ಪ್ರಧಾನಿ ಮೋದಿಯೇ ಆದರ್ಶ: ಮೊಬೈಲ್ ಟೀ ಡಿಸ್ಪೆನ್ಸರ್ ಆವಿಷ್ಕರಿಸಿದ ಹುಬ್ಬಳ್ಳಿಯ ಇಂಜಿನಿಯರ್

By Suvarna News  |  First Published May 25, 2022, 7:20 PM IST

ಹುಬ್ಬಳ್ಳಿಯ ಸ್ಟೀರಾ (Steira) ಸಂಸ್ಥೆ ಮೊಬೈಲ್ ಟೀ ಡಿಸ್ಪೆನ್ಸರ್ ಮಷಿನ್ ಒಂದನ್ನು ಆವಿಷ್ಕಾರ ಮಾಡಿದೆ. ಈಗ ಇದು ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. 


ಹುಬ್ಬಳ್ಳಿ (ಮೇ 25): ಚಹಾ ಭಾರತೀಯರ ಅಚ್ಚುಮೆಚ್ಚಿನ ಪೇಯ. ಅದರಲ್ಲೂ ಥಂಡಿ ಗಾಳಿಯಲ್ಲಿ ಬಿಸಿ ಬಿಸಿ ಚಹಾ (Tea) ಹೀರುತ್ತಿದ್ದರೆ ಅದರ ಮಜವೇ ಬೇರೆ. ಹೀಗೆ ಚಹಾ ಮಾರುತ್ತಲೇ ನಮ್ಮ ನರೇಂದ್ರ ಮೋದಿಯವರು (Narendra Modi) ದೇಶದ ಪ್ರಧಾನಮಂತ್ರಿಗಳಾಗಿದ್ದು ಇಡೀ ಜಗತ್ತಿಗೆ ಗೊತ್ತಿದೆ. ಮೋದಿಯವರು ವ್ಯಕ್ತಿತ್ವದ ಆದರ್ಶಗಳನ್ನು ಮುಂದಿಟ್ಟುಕೊಂಡು ಹುಬ್ಬಳ್ಳಿಯ ಸಂಸ್ಥೆಯೊಂದು ವಿನೂತನ ಪ್ರಯೋಗದ ಮೂಲಕ ಚಹಾ ಮಾರಾಟಕ್ಕೆ ಹೊಸ ಆಯಾಮವನ್ನು ಕಲ್ಪಿಸಿದೆ. 

ಸಾಮಾನ್ಯವಾಗಿ ಚಿಕ್ಕಪುಟ್ಟ  ಹೋಟೆಲ್‌ಗಳಲ್ಲಿ ಚಹಾ, ಕಾಫಿಯಯನ್ನ ಕೇಟಿಲಿಯಲ್ಲಿ ಸಂಗ್ರಹಿಸ್ತಾರೆ, ಗ್ರಾಹಕರು ಚಹಾ ಕೇಳಿದ್ರೆ ಅದನ್ನು ಕಪ್ಪಿಗೆ ಇಳಿಸಿ, ನಿಡೋದು ಸಮಾನ್ಯ. ಆದ್ರೇ ಹುಬ್ಬಳ್ಳಿಯ ಸ್ಟೀರಾ (Steira) ಸಂಸ್ಥೆ ಮೊಬೈಲ್ ಟೀ ಡಿಸ್ಪೆನ್ಸರ್ ಮಷಿನ್ ಒಂದನ್ನು ಆವಿಷ್ಕಾರ ಮಾಡಿದೆ. ಈಗ ಇದು ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿದೆ. ಹುಬ್ಬಳ್ಳಿಯ ಸ್ಟೀರಾ ಸಂಸ್ಥೆಯ ಆವಿಷ್ಕಾರದಿಂದ ಸ್ವಾವಲಂಬನೆ ಹಾಗೂ ಸ್ವಯಂ ಉದ್ಯೋಗ ಮಾಡುವ ಯುವ ಸಮುದಾಯಕ್ಕೆ ಈ ಉತ್ಪನ್ನ ಪೂರಕವಾಗಿದೆ.

Tap to resize

Latest Videos

undefined

ಚಹಾ- ಕಾಫಿ ತುಂಬಿದ ಪ್ಲಾಸ್ಕ್ ಬ್ಯಾಕ್ ಪ್ಯಾಕ್‌ ಮಾದರಿಯ ಬ್ಯಾಗ್ ನಲ್ಲಿ ಇಟ್ಕೊಂಡು, ಅದನ್ನ ಬೆನ್ನಗೆ ಹಾಕಿಕೊಂಡು ಬೇಕಾದ ಜಾಗಕ್ಕೆ ಹೋಗಿ ಚಹಾ- ಕಾಫಿ ಮಾರಾಡ ಮಾಡಬಹುದು. ಅದರಲ್ಲೂ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ಚಹಾ ಮಾರಟ ಮಾಡುವವರಿಗೆ ಇದು ತುಂಬಾನೆ ಅನುಕೂಲ. ಆಯಕಟ್ಟಿನ ಪ್ರದೇಶಕ್ಕೆ ಸುಲಭವಾಗಿ ಹಾಗೂ ಸುವ್ಯವಸ್ಥಿತ ರೀತಿಯಲ್ಲಿ ರುಚಿಯಾದ ಹಾಗೂ ಬಿಸಿ, ಬಿಸಿ ಚಹಾವನ್ನು ಒದಗಿಸಲು ಮೊಬೈಲ್ ಟೀ ಮಷಿನ್ ಆವಿಷ್ಕಾರ ಮಾಡಲಾಗಿದೆ. ಇದಕ್ಕೆ NSF ನೋಸ್ ಕನೆಕ್ಟರ್ ಅಳವಡಿಸಲಾಗಿದ್ದು, ನಿಂತ ಜಾಗದಲ್ಲಿ ಚಹಾ ಕಪ್ಪಿಗೆ ಸುರಿಯಬಹುದು. ಈಗಾಗಲೇ ರಾಜ್ಯದ ಕೆಲವು ಕಡೆಗಳಲ್ಲಿ ಈ ಮಷಿನ್ ಕಾರ್ಯಕೂಡ ನಿರ್ವಹಣೆ ಮಾಡುತ್ತಿದೆ.

ಮೋದಿ ಆದರ್ಶ: ಹುಬ್ಬಳ್ಳಿಯ ಇಂಜಿನಿಯರ್ ಜಗದೀಶ್ ಹಿರೇಮಠ ಎಂಬುವವರು, ತಮ್ಮ ಸಹೋದ್ಯೋಗಿಗಳ ಸಹಕಾರದಿಂದ ಆವಿಷ್ಕಾರ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೀವನದ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗಕ್ಕೆ ಸ್ಪೂರ್ತಿ ನೀಡುವಂತ ಕಾರ್ಯಕ್ಕೆ ಹುಬ್ಬಳ್ಳಿಯ ಈ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು (Pralad Joshi) ಸಹ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿವಿದ್ಯುತ್‌ ಇಲ್ಲದೇ ಓಡುವ ಮರದ ಥ್ರೆಡ್‌ಮಿಲ್‌ ನಿರ್ಮಿಸಿದ ವ್ಯಕ್ತಿ: ವಿಡಿಯೋ ನೋಡಿ

ಇನ್ನೂ ಅದೆಷ್ಟೋ ವಿದ್ಯಾವಂತ ಯುವಕರು ಕೆಲಸವಿಲ್ಲದೇ ಜೀವನದಲ್ಲಿ ಜಿಗುಪ್ಸೆ ಹೊಂದುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಜೀವನದ ಆದರ್ಶಗಳನ್ನು ಅಧ್ಯಾಯವನ್ನಾಗಿಸಿ ಯುವ ಸಮುದಾಯಕ್ಕೆ ಸ್ವಾವಲಂಬನೆ ಬದುಕನ್ನು ಕಟ್ಟಿಕೊಡುವ ಸದುದ್ದೇಶದಿಂದ ಇದನ್ನು ರೂಪಿಸಲಾಗಿದೆ.

ಒಟ್ಟಾರೆ ಜಗತ್ತಿನ ಕಣ್ಣನ್ನು ದೇಶದತ್ತ ನೆಡುವಂತೆ ಮಾಡಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಕಾಯಕವನ್ನೇ ಆದರ್ಶವಾಗಿ ಹೊಸ ಆವಿಷ್ಕಾರ ಮಾಡಿದ ಹುಬ್ಬಳ್ಳಿಯ ಇಂಜಿನಿಯರ್  ಈಗ ದೇಶವನ್ನು ತನ್ನತ್ತ ನೋಡುವಂತೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ.

ಇದನ್ನೂ ಓದಿ: ಭಾರತದ ಡಿಜಿಟಲ್ ರೂಪಾಂತರದಲ್ಲಿ ಐಬಿಎಂ ಕೊಡುಗೆ ಶ್ಲಾಘಿಸಿದ ರಾಜೀವ್ ಚಂದ್ರಶೇಖರ್!

click me!