ಆನ್‌ಲೈನ್ ಕ್ಲಾಸ್‌ಗಳಿಂದ ವಿಸ್ತಾರ ಸ್ಕ್ರೀನ್ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ಗೆ ಬೇಡಿಕೆ; ಸಮೀಕ್ಷೆ ವರದಿ!

By Suvarna News  |  First Published Jan 23, 2021, 11:02 PM IST

ಕೊರೋನಾ ವಕ್ಕರಿಸಿದ ಬಳಿಕ ಆನ್‌ಲೈನ್ ಕ್ಲಾಸ್, ಇ ಲರ್ನಿಂಗ್, ಸೇರಿದಂತೆ ಹಲವು  ಡಿಜಿಟಲ್ ಸರ್ವೀಸ್ ಹೆಚ್ಚಾಗಿದೆ. ಹೀಗಾಗಿ ಲ್ಯಾಪ್‌‍ಟಾಪ್, ಟ್ಯಾಬ್ಲೆಟ್, ಮೊಬೈಲ್ ಗಳಲ್ಲಿ ಯಾವುದಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಕುರಿತು ಸಮೀಕ್ಷಾ ವರದಿ ಪ್ರಕಟಗೊಂಡಿದೆ.


ಬೆಂಗಳೂರು(ಜ.23) ಶಾಲೆಗಳು ಆನ್ ಲೈನ್ ಶಿಕ್ಷಣ ನೀಡುತ್ತಿರುವುದು ಮತ್ತು ಇ-ಲರ್ನಿಂಗ್ ಅವಕಾಶಗಳು ಹೆಚ್ಚಾಗುತ್ತಿರುವ ಜತೆಯಲ್ಲಿ ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯೆಗಳನ್ನು ಮತ್ತಷ್ಟು ಅರ್ಥಗರ್ಭಿತ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ತಮ್ಮ ಶಿಕ್ಷಣದ ಅಗತ್ಯತೆಗಳನ್ನು ನವೀಕರಿಸಲಾರಂಭಿಸಿದ್ದಾರೆ. ಇದರ ಪರಿಣಾಮ ಇತರೆ ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ವಿಸ್ತಾರವಾದ ಸ್ಕ್ರೀನ್ ನ ಲ್ಯಾಪ್ ಟಾಪ್ ಗಳು  ಮತ್ತು ಟ್ಯಾಬ್ ಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ.

ನಿವೃತ್ತ ಸೇನಾ ಯೋಧರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗವಕಾಶ!

Tap to resize

Latest Videos

undefined

ಭಾರತೀಯ ದೇಶೀಯ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ನ ಸರ್ಚ್ ಒಳನೋಟಗಳ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಲ್ಯಾಪ್ ಟಾಪ್ ಗಳು ಮತ್ತು ಟ್ಯಾಬ್ಲೆಟ್ ಗಳಿಗೆ ಭಾರೀ ಬೇಡಿಕೆ ಬರುತ್ತಿದೆ. ಲಾಕ್ ಡೌನ್ ಪೂರ್ವ ಮತ್ತು ನಂತರದ ಅವಧಿಯಲ್ಲಿ ಲ್ಯಾಪ್ ಟಾಪ್ ಗಳಿಗೆ ಶೇ.200 ಮತ್ತು ಟ್ಯಾಬ್ಲೆಟ್ ಗಳಿಗೆ ಶೇ.90 ರಷ್ಟು ಬೇಡಿಕೆ ಹೆಚ್ಚಾಗಿದೆ. ಇದಲ್ಲದೇ, ವಿಸ್ತಾರವಾದ ಸ್ಕ್ರೀನ್ ನ ಟ್ಯಾಬ್ಲೆಟ್ ಗಳಿಗೆ ಡಿಸೆಂಬರ್ 2020 ರೊಂದರಲ್ಲೇ ಬೇಡಿಕೆಯು ಶೇ.2 ರಿಂದ ಶೇ.11 ಕ್ಕೇರಿದೆ. ಇದರಲ್ಲಿ ಪ್ರಮುಖವಾಗಿ 10 ಇಂಚುಗಳ ಟ್ಯಾಬ್ಲೆಟ್ ಗಳಿಗೆ ಬೇಡಿಕೆ ಬಂದಿದೆ. ಗ್ರಾಹಕರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಈ ಹಿಂದೆ 8 ಇಂಚುಗಳ ಟ್ಯಾಬ್ಲೆಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ದೊಡ್ಡ ಸ್ಕ್ರೀನ್ ನ ಟ್ಯಾಬ್ಲೆಟ್ ಗಳನ್ನು ಬಯಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಹೆಚ್ಚು ಸಮಯವನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಉತ್ತಮ ಮತ್ತು ಅನುಕೂಲಕರವಾದ ದೃಶ್ಯಾವಳಿಗಾಗಿ ಈ ದೊಡ್ಡ ಸ್ಕ್ರೀನ್ ನ ಟ್ಯಾಬ್ಲೆಟ್ ಗಳನ್ನು ಬಯಸುತ್ತಿದ್ದಾರೆ. ಫ್ಲಿಪ್ ಕಾರ್ಟ್ ಅವಲೋಕನ ಮಾಡಿದ ಇನ್ನಷ್ಟು ಅಂಶಗಳಲ್ಲಿ ಪ್ರಮುಖವಾಗಿ ಕಂಡು ಬಂದ ವಿಚಾರವೆಂದರೆ ಇನ್ನಷ್ಟು ಉತ್ತಮ ಅನುಭವಕ್ಕಾಗಿ ಗ್ರಾಹಕರು ದೊಡ್ಡ ಸ್ಕ್ರೀನ್ ಗಳ ಲ್ಯಾಪ್ ಟಾಪ್ ಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಗ್ರಾಹಕರ ಅನುಭವವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ತನ್ನ ಪ್ಲಾಟ್ ಫಾರ್ಮ್ ನಲ್ಲಿ ಜನವರಿ 24 ರಂದು ವಿಶ್ವ ಶಿಕ್ಷಣ ದಿನಾಚರಣೆ ಸಂದರ್ಭದಲ್ಲಿ ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಮತ್ತು ಐಟಿ ಆಧಾರಿತ ಸಾಧನಗಳಾದ್ಯಂತ ಕ್ಯುರೇಟೆಡ್ ಕೊಡುಗೆಗಳನ್ನು ರಚಿಸಿದೆ ಮತ್ತು ಅದನ್ನು ಸುಲಭಗೊಳಿಸುವ ದಿಸೆಯಲ್ಲಿ ವಿದ್ಯಾರ್ಥಿ ಕ್ಲಬ್ ಕಾರ್ಯಕ್ರಮದಂತಹ ಉಪಕ್ರಮಗಳನ್ನು ಆರಂಭಿಸಿದೆ. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಕಲಿಕಾ ಸಾಮಗ್ರಿಗಳನ್ನು ಕೈಗೆಟುಕುವ ರೀತಿಯಲ್ಲಿ ಪ್ರವೇಶಿಸಲು ಸಾಧ್ಯವಾಗಲಿದೆ.

ಸ್ವದೇಶಿ ಇ-ಕಾಮರ್ಸ್ ಮಾರುಕಟ್ಟೆಯಾಗಿ ಫ್ಲಿಪ್ ಕಾರ್ಟ್ ಗ್ರಾಹಕರ ಬಗ್ಗೆ ಸೂಕ್ಷ್ಮವಾದ ತಿಳುವಳಿಕೆಯನ್ನು ಹೊಂದಿದೆ ಹಾಗೂ ಅವರ ವಿಕಾಸದ ಅಗತ್ಯತೆಗಳನ್ನು ಪೂರೈಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಬರುತ್ತದೆ. ಗ್ರಾಹಕರಿಗೆ ಕೆಲಸ ಮತ್ತು ಕಲಿಕೆಯ ಚಟುವಟಿಕೆಗಳಿಗೆ ಉತ್ತಮವಾದ ಉತ್ಪನ್ನಗಳನ್ನು ತರಲು ನಾವು ನಮ್ಮ ಬ್ರ್ಯಾಂಡ್ ಪಾಲುದಾರರೊಂದಿಗೆ ಕ್ಯುರೇಟೆಡ್ ಆಯ್ಕೆಯನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು, ರೂಟರ್ ಗಳಂತಹ ಕಲಿಕಾ ಅಗತ್ಯತೆಗಳಿಗೆ ಬೇಡಿಕೆ ಪ್ರಮಾಣವು ಕಳೆದ ಒಂದು ವರ್ಷದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಗ್ರಾಹಕರು ತಮ್ಮ ಕಲಿಕಾ ಅನುಭವವನ್ನು ಹೆಚ್ಚಿಸಿಕೊಳ್ಳಲು ವಿಸ್ತಾರವಾದ ಸ್ಕ್ರೀನ್ ನ ಕಂಪ್ಯೂಟಿಂಗ್ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಕಾರ್ಯಕ್ಷಮತೆಯಂತೆ ಅನುಭವವು ಸಮಾನವಾದ ಪ್ರಾಮುಖ್ಯತೆಯನ್ನು ಪಡೆಯುತ್ತಿರುವ ಕಂಪ್ಯೂಟಿಂಗ್ ಉತ್ಪನ್ನಗಳ ಮಾರುಕಟ್ಟೆಯ ವಿಕಾಸಕ್ಕೆ ಒಂದು ಪುರಾವೆಯಾಗಿದೆ ಎಂದು  ಫ್ಲಿಪ್ ಕಾರ್ಟ್ ನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ನಿರ್ದೇಶಕ ರಾಕೇಶ್ ಕೃಷ್ಣನ್ ಹೇಳಿದರು.
 

click me!