Hidrate Spark: ಆ್ಯಪಲ್ ವಾಟರ್‌ ಬಾಟಲ್‌ ಲಾಂಚ್‌: ಈ ಬೆಲೆಗೆ ಮಿನಿ ಫ್ರಿಡ್ಜನ್ನೇ ಖರೀದಿಸಬಹುದು: ರೇಟ್‌ ಎಷ್ಟು ನೋಡಿ

By Suvarna News  |  First Published Apr 29, 2022, 3:47 PM IST

ಆಪಲ್ ಹೊಸ ವಾಟರ್ ಬಾಟಲ್ ಬಿಡುಗಡೆ ಮಾಡಿದೆ. ಇತರ ಆಪಲ್ ಉತ್ಪನ್ನಗಳಂತೆ, ಇದು ಕೂಡ ಪ್ರೀಮಿಯಂ ಬೆಲೆಯೊಂದಿಗೆ ಬರುತ್ತದೆ. ಇದಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈ ಬೆಲೆಯಲ್ಲಿ ನೀವು ಚಿಕ್ಕ ಫ್ರಿಜ್ ಖರೀದಿಸಬಹುದು.  ಹೊಸ ಆಪಲ್ ವಾಟರ್ ಬಾಟಲ್‌ನ ಡಿಟೇಲ್ಸ್‌ ಇಲ್ಲಿದೆ 


Apple Water Bottle: ತನ್ನ ಪ್ರೀಮಿಯಂ ಉತ್ಪನ್ನಗಳಿಗಾಗಿ ಟೆಕ್ ಕಂಪನಿ ಆಪಲ್‌ ಹೆಸರುವಾಸಿಯಾಗಿದೆ. ಇತ್ತೀಚೆಗೆ, ಕಂಪನಿಯು 1900 ರೂ. ಬೆಲೆಯಲ್ಲಿ ಪಾಲಿಶ್ ಮಾಡುವ ಬಟ್ಟೆಯನ್ನು ಬಿಡುಗಡೆ ಮಾಡಿತ್ತು. ಇದು ಸಾಮಾಜಿಕ ಜಲಾತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು ಹಾಗೂ ಆಪಲ್‌ನ ಈ ಉತ್ಪನಕ್ಕೆ  ಟೀಕೆ ಕೂಡ ವ್ಯಕ್ತವಾಗಿದ್ದವು. ಈಗ ಕಂಪನಿಯು ನೀರಿನ ಬಾಟಲಿಯೊಂದನ್ನು ಬಿಡುಗಡೆ ಮಾಡಿದೆ, ಇದರ ಬೆಲೆ ಕೇಳಿದರೆ ನೀವು ಶಾಕ್‌ ಆಗಬಹುದು. ಕಂಪನಿಯು ಪ್ರಸ್ತುತ ಈ ಉತ್ಪನ್ನವನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡಿದೆ, ಇದನ್ನು ಹೈಡ್ರೆಟ್‌ ಸ್ಪಾರ್ಕ್ ( Hidrate Spark) ಎಂದು ಹೆಸರಿಸಲಾಗಿದೆ.‌

ಬೆಲೆ ಎಷ್ಟು?: ಆಪಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೈಡ್ರೇಟ್ ಸ್ಪಾರ್ಕ್‌ ಪ್ರೋ ವಾಟರ್ ಬಾಟಲನ್ನು ಪಟ್ಟಿ ಮಾಡಲಾಗಿದೆ. ಇದರ ಚಿಲ್ಲರೆ ಬೆಲೆ $ 59.95 (ಸುಮಾರು ರೂ 4600). ಆದಾಗ್ಯೂ, ಇದು ಪ್ರಸ್ತುತ ಯುಎಸ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದೆ. ಸುಮಾರು 4600 ರೂಪಾಯಿ ಬೆಲೆ ಬಾಳುವ ಈ ನೀರಿನ ಬಾಟಲಿಯ ವಿಶೇಷತೆ ಏನಿರಬಹುದು ಎಂದು  ನೀವು ಯೋಚಿಸುತ್ತಿರಬಹುದು. ಇತರ ಆಪಲ್ ಉತ್ಪನ್ನಗಳಂತೆ ಈ ಬಾಟಲ್ ಕೂಡ ತುಂಬಾ ವಿಶೇಷವಾಗಿದೆ.

Tap to resize

Latest Videos

undefined

ಇದನ್ನೂ ಓದಿ: Screen ಸ್ವಚ್ಛಗೊಳಿಸುವ ದುಬಾರಿ ‌ಬಟ್ಟೆ ಬಿಡುಗಡೆ ಮಾಡಿದ Apple!

ವಾಸ್ತವವಾಗಿ, ಆಪಲ್ ಹೈಡ್ರೇಟ್ ಸ್ಪಾರ್ಕ್ ಸಾಮಾನ್ಯ ನೀರಿನ ಬಾಟಲಿಯಲ್ಲ, ಬದಲಿಗೆ ಸ್ಮಾರ್ಟ್ ವಾಟರ್ ಬಾಟಲ್ ಆಗಿದೆ. ಇದು ನಿಮ್ಮ ದೈನಂದಿನ ನೀರಿನ ಸೇವನೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದನ್ನು ನಿಮ್ಮ ಆಪಲ್ ಹೆಲ್ತ್‌ನೊಂದಿಗೆ (Apple Health) ಸಿಂಕ್ ಮಾಡುತ್ತದೆ.

ಐಫೋನ್‌ಗಳಂತೆ, ಈ ಬಾಟಲಿಯು ಎರಡು ರೂಪಾಂತರಗಳಲ್ಲಿ ಬರುತ್ತದೆ - ಹೈಡ್ರೇಟ್ ಸ್ಪಾರ್ಕ್ ಪ್ರೋ ಮತ್ತು ಹೈಡ್ರೇಟ್ ಸ್ಪಾರ್ಕ್ ಪ್ರೊ ಸ್ಟೀಲ್ ಇದರ ಬೆಲೆ ಕ್ರಮವಾಗಿ $ 59.95 ಮತ್ತು $ 79.95 (ಅಂದಾಜು ರೂ. 6,100). ಭಾರತದಲ್ಲಿ, ನೀವು ಇದೇ ಬೆಲೆಗೆ ಸಣ್ಣ ಫ್ರಿಡ್ಜನ್ನು ಖರೀದಿಸಬಹುದು.  Hisense ಕಂಪನಿಯ 44 ಲೀಟರ್ ಫ್ರಿಡ್ಜ  ಕೇವಲ ರೂ 6,990 ಬೆಲೆಯಲ್ಲಿ ಲಭ್ಯವಿದೆ ಮತ್ತು ಇದನ್ನು ರಿಯಾಯಿತಿಯೊಂದಿಗೆ ಖರೀದಿಸಿದರೆ ಇದರ ಬೆಲೆ ಇನ್ನು ಕಡಿಮೆಯಾಗುವು ಸಾಧ್ಯತೆ ಇದೆ. ಹೀಗಾಗಿ ಆಪಲ್‌ ವಾಟರ್‌ ಬಾಟಲ್‌ ಬೆಲೆಯಲ್ಲಿ ಮಿನಿ ಫ್ರಿಡ್ಜ್‌ವೊಂದನ್ನು ಖರೀದಿಸಬಹುದು. 

ವೈಶಿಷ್ಟ್ಯಗಳೇನು?: ಹೈಡ್ರೇಟ್ ಸ್ಪಾರ್ಕ್ ಪ್ರೋ  ಸ್ಟೀಲ್ ಬಾಟಲ್ ಸಿಲ್ವರ್ ಮತ್ತು ಬ್ಲ್ಯಾಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದರಲ್ಲಿ ಎಲ್ಇಡಿ ಸೆನ್ಸರನ್ನು ಕೆಳಭಾಗದಲ್ಲಿ ಇರಿಸಲಾಗಿದೆ,  ಇದು ನೀರಿನ ಸೇವನೆಯನ್ನು ಗ್ರಹಿಸುತ್ತದೆ ಮತ್ತು ಬ್ಲೂಟೂತ್ ಮೂಲಕ ಆಪಲ್‌ ಹೆಲ್ತ್ ಅಪ್ಲಿಕೇಶನನ್ನು ಅಲರ್ಟ್‌ ಮಾಡುತ್ತದೆ. ಹೈಡ್ರೇಟ್ ಸ್ಪಾರ್ಕ್ ಪ್ರೊ ಕಪ್ಪು ಮತ್ತು ಹಸಿರು ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.

ಇದನ್ನೂ ಓದಿಚಾರ್ಜರ್ ಇಲ್ಲದೆ ಐಫೋನ್ ಮಾರಾಟ ಮಾಡೋದು ಕಾನೂನು ಬಾಹಿರ ಎಂದ ಬ್ರೆಜಿಲ್ ಕೋರ್ಟ್!

ಈ ಬಾಟಲಿಯು ವ್ಯಾಕ್ಯೂಮ್‌ ಐಸೋಲೆಟೆಡ್‌ ಆಗಿರುವುದರಿಂದ, ಇದು 24 ಗಂಟೆಗಳವರೆಗೆ ನೀರನ್ನು ತಂಪಾಗಿರಿಸುತ್ತದೆ. ಇದರ ತೂಕ ಸುಮಾರು 910 ಗ್ರಾಂ. ಆದಾಗ್ಯೂ, ಈ ಬಾಟಲಿಯ ಡೇಟಾವನ್ನು ಪಡೆಯಲು, ನೀವು ಹೈಡ್ರೇಟ್ ಸ್ಪಾರ್ಕ್ ಅಪ್ಲಿಕೇಶನನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ, ಅದು ನಿಮ್ಮ ಆಪಲ್‌ ಹೇಲ್ತ್ ಡೇಟಾದೊಂದಿಗೆ ಸಿಂಕ್ ಮಾಡುತ್ತದೆ. ಈ ಅಪ್ಲಿಕೇಶನ್ ಸಂಪೂರ್ಣವಾಗಿ ಉಚಿತವಾಗಿದೆ.  ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯ ಹೊರಗೆ ಈ ಸಾಧನದ ಬಿಡುಗಡೆಯ ಕುರಿತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ.

click me!