Weekly Horoscope: ಸಿಂಹಕ್ಕೆ ನಿರಾಸೆ, ಒತ್ತಡದ ವಾರ, ಮಿಥುನಕ್ಕೆ ಬಡ್ತಿ

By Suvarna News  |  First Published Mar 27, 2022, 9:28 AM IST

ತಾರೀಖು 27 ಮಾರ್ಚ್‌ನಿಂದ 2 ಏಪ್ರಿಲ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ


ಮೇಷ(Aries)
ತುಂಬ ಕಷ್ಟಪಟ್ಟು ಕೆಲಸ ಮಾಡುತ್ತೀರಿ. ವೇಗವಾಗಿ ಮಾಡಲು ಪ್ರಯತ್ನಿಸುತ್ತೀರಿ. ಆದರೆ ಕೆಲಸದಲ್ಲಿ ನಿಧಾನವಾಗುತ್ತೆ. ಬ್ಯಾಂಕ್ ಕೆಲಸಗಳು ವಿಳಂಬವಾಗುತ್ತವೆ. ಮನಸ್ಸಿಗೆ ಬೇಸರ ಉಂಟಾಗುತ್ತವೆ. ಲಾಭದಲ್ಲಿ ಗುರು, ಶುಕ್ರ ಇರುವುದರಿಂದ ಸ್ವಂತ ಉದ್ಯೋಗದಲ್ಲಿ ಉತ್ತಮ ಫಲವಿದೆ. ನೀವು ಹಾಕಿದ ಬಂಡವಾಳ ವಾಪಾಸ್ ಬರುತ್ತದೆ. ಆದರೆ ಉದ್ಯೋಗಿಗಳಿಗೆ ಕೆಲಸದಲ್ಲಿ ಅಸಾಮಾಧಾನ, ಕಾಲು ನೋವಿನ ಸಮಸ್ಯೆ.

ವೃಷಭ(Taurus)
ಭೂಮಿ, ವಾಹನ ಖರೀದಿಗೆ ಹಣ ಖರ್ಚು ಮಾಡುತ್ತೀರಿ. ಈ ವಾರದಲ್ಲಿ ಸೈಟ್, ಭೂಮಿ ಖರೀದಿ ಸಾಧ್ಯತೆ. ಖರ್ಚು ಹೆಚ್ಚಾಗಬಹುದು. ಆದರೂ ಮನಸ್ಸಿಗೆ ಖುಷಿ ಇದೆ. ಸಾಧನೆ ಮಾಡಿದ ತೃಪ್ತಿ ಇರುತ್ತದೆ. ಚಟುವಟಿಕೆಯಿಂದ ಕೆಲಸ ಮಾಡುತ್ತೀರಿ. ಮಾಡಿದ ಕೆಲಸಕ್ಕೆ ಪ್ರತಿಫಲ ಸಿಕ್ಕ ತೃಪ್ತಿ ಇರುತ್ತದೆ. ಶತ್ರುಗಳೂ ಭೂಮಿ ವಿಚಾರದಲ್ಲಿ ನಿಮಗೆ ಪೂರಕವಾಗಿರುತ್ತಾರೆ. ಶುಭ ಯೋಗ ಈ ವಾರ ನಿಮಗಾಗಿ ಕಾದಿದೆ.

Tap to resize

Latest Videos

undefined

ಮಿಥುನ(Gemini)
ಈ ವಾರ ಬಹಳ ಉತ್ತಮ ಫಲವಿದೆ. ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ. ಆಡಳಿತ ನಿರ್ವಹಣೆಯ ಕೆಲಸ ಸಿಗುವ ಸಾಧ್ಯತೆ ಇದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ. ಕೆಲವರು ನಿಮ್ಮ ಬಗ್ಗೆ ಚುಚ್ಚು ಮಾತುಗಳನ್ನಾಡಬಹುದು. ಇದರಿಂದ ಮನಸ್ಸಿಗೆ ಬೇಸರ ಆಗಬಹುದು. ಗುರಿಯನ್ನು ಮನಸ್ಸಲ್ಲಿಟ್ಟು ಆ ಬಗ್ಗೆ ಯೋಚಿಸಿ. ಈಗ ಅದೃಷ್ಟ ನಿಮ್ಮ ಕೈಯಲ್ಲಿದೆ. ದೈವಬಲವಿದೆ.

ಕಟಕ(Cancer)
ನಿಮ್ಮ ತಾಯಿಯ ಜೊತೆಗೆ ಕಿರಿಕಿರಿ ಆಗಬಹುದು, ಬಾಧೆ ಉಂಟಾಗಬಹುದು. ಒಳ್ಳೆಯ ರೀತಿಯ ಮಾತುಗಳು ಇನ್ನೊಬ್ಬರಲ್ಲಿ ತಪ್ಪು ಕಲ್ಪನೆ ಮೂಡಿಸಬಹುದು. ಭಾಗ್ಯದಲ್ಲಿ ರವಿ ಇರುವ ಕಾರಣ ಹಣಕಾಸಿನ ವಿಚಾರದಲ್ಲಿ ಬಹಳ ಚೆನ್ನಾಗಿದೆ. ಆರ್ಥಿಕವಾಗಿ ಭಾಗ್ಯೋದಯದ ಕಾಲ. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಬೆಳವಣಿಗೆ. ಉದ್ಯೋಗದಲ್ಲಿ ಓಡಾಟ, ಆದರೆ ಅಭಿವೃದ್ಧಿ. ಸಂಗಾತಿಯಿಂದ ಅನುಕೂಲವಾಗಲಿದೆ.

ಸಿಂಹ(Leo)
ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಉಂಟಾಗಬಹುದು. ನಿಮ್ಮ ನಿರೀಕ್ಷೆಗಳು ಈಡೇರದೇ ನಿರಾಸೆಯಾಗುವ ಸಾಧ್ಯತೆ ಇದೆ. ಹಣ ಸಕಾಲದಲ್ಲಿ ಬರದೇ ಇರಬಹುದು. ಬಹಳ ಕಷ್ಟಪಡುತ್ತೀರಿ. ಪ್ರಯತ್ನ ಹೆಚ್ಚಿರುತ್ತದೆ. ಫಲ ಕಡಿಮೆ ಇರುತ್ತದೆ. ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಏನೇ ಸಮಸ್ಯೆ ಆದರೂ ಕೆಲಸದಲ್ಲಿ ಮುಂದುವರಿಯುತ್ತೀರಿ. ಕೆಲಸದ ಒತ್ತಡ ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆ ಬರಬಹುದು.

ಏಪ್ರಿಲ್‌ನಲ್ಲಿ ನಡೆಯಲಿದೆ 'ಮಹಾಗೋಚಾರ', ಈ ಐದು ರಾಶಿಗಳಿಗೆ ಶುಭ ವಿಚಾರ

ಕನ್ಯಾ(Virgo)
ಆರೋಗ್ಯದಲ್ಲಿ ಬಹಳ ಏರುಪೇರು ಉಂಟಾಗಬಹುದು. ಹೃದಯ ವ್ಯಾಧಿಯಿಂದ ಬಳಲುವ ಸಾಧ್ಯತೆ ಇದೆ. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಮಾನಸಿಕ ನೆಮ್ಮದಿಯ ಕೊರತೆ ಉಂಟಾಗಬಹುದು. ಗೊಂದಲ, ಉದ್ವೇಗ, ನಿರ್ಧಾರ ತೆಗೆದುಕೊಳ್ಳಲಾಗದ ಸ್ಥಿತಿಗೆ ಬರುತ್ತೀರಿ. ಯೋಚಿಸಿ ನಿರ್ಧಾರಕ್ಕೆ ಬನ್ನಿ. ದುಡ್ಡಿನ ವಿಚಾರದಲ್ಲಿ ಯೋಚನೆ ಹೆಚ್ಚಾಗಬಹುದು. ಕೆಲಸ ಕಾರ್ಯಗಳಲ್ಲಿ ಹಿನ್ನಡೆ. ಮಾನಸಿಕ ನೆಮ್ಮದಿಗೆ ಧ್ಯಾನ ಮಾಡಿ.

ತುಲಾ(Libra)
ಮೇಲಾಧಿಕಾರಿಗಳಿಂದ ನಿಮ್ಮ ಕೆಲಸದಲ್ಲಿ ತಪ್ಪು ಹುಡುಕಬಹುದು. ಕೆಲಸದ ಬಗ್ಗೆ ದೂರು ನೀಡಬಹುದು. ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕಂಥಾ ಗೌರವ ಸಿಗೋದಿಲ್ಲ. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಮಕ್ಕಳ ವಿಚಾರದಲ್ಲಿ ಬಹಳ ಖುಷಿ ಉಂಟಾಗಬಹುದು. ವಿದ್ಯಾರ್ಥಿಗಳಲ್ಲಿ ಮೇಧಾ ಶಕ್ತಿ ಹೆಚ್ಚಬಹುದು. ಶಿಕ್ಷಣದಲ್ಲಿ ಉತ್ತಮ ಔನ್ನತ್ಯ ಸಾಧಿಸುವಿರಿ. ಭೂಮಿ ತಗಾದೆಗಳು ಮುಂದುವರಿಯಬಹುದು.

ವೃಶ್ಚಿಕ(Scorpio)
ನಿಮಗೆ ಆಸೆಯೂ ಇದೆ, ಆಸೆಯನ್ನು ಈಡೇರಿಸಿಕೊಳ್ಳುವ ದಾರಿಯೂ ತಿಳಿಯುತ್ತದೆ. ದೊಡ್ಡ ಮಟ್ಟದ ಯೋಜನೆಯನ್ನು ರೂಪಿಸುತ್ತೀರಿ. ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭದ ಸಿಗದೇ ಹೋದರೂ ತಕ್ಕಮಟ್ಟಿನ ಯಶಸ್ಸು ಪಡೆಯುವಿರಿ. ಉದ್ಯೋಗಿಗಳಿಗೆ ಉತ್ತಮ ಫಲವಿದೆ. ಕೆಲಸಕ್ಕೆ ತಕ್ಕ ಗೌರವ, ಮರ್ಯಾದೆ, ಮೆಚ್ಚುಗೆ ಇತ್ಯಾದಿಗಳು ಮನಸ್ಸಿಗೆ ಖುಷಿ ನೀಡಬಹುದು. ಕೆಲವು ಕೆಲಸ ಮುಂದೂಡಿಕೆ ಆಗಬಹುದು.

Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?

ಧನು(Sagittarius)
ಮನೆಯಲ್ಲಿ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಯಬಹುದು. ತಂದೆಯಿಂದ ಕೆಲವು ಸಲಹೆಗಳು ಸಿಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಗೊಂದಲಗಳು ಕಾಡಬಹುದು. ಭವಿಷ್ಯದ ಬಗ್ಗೆ ಚಿಂತೆ ಉಂಟಾಗಬಹುದು. ತಂದೆಯ ನೆರವಿನಿಂದ ಇವು ತಕ್ಕಮಟ್ಟಿಗೆ ಪರಿಹಾರ ಆಗಬಹುದು. ನಿಮ್ಮ ಮಿತ್ರರ ಜೊತೆಗೆ ಸ್ವಲ್ಪ ಕಲಹಗಳು ಉಂಟಾಗಬಹುದು. ಧನಲಾಭ ಉಂಟಾಗಬಹುದು.

ಮಕರ(Capricorn)
ನಿಮ್ಮ ಉದ್ವೇಗ ಹೆಚ್ಚಾಗಬಹುದು. ಇದರಿಂದ ಮಾನಸಿಕ ನೆಮ್ಮದಿ ಮರೀಚಿಕೆಯಾಗಬಹುದು. ಆದರೆ ಎಲ್ಲೋ ಒಂದು ಕಡೆ ತಾಳ್ಮೆ, ಸಹನೆ ನಿಮ್ಮನ್ನು ಕಾಯಬಹುದು. ಹನುಮಾನ್ ಚಾಲೀಸ್ ಮಂತ್ರ ಹೇಳಿಕೊಂಡರೆ ನೆಮ್ಮದಿ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ನಿಮ್ಮನ್ನು ತೊಂದರೆಗೆ ದೂಡಬಹುದು, ಮೋಸವಾಗಬಹುದು. ಕೂಲಂಕುಶವಾಗಿ ಪರಿಶೀಲಿಸಿ ಮುಂದುವರಿಯಿರಿ. ಅನುಕೂಲಗಳು, ಲಾಭಗಳು ಚೆನ್ನಾಗಿವೆ.

ಕುಂಭ(Aquarius)
ನಿಮ್ಮ ವ್ಯಾಮೋಹ ಹೆಚ್ಚಬಹುದು. ಹಾಗೇ ಅತಿಯಾದ ಮಾತೇ ನಿಮಗೆ ತೊಂದರೆ ಉಂಟಾಗಬಹುದು. ಹೀಗಾಗಿ ಮಾತಿನ ಬಗ್ಗೆ ಹಿಡಿತವಿರಲಿ. ಅತಿಯಾದ ನಡವಳಿಕೆಯಿಂದ ಇತರರ ಮನಸ್ಸಿಗೆ ನೋವು ಉಂಟಾಗಬಹುದು. ಸಂಗಾತಿಯ ಜೊತೆಗೆ ಕಲಹ ಉಂಟಾಗಬಹುದು. ಕೆಲವರ ಜೊತೆಗೆ ಜಗಳಾಗುವ ಸಾಧ್ಯತೆ. ಇದರ ಜೊತೆಗೆ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಸಹೋದರಿಗೆ ಅನಾರೋಗ್ಯ ಉಂಟಾಗಬಹುದು.

ಮೀನ(Pisces)
ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷೆ ತಕ್ಕ ಲಾಭ ಸಿಗೋದಿಲ್ಲ. ಮಾತು ಕೊಟ್ಟವರು ಅದರಿಂದ ಜಾರಿಕೊಳ್ಳುತ್ತಾರೆ. ಇದರಿಂದ ನಿಮ್ಮ ಮನಸ್ಸಿಗೆ ನೋವು ಉಂಟಾಗಬಹುದು. ಅಂದುಕೊಂಡ ಯೋಜನೆಗಳಲ್ಲಿ ಅನಿರೀಕ್ಷಿತವಾಗಿ ಬದಲಾವಣೆ ಉಂಟಾಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮ ಲಾಭವಿದೆ. ಆರೋಗ್ಯದಲ್ಲಿ ತೊಂದರೆ ಆಗಬಹುದು. ಊಟ, ತಿಂಡಿ, ನಿದ್ದೆ ಸರಿಯಾಗಿ ಆಗದೇ ಸಮಸ್ಯೆ ಆಗಬಹುದು. 

click me!