಪ್ರಯತ್ನವು ಇದೆ ಎನ್ನಲಾಗುತ್ತಿದೆ.

ಜೂನ್ 24ರಂದು ಈ ವಿಂಡೋಸ್ 11 ಹೊಸ  ತಲೆಮಾರಿನ ಆವೃತ್ತಿ ಬಿಡುಗಡೆಯಾಗಲಿದ್ದು, ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಳು ಗೊತ್ತಾಗಬಹುದು. ಆದರೆ, ವಿಂಡೋಸ್ 11 ಬಗ್ಗೆ ಈಗಾಗಲೇ ಕುತೂಹಲವಂತೂ ಹೆಚ್ಚಾಗಿರುವುದನ್ನು ಗುರುತಿಸಬಹುದಾಗಿದೆ.

ಭಾರತೀಯ ಮಾರುಕಟ್ಟೆಗೆ OnePlus TV U1S ಟಿವಿ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

click me!