ಸೈಬರ್‌ನ್ಯೂಸ್ (Cybernews) ವೆಬ್‌ಸೈಟ್ ಪ್ರಕಟಿಸಿರುವ ವರದಿ ಅನ್ವಯ ಅನಾಮಧೇಯ ಹ್ಯಾಕರ್ ಒಬ್ಬ ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ಗಳ ಸಮುದಾಯದ ವೇದಿಕೆಯೊಂದರಲ್ಲಿ ಅತ್ಯಂತ ಅಗ್ಗದ ದರಕ್ಕೆ ಮಾರಾಟಕ್ಕೆ ಇಟ್ಟಿದ್ದಾನೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿ ದುರುಪಯೋಗದ ಆತಂಕ ಸೃಷ್ಟಿಸಿದೆ.
ನ್ಯೂಯಾರ್ಕ್: 60 ಲಕ್ಷ ಭಾರತೀಯರದ್ದೂ (Indians) ಸೇರಿದಂತೆ ಜಗತ್ತಿನಾದ್ಯಂತ ಇರುವ 50 ಕೋಟಿ ವಾಟ್ಸಪ್ ಬಳಕೆದಾರರ (WhatsApp Users) ಮೊಬೈಲ್ ಸಂಖ್ಯೆ (Mobile Numbers) ಸೇರಿದಂತೆ ವಾಟ್ಸಪ್ (WhatsApp) ಮಾಹಿತಿಗಳನ್ನು ಹ್ಯಾಕ್ (Hack) ಮಾಡಿ, ಅದನ್ನು ಮಾರಾಟಕ್ಕೆ (Sale) ಇಡಲಾಗಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇದು ಸಾಮಾಜಿಕ ಜಾಲತಾಣ (Social Media) ಬಳಕೆದಾರರ ಖಾಸಗಿತನದ ಕುರಿತ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸೈಬರ್‌ನ್ಯೂಸ್ (Cybernews) ವೆಬ್‌ಸೈಟ್ ಪ್ರಕಟಿಸಿರುವ ವರದಿ ಅನ್ವಯ ಅನಾಮಧೇಯ ಹ್ಯಾಕರ್ ಒಬ್ಬ ಭಾರತ ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕರ್‌ಗಳ ಸಮುದಾಯದ ವೇದಿಕೆಯೊಂದರಲ್ಲಿ ಅತ್ಯಂತ ಅಗ್ಗದ ದರಕ್ಕೆ ಮಾರಾಟಕ್ಕೆ ಇಟ್ಟಿದ್ದಾನೆ. ಇದು ಬಳಕೆದಾರರ ವೈಯಕ್ತಿಕ ಮಾಹಿತಿ ದುರುಪಯೋಗದ ಆತಂಕ ಸೃಷ್ಟಿಸಿದೆ.
ಯಾರಿಗೆ ಹೆಚ್ಚು ಹಾನಿ?: 84 ದೇಶಗಳ ಪೈಕಿ ಈಜಿಪ್ಟ್ ಜನರ ಅತಿ ಹೆಚ್ಚು (4.5 ಕೋಟಿ) ಮಾಹಿತಿ ಸೋರಿಕೆಯಾಗಿದೆ. ಉಳಿದಂತೆ ಇಟಲಿ (3.5 ಕೋಟಿ) ಮತ್ತು ಅಮೆರಿಕದ (3.2 ಕೋಟಿ) ಜನರ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ. ಇನ್ನು 60 ಲಕ್ಷ ಭಾರತೀಯ ಬಳಕೆದಾರರ ಮಾಹಿತಿಯೂ ಸೋರಿಕೆಯಾಗಿದೆ ಎಂದು ಸೈಬರ್‌ನ್ಯೂಸ್ ವರದಿ ತಿಳಿಸಿದೆ.
undefined
ಇದನ್ನು ಓದಿ: 18ರ ಪೋರನಿಂದ Uber ಡೇಟಾ ಹ್ಯಾಕ್, ಜೋಕ್ ಎಂದು ಸುಮ್ಮನಿದ್ದ ಉದ್ಯೋಗಿಗಳಿಗೆ ಶಾಕ್!
ಎಷ್ಟಕ್ಕೆ ಮಾರಾಟ?:
ವಿವಿಧ ದೇಶಗಳ ಬಳಕೆದಾರರ ಡೇಟಾಗಾಗಿ ಹ್ಯಾಕರ್ ಬೆಲೆಯನ್ನು ನಿಗದಿಪಡಿಸಿದ್ದಾನೆ. ಅಮೆರಿಕದ ಬಳಕೆದಾರರ ಡೇಟಾಗಾಗಿ 5.61 ಲಕ್ಷ ರೂ., ಬ್ರಿಟನ್‌ನ ಹಾಗೂ ಜರ್ಮನಿಯ ಡೇಟಾಗಾಗಿ ಕ್ರಮವಾಗಿ 1.61 ಲಕ್ಷ ರೂ. ಹಾಗೂ 2.04 ಲಕ್ಷ ರೂ. ನಿಗದಿಪಡಿಸಿದ್ದಾನೆ.
ಕಳವು ಹೇಗೆ?:
ವಾಟ್ಸಪ್ ಬಳಕೆದಾರರ ಮಾಹಿತಿಯನ್ನು ಸ್ಕ್ರಾಪಿಂಗ್ ಮೂಲಕ ಅಂದರೆ ವಿವಿಧ ವೆಬ್‌ಸೈಟ್‌ಗಳ ಮೂಲಕ ಕದಿಯಲಾಗಿದೆ. ವೆಬ್‌ಸೈಟ್‌ಗಳು ತಮ್ಮ ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ದಾಖಲು ಮಾಡಿಟ್ಟುಕೊಂಡಿರುತ್ತವೆ. ಅದಕ್ಕೆ ಹ್ಯಾಕರ್ ಕನ್ನ ಹಾಕಿದ್ದಾನೆ. ಹ್ಯಾಕ್ ಮಾಡಲಾದ ಎಲ್ಲಾ ಸಂಖ್ಯೆಗಳೂ ಸಕ್ರಿಯ ವಾಟ್ಸಪ್ ನಂಬರ್‌ಗಳಾಗಿವೆ ಎಂದು ಇವುಗಳನ್ನು ಮಾರಾಟಕ್ಕಿಟ್ಟ ವ್ಯಕ್ತಿ ಖಚಿತಪಡಿಸಿದ್ದಾನೆ.
ಇದನ್ನೂ ಓದಿ: 28 ಕೋಟಿ ಭಾರತೀಯರ ಪಿಎಫ್ ಡೇಟಾ ಲೀಕ್, ಯುಎಎನ್, ಆಧಾರ್ ಮಾಹಿತಿ ಬಹಿರಂಗ!
ಸುರಕ್ಷತೆ ಹೇಗೆ?:
ಅಪರಿಚಿತ ನಂಬರ್‌ನಿಂದ ನಿಮ್ಮ ವಾಟ್ಸಪ್‌ಗೆ ಯಾವುದೇ ವೆಬ್‌ಸೈಟ್ ಲಿಂಕ್ ಬಂದಿದ್ದರೆ ಅವುಗಳನ್ನು ಕ್ಲಿಕ್ ಮಾಡಬಾರದು ಹಾಗೂ ಅವರೊಂದಿಗೆ ಮಾತುಕತೆ ನಡೆಸಬಾರದು. ಈ ವಿಧಾನವನ್ನೇ ಬಳಸಿ ಹ್ಯಾಕರ್‌ಗಳು ಮಾಲ್‌ವೇರ್ ಕಳಿಸಿ ದೂರದಿಂದಲೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗೆ ರಿಮೋಟ್ ಎಕ್ಸೆಸ್ ಪಡೆದುಕೊಳ್ಳುತ್ತಾರೆ. ಹೀಗಾಗಿ ಇಂತಹ ಸ್ಪ್ಯಾಮ್ ಹಾಗೂ ಫಿಶಿಂಗ್‌ಗೆ ಬಲಿಯಾಗದೇ ಎಚ್ಚರದಿಂದಿರಲು ಸೂಚಿಸಲಾಗಿದೆ.
ಇದನ್ನೂ ಓದಿ: Data Protection Bill: ದತ್ತಾಂಶ ಸೋರಿಕೆ ಆದರೆ 500 ಕೋಟಿ ರೂ. ದಂಡ..!