TCL ಹೋಂ ಥಿಯೇಟರ್ to ಆಕ್ಟಾವೆಝ್‌ ಆ್ಯಪ್‌: ಮಾರುಕಟ್ಟೆಗೆ ಬಂದಿದೆ ಹೊಸ ತಂತ್ರಜ್ಞಾನ!

By Suvarna NewsFirst Published Oct 31, 2020, 7:38 PM IST
Highlights
  • ಸಂಗೀತ ಕಲಿಕೆಗೆ ಬೆಂಗಳೂರು ಮೂಲದ ಅಕ್ಟಾವೆಝ್ ಆ್ಯಪ್
  • ಟಿಸಿಎಲ್‌ನಿಂದ ಟಿಎಸ್‌3015 ಎಂಬ 2.1 ಚಾನೆಲ್‌ ಹೋಂ ಥಿಯೇಟರ್‌ ಸೌಂಡ್‌ ಬಾರ್‌
  • ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ

ಸಂಗೀತ ಕಲಿಕೆಗೆ ಆಕ್ಟಾವೆಝ್‌ ಆ್ಯಪ್‌
ಸಂಗೀತ ಕಲಿಕೆಯಲ್ಲಿ ನಿಮಗೆ ಆಸಕ್ತಿ ಇದ್ದರೆ ಎಲ್ಲ ಬಗೆಯಲ್ಲಿ ಗೈಡ್‌ ಮಾಡೋದಕ್ಕೆ ಆಕ್ಟಾವೆಝ್‌ ಆ್ಯಪ್‌ ಇದೆ. ಬೆಂಗಳೂರು ಮೂಲದ ಗ್ಲೋಬಲ್‌ ಪರ್ಫಾಮಿಂಗ್‌ ಆಟ್ಸ್‌ರ್‍ ಅಕಾಡೆಮಿ ಇದನ್ನು ಅಭಿವೃದ್ಧಿಪಡಿಸಿದೆ. ವೆಸ್ಟರ್ನ್‌ ಮ್ಯೂಸಿಕ್‌, ಇಂಡಿಯನ್‌ ಮ್ಯೂಸಿಕ್‌ ಸೇರಿದಂತೆ ಯಾವುದೇ ಮ್ಯೂಸಿಕ್‌ ಕಲಿಕೆಗೆ ಸಂಬಂಧಿಸಿದ ಮಾಹಿತಿ ಇದರಲ್ಲಿ ಸಿಗುತ್ತದೆ. ವಿಶ್ವದ ನಾನಾ ಭಾಗಗಳ ಸಂಗೀತಜ್ಞರ ಜೊತೆಗೆ ಕನೆಕ್ಟ್ ಆಗಲೂ ಇದು ವೇದಿಕೆಯಾಗಲಿದೆ ಎಂದು ಕಂಪೆನಿ ತಿಳಿಸಿದೆ. ಆನೂರ್‌ ಅನಂತಕೃಷ್ಣ ಶರ್ಮ, ಪ್ರವೀಣ್‌ ಡಿ ರಾವ್‌, ಅರುಣ್‌ ಕುಮಾರ್‌ ಮತ್ತಿತರರಿಂದ ಈ ಆ್ಯಪ್‌ ಮೂಲಕ ಸಂಗೀತ ಕಲಿಯಬಹುದು.

ಕೇವಲ 1,999 ರೂಪಾಯಿಗೆ ಬೋಟ್ ಸ್ಟಾರ್ಮ್ ಸ್ಮಾರ್ಟ್ ವಾಚ್!

ಟಿಸಿಎಲ್‌ ಹೋಂ ಥಿಯೇಟರ್‌ ಸೌಂಡ್‌ಬಾರ್‌
ಟಿಸಿಎಲ್‌ನಿಂದ ಟಿಎಸ್‌3015 ಎಂಬ 2.1 ಚಾನೆಲ್‌ ಹೋಂ ಥಿಯೇಟರ್‌ ಸೌಂಡ್‌ ಬಾರ್‌ ಬಿಡುಗಡೆಯಾಗಿದೆ. ಹಬ್ಬದ ಖುಷಿಗಾಗಿ ಬಿಡುಗಡೆ ಮಾಡಿರುವ ಈ ಸೌಂಡ್‌ ಬಾರ್‌ನಲ್ಲಿ ಹೆಚ್ಚಿನ ಸೌಂಡ್‌ ಎಫೆಕ್ಸ್‌ ನಿರೀಕ್ಷಿಸಬಹುದು. ಇದರಲ್ಲಿರುವ ವೈರ್‌ಲೆಸ್‌ ಸಬ್‌ ವೂಫರ್‌, ಸೌಂಡ್‌ಬಾರ್‌ನಿಂದಾಗಿ ಥಿಯೇಟರ್‌ ಫೀಲ್‌ ಬರುತ್ತೆ ಅನ್ನೋದು ಕಂಪೆನಿ ಒಕ್ಕಣಿಕೆ. ಬ್ಲ್ಯೂಟೂತ್‌ ಮೂಲಕ ಗ್ಯಾಜೆಟ್‌ಗಳಲ್ಲಿರ ಮ್ಯೂಸಿಕ್‌ಅನ್ನೂ ಈ ಸೌಂಡ್‌ಬಾರ್‌ ಮೂಲಕ ಕೇಳಬಹುದು.
ಬೆಲೆ: 8,999 ರು.
 

click me!