ಜಿ-ಮೇಲ್ ಹೊಸ ಫೀಚರ್ ಸೆಟ್ ಮಾಡಿಕೊಂಡ್ರೆ ಏನ್ ಲಾಭ?

Suvarna News   | Asianet News
Published : Feb 01, 2021, 05:30 PM IST
ಜಿ-ಮೇಲ್ ಹೊಸ ಫೀಚರ್ ಸೆಟ್ ಮಾಡಿಕೊಂಡ್ರೆ ಏನ್ ಲಾಭ?

ಸಾರಾಂಶ

ಜಿ-ಮೇಲ್ ತನ್ನ ಹೊಸ ಫೀಚರ್‌ಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಮತ್ತಷ್ಟು ಉತ್ತಮ ಅನುಭವವನ್ನು ನೀಡಲು ಹೊರಟಿದೆ. ಸದ್ಯ ಈ ನೂತನ ಫೀಚರ್‌ಗಳನ್ನು ಸಾರ್ವಜನಿಕ ಮುಕ್ತವಾಗಿ ಬಿಡಲಾಗಿಲ್ಲವಾದರೂ ಬೇಕಿದ್ದರೆ ನೀವು ಸೆಟ್ಟಿಂಗ್ಸ್‌ನಲ್ಲಿ ಅವುಗಳನ್ನು ಅಳವಡಿಸಿಕೊಂಡು ಒಂದು ಕೈ ನೋಡುವ ಅವಕಾಶವನ್ನು ಗೂಗಲ್‌ನ ಜಿ-ಮೇಲ್ ಮಾಡಿಕೊಟ್ಟಿದೆ. ಹಾಗಿದ್ದರೆ ನೂತನ ಫೀಚರ್ ಪಡೆಯಲು ನೀವು ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ಮಾಹಿತಿ…

ಜಿ-ಮೇಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇಂದು ಪ್ರತಿಯೊಂದಕ್ಕೂ ಜಿ-ಮೇಲ್ ಬೇಕೇ ಬೇಕು ಅನ್ನುವಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ನಮ್ಮ ಪ್ರತಿ ವ್ಯಾವಹಾರಿಕ ಚಟುವಟಿಕೆಯೂ ಇದರೊಂದಿಗೆ ಆರಂಭವಾಗುತ್ತದೆ ಎಂದರೆ ತಪ್ಪಿಲ್ಲ. ಖಂಡಿತವಾಗಿಯೂ ವೈಯುಕ್ತಿಕ ಬಳಕೆಗೂ ಇದು ಉಪಯೋಗವಾಗುತ್ತಿದೆ. ಆದರೆ, ವ್ಯಾವಹಾರಿಕ ಬಳಕೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಒಂದು ಸ್ಮಾರ್ಟ್ ಫೋನ್ ಬಳಸಬೇಕೆಂದಿದ್ದರೂ ಜಿ-ಮೇಲ್ ಬೇಕೇ ಬೇಕು. ಆ ಮೂಲಕ ನಾವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಹೊಸ ಹೊಸ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಜಿ-ಮೇಲ್ ನಮ್ಮೊಳಗೆ ಆವರಿಸಿದೆ. ಇಲ್ಲಿ ವಿಷಯ ಅದಲ್ಲ, ಜಿ-ಮೇಲ್ ನ ಫೀಚರ್‌ನದ್ದಾಗಿದೆ.

ಜಿ-ಮೇಲ್ ಪ್ರಾರಂಭದಿಂದ ಇಲ್ಲಿಯವರೆಗೂ ಅನೇಕ ಉತ್ತಮ ಫೀಚರ್ ಗಳನ್ನು ಒದಗಿಸುತ್ತಾ ಬಂದಿದೆ. ಆ ಮೂಲಕ ಬಳಕೆದಾರ ಸ್ನೇಹಿಯಾಗಿ ಮಾರ್ಪಟ್ಟಿದೆ. ಅನೇಕ ಅನುಕೂಲಗಳನ್ನು ಕಲ್ಪಿಸುವ ಮೂಲಕ ಬಹಳಷ್ಟು ಕೆಲಸಗಳನ್ನು ಸುಲಭಗೊಳಿಸಿಯೂ ಇದೆ. ಇದೀಗ ಜಿ-ಮೇಲ್ ತನ್ನ ಹೊಸ ಫೀಚರ್ ಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಮತ್ತಷ್ಟು ಉತ್ತಮ ಅನುಭವವನ್ನು ನೀಡಲು ಹೊರಟಿದೆ.
 
ಇದನ್ನು ಓದಿ: ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್! 

ಇಷ್ಟಾದರೂ ತಕ್ಷಣಕ್ಕೇ ಗೂಗಲ್ ತನ್ನ ಜಿ-ಮೇಲ್‌ನ ಈ ಹೊಸ ಫೀಚರ್ ಅನ್ನು ಸಾರ್ವಜನಿಕ ಬಳಕೆ ಮುಕ್ತ ಮಾಡುತ್ತಿಲ್ಲ. ಇದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಮೊದಲಿಗೆ ಪರೀಕ್ಷಾರ್ಥವಾಗಿ ಬಳಕೆಗೆ ಬಿಟ್ಟು ನಂತರದಲ್ಲಿ ಪರಿಚಯಿಸಲು ನಿರ್ಧರಿಸಿದೆ. ಹಾಗಾದರೆ, ನೀವು ಈಗಲೇ ಈ ಫೀಚರ್‌ಗಳನ್ನು ಅಳವಡಿಸಿಕೊಳ್ಳಲು ಆಗುವುದಿಲ್ಲವೇ ಎಂಬ ಪ್ರಶ್ನೆ ಕಾಡುವುದು ಸಹಜ. ಖಂಡಿತವಾಗಿಯೂ ನೀವು ಬಳಸಬಹುದು. ಈಗಲೇ ನೂತನ ಫೀಚರ್ ಅನ್ನು ಬಳಸಬೇಕೆಂದಿದ್ದರೆ ಹೀಗೆ ಮಾಡಿ…

1. ಮೊದಲಿಗೆ ಜಿ-ಮೇಲ್ ತೆರೆಯಿರಿ
ಮೊದಲಿಗೆ ಜಿ-ಮೇಲ್ ಅನ್ನು ಸೈನ್ ಇನ್ ಆಗಬೇಕು. ಒಮ್ಮೆ ಜಿ-ಮೇಲ್ ನ ನಿಮ್ಮ ಖಾತೆಯ ಪುಟವನ್ನು ತೆರೆದ ನಂತರ ಸೆಟ್ಟಿಂಗ್ಸ್‌ನತ್ತ ಹೋಗಬೇಕು.

2. ಜಿ-ಮೇಲ್ ಪುಟದ ಮೇಲ್ಭಾಗದ ಬಲಬದಿಗೆ ಇರುವ ಸೆಟ್ಟಿಂಗ್ಸ್‌ನತ್ತ ಹೋಗಿ ಅದನ್ನು ಕ್ಲಿಕ್ ಮಾಡಬೇಕು. 

ಇದನ್ನು ಓದಿ: ಫೆ.4ಕ್ಕೆ ರಿಯಲ್‌ಮಿ X7 5G ಬಿಡುಗಡೆ; ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್? 

3. ಹೀಗೆ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಿದ ಬಳಿಕ ಅಲ್ಲಿ ಕಾಣುವ ಆಲ್ ಸೆಟ್ಟಿಂಗ್ಸ್ ಅನ್ನು ಕ್ಲಿಕ್ ಮಾಡಬೇಕು.

4. ಆಲ್ ಸೆಟ್ಟಿಂಗ್ಸ್ ವಿಭಾಗದಲ್ಲಿ ಕಾಣುವ General (ಜನರಲ್) ನ ಕೆಳಗೆ ಸ್ಕ್ರೋಲ್ ಮಾಡಿದರೆ ಎಕ್ಸ್ ಪಿರಿಮೆಂಟಲ್ ಆ್ಯಕ್ಸಸ್ (Experimental access) ಆಯ್ಕೆ ಸಿಗುತ್ತದೆ. 

5. ಅಲ್ಲಿರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ Experimental access ಅನ್ನು ಸಕ್ರಿಯಗೊಳಿಸಬೇಕು. 

6. ಹೀಗೆ Experimental access ಅನ್ನು ಸಕ್ರಿಯಗೊಳಿಸಿದ ಬಳಿಕ ಆ ಪುಟದಲ್ಲಿ ಕೊನೆಯಲ್ಲಿ ಇರುವ Save Changes ಆಯ್ಕೆ ಮೇಲೆ ಕ್ಲಿಕ್ ಮಾಡುವ ಮೂಲಕ ಇದುವರೆಗೆ ಮಾಡಿದ ಬದಲಾವಣೆಗಳಿಗೆ ಒಪ್ಪಿಗೆ ಮುದ್ರೆಯನ್ನು ಒಪ್ಪಿಗೆ ಕೊಡಿ. 
 

ಈ ಎಲ್ಲ ಆಯ್ಕೆಗಳನ್ನು ನೀವು ಮೊಬೈಲ್ ನಲ್ಲಿ ಸಹಿತ ಯಾವುದೇ ಡಿವೈಸ್‌ನಲ್ಲಿ ಮಾಡಬಹುದಾಗಿದೆ. ಆದರೆ, ಇದರ ಬಳಕೆ ಮಾತ್ರ ಮೊಬೈಲ್‌ನಲ್ಲಿ ಸದ್ಯಕ್ಕೆ ಸಿಗುವುದಿಲ್ಲ. ಸದ್ಯಕ್ಕೆ ಈ ಪ್ರಾಯೋಗಿಕ ನೂತನ ಫೀಚರ್‌ಗಳು ಡೆಸ್ಕ್‌ಟಾಪ್ ಬಳಕೆದಾರರಿಗೆ ಅಂದರೆ ಡೆಸ್ಕ್‌ಟಾಪ್ ಬಳಸುವಾಗ ಮಾತ್ರ ಸಿಗುತ್ತದೆ. 

ಇದನ್ನು ಓದಿ: ಏರ್‌ಟೆಲ್‌ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ : ಬರಲಿದೆ 5ಜಿ ತಂತ್ರಜ್ಞಾನ 

ಇದಲ್ಲದೆ, ನೂತನ ಫೀಚರ್‌ಗಳನ್ನು ಬಳಸುವಾಗ ಅದು ಇಷ್ಟವಾಗದಿದ್ದರೆ, ಅಥವಾ ಹಿಂದಿನ ಫೀಚರ್‌ಗೇ ಹೋಗಬೇಕೆಂದಿದ್ದರೆ ಇಲ್ಲವೇ, ಈ ಫೀಚರ್‌ಗಳಲ್ಲಿ ಕೆಲವು ಬೇಡವೆಂದಾದರೆ ನಿಮಗೆ ಅವುಗಳನ್ನು ಬದಲಾವಣೆ ಮಾಡಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿದೆ. 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್