ವಿದ್ಯಾರ್ಥಿಗಳಿಗಾಗಿ ಕನ್ನಡ ಸೇರಿದಂತೆ 8 ಭಾಷೆಗಳಲ್ಲಿ HP ಪ್ರಿಂಟ್ ಲರ್ನ್ ಸೆಂಟರ್ ಆರಂಭ!

By Suvarna News  |  First Published Nov 3, 2020, 3:40 PM IST

ಕನ್ನಡ ಸೇರಿದಂತೆ 8 ಪ್ರಾದೇಶಿಕ ಭಾಷೆಗಳಲ್ಲಿ ಲರ್ನಿಂಗ್ ಮಾಡ್ಯೂಲ್ ಗಳು ಲಭ್ಯ/  ಸಂಪೂರ್ಣ ಉಚಿತವಾಗಿ ಆನ್ ಲೈನ್ ಮೂಲಕ ಕಂಟೆಂಟ್ ಗಳನ್ನು ಪಡೆಯಲು ಅವಕಾಶ /  ವೆಬ್ ಸೈಟ್ ನಲ್ಲಿ 60 ದಿನಗಳ ಕಲಿಕಾ ಸಾಮಗ್ರಿ
 


ಬೆಂಗಳೂರು(ನ.03): ಭಾರತಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ HP ಇಂಡಿಯಾ ಪ್ರಿಂಟ್ ಲರ್ನ್ ಸೆಂಟರ್ ಆರಂಭಿಸಿದೆ. ಈ ಪ್ರಿಂಟ್ ಲರ್ನ್ ಸೆಂಟರ್ 3 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರಿಂಟಿಂಗ್ ಅನುಭವವನ್ನು ನೀಡುವ ಉದ್ದೇಶದೊಂದಿಗೆ ಮಕ್ಕಳ ಶಿಕ್ಷಣ ತಜ್ಞರು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿರುವ ಮುದ್ರಿಸಬಹುದಾದ ಕಲಿಕಾ ಮಾಡ್ಯೂಲ್ ಗಳನ್ನು ಹೊಂದಿದೆ. 

ನಕಲಿ ಉತ್ಪನ್ನ ಮಾರಾಟಗಾರರಿಂದ ಗ್ರಾಹಕರ ರಕ್ಷಣೆಗೆ ಮುಂದಾದ HP!
 ಅರ್ಲಿ ಚೈಲ್ಡ್ ವುಡ್ ಅಸೋಸಿಯೇಷನ್ ನ ಅಧ್ಯಕ್ಷರಾದ ಪರಿಣಿತ ಶಿಕ್ಷಣ ತಜ್ಞರಾದ ಡಾ.ಸ್ವಾತಿ ಪೊಪಟ್ ವ್ಯಾಟ್ಸ್ ಅವರ ಮಾರ್ಗದರ್ಶನದಲ್ಲಿ HP ಈ ಕಂಟೆಂಟ್ ಮಾಡ್ಯೂಲ್ ಗಳನ್ನು ಸಿದ್ಧಪಡಿಸಿದೆ. ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ನಿಟ್ಟಿನಲ್ಲಿ HP ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಬೆಂಗಾಲಿ, ತಮಿಳು, ತೆಲುಗು, ಮತ್ತು ಗುಜರಾತಿ ಸೇರಿದಂತೆ ಒಟ್ಟು 8 ಭಾಷೆಗಳಲ್ಲಿ ಕಂಟೆಂಟ್ ಗಳನ್ನು ಪೂರೈಸುತ್ತಿದೆ. 

Tap to resize

Latest Videos

HPಯಿಂದ ವಿದ್ಯಾಭ್ಯಾಸ,ಕಚೇರಿ ಕೆಲಸ ಸುಲಭವಾಗಿಸುವ ಆಲ್ ಇನ್ ಒನ್ ಪಿಸಿ ಬಿಡುಗಡೆ!.

ಮಕ್ಕಳಲ್ಲಿನ ಸೃಜನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಕಂಟೆಂಟ್ ಕೆಲವು ಮೋಜಿನ ಚಟುವಟಿಕೆಗಳನ್ನೂ ಒಳಗೊಂಡಿರುತ್ತದೆ. ಇದನ್ನು ಎಲ್ಲಾ ವಯೋಮಾನದವರಿಗೂ ಹೊಂದುವ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದೆ ಹಾಗೂ ಅದನ್ನು ಮನೆಯಲ್ಲಿಯೇ ಸುಲಭವಾಗಿ ಡೌನ್ ಲೋಡ್ ಮಾಡಬಹುದು ಮತ್ತು ಪ್ರಿಂಟ್ ತೆಗೆಯಬಹುದಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ಕಲಿಕೆಯ ಬಗ್ಗೆ ಮತ್ತಷ್ಟು ಆಸಕ್ತಿಯನ್ನು ಹುಟ್ಟಿಸಲೆಂದು ಹಲವಾರು ವರ್ಕ್ ಶೀಟ್ ಗಳು, ವರ್ಣರಂಜಿತ ಪುಟಗಳು, ಒಗಟುಗಳು ಮತ್ತು ಇನ್ನಿತರೆ ಪ್ರಿಂಟ್ ಮಾಡಬಹುದಾದ ವಿವಿಧ ಸ್ವರೂಪಗಳ ಕಂಟೆಂಟ್ ಅನ್ನು ನೀಡಲಾಗುತ್ತಿದೆ.

ಪ್ರಸ್ತುತ ಇರುವ ಜಾಗತಿಕ ಪರಿಸ್ಥಿತಿಯು ಕಲಿಕೆ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿನ ಕಲಿಕೆ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡಿದೆ. ಇದರಿಂದಾಗಿ ಮೂಲಸೌಕರ್ಯ ಅಥವಾ ಸಂಪನ್ಮೂಲಗಳ ಕೊರತೆಯಿಂದಾಗಿ ಶಾಲೆಗಳು ಇ-ಕಲಿಕೆ ಸಂಪೂರ್ಣವಾಗಿ ಪರಿವರ್ತನೆಯಾಗಲು ಸಾದ್ಯವಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಇ-ಕಲಿಕೆಯ ಭಾರತದಂತಹ ದೇಶಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಎಚ್ ಪಿಯ ನ್ಯೂ ಏಷ್ಯಾ ಲರ್ನಿಂಗ್ ಎಕ್ಸ್ ಪೀರಿಯನ್ಸ್ ಸ್ಟಡಿ ಪ್ರಕಾರ, ಶೇ.60 ರಷ್ಟು ಪೋಷಕರು ತಮ್ಮ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಡಿಜಿಟಲ್ ಕಲಿಕೆಯ ಸಾಧನವನ್ನು ಕಂಡುಕೊಳ್ಳುತ್ತಾರೆ ಮತ್ತು ತಮ್ಮ ಮಕ್ಕಳ ಓದುವ ಅವಧಿಯನ್ನು ಪ್ರಾಯೋಗಿಕವಾಗಿ ಕಲಿಕೆಯಿಂದ ಸುಧಾರಣೆ ಆಗುವಂತೆ ನೋಡಿಕೊಳ್ಳುತ್ತಾರೆ.

ಪ್ರಿಂಟ್ ಕಲಿಕಾ ಸೆಂಟರ್ ನ ಮಾಡ್ಯೂಲ್ ಗಳು ಆವಿಷ್ಕಾರ ಕಲಿಕೆಯನ್ನು 30 ದಿನಗಳ ಅವಧಿಯಲ್ಲಿ ಹೇಳಿಕೊಡುತ್ತವೆ. ಇವುಗಳು ಮಕ್ಕಳು ಶಾಲೆಯಲ್ಲಿ ಕಲಿಯುವ ಶಿಕ್ಷಣಕ್ಕೆ ಪೂರಕವಾಗಿರುತ್ತವೆ. ದೈಹಿಕ ಆರೋಗ್ಯ, ಮೋಟರ್ ಡೆವಲಪ್ ಮೆಂಟ್, ಭಾಷೆ, ಕೌಶಲ್ಯಗಳು, ಸ್ಟೆಮ್ ಸ್ಕಿಲ್ಸ್, ನಿರ್ಣಾಯಕ ಚಿಂತನೆಗಳು, ಸಾಮಾಜಿಕ ಮತ್ತು ಭಾವನಾತ್ಮಕ ಅಭಿವೃದ್ಧಿ, ಗ್ರಹಿಸುವಿಕೆ ಸೇರಿದಂತೆ ಇನ್ನಿತರೆ ವಿಚಾರಗಳಿಗೆ ಸಂಬಂಧಿಸಿದಂತೆ ಶಿಕ್ಷಣವನ್ನು ನೀಡಲಿವೆ.

ಸಾಮಾಜಿಕ ಅಂತರದ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಒತ್ತಾಯಪೂರ್ವಕವಾಗಿ ಮನೆಯಿಂದಲೇ ಕಲಿಯಬೇಕಾಗಿದೆ. ಸಾಂಪ್ರದಾಯಿಕ ಕಲಿಕಾ ಪರಿಸರದ ಗೈರು ಹಾಜರಿಯಲ್ಲಿ ಮಕ್ಕಳ ಕಲಿಕೆ ಮತ್ತು ಬೆಳವಣಿಗೆಯನ್ನು ಮುಂದುವರಿಸುವ ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಲು ಪೋಷಕರು ಹೋರಾಟ ಮಾಡುತ್ತಿದ್ದಾರೆ ಎಂದು HP ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಪ್ರಶಾಂತ್ ಜೈನ್ ಹೇಳಿದರು.
 
``ಈ ಹಿನ್ನೆಲೆಯಲ್ಲಿ ಎಚ್ ಪಿ ಲರ್ನ್ ಸೆಂಟರ್ ಬಲವಾದ, ಆಕರ್ಷಕವಾದ ಮತ್ತು ಅಂತರ್ಗತ ಕಂಟೆಂಟ್ ಅನ್ನು ಒದಗಿಸುವ ಮೂಲಕ ಪೋಷಕರು ಮತ್ತು ಮಕ್ಕಳಿಗೆ ಬೆಂಬಲವಾಗಿ ನಿಲ್ಲುವ ಪ್ರಯತ್ನವನ್ನು ನಡೆಸಿದೆ. ಇದನ್ನು ಶೈಕ್ಷಣಿಕ ತಜ್ಞರು ರೂಪಿಸಿದ್ದು, ವಿದ್ಯಾರ್ಥಿಗಳು ಹೊಸದಾದ ಮತ್ತು ಆಕರ್ಷಕವಾದ ಮತ್ತಷ್ಟು ಕಂಟೆಂಟ್ ಗಳನ್ನು ಪಡೆಯಲು ಪ್ರತಿ 30 ದಿನಗಳಿಗೊಮ್ಮೆ ಕಂಟೆಂಟ್ ಅನ್ನು ರೀಫ್ರೆಶ್ ಮಾಡಲಾಗುತ್ತದೆ’’ ಎಂದರು.

30 ದಿನಗಳ ವೇಳಾಪಟ್ಟಿಯ ನಂತರ ಪೋಷಕರು ತಮ್ಮ  ಮಕ್ಕಳಲ್ಲಿ ಅಭಿವ್ಯಕ್ತಿ, ಸೃಜನಶೀಲತೆ, ಸಂಖ್ಯಾಶಾಸ್ತ್ರ, ಸಾಮಾನ್ಯ ಅರಿವು, ಸಾಮಾಜಿಕ ಕೌಶಲ್ಯಗಳು, ವಿಮರ್ಶಾತ್ಮಕ ಚಿಂತನೆ, ಸ್ವಯಂ ಅರಿವು, ಸ್ವಯಂ ನಿರ್ವಹಣೆ, ಬಣ್ಣ, ಚಿತ್ರಕಲೆ, ಬರವಣಿಗೆ ಮತ್ತು ಇನ್ನಿತರೆ ಕೌಶಲ್ಯಗಳ ಸುಧಾರಣೆಯನ್ನು ನಿರೀಕ್ಷಿಸಬಹುದಾಗಿದೆ.

ಪ್ರಿಂಟ್ ಲರ್ನ್ ಸೆಂಟರ್ ನಲ್ಲಿ ನೋಂದಣಿ ಮಾಡುವ ಎಲ್ಲಾ ಬಳಕೆದಾರರಿಗೆ ಎಲ್ಲಾ ಪರಿಕರಗಳು ಸಂಪೂರ್ಣವಾಗಿ ಉಚಿತವಾಗಿ ದೊರೆಯಲಿವೆ ಮತ್ತು ಅನಿಯಮಿತವಾದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಲ್ಲದೇ, ವೆಬ್ ಸೈಟ್ ಜತೆಗೆ ಇಮೇಲ್ ಅಥವಾ ವಾಟ್ಸಪ್ ಮೂಲಕವೂ ಇತರೆ ಹಲವು ವಿಧಾನಗಳಿಂದಲೂ ವಿಚಾರಗಳನ್ನು ಪಡೆಯಬಹುದಾಗಿದೆ. ಬಳಕೆದಾರರು ಪೇಟಿಎಂ ಮಿನಿ  ಆ್ಯಪ್ ಸ್ಟೋರ್ ನಿಂದಲೂ ಕಂಟೆಂಟ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು  ಸಬ್ ಸ್ಕ್ರೈಬ್ ಮಾಡಬಹುದಾಗಿದೆ. 

click me!