ಸ್ನೇಹಿತರು, ಕುಟುಂಬಸ್ಥರೊಂದಿಗೆ ಮಾತೃಭಾಷೆಯಲ್ಲಿ ಕನೆಕ್ಟ್; ಮೈಕ್ರೋಸಾಫ್ಟ್ ಟೀಮ್ಸ್ ಕನ್ನಡದಲ್ಲಿ ಲಭ್ಯ!

By Suvarna News  |  First Published Jun 15, 2021, 9:54 PM IST
  • ಮೈಕ್ರೋಸಾಫ್ಟ್ ಟೀಮ್ಸ್ ಈಗ ಮಾತೃಭಾಷೆ ಕನ್ನಡದಲ್ಲಿ ಲಭ್ಯ
  • ಸ್ವೀಕರಿಸುವ ಸಂದೇಶಗಳನ್ನು ಕನ್ನಡದಲ್ಲಿಯೇ ಕೇಳುವ ಅವಕಾಶ

  •  

ಬೆಂಗಳೂರು(ಜೂ.15): ಕೊರೋನಾ ಕಾಲದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದೆ.  ಇನ್ನು ಲಾಕ್‌ಡೌನ್ ಸೇರಿದಂತೆ ಹಲವು ನಿರ್ಬಂಧಗಳಿಂದ ವರ್ಕ್ ಫ್ರಮ್ ಹೋಮ್ ಸಾಮಾನ್ಯವಾಗಿದೆ. ಇತ್ತ ಕುಟುಂಬಸ್ಥರು, ಸ್ನೇಹಿತರಿಂದಲೂ ದೂರ-ದೂರ. ಆದರೆ ತಂತ್ರಜ್ಞಾನ ಎಲ್ಲರನ್ನು ಹತ್ತಿರಕ್ಕೆ ತಂದಿದೆ. ಇದಕ್ಕಾಗಿ ಮೈಕ್ರೋಸಾಫ್ಟ್ ಟೀಮ್ಸ್ ವಿಡಿಯೋ ಮೂಲಕ ವಿಡಿಯೋ ಕಾನ್ಫರೆನ್ಸ್, ಸಭೆ, ಮಾತುಕತೆ, ಹರಟೆ ಎಲ್ಲವೂ ಸಾಧ್ಯ. ಇದೀಗ ಇದೇ ಮೈಕ್ರೋಸಾಫ್ಟ್ ಟೀಮ್ಸ್ ಕನ್ನಡದಲ್ಲೂ ಲಭ್ಯವಿದೆ.

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಟ್ರೈಬಲ್ ಸ್ಕೂಲ್‌ನಲ್ಲಿ ಬೋಧನೆ!

Latest Videos

undefined

ಸ್ನೇಹಿತರ ಚಾಟಿಂಗ್, ಕುಟುಂಬ ಮಾತುಕತೆ, ಉದ್ಯೋಗಿಗಳ ಮೀಟಿಂಗ್ ಸೇರಿದಂತೆ ಎಲ್ಲರಿಗೂ ಮೈಕ್ರೋಸಾಫ್ಟ್ ಟೀಮ್ಸ್ ಕೊರೋನಾ ಕಾಲದಲ್ಲಿ ಎಲ್ಲರ ನೆಚ್ಚಿನ ವಿಡಿಯೋ ಕಾಲ್ ತಾಣವಾಗಿದೆ.  iOS, ಆ್ಯಂಡ್ರಾಯ್ಡ್ ಅಥವಾ ಡೆಸ್ಕ್ ಟಾಪ್ ಆಪ್‌ನಲ್ಲಿ  ಡೌನ್ಲೋಡ್ ಮಾಡಿಕೊಂಡು ಸುಲಭವಾಗಿ ಸಂವಹನ ನಡೆಸಬಹದು. ಇದೀಗ ಕನ್ನಡ ಭಾಷೆ ಆಯ್ಕೆಮಾಡಿಕೊಂಡ ಮಾತೃಭಾಷೆ ಅನುಭವ ಪಡೆಯುವ ಅವಕಾಶವಿದೆ. 

ಕನ್ನಡದಲ್ಲಿಯೇ ಟೀಮ್ಸ್ ಬಳಸಿ: ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ನೀವು ನಿಮ್ಮದೇ ಆದ ಭಾಷೆಯಲ್ಲಿ ಬಳಸಬಹುದು- ಅಂದರೆ ಕನ್ನಡದಲ್ಲಿ! ನೀವು ಟೀಮ್ಸ್ ನ ಎಲ್ಲಾ ವೈಶಿಷ್ಟ್ಯತೆಗಳನ್ನು ಅಕ್ಸೆಸ್ ಮಾಡಿಕೊಳ್ಳಬಹುದಾಗಿದೆ ಮತ್ತು ನೀವು ಯಾವುದೇ ಸಂದರ್ಭದಲ್ಲಿ ಬೇಕಾದರೂ ಭಾಷೆಯನ್ನು ಇಂಗ್ಲೀಷ್ ಗೆ ಮರಳಬಹುದು. ನೀವು ಸ್ವೀಕರಿಸುವ ಸಂದೇಶಗಳನ್ನು ಕನ್ನಡದಲ್ಲಿಯೇ ಕೇಳಲು ಆ್ಯಪ್ ಅವಕಾಶ ಕಲ್ಪಿಸುತ್ತದೆ.

24 ಗಂಟೆಗಳ ಉಚಿತ ಕರೆ: ಮೈಕ್ರೋಸಾಫ್ಟ್ ಟೀಮ್ಸ್ ನೊಂದಿಗೆ ನೀವು ಇನ್ನು ಮುಂದೆ 300 ಕ್ಕೂ ಹೆಚ್ಚು ಜನರೊಂದಿಗೆ ದಿನದ 24 ಗಂಟೆಯೂ ಮಾತನಾಡಬಹುದು! ಮೈಕ್ರೋಸಾಫ್ಟ್ ಟೀಮ್ಸ್ ನೊಂದಿಗೆ ಫೋನ್ ಬಿಲ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಸಾಂಕ್ರಾಮಿಕದ ಅವಧಿಯಲ್ಲಿ ನೀವು ನಿರಂತರವಾಗಿ ದೀರ್ಘ ಕರೆಗಳನ್ನು ಮಾಡಬಹುದು.

ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!.

ವಿಡಿಯೋ ಕಾಲಿಂಗ್: ವಿಡಿಯೋ ಕಾಲ್ ಅನ್ನು ಸಂಪರ್ಕಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರ ಜತೆಯಲ್ಲಿ ಮಾತನಾಡಿ. ಟೀಮ್ಸ್ ನಲ್ಲಿನ ವಿಡಿಯೋ ಕಾಲ್ ಲಿಂಕ್ ಗಳನ್ನು ಯಾರೊಂದಿಗೆ ಬೇಕಾದರೂ ಷೇರ್ ಮಾಡಿಕೊಳ್ಳಬಹುದು. ನೀವು ಆ್ಯಪ್ ಅನ್ನು ಉಪಯೋಗಿಸದಿದ್ದರೂ ಇದು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಯಾವುದೇ ಡಿವೈಸ್ ಅಥವಾ ವೆಬ್ ಬ್ರೌಸರ್ ಬಳಸಿ ಮೀಟಿಂಗ್ ಗೆ ಸೇರಿಕೊಳ್ಳಲು ಸಾಧ್ಯವಿದೆ.

ಟುಗೆದರ್ ಮೋಡ್ (Together Mode): ಈ ಟುಗೆದರ್ ಮೋಡ್ ನಲ್ಲಿ ಸಂವಹನ ನಡೆಸುವ ವೇಳೆಯಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಒಂದೇ ಕೊಠಡಿಯಲ್ಲಿರುವ ಅನುಭವವಾಗುತ್ತದೆ. ಈ ವೈಶಿಷ್ಟ್ಯತೆಯೊಂದಿಗೆ ನೀವು ಯಾವುದೇ ಸಾಮಾನ್ಯ ವಿಡಿಯೋ ಕಾಲ್ ಅನ್ನು ವರ್ಚುವಲ್ ಸನ್ನಿವೇಶದಲ್ಲಿ ಹಂಚಿಕೊಳ್ಳಬಹುದಾಗಿದೆ. ಕಾಫಿ ಶಾಪ್, ಹಾಲಿಡೇ ತಾಣ- ಹೀಗೆ ನೀವು ನಿಮ್ಮ ನೆಚ್ಚಿನ ವರ್ಚುವಲ್ ವಾತಾವರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಚಾಟಿಂಗ್ ಆರಂಭಿಸಿ: ನೀವು ಅಪ್ಲಿಕೇಷನ್ ಆರಂಭಿಸುವಾಗ ನಿಮ್ಮ ಸಂಪರ್ಕಗಳೊಂದಿಗೆ ಚಾಟ್ ಆರಂಭ ಮಾಡಬಹುದು. ನೀವು ನಿಮ್ಮ ಸಂಪರ್ಕಗಳಿಂದ ವೈಯಕ್ತಿಕ ಸಂದೇಶಗಳನ್ನು ಕಳುಹಿಸಬಹುದು ಅಥವಾ ಗ್ರೂಪ್ ಚಾಟ್ ಅನ್ನೂ ಸಹ ಆರಂಭಿಸಬಹುದು. ನಿಮ್ಮ ಗ್ರೂಪ್ ಗೊಂದು ಹೆಸರಿಡಿ ಮತ್ತು ಅದನ್ನು ಸಂಘಟಿತವಾಗಿಟ್ಟುಕೊಳ್ಳಬಹುದು. ಒಂದು ವೇಳೆ ಯಾರಾದರೂ ಟೀಮ್ಸ್ ಅನ್ನು ಹೊಂದಿರದೇ ಇದ್ದರೂ ಅವರು ಎಸ್ಎಂಎಸ್ ಸಂದೇಶಗಳ ಮೂಲಕ ಎಲ್ಲಾ ಚಾಟ್ ಗಳಿಗೆ ಪ್ರತಿಕ್ರಿಯೆ ನೀಡಬಹುದು.

click me!