ವಾಟ್ಸಾಪ್‌ನಲ್ಲಿ MyGov ಹೆಲ್ಪ್‌ಡೆಸ್ಕ್‌ನೊಂದಿಗೆ, ಸರ್ಕಾರಿ ಸೇವೆಗಳನ್ನು ಪಡೆಯಲು ಪಾರದರ್ಶಕ ಮತ್ತು ಸರಳ ತಂತ್ರಜ್ಞಾನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ
Digilocker on WhatsApp: ಮಾಯ್ ಗವರ್ನಮೆಂಟ್ ( MyGov) ಜನಪ್ರಿಯ ತ್ವರಿತ ಸಂದೇಶ ವೇದಿಕೆಯಲ್ಲಿ ಹೊಸ ಡಿಜಿಲಾಕರ್ ಸೇವೆಗಳನ್ನು ನೀಡಲು ವಾಟ್ಸಾಪ್ ಜೊತೆಗೆ ಪಾಲುದಾರಿಕೆ ಹೊಂದಿದೆ. ಈ ಸೇವೆಗಳಲ್ಲಿ ಡಿಜಿಲಾಕರ್ ಖಾತೆಯನ್ನು ರಚಿಸುವುದು, ದೃಢೀಕರಿಸುವುದು ಮತ್ತು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ಡೌನ್‌ಲೋಡ್ ಮಾಡುವುದು ಸೇರಿವೆ.
ವಾಟ್ಸಾಪ್‌ನಲ್ಲಿ MyGov ಹೆಲ್ಪ್‌ಡೆಸ್ಕ್‌ನೊಂದಿಗೆ, ಸರ್ಕಾರಿ ಸೇವೆಗಳನ್ನು ಪಡೆಯಲು ಪಾರದರ್ಶಕ ಮತ್ತು ಸರಳ ತಂತ್ರಜ್ಞಾನ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. "ಸರ್ಕಾರವು ಡಿಜಿಟಲ್ ಇಂಡಿಯಾದ ಮೂಲಕ ಜೀವನ ಸುಲಭವಾಗಿಸಲು ಕೆಲಸ ಮಾಡುತ್ತಿದೆ ಮತ್ತು ವಾಟ್ಸಾಪ್‌ನಲ್ಲಿ MyGov ಹೆಲ್ಪ್‌ಡೆಸ್ಕ್ ಆಡಳಿತ ಮತ್ತು ಸರ್ಕಾರಿ ಸೇವೆಗಳು ನಾಗರಿಕರ ಬೆರಳ ತುದಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿದೆ" ಎಂದು ಅಧಿಕೃತ ಪತ್ರಿಕಾ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
undefined
MyGov ಹೆಲ್ಪ್‌ಡೆಸ್ಕ್ ಬಳಸಿಕೊಂಡು, ವಾಟ್ಸಾಪ್ ಬಳಕೆದಾರರು ಈಗ ಪ್ಯಾನ್ ಕಾರ್ಡ್ (Pan Card), ಡ್ರೈವಿಂಗ್ ಲೈಸೆನ್ಸ್, ಸಿಬಿಎಸ್ ಸಿ 10ನೇ ತರಗತಿ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣಪತ್ರ (RC), ವಿಮಾ ಪಾಲಿಸಿ - ದ್ವಿಚಕ್ರ ವಾಹನ, 10ನೇ ಮತ್ತು 12ನೇ ತರಗತಿಯ ಮಾರ್ಕ್‌ಶೀಟ್ ಮತ್ತು ವಿಮಾ ಪಾಲಿಸಿ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ವಾಟ್ಸಾಪ್‌ನಲ್ಲಿ ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?: ಈ ವಿವರಗಳನ್ನು ಪಡೆಯಲು, ಬಳಕೆದಾರರು ಕೇವಲ 'Namaste' ಅಥವಾ 'Hi' ಅಥವಾ 'Digilocker' ಎಂದು ವಾಟ್ಸಾಪ್ ಸಂಖ್ಯೆ +91 9013151515 ಗೆ ಕಳುಹಿಸಬೇಕು.
ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ಡಿಜಿಲಾಕರ್ ಹೆಲ್ಪ್‌ಡೆಸ್ಕ್ ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್ ಹಂಚಿಕೊಳ್ಳುತ್ತದೆ. ಗೂಗಲ್ ಪ್ಲೇ ಸ್ಟೋರ್ (Google) ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಲಭ್ಯವಿರುವ ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ತಮ್ಮ ದಾಖಲೆಗಳನ್ನು ಉಳಿಸಿದವರು ಈ ಸೇವೆಗಳನ್ನು ಪಡೆಯಬಹುದು.
ಇದನ್ನೂ ಓದಿ: ಹೊಸ ವಾಲೆಟ್ ಅಪ್ಲಿಕೇಶನ್ ಪ್ರಾರಂಭಿಸಲಿದೆ ಟೆಕ್ ದೈತ್ಯ ಗೂಗಲ್: ಏನೆಲ್ಲಾ ಸೌಲಭ್ಯ?
"ಡಿಜಿಲಾಕರ್‌ನಂತಹ ಹೊಸ ಸೇರ್ಪಡೆಗಳೊಂದಿಗೆ, ವಾಟ್ಸಾಪ್‌ನಲ್ಲಿ MyGov ಚಾಟ್‌ಬಾಟ್ ನಾಗರಿಕರಿಗೆ ಸಂಪನ್ಮೂಲಗಳು ಮತ್ತು ಡಿಜಿಟಲ್ ಒಳಗೊಂಡಿರುವ ಅಗತ್ಯ ಸೇವೆಗಳನ್ನು ಪ್ರವೇಶಿಸಲು ಸಮಗ್ರ ಆಡಳಿತಾತ್ಮಕ ಬೆಂಬಲ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ" ಎಂದು ಅಧಿಕೃತ ಪತ್ರಿಕಾ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸಾಪ್‌ನಲ್ಲಿ MyGov ಹೆಲ್ಪ್‌ಡೆಸ್ಕ್ ಮೊದಲು ಮಾರ್ಚ್ 2020 ರಲ್ಲಿ ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭಿಸಲಾಯಿತು. ಲಸಿಕೆ ಅಪಾಯಿಂಟ್‌ಮೆಂಟ್ ಬುಕಿಂಗ್ ಮತ್ತು ಲಸಿಕೆ ಪ್ರಮಾಣಪತ್ರ ಡೌನ್‌ಲೋಡ್‌ಗಳ ವಿವರಗಳೊಂದಿಗೆ ಕೋವಿಡ್-ಸಂಬಂಧಿತ (Covid 19) ಮಾಹಿತಿಯ ಅಧಿಕೃತ ಮೂಲಗಳನ್ನು ಬಳಕೆದಾರರಿಗೆ ನೀಡಲು ಈ ಸೇವೆಯು ವಾಟ್ಸಾಪ್‌ಗೆ ಅವಕಾಶ ಮಾಡಿಕೊಟ್ಟಿತು.
ಇಲ್ಲಿಯವರೆಗೆ 80 ಮಿಲಿಯನ್‌ಗಿಂತಲೂ ಹೆಚ್ಚು ಜನರು ಡಿಜಿಲಾಕರ್ ಹೆಲ್ಪ್‌ಡೆಸ್ಕ್ ಬಳಸಿದ್ದಾರೆ, 33 ಮಿಲಿಯನ್‌ಗಿಂತಲೂ ಹೆಚ್ಚು ಲಸಿಕೆ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಲಾಗಿದೆ ಮತ್ತು ಭಾರತದಾದ್ಯಂತ ಲಕ್ಷಾಂತರ ವ್ಯಾಕ್ಸಿನೇಷನ್ ಅಪಾಯಿಂಟ್‌ಮೆಂಟ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 'ಇದು ಹೊಸ ಭಾರತ': ಕಾನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಆರ್ಥಿಕತೆ ಶ್ಲಾಘಿಸಿದ ನಟ ಆರ್ ಮಾಧವನ್