ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು!

By Suvarna News  |  First Published Jan 25, 2021, 9:18 AM IST

ದೇಶದ ಬಹುದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಹಲವು ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಷ್ಕರಿಸಿದೆ. ಈ ಪೈಕಿ ರೂ.11 ಆಡ್ ಆನ್ ಪ್ಲ್ಯಾನ್‌ಗ್ರಾಹಕರಿಗೆ 1 ಜಿಬಿ ಡೇಟಾ ಸಿಗಲಿದೆ. ಇಷ್ಟು ಮಾತ್ರವಲ್ಲದೇ ಇನೂ ಹಲವು ಪ್ಲ್ಯಾನ್‌ಗಳನ್ನು ಪರಿಷ್ಕರಿಸಲಾಗಿದೆ.


ರಿಲಯನ್ಸ್ ಕಂಪನಿಯು ಜಿಯೋ ಹೊಸ ಆಡ್ ಆನ್ ಪ್ಲ್ಯಾನ್ ಅನ್ನು ಪರಿಷ್ಕರಿಸಿದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು 11 ರೂಪಾಯಿಗೆ 1 ಜಿಬಿ ಡೇಟಾ ಪಡೆದುಕೊಳ್ಳಬಹುದು. ಈ  ಪ್ಲ್ಯಾನ್‌ ನಿಮಗೆ 11 ರೂಪಾಯಿಗೆ 1 ಜಿಬಿ ಡೇಟಾ ನೀಡುತ್ತದೆ ಮತ್ತು ಡೇಟಾ ಅವಧಿ ಮುಗಿದ ನಂತರ ಡೇಟಾ ಸ್ಪೀಡ್ 64ಕೆಬಿಪಿಎಸ್‌ಗೆ ಇಳಿಕೆಯಾಗುತ್ತದೆ. ಇದೇ ಪ್ಲ್ಯಾನ್ ಅನ್ನು ಕಂಪನಿ 400 ಎಂಬಿ ಡೇಟಾದೊಂದಿಗೆ ಪರಿಚಯಿಸಿತ್ತು. ಆ ಬಳಿಕ ಈ ಪ್ಲ್ಯಾನ್ ಪರಿಷ್ಕರಿಸಿ ಡೇಟಾ ಮಿತಿಯನ್ನು 800 ಎಂಬಿಗೆ ಹೆಚ್ಚಿಸಲಾಯಿತು. ಇದೀಗ ಮತ್ತೆ ಅದನ್ನು ಮತ್ತೆ ಪರಿಷ್ಕರಿಸಲಾಗಿದೆ. ಈ ಪ್ಲ್ಯಾನ್ ಬೇಸ್ ಪ್ರೀಪೇಡ್ ಪ್ಲ್ಯಾನ್ ಮುಗಿಯೋವರೆಗೂ  ಇರುತ್ತದೆ.

Mi Notebook 14 (IC) ಬಿಡುಗಡೆ, ಬೆಲೆ ಎಷ್ಟಿದೆ ಗೊತ್ತಾ?

Tap to resize

Latest Videos

undefined

ಇದರ ಜೊತೆಗೆ 51 ರೂಪಾಯಿಯ ಪ್ರಿಪೀಡ್ ಆಡ್ ಆನ್ ಪ್ಲ್ಯಾನ್ ಹೊಂದಿದ್ದು, 6 ಜಿಬಿ ಡೇಟಾ ಆಫರ್ ನೀಡುತ್ತದೆ ಮತ್ತು 101 ಪ್ಲ್ಯಾನ್‌ನಲ್ಲಿ ಒಟ್ಟು 12 ಜಿಬಿ ಡೇಟಾ ದೊರೆಯಲಿದೆ. 21 ಜಿಯೋ ಪ್ರಿಪೀಡ್ ಪ್ಲ್ಯಾನ್  ಇದ್ದು, 2 ಜಿಬಿ ಡೇಟಾ ಆಫರ್ ನೀಡಲಾಗುತ್ತದೆ. ಈ ಎಲ್ಲ ಪ್ಲ್ಯಾನ್‌ಗಳು ಆಯಾ ಪ್ಲ್ಯಾನ್‌ಗಳ ಬೇಸ್ ಪ್ರೀಪೇಡ್ ಪ್ಲ್ಯಾನ್‌ ಮೇಲೆ ಅವಲಂಬಿತವಾಗಿದೆ.

ಒಂದು ವೇಳೆ 30 ಜಿಬಿ ಡೇಟಾ ಬೇಕಿದ್ದರೆ 151 ಜಿಯೋ ವರ್ಕ್ ಫ್ರಮ್ ಹೋಮ್(ಡಬ್ಲ್ಯೂಎಫ್ಎಚ್) ಪ್ಯಾಕ್ ಪಡೆದುಕೊಳ್ಳಬಹುದು. ಈ ಪ್ಲ್ಯಾನ್ ವ್ಯಾಲಿಡಿಟಿ 30 ದಿನಗಳದ್ದಾಗಿರುತ್ತದೆ. ಇದೇ ವೇಳೆ, 201 ರೂ. ಡಬ್ಲೂಎಫ್‌ಎಚ್ ಪ್ಲ್ಯಾನ್ ನಿಮಗೆ 40 ಜಿಬಿ ಡೇಟಾ ಒದಗಿಸುತ್ತದೆ .ಮತ್ತು 251 ರೂ. ಪ್ಲ್ಯಾನ್‌ನಲ್ಲಿ 50 ಜಿಬಿ ಡೇಟಾ ಆಫರ್ ಮಾಡಲಾಗುತ್ತದೆ. ಈ ಎರಡೂ ಪ್ಲ್ಯಾನ್‌ಗಳು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ. ವರ್ಕ್ ಫ್ರಮ್ ಹೋಮ್ ಕೆಲಸ ಮಾಡೋರಿಗೆ ಈ ಪ್ಲ್ಯಾನ್‌ಗಳು ಹೆಚ್ಚು ಉಪಯುಕ್ತವಾಗಿವೆ.

ಒಪ್ಪೋ ರೆನೋ 5 ಪ್ರೋ 5ಜಿ ಬಿಡುಗಡೆ; ಸಿಕ್ಕಾಪಟ್ಟೆ ಕ್ಯಾಶ್‌ಬ್ಯಾಕ್, ಖರೀದಿಸಿ ಈಗಲೇ!

ಮೂರನೇ ತ್ರೈಮಾಸಿಕದಲ್ಲಿ 2.51 ಕೋಟಿ ಗ್ರಾಹಕರು!
ದೇಶದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಡಿಸೆಂಬರ್ 31ಕ್ಕೆ ಮುಕ್ತಾಯವಾದ ತ್ರೈಮಾಸಿಕದಲ್ಲಿ ಒಟ್ಟು 2.51 ಕೋಟಿ ಗ್ರಾಹಕರನ್ನು ಒಳಗೊಂಡಿದೆ. ಕಂಪನಿ ಜನವರಿ 1ರಿದಂಲೇ ಎಲ್ಲ ದೇಶಿ ಕರೆಗಳನ್ನು ಉಚಿತಗೊಳಿಸಿದೆ.  ಕಂಪನಿ ಶೇ.15.5ರಷ್ಟು ನಿವ್ವಳ ಲಾಭವನ್ನು ಪಡೆದುಕೊಂಡಿದೆ. ಜಿಯೋ ದೇಶದಲ್ಲಿ ಅತಿದೊಡ್ಡ ಟೆಲಿಕಾಂ ಆಪರೇಟರ್ ಕಂಪನಿಯಾಗಿದ್ದು, ಮೂರನೇ ತ್ರೈಮಾಸಿಕದಲ್ಲಿ ಅದರ ಚಂದಾದಾರರ ಸಂಖ್ಯೆ2.51 ಕೋಟಿಗೆ ಏರಿಕೆಯಾಗಿದೆ. ಲಾಕ್‌ಡೌನ್ ನಿಯಮಗಳನ್ನು ಸರಳಗೊಳಿಸಿದ ಪರಿಣಾಮ ಸ್ಟಾರ್ಟ್‌ಫೋನ್‌ ಮಾರಾಟವೂ ಹೆಚ್ಚಳವಾದ್ದರಿಂದ ಚಂದಾದಾರ ಸಂಖ್ಯೆಯೂ ಏರಿಕೆಯಾಗಲು ಕಾರಣವಾಗಿದೆ. 2020ರ ವರ್ಷದಲ್ಲಿ ಒಟ್ಟು 4 ಕೋಟಿ ಚಂದಾದಾರ ಜಿಯೋ ನೆಟ್ವರ್ಕ್ ಸೇರಿಕೊಂಡಿದ್ದಾರೆ. ಇದು ದೇಶದಲ್ಲಿ ಅತಿ ಹೆಚ್ಚು ಎಂದು ಕಂಪನಿ ಹೇಳಿಕೊಂಡಿದೆ.

ಏರ್ಟೆಲ್ ಪ್ಲ್ಯಾನ್ ಪರಿಷ್ಕರಣೆ
ಇದೇ ವೇಳೆ, ಜಿಯೋ ಪ್ರತಿಸ್ಪರ್ಧಿಯಾಗಿರುವ ಏರ್‌ಟೆಲ್ ಕೂಡ 78 ರೂ. ಡೇಟಾ ಪ್ಯಾಕ್ ಹೊಂದಿದ್ದು, 5ಜಿಬಿ ಡೇಟಾ ಒದಗಿಸುತ್ತದೆ.  ಈ ಆಡ್ ಆನ್ ಪ್ಲ್ಯಾನ್ ಆಫರ್, ಮೂಲ ಪ್ಲ್ಯಾನ್ ವ್ಯಾಲಿಡಿಟಿ ಮುಗಿಯುವರೆಗೂ ಇರುತ್ತದೆ. ಒಮ್ಮೆ 5 ಜಿಬಿ ಡೇಟಾ ಮುಗಿಯಿತು ಎಂದರೆ ಗ್ರಾಹಕರು ನಂತರ ಬಳಸುವ ಪ್ರತಿ ಎಂಬಿಗೆ 50 ಪೈಸೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಪ್ಲ್ಯಾನ್‌ನಲ್ಲಿ ಏರ್ಟೆಲ್ ಚಂದಾದಾರಿಗೆ ವ್ಯಾಂಕ್ ಪ್ರೀಮಿಯಂ ಸಬ್ಸ್‌ಕ್ಪಿಪ್ಷನ್ ಕೂಡ ಒದಗಿಸುತ್ತದೆ. 20 ದಿನಗಳ ವ್ಯಾಲಿಡಿಟಿ ಮತ್ತು 3 ಜಿಬಿ ಡೇಟಾ ಒದಗಿಸುವ ರೂ.48 ಪ್ಲ್ಯಾನ್ ಕೂಡ ಇದ್ದು ಬಳಕೆದಾರರು ಖರೀದಿಸಬಹುದಾಗಿದೆ. ಇದೇ ವೇಳೆ, ರೂ.98 ಪ್ಲ್ಯಾನ್‌ನಲ್ಲಿ 12 ಜಿಬಿ ಡೇಟಾವನ್ನು ಆಫರ್ ಮಾಡಲಾಗುತ್ತದೆ.

3,999 ರೂ. ಏರ್ಟೆಲ್ ಎಕ್ಸ್‌ಟ್ರೀಮ್ ಪ್ಲ್ಯಾನ್‌ನಲ್ಲಿ 1 ಜಿಬಿಪಿಎಸ್ ವೈ ಫೈ ರೂಟರ್!

click me!