Weekly Horoscope: ಸಿಂಹಕ್ಕೆ ಈ ವಾರ ಆರೋಗ್ಯ ಸಮಸ್ಯೆ, ಮಕರಕ್ಕೆ ಮಾನಭಂಗ

By Suvarna News  |  First Published Apr 10, 2022, 5:31 AM IST

ತಾರೀಖು 10ರಿಂದ 16 ಏಪ್ರಿಲ್‌ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ


ಮೇಷ(Aries): ಬದುಕಿನಲ್ಲಿ ಏಳುಬೀಳುಗಳು ಸಹಜ. ಇದರಲ್ಲಿ ಅದೃಷ್ಟ(Luck)ದ ಪಾಲಿರುವಷ್ಟೇ ನಮ್ಮ ಪಾಲೂ ಇರುತ್ತದೆ. ಈ ಮಾತಿನಲ್ಲಿ ಗಮನವಿಟ್ಟು ಅದೃಷ್ಟಕ್ಕೆ ಕಾಯದೇ ನಿಮ್ಮ ಕೆಲಸವನ್ನು ಮಾಡಿ. ಅತಿಯಾದ ಆತ್ಮವಿಶ್ವಾಸದಿಂದ ಸಾಲ ಮಾಡಿದರೆ ನಿಮಗೇ ಹೊರೆ. ಹಣ ಸ್ವಲ್ಪ ಕೈಗೆ ಬರುತ್ತಿದೆ ಅನ್ನುವಾಗ ಖರ್ಚು ಮಾಡಿದರೆ ನಾಳೆ ನಿಮಗೇ ಸಮಸ್ಯೆ. ವಿಷಯವನ್ನು ವೈಭವೀಕರಿಸದೇ ಇದ್ದ ಹಾಗೆ ನೋಡಲು ಪ್ರಯತ್ನಿಸಿ, ಶುಭವಾಗುವುದು. 

ವೃಷಭ(Taurus): ನೀವು ಹೂಡಿಕೆ(investment) ಮಾಡುವಾಗ ಎಚ್ಚರ ಇರೋದು ಅವಶ್ಯಕ. ನಾವಾಯ್ತು, ನಮ್ಮ ಕೆಲಸ ಆಯ್ತು ಅಂತಿದ್ರೆ ಏನೂ ಸಮಸ್ಯೆ ಆಗಲ್ಲ. ಬದಲಿಗೆ ಅನಾವಶ್ಯಕವಾಗಿ ಬೇರೆಡೆ ಮೂಗು ತೂರಿಸಿದರೆ ಸಮಸ್ಯೆ ಆಗಬಹುದು. ಖರೀದಿಯಲ್ಲಿ ಹಿಡಿತ ಇರಲಿ. ವೃಥಾ ಖರ್ಚಿನಿಂದ ನಾಳೆ ಬೇಜಾರು ಪಡುವ ಹಾಗಾಗದೇ ಇರಲಿ. ಮನೆಯಲ್ಲಿ ಶುಭ ಕಾರ್ಯ ನಡೆಯಲಿವೆ. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಿ. ಉದ್ಯೋಗದಲ್ಲಿ ಉತ್ತಮ ಫಲಗಳಿವೆ. 

Tap to resize

Latest Videos

ಮಿಥುನ(Gemini): ಆ ದಾರಿ ಉತ್ತಮವಾ, ಈ ದಾರಿಯಲ್ಲಿ ಹೋದರೆ ಹೆಚ್ಚು ಒಳ್ಳೆಯದಾಗಬಹುದಾ ಅನ್ನುವ ಥರದ ಯೋಚನೆಗಳಿಂದ ಸಮಯ ವ್ಯರ್ಥ ಆಗಬಹುದೇ ವಿನಾಃ ಹೆಚ್ಚು ಪ್ರಯೋಜನ ಆಗದು. ಒಂದು ವಿಚಾರಕ್ಕೆ  ಸರಿಯಾಗಿ ನಡೆದುಕೊಳ್ಳಿ. ನಿರೀಕ್ಷಿಸದ ಲಾಭಗಳು ಈ ಸಲ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಉದ್ಯೋಗದಲ್ಲಿ ಅನಿರೀಕ್ಷಿತ ಬಡ್ತಿ ಸಿಗಬಹುದು. ಮನೆ ನಿರ್ಮಾಣಕ್ಕೆ ಮುಂದಾಗುವಿರಿ. ದೂರ ಪ್ರಯಾಣದ ಸಾಧ್ಯತೆ.

ಬುಧ ಗೋಚಾರ 2022: ಕಟಕ, ಕನ್ಯಾ ಸೇರಿ ಈ ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ!

ಕಟಕ(Cancer): ಹಿಂದೆ ಬಹಳ ಶ್ರಮ ಪಟ್ಟಿದ್ದೀರಿ. ಅದಕ್ಕೆ ಇದೀಗ ಪ್ರತಿಫಲ ಸಿಗಲಿದೆ. ಪ್ರತಿಫಲ ದೊರೆಯುವ ಸಮಯ ಇದು. ಈ ವಾರ ಅಥವಾ ಈ ತಿಂಗಳಲ್ಲಿ ದೂರ ಪ್ರಯಾಣ, ವಿದೇಶ ಪ್ರಯಾಣದ ಸಾಧ್ಯತೆ ಇದೆ. ಆದರೆ ಅಲ್ಲಿ ಮುನ್ನಚ್ಚರಿಕೆಯಿಂದ ವ್ಯವಹರಿಸದಿದ್ದರೆ ಸಮಸ್ಯೆಗೆ ಸಿಲುಕುವಿರಿ. ಆರೋಗ್ಯ(Health)ದ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಂಗಾತಿ ಜತೆ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ವಿದ್ಯಾರ್ಥಿಗಳಿಗೆ ಮಿಶ್ರ ಫಲ. 

ಸಿಂಹ(Leo): ಆರೋಗ್ಯ ಒಂದಿದ್ರೆ ಲೈಫಲ್ಲಿ ಏನು ಬೇಕಾದರೂ ಮಾಡಬಹುದು ಅಂತ ನಿಮಗೀಗ ಅನಿಸಬಹುದು. ಏಕೆಂದರೆ ಈ ವಾರ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಅದೇ ರೀತಿ ಇನ್ನೊಬ್ಬರ ಮಾತನ್ನ ಎಷ್ಟು ಬೇಕೋ ಅಷ್ಟೇ ಕೇಳ್ಬೇಕು ಅನ್ನೋ ಮಾತಿನ ಅರ್ಥವೂ ಆಗಲಿದೆ. ಇನ್ನೊಬ್ಬರ ಮಾತು ಕೇಳಿ ಹಣ ಹೂಡಿ ಕಂಗಾಲಾಗುವ ಸ್ಥಿತಿ ಬರೋ ಸಾಧ್ಯತೆ. ಮೊದಲೇ ಎಚ್ಚರಿಕೆಯಿಂದಿರಿ. ನಾಲಗೆ ಕಂಟ್ರೋಲಲ್ಲಿದ್ದಷ್ಟೂ ಒಳ್ಳೆಯದು. 

ಕನ್ಯಾ(Virgo): ಮದುವೆ ಆಗೋ ಆಸೆ ಇದೆ, ಆದರೆ ಅದಾಗದೇ ಕೂಡಿಬಂದರೆ ಚೆನ್ನಾಗಿರುತ್ತಿತ್ತು ಅಂತ ಮಂಡಿಗೆ ತಿಂತಿದ್ರೆ ಈ ವಾರ ನೀವಂದುಕೊಂಡಿದ್ದು ಈಡೇರಲಿದೆ. ವಿದೇಶಿ ವ್ಯವಹಾರ, ಓದು, ಅಲ್ಲಿ ಒಂದಿಷ್ಟು ಸಮಯ ಇದ್ದು ಬರಬೇಕು ಅನ್ನೋ ಆಸೆಗಳೆಲ್ಲ ಇಂದಲ್ಲ ನಾಳೆ ಪೂರ್ಣವಾಗುವ ಸೂಚನೆ ಇದೆ. ಕೆಲವು ಹೇಳಿಕೊಳ್ಳಲಾಗದ ನೋವುಗಳು ಕಾಡಬಹುದು. ದೈಹಿಕ ಸಮಸ್ಯೆ ಕಿರಿಕಿರಿ ಹೆಚ್ಚಿಸಲಿದೆ. ಉದ್ಯೋಗದಲ್ಲಿ ಉನ್ನತಿ. 

ಆಲಿಯಾ ಭಟ್- ರಣಬೀರ್ ಕಪೂರ್ ವೈವಾಹಿಕ ಜೀವನ ಹೇಗಿರಲಿದೆ? ಜ್ಯೋತಿಷ್ಯ ಏನನ್ನುತ್ತದೆ?

ತುಲಾ(Libra): ನಂಗಿಂತ ಚಿಕ್ಕೋರು ನಂಗೆ ರೆಸ್ಪೆಕ್ಟ್ ಕೊಡ್ಬೇಕು, ನಾನವ್ರ ಜೊತೆ ಹೇಗಿದ್ರೂ ನಡಿಯುತ್ತೆ ಅಂದ್ಕೊಂಡರೆ ಅವಮಾನ ಆಗೋದು ನಿಮಗೇ. ಚಿಕ್ಕ ವಯಸ್ಸಿನವರ ಜೊತೆಗೆ ಅವಮಾನ ಮಾಡಿಸಿಕೊಳ್ಳಬೇಕಾ ಅಂತ ಯೋಚನೆ ಮಾಡಿ ಮಾತನಾಡಿ. ಕೆಲಸದ ಜಾಗದಲ್ಲಿ ಬಿಂದಾಸ್ ಆಗಿರುತ್ತೀರಿ. ಆದರೆ ನೀವು ಗಂಡಸಾಗಿದ್ದರೆ ಹೆಂಗಸರಿಂದ ಹೆಂಗಸಾಗಿದ್ದರೆ ಗಂಡಸರಿಂದ ಕೆಟ್ಟ ಹೆಸರು ಬರಬಹುದು. ಖರ್ಚಿಗೆ ತಕ್ಕಷ್ಟು ಹಣಕ್ಕೆ ಕೊರತೆ ಆಗಲ್ಲ.

ವೃಶ್ಚಿಕ(Scorpio): ನಿಮ್ಮಿಷ್ಟದ ವಸ್ತುಗಳಿಗೆ ನೀವು ಎಷ್ಟು ಖರ್ಚು ಮಾಡಲೂ ಹಿಂದೆ ಮುಂದೆ ನೋಡುವವರಲ್ಲ. ಈಗೇನೋ ಇಂಥದ್ದಕ್ಕೆ ಧಾರಾಳ ಖರ್ಚು ಮಾಡೋವಷ್ಟು ಹಣ ಇರುತ್ತದೆ. ಹಾಗಂತ ಖರ್ಚು ಮಾಡಿದರೆ ನಾಳೆ ತಲೆ ಮೇಲೆ ಕೈ ಹೊತ್ತು ಕೂರಬೇಕಾದವರು ನೀವೇ. ಮನೆ ಕಟ್ಟುವುದು, ಮನೆಯ ನವೀಕರಣ, ಕಾರು ಖರೀದಿ ಇಂಥಾದ್ದು ಈ ವಾರ ಅಥವಾ ಈ ತಿಂಗಳಲ್ಲಿ ಆಗಬಹುದು. ಮಾತು ನಿಯಂತ್ರಣದಲ್ಲಿರಲಿ. 

ಧನುಸ್ಸು(Sagittarius): ಮಕ್ಕಳ ಆರೋಗ್ಯ, ಸಹವಾಸ, ಶಿಕ್ಷಣ, ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸಬೇಕಾಗಬಹುದು. ಉನ್ನತ ವಿದ್ಯಾಭ್ಯಾಸ ಮಾಡಬೇಕು ಅಂದುಕೊಂಡರೆ ಈಗ ಆ ಕಾಲ ಬಂದಿದೆ, ಮುಂದುವರಿಯಿರಿ. ಅನಿರೀಕ್ಷಿತವಾಗಿ ಹಣದ ಹರಿವು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ನಿಮಗೆ ಇಷ್ಟು ಸಮಯ ಗೌರವ ನೀಡದಿದ್ದವರೂ ಬಹಳ ಗೌರವದಿಂದ ಮಾತನಾಡಲು ಆರಂಭಿಸುತ್ತಾರೆ. ಮಾರ್ಕೆಟಿಂಗ್‌ನಲ್ಲಿ ಇರುವವರಿಗೆ ಉತ್ತಮ ಫಲ.

ಮಕರ(Capricorn): ವಿವಾಹ ಬಾಹಿರ ಸಂಬಂಧ ಜೇನಲ್ಲದ್ದಿದ ಕತ್ತಿಯ ಅಲಗಿನ ಹಾಗೆ ಅಂತಾರೆ. ರುಚಿ ಅಂತ ಹೋದ್ರೆ ನಾಲಗೆ ಸೀಳೋದು ಗ್ಯಾರಂಟಿ. ಈ ವಾರ ಇಂಥಾ ನಾಲಗೆ ಸೀಳಿಸಿಕೊಳ್ಳೋ ಪ್ರೋಗ್ರಾಂ ಬರಬಹುದು. ವಿವೇಕದಿಂದ ವರ್ತಿಸಿ. ಶತ್ರುಗಳು ನಿಮ್ಮ ಮೇಲೆ ಮುಗಿಬೀಳುವ ಸಾಧ್ಯತೆ ಇದೆ. ಆದರೆ ಬಹಳ ಜಾಣರಾದ ನೀವು ಅವರ ಹುನ್ನಾರದಿಂದ ತಪ್ಪಿಸಿಕೊಳ್ಳುತ್ತೀರಿ. ಕೆಲಸದ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಿ. 

Hanuman Jayantiಯಂದು ಹೀಗೆ ಮಾಡಿದ್ರೆ ಅದೃಷ್ಟ ನಿಮ್ಮದೇ

ಕುಂಭ(Aquarius): ಈ ವಯಸ್ಸಲ್ಲಿ ಹೀಗೆ ಮರೆತರೆ ಹೇಗ್ರೀ ಅಂತ ಹೇಳಿಸಿಕೊಳ್ಳುವ ಸಮಯ ಬರಬಹುದು. ಅಷ್ಟೇ ಅಲ್ಲ, ಸಿಕ್ಕಾಪಟ್ಟೆ ಸ್ನೇಹ, ವಿಪರೀತ ಕಾಳಜಿ ಅಂತೆಲ್ಲ ನಾಟಕ ಆಡೋ ವ್ಯಕ್ತಿಯೊಬ್ಬರು ನಿಮ್ಮನ್ನು ವಂಚಿಸಬಹುದು. ಮೊದಲೇ ಇಂಥವರ ಬಗ್ಗೆ ಎಚ್ಚರಿಕೆಯಿಂದಿರಿ. ವಿದೇಶ ಪ್ರಯಾಣದ ಯೋಗವಿದ್ದರೂ ಅದರಿಂದ ಸಮಸ್ಯೆ ಎದುರಾಗಬಹುದು. ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಚರ್ಮದ ಸಮಸ್ಯೆ ಉಲ್ಬಣ ಸಾಧ್ಯತೆ. 

ಮೀನ(Pisces): ಹಿಂದೆ ಮುಂದೆ ನೋಡದೇ ಆ ಕ್ಷಣಕ್ಕೆ ಅನಿಸಿದ್ದನ್ನು ಥಟ್ಟನೆ ಆಡಿ ಬಿಡುವ ನಿಮ್ಮ ಸ್ವಭಾವ ನಿಮಗೇ ಎರವಾಗುವುದು. ಆತುರದ ನಿರ್ಧಾರವೊಂದರಿಂದ ದುಃಖ ಅನುಭವಿಸುವಿರಿ.  ನಿಮಗೆ ಗೌರವ ನೀಡುತ್ತಿದ್ದವರು, ಮಾತು ಕೇಳುತ್ತಿದ್ದವರು ತಿರುಗಿ ಬೀಳಬಹುದು. ಮಾಡುವ ಕೆಲಸದಲ್ಲಿ ಆಸಕ್ತಿ ಹೋಗಬಹುದು ಇಲ್ಲವೇ ಕೆಲಸ ಕಳೆದುಕೊಳ್ಳುವಿರಿ. ಮನೆಯಲ್ಲಿ ಸಿಗುವ ಸಮಾಧಾನವೇ ಸದ್ಯ ನಿಮ್ಮ ಆತ್ಮಬಲ ಹೆಚ್ಚಿಸಲಿದೆ.
 

click me!