ಜುಲೈ 1, 2021 ರ ನಂತರ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೆ ಗಗನ್ ಉಪಕರಣಗಳನ್ನು ಅಳವಡಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಆದೇಶ ಹೊರಡಿಸಿದೆ.
ನವದೆಹಲಿ (ಏ. 29): ಇಂಡಿಗೋ ಸ್ಥಳೀಯ ನ್ಯಾವಿಗೇಷನ್ ಸಿಸ್ಟಮ್ ಗಗನನ್ನು ಬಳಸಿಕೊಂಡು ವಿಮಾನವನ್ನು ಲ್ಯಾಂಡ್ ಮಾಡಿದ ದೇಶದ ಮೊದಲ ವಿಮಾನಯಾನ ಸಂಸ್ಥೆಯಾಗಿದೆ. ಎಟಿಆರ್-72 ವಿಮಾನವನ್ನು ಬಳಸಿ ಹಾರಾಟ ನಡೆಸಲಾಗಿದ್ದು ಬುಧವಾರ ಬೆಳಿಗ್ಗೆ ರಾಜಸ್ಥಾನದ ಕಿಶನ್‌ಗಢ ವಿಮಾನ ನಿಲ್ದಾಣದಲ್ಲಿ ಜಿಪಿಎಸ್ ನೆರವಿನ ಜಿಯೋ-ಆಗ್ಮೆಂಟೆಡ್ ನ್ಯಾವಿಗೇಷನ್ (Gagan) ಬಳಸಿ ವಿಮಾನ ಲ್ಯಾಂಡ್ ಮಾಡಲಾಗಿದೆ.
ಈ ನ್ಯಾವೆಗೇಷನ್ ಸಿಸ್ಟಮನ್ನು ಸೆಂಟರ್-ರನ್ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜಂಟಿಯಾಗಿ ಅಭಿವೃದ್ಧಿಪಡಿಸಿದೆ ಎಂದು ಇಂಡಿಗೋ ಹೊರಡಿಸಿದ ಹೇಳಿಕೆ ತಿಳಿಸಿದೆ.
undefined
ವಿಮಾನವು ಲ್ಯಾಂಡಿಂಗ್‌ಗಾಗಿ ರನ್‌ವೇಯನ್ನು ಸಮೀಪಿಸಿದಾಗ ಪಾರ್ಶ್ವ ಮತ್ತು ಲಂಬ ಮಾರ್ಗದರ್ಶನವನ್ನು ಒದಗಿಸಲು ಗಗನನ್ನು ಬಳಸಲಾಗುತ್ತದೆ. ಉಪಕರಣ ಲ್ಯಾಂಡಿಂಗ್ ಸಿಸ್ಟಮ್ (ILS) ಸ್ಥಾಪಿಸದ ಸಣ್ಣ ವಿಮಾನ ನಿಲ್ದಾಣಗಳಲ್ಲಿ ಇದರ ನಿಖರತೆಯು ವಿಶೇಷವಾಗಿ ಉಪಯುಕ್ತವಾಗಿದೆ.
ಇದನ್ನೂ ಓದಿ: ಚಂದ್ರಯಾನ-3 ಮಿಷನ್ ಮೊದಲ ನೋಟ ಬಹಿರಂಗ, ಈ ವರ್ಷದ ಆಗಸ್ಟ್‌ನಲ್ಲಿ ಚಾಲನೆ
"ಭಾರತದ ನಾಗರಿಕ ವಿಮಾನಯಾನ ವಲಯದಲ್ಲಿ, ಗಗನ್ ವಾಯುಪ್ರದೇಶವನ್ನು ಆಧುನೀಕರಿಸುವಲ್ಲಿ ಸಹಾಯ ಮಾಡುತ್ತದೆ, ವಿಮಾನ ವಿಳಂಬವನ್ನು ಕಡಿಮೆ ಮಾಡುತ್ತದೆ, ಇಂಧನ ಉಳಿತಾಯ ಮತ್ತು ವಿಮಾನ ಸುರಕ್ಷತೆಯನ್ನು ಸುಧಾರಿಸುತ್ತದೆ" ಎಂದು ಹೇಳಿಕೆ ತಿಳಿಸಿದೆ.
ಜುಲೈ 1, 2021 ರ ನಂತರ ಭಾರತದಲ್ಲಿ ನೋಂದಾಯಿಸಲಾದ ಎಲ್ಲಾ ವಿಮಾನಗಳಿಗೆ ಗಗನ್ ಉಪಕರಣಗಳನ್ನು ಅಳವಡಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಆದೇಶ ಹೊರಡಿಸಿದೆ.