ಫೇಸ್‌ಬುಕ್‌ನಲ್ಲಿ ಮಹತ್ತರ ಬದಲಾವಣೆ, ಈ ವಿಷಯ ಇದ್ದರೆ ಡಿಲೀಟ್ ಆಗಲಿದೆ ಮಾಹಿತಿ!

By Suvarna News  |  First Published Dec 1, 2022, 7:52 PM IST

ಫೇಸ್‌ಬುಕ್ ಕಾಲಕ್ಕೆ ತಕ್ಕಂತೆ ತನ್ನ ನೀತಿ ನಿಯಮಗಳನ್ನು ಬದಲಿಸುತ್ತಾ ಬಂದಿದೆ. ಇದೀಗ ಭಾರಿ ಬದಲಾವಣೆ ಮಾಡಿದೆ. ಡಿಸೆಂಬರ್ 1 ರಿಂದ ಫೇಸ್‌ಬುಕ್ ನೂತನ ನಿಯಮ ಜಾರಿಗೆ ಬಂದಿದೆ. ಈ ನಿಯಮದ ಪ್ರಕಾರ ನಿಮ್ಮ ಖಾತೆಯಲ್ಲಿ ಧರ್ಮ, ರಾಜಕೀಯ ಸೇರಿದಂತೆ ಕೆಲ ವಿಷಗಳನ್ನು ನಿರ್ಬಂಧಿಸಿದೆ. 
 


ನವದೆಹಲಿ(ಡಿ.01): ಉದ್ಯೋಗ ಕಡಿತದ ಮೂಲಕ ಉದ್ಯೋಗಿಗಳಿಗೆ ಇತ್ತೀಚೆಗೆ ಶಾಕ್ ನೀಡಿದ್ದ ಮೆಟಾ ಇದೀಗ ಫೇಸ್‌ಬುಕ್ ಬಳಕೆದಾರರಿಗೆ ಶಾಕ್ ನೀಡಿದೆ. ಮೆಟಾ ಒಡೆತನ ಫೇಸ್‌ಬುಕ್‌ನಲ್ಲಿ ಡಿಸೆಂಬರ್ 1 ರಿಂದ ಮಹತ್ತರ ಬದಲಾವಣೆಯಾಗಿದೆ. ಫೇಸ್‌ಬುಕ್ ಫ್ರೊಫೈಲ್‌ನಿಂದ ಧಾರ್ಮಿಕ, ರಾಜಕೀಯ,  ಲೈಂಗಿಕ ಆಸಕ್ತಿ ಕೆರಳಿಸುವ ಹಾಗೂ ಸೂಚಿಸುವ, ವಿಳಾಸಗಳನ್ನು ಸೂಚಿಸುವ ವಿಷಯಗಳನ್ನು ತೆಗೆದುಹಾಕಲಿದೆ. ಹೀಗಾಗಿ ಫೇಸ್‌ಬುಕ್ ಬಳಕೆದಾರರ ಖಾತೆ ಪ್ರೋಫೈಲ್‌ನಲ್ಲಿ ಈ ವಿಷಯಗಳನ್ನು ಉಲ್ಲೇಖಿಸಿದ್ದರೆ, ಆಟೋಮ್ಯಾಟಿಕ್ ಆಗಿ ಈ ವಿಷಯಗಳು ಹಾಗೂ ಮಾಹಿತಿಗಳು ಡಿಲೀಟ್ ಆಗಲಿದೆ. ಸಾಮಾಜಿಕ ಜಾಲತಾಣದ ಪ್ರಮುಖ ವೇದಿಕೆಯಾಗಿರುವ ಫೇಸ್‌ಬುಕ್ ಬಳಕೆದಾರರ ಸುಲಲಿತ ಹಾಗೂ ಅಡೆ ತಡೆ ಇಲ್ಲದ ಬಳಕೆಗಾಗಿ ಹೊಸ ನಿಯಮ ಜಾರಿಗೆ ತಂದಿದೆ.

ಫೇಸ್‌ಬುಕ್ ಫ್ರೊಫೈಲ್ ಬಯೋದಲ್ಲಿ ಈ ವಿಷಗಳನ್ನು ಬಹುತೇಕರು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಈ ವಿಷಗಳ ಕಾಲಂ ಖಾಲಿ ಬಿಟ್ಟ ಉದಾಹರಣೆ ಕಡಿಮೆ. ಫ್ರೊಫೈಲ್ ಬಯೋದಲ್ಲಿ ಬಳಕೆದಾರರ ಆಸಕ್ತಿಕ ವಿಷಗಳನ್ನು ಹಂಚಿಕೊಳ್ಳಲು ಅವಕಾಶವಿತ್ತು. ಉದಾಹರಣೆಗೆ ರಾಜಕೀಯ ವಿಶ್ಲೇಷಕ, ಧಾರ್ಮಿಕ ಚಿಂತಕ, ಧಾರ್ಮಿಕ ವೀಕ್ಷಣೆ, ತಮ್ಮ ತಮ್ಮ ಆಸಕ್ತಿ ವಿಷಗಳನ್ನು ಉಲ್ಲೇಖಿಸಲು ಅವಕಾಶ ನೀಡಲಾಗಿತ್ತು. ಇನ್ಮುಂದೆ ಈ ಬಯೋ ಫೇಸ್‌ಬುಕ್ ತೆಗೆದು ಹಾಕಲಿದೆ. ಇದು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲಿದೆ.

Tap to resize

Latest Videos

undefined

ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್‌ ಅಧಿಕೃತ! 

ಹೀಗೆ ಫ್ರೊಫೈಲ್ ಬಯೋದಲ್ಲಿನ ಮಾಹಿತಿ ಆಟೋಮ್ಯಾಟಿಕ್ ಆಗಿ ಡಿಲೀಟ್ ಆದರೆ, ಇದರಿಂದ ಬಳಕೆದಾರರ ಫೇಸ್‌ಬುಕ್ ಖಾತೆಗೆ ಯಾವುದೇ ಸಮಸ್ಯೆ ಇಲ್ಲ. ಖಾತೆಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ. ಕೇವಲ ಬಯೋ ಡಿಟೇಲ್ಸ್ ಡಿಲೀಟ್ ಆಗಲಿದೆ. ಇದರಿಂದ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಫೇಸ್‌ಬುಕ್ ಬಳಕೆಗೆ ಅವಕಾಶ ಸಿಗಲಿದೆ ಎಂದು ಮೆಟಾ ಹೇಳಿದೆ.

ಫೇಸ್‌ಬುಕ್‌ನ್ ಫ್ರೋಫೈಲ್‌ನಲ್ಲಿರುವ ಅಬೌಟ್ ಯು , ಇಂಟ್ರೆಸ್ಟೆಡ್ ಇನ್, ರಿಲಿಜಿಯಸ್ ವಿವ್ಯೂ ಕಾಲಂಗಳಿವೆ. ಇಲ್ಲಿ ಬಳಕೆದಾರರು ತಮ್ಮ ತಮ್ಮ ಆಸಕ್ತಿಕರ ವಿಚಾರಗಳನ್ನು ಹಾಕಲು ಅವಕಾಶವಿತ್ತು. ಆದರೆ ಇನ್ಮುಂದೆ ಸಾಧ್ಯವಿಲ್ಲ. ಈ ಆಯ್ಕೆ ಲಭ್ಯವಿರುವುದಿಲ್ಲ. ಈಗಾಗಲೇ ಬಯೋ ಹಾಕಿರುವ ಬಳಕೆದಾರರ ಮಾಹಿತಿಗಳು ಡಿಲೀಟ್ ಆಗಲಿದೆ.

 

Meta ಕಂಪನಿಯ Q3 ಲಾಭ ಶೇ. 52 ರಷ್ಟು ಕುಸಿತ, ಆದಾಯವೂ ಡೌನ್..!

 ಫೇಸ್‌ಬುಕ್‌ನಿಂದ ಒಂದೇ ಬಾರಿ 11000 ಸಿಬ್ಬಂದಿ ವಜಾ
ಅಮೆರಿಕ ಮೂಲದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಮಾತೃಸಂಸ್ಥೆಯಾದ ಮೆಟಾ, ಬುಧವಾರ ಒಂದೇ ಬಾರಿಗೆ 11000 ಜನರನ್ನು ಉದ್ಯೋಗದಿಂದ ಕಿತ್ತು ಹಾಕಿದೆ. ಅಂದರೆ ಒಟ್ಟಾರೆ ಇರುವ 87000 ಸಿಬ್ಬಂದಿಗಳ ಪೈಕಿ ಶೇ.13ರಷ್ಟುಸಿಬ್ಬಂದಿಯನ್ನು ಒಂದೇ ಬಾರಿಗೆ ತೆಗೆದು ಹಾಕಲಾಗಿದೆ. ಅಮೆರಿಕ ಮೂಲದ ಮತ್ತೊಂದು ಸಾಮಾಜಿಕ ಜಾಲತಾಣ ಟ್ವೀಟರ್‌, ತನ್ನ ಶೇ.7500 ಸಿಬ್ಬಂದಿ ಪೈಕಿ ಶೆ.50ರಷ್ಟುಅಂದರೆ 3500 ಜನರನ್ನು ಕಿತ್ತುಹಾಕಿದ ಬೆನ್ನಲ್ಲೇ ಮೆಟಾ ಕೂಡಾ ಇಂಥ ಕಠಿಣ ನಿರ್ಧಾರ ಪ್ರಕಟಿಸಿದೆ. ಕೋವಿಡ್‌ ಸಾಂಕ್ರಾಮಿಕ ಮುಗಿದ ಮೇಲೂ ಉತ್ತಮ ಬೆಳವಣಿಗೆಯ ಆಶಾವಾದದಲ್ಲಿ ನಾವು ಹೆಚ್ಚಿನ ನೇಮಕಾತಿ ಮಾಡಿಕೊಂಡಿದ್ದೆವು. ದುರದೃಷ್ಟವಶಾತ್‌ ಅದು ನಾವು ಅಂದುಕೊಂಡ ಹಾಗೆ ಆಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ 11000 ಸಿಬ್ಬಂದಿಗಳನ್ನು ತೆಗೆಯುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮೆಟಾದ ಮುಖ್ಯಸ್ಥ ಮಾರ್ಕ್ ಜುಕರ್‌ಬಗ್‌ರ್‍ ತಮ್ಮ ಸಿಬ್ಬಂದಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
 

click me!