ನವದೆಹಲಿ(ಏ.27): ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ ಖರೀದಿಸಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಖರೀದಿ ಬೆನ್ನಲ್ಲೇ ಟ್ವಿಟರ್‌ನಲ್ಲೂ ಹಲವು ಬದಲಾವಣೆಗಳಾಗುವ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿದೆ. ಇದರ ಬೆನ್ನಲ್ಲೇ ಯಾರು ಯಾವುದೇ ಸಂಸ್ಥೆ ಖರೀದಿಸದರೂ, ಮಾಲೀಕ ಬದಲಾದರೂ, ಸಂಸ್ಥೆಯೊಳಗೆ ಅದೇನೇ ಬದಲಾವಣೆಯಾದರೂ ಭಾರತದ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ರಸಿನಾ ಡೈಲಾಗ್ 2022 ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಮಾಲೀಕನ ಆಧಾರದಲ್ಲಿ ಭಾರತದಲ್ಲಿ ಕಾನೂನು ವಿನಾಯಿತಿ ಅಥವಾ ಮಾಲೀಕನ ಆಧಾರದಲ್ಲಿ ಕಾನೂನು ಬದಲಾಗುವುದಿಲ್ಲ. ಭಾರತದ ಕಾನೂನು ಹಾಗೂ ನಿಯಮ ಯಾರು ಯಾವ ಸಾಮಾಜಿಕ ಜಾಲತಾಣ ವೇದಿಕೆ ಹೊಂದಿದ್ದಾರೆ ಅನ್ನೋದರ ಕುರಿತಲ್ಲ. ಮುಕ್ತತೆ, ಸುರಕ್ಷತೆ, ನಂಬಿಕೆ, ಹೊಣೆಗಾರಿಕೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
undefined
Elon Musk Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್, 5 ಬದಲಾವಣೆ ಸಾಧ್ಯತೆ!
ಬಿಗ್ ಟೆಕ್, ರೆಡ್ ಟೆಕ್ ಹಾಗೂ ಡೀಪ್ ಟೆಕ್ ವಿಷದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ರಾಜೀವ್ ಚಂದ್ರಶೇಖರ್, ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ ವ್ಯಾಪ್ತಿ ವಿಸ್ತರಣೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂಭಾಷಣೆಯ ಅಗತ್ಯತೆ ಕುರಿತು ಮಾತನಾಡಿದರು.
ಅಲ್ಗಾರಿದಂ ಪಕ್ಷಪಾತ ಅಸ್ತಿತ್ವದಲ್ಲಿದೆ. ಪ್ಲಾಟ್‌ಫಾರ್ಮ್‌ಗಳು ಬಳಸುವ ಅಲ್ಗಾರಿದಮ್‌ಗಳ ಸುತ್ತ ಅಲ್ಗಾರಿದಮಿಕ್ ಹೊಣೆಗಾರಿಕೆ ಮತ್ತು ಪಾರದರ್ಶಕತೆಯ ರಚನೆಯನ್ನು ರಚಿಸುವತ್ತ ಕೆಲಸ ಮಾಡಬೇಕು ಎಂದರು.
ಭಾರತದಲ್ಲಿ ಕಳೆದ ವರ್ಷ ಟ್ವಿಟರ್ ಹಾಗೂ ಕೇಂದ್ರ ಸರ್ಕಾದ ನಡವೇ ಅತೀ ದೊಡ್ಡ ಸಮರವೇ ನಡೆದಿತ್ತು. ಅಂದು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ಅವರ ಟ್ವಿಟರ್ ಖಾತೆಯನ್ನೇ ಬ್ಲಾಕ್ ಮಾಡಲಾಗಿತ್ತು. 2021ರ ಐಟಿ ನಿಯಮ ಪಾಲನೆಗೆ ಮಾಡದ ಟ್ವಿಟರ್ ವಿರುದ್ಧ ಕ್ರಮಕ್ಕೆ ಕೇಂದ್ರ ಮುಂದಾಗಿತ್ತು. ಈ ಸಮರದಿಂದ ಭಾರತದಲ್ಲಿ ಟ್ವಿಟರ್ ಮೇಲಿನ ನಿಯಮ ಮತ್ತಷ್ಟು ಕಠಿಣ ಮಾಡಲಾಗಿದೆ. ಇದೀಗ ಟ್ವಿಟರ್ ಮಾಲೀಕತ್ವ ಬದಲಾದರೂ ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಅನ್ನೋದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಟ್ವಿಟರ್ ಮಾಲೀಕರಾದ ಮಸ್ಕ್, ಮತ್ತೆ ಸಕ್ರಿಯವಾಗುತ್ತಾ ಟ್ರಂಪ್ ಖಾತೆ? ಮಾಜಿ ಅಧ್ಯಕ್ಷ ಹೇಳಿದ್ದು ಹೀಗೆ
ಎಲಾನ್ ಮಸ್ಕ್‌ಗೆ ಶುಭ ಕೋರಿದ ಆರ್‌ಸಿ
ವಿಶ್ವದ ಪ್ರಭಾವಿ ಸಾಮಾಜಿಕ ಜಾಲತಾಣವಾಗಿರುವ ಟ್ವೀಟರ್ ಅನ್ನು ಖರೀದಿಸಿದ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್‌್ಕ ಅವರಿಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಶುಭ ಹಾರೈಸಿದ್ದಾರೆ. ಇದು ಈ ಖರೀದಿ ಪ್ರಕ್ರಿಯೆ ಕುರಿತು ಕೇಂದ್ರ ಸರ್ಕಾರ ನೀಡಿದ ಮೊದಲ ಪ್ರತಿಕ್ರಿಯೆಯಾಗಿದೆ. ‘ಮಸ್‌್ಕ ಅವರಿಗೆ ಶುಭಾಶಯಗಳು. ಹೊಣೆಗಾರಿಕೆ, ಸುರಕ್ಷತೆ, ವಿಶ್ವಾಸದ ಗುರಿ ಹಾಗೂ ನಿರೀಕ್ಷೆಯಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ’ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ತನ್ಮೂಲಕ ಈಗಿರುವ ನಿಯಮ ಪಾಲಿಸಬೇಕಾಗುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ..
ಟ್ವೀಟರ್‌ನಲ್ಲಿ ಎಲಾನ್ ಮಸ್‌್ಕ ಶೇ.9.1ರಷ್ಟುಷೇರುಗಳನ್ನು ಹೊಂದಿದ್ದರು. ತನ್ಮೂಲಕ ಆ ಕಂಪನಿಯ ಅತಿದೊಡ್ಡ ಷೇರುದಾರ ಆಗಿದ್ದರು. ಈ ನಡುವೆ, ಇಡೀ ಕಂಪನಿಯನ್ನೇ ಖರೀದಿಸುವ ಸಲುವಾಗಿ ಅವರು ಟ್ವೀಟರ್‌ಗೆ ಆಫರ್ ನೀಡಿದ್ದರು. ಶೇ.91ರಷ್ಟುಷೇರುಗಳನ್ನು ತಲಾ 4150 ರು.ನಂತೆ ಖರೀದಿಸುವುದಾಗಿ ಹೇಳಿದ್ದರು. ಇದೀಗ ನಿರಂತರ ಮಾತುಕತೆ ನಡೆದು, ಮಸ್‌್ಕ ಹೇಳಿದ ದರಕ್ಕೆ ಕಂಪನಿ ಮಾರಾಟ ಮಾಡಲು ಟ್ವೀಟರ್ ಒಪ್ಪಿದೆ. ಈ ಮೂಲಕ ಒಟ್ಟು . 3.3 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ವೇದಿಕೆಯನ್ನು ಮಸ್ಕ್ ಖರೀದಿಸಿದ್ದಾರೆ.