ವನ್‌ಪ್ಲಸ್‌ 10ಆರ್‌ ಫೋನ್‌ ಬಿಡುಗಡೆ: ಹಗುರ ಸುಂದರ ಜೇಬಿಗೆ ಆಗದು ಭಾರ

By Kannadaprabha News  |  First Published May 24, 2022, 10:38 AM IST
  • ಐಫೋನ್‌ನಲ್ಲಿರುವಂತೆ ಬ್ಯಾಟರಿ ಹೆಲ್ತ್‌ ಇಂಜಿನ್‌
  • ವನ್‌ಪ್ಲಸ್‌ 10ಆರ್‌ ಫೋನ್‌ ಬಿಡುಗಡೆ
  • ಹಗುರ ಸುಂದರ ಜೇಬಿಗೆ ಆಗದು ಭಾರ

ಆ್ಯಪಲ್‌ ಯಾವಾಗ ಎಕ್ಸ್‌ಆರ್‌ ಫೋನ್‌ ಮಾರುಕಟ್ಟೆಗೆ ತರುವ ಮೂಲಕ ಆರ್‌ ಸೀರೀಸ್‌ ಶುರು ಮಾಡಿತೋ, ಮಿಕ್ಕ ಸಂಸ್ಥೆಗಳೂ ಅದನ್ನು ಅನುಕರಿಸಿದವು. ಸ್ಯಾಮ್ಸಂಗ್‌ ಕೂಡ ಆರ್‌ ಸರಣಿ ಫೋನುಗಳನ್ನು ಮಾರುಕಟ್ಟೆಗೆ ತಂದಿತು. ಅದರ ಪರಿಣಾಮವಾಗಿಯೇ ವನ್‌ಪ್ಲಸ್‌ 9ಆರ್‌ ಬಂತು. ಸಾಕಷ್ಟು ಜನಪ್ರಿಯವೂ ಆಯಿತು. ಪ್ರೀಮಿಯಮ್‌ ಅನುಭವ, ಕೈಗೆಟುಕುವ ಬೆಲೆಗೆ ನೀಡುವುದು ಆರ್‌ ಸರಣಿಯ ಫೋನುಗಳ ಮುಖ್ಯ ಉದ್ದೇಶ. ಕಡಿಮೆ ಬೆಲೆ ಬೇಕೆನ್ನುವವರಿಗೆ ನಾರ್ಡ್‌ ಸರಣಿ ಇರುವಂತೆ, ಚೆನ್ನಾಗಿಯೂ ಇರಬೇಕು, ಜೇಬಿಗೂ ಭಾರ ಆಗಬಾರದು ಅನ್ನುವವರಿಗೋಸ್ಕರ ಈ ಆರ್‌ ಸರಣಿ ಫೋನು ಬಂದಂತಿದೆ. ಆರ್‌ ಅಂದರೇನು ಅಂತ ಕೇಳಿದ್ದಕ್ಕೆ ಆ್ಯಪಲ್‌ ಸಂಸ್ಥೆಯ ಫಿಲ್‌ ಶಿಲ್ಲರ್‌ ನನಗೆ ಸ್ಪೀಡ್‌ಕಾರುಗಳು ಇಷ್ಟ. ಅಂಥ ಕಾರುಗಳ ಮೇಲೆ ಆರ್‌ ಎಂದು ಬರೆದಿರುತ್ತಾರೆ. ಅದನ್ನೇ ಫೋನಿಗೂ ಇಟ್ಟಿದ್ದೇನೆ ಅಂದಿದ್ದರು.

ಅದೇನೇ ಇದ್ದರೂ ಆರ್‌ ಸರಣಿಯ ಫೋನುಗಳು ಜನಪ್ರಿಯವಾಗಿವೆ ಅನ್ನುವುದಕ್ಕೆ ಸಾಕ್ಷಿಯಾಗಿ ವನ್‌ಪ್ಲಸ್‌ 10ಆರ್‌ ಫೋನನ್ನು ಬಿಡುಗಡೆ ಮಾಡಿದೆ. ಆರ್‌ ಸರಣಿಯ ವನ್‌ಪ್ಲಸ್‌ ಫೋನುಗಳಲ್ಲೇ ಇದು ಅತ್ಯುತ್ತಮ ಮತ್ತು ಹೊಸದು. ಇದರ ವಿನ್ಯಾಸ ಹೊಸದಾಗಿದೆ. ಫೋನನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಅರೇ, ಹೊಸದಾಗಿದೆ ಅನ್ನುವ ಭಾವನೆ ಬರುತ್ತದೆ. ಅಲ್ಲದೇ ವನ್‌ಪ್ಲಸ್‌ ಪೈಕಿ ಅತ್ಯಂತ ವೇಗವಾಗಿ ಚಾಜ್‌ರ್‍ ಆಗುವ ಫೋನೆಂದರೆ ಇದೇ. 4500 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಕೇವಲ 17 ನಿಮಿಷಗಳಲ್ಲಿ ಚಾಜ್‌ರ್‍ ಆಗುವಂಥ 150 ವ್ಯಾಟ್‌ ಚಾರ್ಜರ್‌ ಇದರೊಂದಿಗಿದೆ. ಇದರಲ್ಲೇ ಕಡಿಮೆ ವ್ಯಾಟ್‌ ಚಾರ್ಜರ್‌ ಕೂಡ ಸಿಗುತ್ತದೆ. ಬೆಲೆ ಕೊಂಚ ಕಡಿಮೆ. ವೇಗವಾಗಿ ಚಾರ್ಜ್‌ ಆಗುವಾಗ ಫೋನ್‌ ಒಂಚೂರು ಬಿಸಿಯಾಗುತ್ತದೆ, ಆದರೆ ಭಯ ಬೇಡ.

Tap to resize

Latest Videos

undefined

5000mAh ಬ್ಯಾಟರಿಯೊಂದಿಗೆ OnePlus Ace Racing ಆವೃತ್ತಿ ಬಿಡುಗಡೆ: ಏನೆಲ್ಲಾ ಫೀಚರ್ಸ್‌?
 

ಈ ಪೋನಲ್ಲಿ ಐಫೋನ್‌ನಲ್ಲಿರುವಂತೆ ಬ್ಯಾಟರಿ ಹೆಲ್ತ್‌ ಇಂಜಿನ್‌ ಇದೆ. ಅದರ ಜತೆಗೇ ಬ್ಯಾಟರಿ ಹೀಲಿಂಗ್‌ ತಂತ್ರಜ್ಞಾನವನ್ನೂ ಹೊಸದಾಗಿ ಅಳವಡಿಸಲಾಗಿದೆ. ಇದರಿಂದಾಗಿ ಬ್ಯಾಟರಿ ಬಾಳಿಗೆ ಹೆಚ್ಚುತ್ತದೆ ಅನ್ನುವುದು ಕಂಪೆನಿ ಕೊಡುವ ಭರವಸೆ. ಮಿಕ್ಕಂತೆ 12 ಜಿಬಿ ರಾರ‍ಯಮ್‌, 256 ಜಿಬಿ ಸ್ಟೋರೇಜು ಉಂಟು. ಎಲ್ಲ ಆ್ಯಪುಗಳು ಫಟ್ಟನೆ ಕಣ್ತೆರೆಯುತ್ತವೆ. ಗ್ರಾಫಿಕ್‌ ಸೆಟ್ಟಿಂಗುಗಳು ಚೆನ್ನಾಗಿವೆ.ಗೇಮಿಂಗ್‌ ಆಪ್ಷನ್ನುಗಳೂ ಕೂಡ ತೃಪ್ತಿಕರ. ಹಗುರ ಪ್ಲಾಸ್ಟಿಕ್‌ ದೇಹದ (lightweight plastic body), ಸೊಗಸಾದ ವಿನ್ಯಾಸದ (elegant design), ಸ್ಟೆಲ್ಲಾರ್‌ ಬ್ಲಾಕ್‌ ಬಣ್ಣದ 10ಆರ್‌ ಮ್ಯಾಟ್‌ ಫಿನಿಶ್‌ ಹೊಂದಿದೆ. ವೈರ್‌ಲೆಸ್‌ ಚಾರ್ಜಿಂಗ್‌ ಆಗಲೀ, ಐಪಿ ರೇಟಿಂಗ್‌ ಆಗಲಿ ಬಂದಿಲ್ಲ.

80W ಫಾಸ್ಟ್ ಚಾರ್ಜ್‌ನೊಂದಿಗೆ OnePlus Nord 2T ಜಾಗತಿಕ ಬಿಡುಗಡೆ: ಭಾರತದಲ್ಲಿ ಯಾವಾಗ?
 

ಡಿಸ್‌ಪ್ಲೇ (Display), ದಕ್ಷತೆ, ಕ್ಯಾಮರಾ (camera), ಬ್ಯಾಟರಿ ಎಲ್ಲಕ್ಕೂ ಫುಲ್‌ ಮಾರ್ಕ್ಸ್. ಸಾಮಾನ್ಯವಾಗಿ ಎಲ್ಲ ವನ್‌ಪ್ಲಸ್‌ ಫೋನುಗಳಲ್ಲಿರುವ (OnePlus phones) ಸ್ಲೈಡರ್‌ ಬಟನ್‌ ಇದರಲ್ಲಿಲ್ಲ. ಮಿಕ್ಕಂತೆ ಈ ಫೋನು ಕೈಗೂ ಕಿಸೆಗೂ ಭಾರವೇನಲ್ಲ. 12ಜಿಬಿ ರಾರ‍ಯಮ್‌, 256 ಜಿಬಿ ಸ್ಟೋರೇಜಿನ ಫೋನಿಗೆ 43,999. ಇದರಲ್ಲೇ ಕಡಿಮೆ ಪವರಿನ ಚಾರ್ಜರ್‌ ಇರುವ ಫೋನೂ ಇದೆ. ಅದರ ಬೆಲೆ ಒಂದು ಸಾವಿರ ಕಡಿಮೆ. ಆರಂಭಿಕ ಬೆಲೆ 38,999. 8ಜಿಬಿ ರಾರ‍ಯಮ್‌ಸ 128 ಜಿಬಿ ಸ್ಟೋರೇಜ್‌ ಈ ಬೆಲೆಗೆ ಲಭ್ಯ.

click me!