QR ಕೋಡ್ ಮೂಲಕ ಕಾಂಟಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?

By Suvarna News  |  First Published Nov 3, 2020, 4:28 PM IST

ವಾಟ್ಸಾಪ್‌ಗೆ ಯಾರದೇ ನಂಬರ್ ಸೇರಿಸಬೇಕಿದ್ದರೆ ಮೊದಲಿಗೆ ನೀವು ಆ ನಂಬರ್ ಅನ್ನು ನಿಮ್ಮ ಫೋನ್ ಕಾಂಟಾಕ್ಟ್ ಲಿಸ್ಟ್‌ಗೆ  ಸೇರಿಸಿ ಬಳಿಕ ಅದನ್ನು ನೀವು ವಾಟ್ಸಾಪ್‌ನಲ್ಲಿ ಸರ್ಚ್ ಮಾಡಿ ಚಾಟ್ ಮಾಡುತ್ತಿದ್ದಿರಲ್ಲ. ಅದಕ್ಕೆ ಬದಲಾಗಿ ಮತ್ತು ಸುಲಭವಾಗಿ ಕ್ಯೂಆರ್ ಕೋಡ್  ಬಳಸಿಕೊಂಡೇ ನೇರವಾಗಿ ಆ್ಯಡ್ ಮಾಡಬಹುದು.
 


ಎಲ್ಲರಿಗೂ ವಾಟ್ಸಾಪ್ ಎಂಬುದು ಅನಿವಾರ್ಯವಾಗಿದೆ ಈಗ. ವಾಟ್ಸಾಪ್ ಇಲ್ಲದೇ ಯಾವುದೇ ಕೆಲಸಗಳು ಆಗವುದಿಲ್ಲ. ಪ್ರತಿಯೊಂದಕ್ಕೂ ನಾವು ವಾಟ್ಸಾಪ್‌ವನ್ನು ಆಶ್ರಯಿಸುತ್ತಿದ್ದೇವೆ, ಮೊರೆ ಹೋಗುತ್ತಿದ್ದೇವೆ.  ಅಷ್ಟರಮಟ್ಟಿಗೆ ಅದು ನಮ್ಮೆಲ್ಲರ ಅಗತ್ಯಗಳನ್ನು ಪೂರೈಸುತ್ತಿದೆ. ಹಾಗಾಗಿ, ವಾಟ್ಸಾಪ್ ಆಗಾಗ ಬಳಕೆದಾರ ಸ್ನೇಹಿ ಫೀಚರ್‌ಗಳನ್ನು ಸೇರಿಸುತ್ತಲೇ ಇರುತ್ತದೆ. ಜೊತೆಗೆ ಹಲವು ಅಪ್‌ಡೇಟ್‌ಗಳನ್ನು ನೀಡುತ್ತಿರುತ್ತದೆ. 

ವಾಟ್ಸಾಪ್‌ನಲ್ಲಿ ಹಲವು ಕೆಲಸಗಳನ್ನು ಮಾಡಬಹುದು. ಆದರೆ, ನಮಗೆ ಗೊತ್ತಿರುವುದಿಲ್ಲವಷ್ಟೇ.  ನಿಮಗೆ ಕ್ಯೂರ್ ಆರ್ ಕೋಡ್ ಬಳಸಿಕೊಂಡು ಫೋನ್ ನಂಬರ್‌ಗಳನ್ನು ವಾಟ್ಸಾಪ್‌ ಆ್ಯಡ್ ಮಾಡೋದು ಗೊತ್ತಾ? ಇತ್ತೀಚಿನ ದಿನಗಳಲ್ಲಿ ಕ್ಯೂಆರ್‌ ಕೋಡ್ ತುಂಬ ಉಪಯೋಗಕಾರಿಯಾಗುತ್ತಿದೆ. ಕೊರೋನಾ ಹಿನ್ನೆಲೆಯಲ್ಲಿ ಅನೇಕ ಸಭೆಗಳು, ಚರ್ಚೆಗಳು, ಸೆಮಿನಾರ್‌ಗಳು ಆನ್‌ಲೈನ್‌ನಲ್ಲಿ ನಡೆಯುತ್ತಿವೆ. ಆಗ ಸಂಯೋಜಕರು ಕ್ಯೂಆರ್ ಕೋಡ್ ನೀಡಿ, ಪಾಲ್ಗೊಳ್ಳುವಂತೆ ಕರೆ ನೀಡುತ್ತಾರೆ. ಈ ರೀತಿಯಾಗಿ ಕ್ಯೂಆರ್ ಕೋಡ್ ಅನೇಕ ರೀತಿಯಲ್ಲಿ ಬಳಕೆಯಾಗುತ್ತಿದೆ. ಅದೇ ರೀತಿ, ಈ ಕ್ಯೂರ್ ಕೋಡ್ ಬಳಸಿಕೊಂಡು ನಂಬರ್‌ಗಳನ್ನು ಕಾಂಟಾಕ್ಟ್ ಲಿಸ್ಟ್‌ಗೆ ಸೇರ್ಪಡೆ ಮಾಡಬಹುದು.

Latest Videos

undefined

ಮತ್ತೆ ನಂಬರ್ 1 ಸ್ಥಾನಕ್ಕೇರಿದ ಸ್ಯಾಮ್ಸಂಗ್

ವಾಟ್ಸಾಪ್‌ಗೆ ಯಾರದೇ ನಂಬರ್ ಸೇರಿಸಬೇಕಿದ್ದರೆ ಮೊದಲಿಗೆ ನೀವು ಆ ನಂಬರ್ ಅನ್ನು ನಿಮ್ಮ ಫೋನ್ ಕಾಂಟಾಕ್ಟ್ ಲಿಸ್ಟ್‌ಗೆ  ಸೇರಿಸಿ ಬಳಿಕ ಅದನ್ನು ನೀವು ವಾಟ್ಸಾಪ್‌ನಲ್ಲಿ ಸರ್ಚ್ ಮಾಡಿ ಚಾಟ್ ಮಾಡುತ್ತಿದ್ದಿರಲ್ಲ. ಅದಕ್ಕೆ ಬದಲಾಗಿ ಮತ್ತು ಸುಲಭವಾಗಿ ಕ್ಯೂಆರ್ ಕೋಡ್  ಬಳಸಿಕೊಂಡೇ ನೇರವಾಗಿ ವಾಟ್ಸಾಪ್ ಲಿಸ್ಟ್‌ಗೆ ಸೇರಿಸಬಹುದು. ಒಮ್ಮೆ ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ವಾಟ್ಸಾಪ್ ತಕ್ಷಣವೇ ಆ ನಿರ್ದಿಷ್ಟ ವ್ಯಕ್ತಿಯ ಚಾಟ್ ಮಾಹಿತಿಯನ್ನು ತೆರೆಯುತ್ತದೆ. ಅಲ್ಲಿ ನೀವು ಬ್ಲಾಕ್ ಅಥವಾ ಆಡ್ ಆಯ್ಕೆಯನ್ನು ಪಡೆದುಕೊಳ್ಳುತ್ತೀರಿ. ಬಳಿಕ ನೀವು ನಿಮ್ಮ ಕಾಂಟಾಕ್ಟ್ ಲಿಸ್ಟ್ ಸೇರಿಸಬೇಕೆಂದರೆ ಸೇರಿಸಬಹುದು.

ಕಾಂಟಾಕ್ಟ್ ಪಟ್ಟಿಗೆ ಹೇಗೆ ಆ್ಯಡ್ ಮಾಡುವುದು?
1. ಮೊದಲಿಗೆ ವಾಟ್ಸಾಪ್‌ ಆಪ್ ತೆರೆಯರಿ ಮತ್ತು ನ್ಯೂ ಚಾಟ್ ಮೇಲೆ ಟ್ಯಾಪ್ ಮಾಡಿ. ಈ ನ್ಯೂ ಚಾಟ್ ಸ್ಕ್ರೀನ್ ಕೆಳಗಡೆ ಬಲ ಮೂಲೆಯಲ್ಲಿರುತ್ತದೆ. ಬಳಿಕ ಹೊಸ ಕಾಂಟಾಕ್ಟ್ ಮೇಲೆ ಟ್ಯಾಪ್ ಮಾಡಿ. ನಂತರ ಆ್ಯಡ್ ವಾಯಾ ಕ್ಯೂಆರ್ ಕೋಡ್‌ಗೆ ಹೋಗಿ. ಆಗ ಕ್ಯೂಆರ್‌ ಕೋಡ್ ಸ್ಕ್ಯಾನಿಂಗ್ ಚಾಲನೆಗೊಳ್ಳತ್ತದೆ, ಸ್ಕ್ಯಾನ್ ಮಾಡಲು ಕ್ಯೂಆರ್‌ ಕೋಡ್ ಮೇಲೆ ಹಿಡಿಯಿರಿ. ಅಥವಾ ಸ್ಕ್ರೀನ್‌ನ ಕೆಳಗಡೆ ಇರುವ ಫೋಟೋಸ್ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಫೋಟೋಸ್‌ನಿಂದ ವಾಟ್ಸಾಪ್‌ ಕ್ಯೂಆರ್ ಕೋಡ್ ಸೆಲೆಕ್ಟ್ ಮಾಡಿಕೊಳ್ಳಿ. ಬಳಿಕ ಆ್ಯಡ್ ಟು ಕಾಂಟಾಕ್ಟ್ ಮೇಲೆ ಟ್ಯಾಪ್ ಮಾಡಿದರೆ ಸಾಕು. ಆಗ ಕಾಂಟಾಕ್ಟ್ ಸೇವ್ ಆಗುತ್ತದೆ. 

ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್!

2.ಮೊದಲಿಗೆ ವಾಟ್ಸಾಪ್‌ ಆಪ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ. ಬಳಿಕ ಅಲ್ಲಿ ಕಾಣುವ ನಿಮ್ಮ ಹೆಸರಿನ ಮುಂದಿರುವ ಕ್ಯೂಆರ್ ಐಕಾನ್ ಮೇಲೆ ಟ್ಯಾಪ್ ಮಾಡಿ. ನಂತರ ಸ್ಕ್ಯಾನ್ ಮೇಲೆ ಟ್ಯಾಪ್ ಮತ್ತು ಒಕೆ ಸೆಲೆಕ್ಟ್ ಮಾಡಿ. ಬಳಿಕ ನಿಮ್ಮ ಫೋನ್ ಅನ್ನು ಕ್ಯೂಆರ್ ಕೋಡ್ ಮೇಲೆ ಹಿಡಿದು ಸ್ಕ್ಯಾನ್ ಮಾಡಿ ಮತ್ತು ಆ್ಯಡ್ ಟು ಕಾಂಟಾಕ್ಟ್ಸ್ ಮೇಲೆ ಟ್ಯಾಪ್ ಮಾಡಿದರೆ ನಂಬರ್ ನಿಮ್ಮ ವಾಟ್ಸಾಪ್‌ಗೆ ಸೇರ್ಪಡೆಯಾಗುತ್ತದೆ.

3. ವಾಟ್ಸಾಪ್ ಆಪ್ ಓಪನ್ ಮಾಡಿ, ಸೆಟ್ಟಿಂಗ್ಸ್‌ ಹೋಗಿ ಮತ್ತು ನಿಮ್ಮ ಹೆಸರಿನ ಮುಂದೆ ಕಾಣುವ ಕ್ಯೂಆರ್ ಕೋಡ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಇದಕ್ಕೆ ಪರ್ಯಾಯವಾಗಿ ನೀವು ನ್ಯೂ ಕಾಂಟಾಕ್ಟ್ ಸ್ಕ್ರೀನ್‌ ಬಳಸಿಯೂ ಮಾಡಬಹುದು. ನಂತರ, ಸ್ಕ್ಯಾನ್ ಮೇಲೆ ಟ್ಯಾಪ್, ನಂತರ ಮತ್ತೆ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಫೋಟೋಸ್ ಐಕಾನ್ ಮೇಲೆ ಟ್ಯಾಪ್ ಮಾಡಿ. ಆಗ ನೀವು ಫೋಟೋ ಗ್ಯಾಲರಿಗೆ ಹೋಗುತ್ತೀರಿ ಮತ್ತು ಅಲ್ಲಿರುವ ವಾಟ್ಸಾಪ್ ಕ್ಯೂರ್ ಕೋಡ್ ಸೆಲೆಕ್ಟ್ ಮಾಡಿ ಬಳಿಕ ಆ್ಯಡ್ ಟು ಕಾಂಟಾಕ್ಟ್ಸ್ ಮೇಲೆ ಟ್ಯಾಪ್ ಮಾಡಿದರಾಯಿತು. ಫೋನ್ ನಂಬರ್ ನಿಮ್ಮ ವಾಟ್ಸಾಪ್ ಪಟ್ಟಿಗೆ ಸೇರ್ಪಡೆಯಾಗುತ್ತದೆ.
 

13,900 ರೂಪಾಯಿಯ ರಿಯಲ್‌ಮೀ C17 ಫೋನ್ ಶೀಘ್ರ ಬಿಡುಗಡೆ

click me!