Weekly Horoscope: ಸಾಡೇಸಾತಿಯಿಂದ ನಲುಗಿರುವ ಈ ರಾಶಿಗೀಗ ಶುಭ ಫಲಗಳ ಆರಂಭ

By Suvarna News  |  First Published Mar 20, 2022, 8:21 AM IST

ತಾರೀಖು 20ರಿಂದ 26 ಮಾರ್ಚ್ 2022ರವರೆಗೆ ನಿಮ್ಮ ಭವಿಷ್ಯ ಹೇಗಿದೆ?
ನಿಮ್ಮ ರಾಶಿಗೆ ಈ ವಾರದ ಫಲ ಏನಿದೆ ನೋಡಿ
 


ಮೇಷ(Aries): ವ್ಯಾಪಾರ ವ್ಯವಹಾರಗಳು ಚೆನ್ನಾಗಿ ನಡೆಯುತ್ತವೆ. ಧರ್ಮ ಕಾರ್ಯಗಳನ್ನು ಮಾಡುತ್ತೀರಿ. ದೇವಸ್ಥಾನಗಳಿಗೆ ಹೋಗುವುದು, ಗುರುವಿನ ಭೇಟಿ ಇತ್ಯಾದಿ ನಡೆಯುತ್ತದೆ. ಸ್ವಂತ ವ್ಯಾಪಾರ ಮಾಡುವವರಿಗೆ ಅದ್ಭುತ ಲಾಭ. ಕೆಲಸದಲ್ಲಿ ಸ್ವಲ್ಪ ಕಠಿಣತೆ ಇರುತ್ತದೆ. ಒತ್ತಡ ಹೆಚ್ಚಾಗಬಹುದು. ಕೆಲಸ ಮಾಡಿದ್ದಕ್ಕೆ ಉತ್ತಮ ಲಾಭವಿದೆ. ಸರ್ಕಾರಿ ನೌಕರರಿಗೆ ಹೆಚ್ಚಿನ ಜವಾಬ್ದಾರಿ ಬರಬಹುದು. ಧನಲಾಭ ಆಗಬಹುದು.

ವೃಷಭ(Taurus): ಕಾಲಿನ ನರ ನೋವು, ಉಳುಕು ಇತ್ಯಾದಿ ಉಂಟಾಗಬಹುದು. ಕೆಲಸದಲ್ಲಿ ಅತ್ಯುತ್ತಮ ಲಾಭಗಳಿರುತ್ತವೆ. ಬಹಳ ಶ್ರದ್ಧೆಯಲ್ಲಿ ಕೆಲಸ ಮಾಡುತ್ತೀರಿ. ಹೊಗಳಿಕೆ, ಬಡ್ತಿ ಸಿಗಬಹುದು. ಆದರೆ ವಾರದ ಮಧ್ಯೆ ಕೊಂಚ ಸೋಮಾರಿತನ ಕಾಡಬಹುದು. ಇದನ್ನು ಬಿಟ್ಟರೆ ಉತ್ತಮ ಅಭಿವೃದ್ಧಿ ಇದೆ. ಸಂಬಳ ಹೆಚ್ಚಾಗಬಹುದು. ಅದೃಷ್ಟದಿಂದ ಎಲ್ಲವನ್ನೂ ಪಡೆಯುವಿರಿ. ಕೌಟುಂಬಿಕವಾಗಿ ಉತ್ತಮ ವಾತಾವರಣವಿದೆ.

Tap to resize

Latest Videos

undefined

ಮಿಥುನ(Gemini): ಸ್ವಂತ ಉದ್ಯೋಗಿಗಳಿಗೆ ಅದ್ಭುತ ಫಲಗಳಿವೆ. ಸಾಕಷ್ಟು ಧನ ಲಾಭ ಉಂಟಾಗಬಹುದು. ಕಷ್ಟಪಟ್ಟು ಕೆಲಸ ಮಾಡುವಿರಿ. ಹಾಗೇ ಅದೃಷ್ಟವೂ ನಿಮ್ಮ ಕಡೆಗಿದೆ. ಸರ್ಕಾರಿ ನೌಕರರಿಗೆ ಕೆಲಸದಲ್ಲಿ ಒತ್ತಡ ಉಂಟಾಗಬಹುದು. ಖಾಸಗಿ ಕಂಪನಿ ಉದ್ಯೋಗಿಗಳಿಗೆ ಕೆಲಸ ಸರಾಗವಾಗಿ ನಡೆದುಹೋಗಬಹುದು. ಕೆಲಸ ಆಯ್ತು, ನಾನಾಯ್ತು ಎಂಬ ಸ್ವಭಾವವೇ ನಿಮ್ಮನ್ನು ಕಾಪಾಡುವುದು. ಹಣಕಾಸು ಚೆನ್ನಾಗಿರುತ್ತೆ.

ವಿವಾಹ ಸಮಯದಲ್ಲಿ ಕೈಕಾಲಿಗೆ Henna ಹಾಕುವುದೇಕೆ?

ಕಟಕ(Cancer): ಲಾಭ ಬರಬಹುದು, ಆದರೆ ಆರೋಗ್ಯ ಕೊಂಚ ಹಾಳಾಗಬಹುದು. ಸಾಡೆ ಸಾತಿಯಿಂದ ಬಳಲಿದ ಈ ರಾಶಿಯವರಿಗೆ ಇದೀಗ ಶುಭ ಫಲಗಳು ಆರಂಭವಾಗಿವೆ. ಕೊನೆಯಲ್ಲಿ ಬಯಸಿದ್ದೆಲ್ಲ ಸಿಗಬಹುದು. ಕಷ್ಟವೆಲ್ಲ ಕಳೆದುಹೋಯ್ತು. ಎಲ್ಲ ಒಳ್ಳೆದಾಗುತ್ತೆ. ತಂದೆ ವಿಚಾರದಲ್ಲಿ ವಾದ ವಿವಾದ ಮಾಡುತ್ತೀರಿ. ಕೋಪ ಆಗಾಗ ಬರುತ್ತದೆ. ಆದರೆ ಮೌನವಾಗಿರುವ ಕಾರಣ ಇದರ ಪರಿಣಾಮ ಹೆಚ್ಚಿರುವುದಿಲ್ಲ. ಉತ್ತಮ ಫಲವಿದೆ.

ಸಿಂಹ(Leo): ಶತ್ರುಗಳ ಬಾಧೆ ಕಮ್ಮಿಯಾಗಬಹುದು. ಕೆಲಸದಲ್ಲಿ ಸಾಕಷ್ಟು ಅಡೆತಡೆಗಳು ಕಂಡುಬರಬಹುದು. ಒಳ್ಳೆಯ ಬದಲಾವಣೆ, ಸಾಧನೆಗೆ ಬಹಳ ಕಷ್ಟಪಟ್ಟರೂ ತಕ್ಷಣ ಫಲ ಸಿಗೋದಿಲ್ಲ. ಆಪ್ತರ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆ ಆಗಬಹುದು. ಹೆತ್ತವರ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ತಂದೆ ವಿಚಾರದಲ್ಲಿ ಬಾಧೆ ಇರುತ್ತೆ. ಬೆನ್ನುನೋವಿನ ಬಾಧೆ ಉಂಟಾಗಬಹುದು. ಆತಂಕ ಇರಬಹುದು.

ಕನ್ಯಾ(Virgo): ಯಾವುದೋ ವಿಚಾರಕ್ಕೆ ಸಾಕಷ್ಟು ಹಣ ಹೂಡಿಕೆ ಮಾಡುತ್ತೀರಿ. ಕೂಡಿಟ್ಟಿರುವ ಹಣ ಎಲ್ಲ ಅಲ್ಲಿ ಹೋಗಿರುವ ಕಾರಣ ಮಾನಸಿಕವಾಗಿ ಅಸ್ಥಿರತೆ ಉಂಟಾಗಬಹುದು. ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸಿದರೂ ಮಾನಸಿಕ ಕಿರಿಕಿರಿ ಉಂಟಾಗಬಹುದು. ಭೂಮಿಯ ವಿಚಾರದಲ್ಲಿ ತೊಂದರೆಗಳು ಉಂಟಾಗಬಹುದು. ಸುಖ ಮರೀಚಿಕೆ ಅನಿಸಬಹುದು. ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದೇ ಹೋಗಬಹುದು.

Chanakya Neeti: ಇಂಥ ಸಂಗಾತಿ ಇದ್ದರೆ ದುರದೃಷ್ಟವೂ ಅದೃಷ್ಟವಾಗುತ್ತೆ..

ತುಲಾ(Libra): ಹಳೆಯ ವ್ಯಾಧಿಗಳು ಕಂಗೆಡಿಸಬಹುದು. ವಿಪರೀತ ತಲೆನೋವು, ಕಾಲುನೋವು ಉಂಟಾಗಬಹುದು. ಅನಾರೋಗ್ಯದಿಂದ ಕೆಲಸಗಳು ನಿಧಾನವಾಗಬಹುದು. ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಬಹುದು. ಆದರೆ ದೈವಬಲದಿಂದ ದಿನದೂಡುವಿರಿ. ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ಮಾಡಿ. ಸ್ವಂತ ಉದ್ಯೋಗಿಗಳಿಗೆ ಸಾಧಾರಣ ಫಲ. ಸರ್ಕಾರಿ ನೌಕರರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ. ಹಣ ಕೊಡಲು ಹೋಗಬೇಡಿ.

ವೃಶ್ಚಿಕ(Scorpio): ಹಣಕಾಸಿನ ಅಭಿವೃದ್ಧಿ ಚೆನ್ನಾಗಿದೆ. ಭೂಮಿ, ಮನೆ ಖರೀದಿಗೆ ಓಡಾಟ ಹೆಚ್ಚಿರುತ್ತದೆ. ಕೆಲಸ ಕಾರ್ಯಗಳು ಚುರುಕಿನಿಂದ ಸಾಗುವುದು. ಬಹಳ ಧೈರ್ಯದಿಂದ ಮುಂದೆ ನುಗ್ಗುವಿರಿ. ಆ ಧೈರ್ಯವೇ ಆಸ್ತಿಯಾಗುತ್ತದೆ. ಕುಟುಂಬದಲ್ಲಿ ಸ್ತ್ರೀಯರ ವಿಚಾರದಲ್ಲಿ ನೋವು, ಬೇಸರ ಉಂಟಾಗಬಹುದು. ನಿಮ್ಮ ನಾಯಕತ್ವ ಗುಣ ಕಂಡು ಹೊಸ ಜವಾಬ್ದಾರಿ ಹೆಗಲೇರಬಹುದು. ವ್ಯಾಪಾರದಲ್ಲಿ ಧನಲಾಭ. ಶುಭ ಫಲವಿದೆ.

ಧನುಸ್ಸು(Sagittarius): ವೈವಾಹಿಕ ಜೀವನದಲ್ಲಿ ಕಲಹಗಳು ಉಂಟಾಗಬಹುದು. ನಾನು ಹೇಳಿದ್ದೇ ನಡೆಯಬೇಕು ಎಂಬ ಧೋರಣೆ ಇರಬಹುದು. ಅತಿಯಾದ ಸ್ವಾಭಿಮಾನದಿಂದ, ಕೊಂಚ ಅಹಂಕಾರದಿಂದ ದಾಂಪತ್ಯದಲ್ಲಿ ತೊಂದರೆ ಬರಬಹುದು. ಮಾತಿನ ಬಗ್ಗೆ ಹಿಡಿತವಿರಲಿ. ನೇರ ಮಾತುಗಳು ಸಮಸ್ಯೆಗೆ ಎಡೆ ಮಾಡಬಹುದು. ಗುರು ಬಲ ಇಲ್ಲ. ಆರೋಗ್ಯದಲ್ಲಿ ತೊಂದರೆ ಆಗಬಹುದು. ಬೇಸರ, ಆತಂಕ, ಸಂಕಟ ಬಾಧಿಸಬಹುದು.

ಮಕರ(Capricorn): ಕೆಲಸ ಕಾರ್ಯಗಳಿಂದ ಲಾಭ ಪಡೆಯುವಿರಿ. ಸ್ವಂತ ಉದ್ಯೋಗದಲ್ಲಿರುವವರಿಗೆ ನಿರೀಕ್ಷೆ ತಕ್ಕ ಲಾಭ ಸಿಗದಿದ್ದರೂ ಸಮಾಧಾನವಿದೆ. ಸರ್ಕಾರಿ ನೌಕರರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು. ಆದರೆ ವಾದ ಮಾಡದೇ ಕೆಲಸದಲ್ಲಿ ಗಮನಕೊಡಿ. ನೆಗೆಟಿವ್ ಯೋಚನೆಗಳಿಂದ ಕೊಂಚ ಮನಸ್ಸು ಕಿರಿಕಿರಿಗೊಳ್ಳಬಹುದು. ದುರ್ಗಾ ದೇವಿಯನ್ನು ಆರಾಧಿಸಿ. ಪುಣ್ಯಕ್ಷೇತ್ರಗಳ ಭೇಟಿ, ನಾಗದೇವರ ಆರಾಧನೆ ಮಾಡುವಿರಿ.

ಆಹಾರದಲ್ಲಿ ಕೂದಲು ಸಿಕ್ಕಿದರೆ ನಿಮಗೀ ದೋಷವಿದೆ ಎಂದರ್ಥ! ಬೇಗ ಪರಿಹಾರ ಕೈಗೊಳ್ಳಿ..

ಕುಂಭ(Aquarius): ಉದ್ವೇಗ, ಕೋಪ ಹೆಚ್ಚಾಗಬಹುದು. ಇದರಿಂದ ಆರೋಗ್ಯದ ಮೇಲೆ ಸಮಸ್ಯೆ ಬರಬಹುದು. ಉದ್ಯೋಗದಲ್ಲಿ ಉತ್ತಮ ಪ್ರಗತಿ ಇದೆ. ಅಡೆತಡೆಗಳಿದ್ದರೂ ಕೆಲಸ ನಡೆದು ಗೌರವ ಹೆಚ್ಚಬಹುದು. ಆದರೆ ಕೆಲಸ ಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ಮಾನಸಿಕ ದುಃಖ, ಸಂಕಟ, ಆರೋಗ್ಯ ಸಮಸ್ಯೆ ಉಂಟಾಗಬಹುದು. ಗೋಧಿ ದಾನ, ಆದಿತ್ಯ ಹೃದಯ ಮಂತ್ರ ಜಪ, ಸೂರ್ಯ ನಮಸ್ಕಾರದಿಂದ ನೆಮ್ಮದಿ.

ಮೀನ(Pisces): ಬೇಡದೇ ಇರುವ ವಿಚಾರಗಳೇ ಮನಸ್ಸನ್ನು ಆವರಿಸಿ ಕೆಲಸದ ಬಗ್ಗೆ ಆಸಕ್ತಿ ಹೋಗಬಹುದು. ಕೆಲಸದ ಸ್ಥಳದಲ್ಲಿ ವ್ಯಕ್ತಿಗಳಿಂದ ಸಮಸ್ಯೆ ಆಗಬಹುದು. ಆದರೆ ಇದು ತಾತ್ಕಾಲಿಕ. ಕೊಂಚ ಅಶಾಂತಿಯ ವಾತಾವರಣ ಇರಬಹುದು. ಸ್ವಂತ ವ್ಯವಹಾರದವರಿಗೆ ತೃಪ್ತಿಕರ. ಸರ್ಕಾರಿ ಕೆಲಸದಲ್ಲಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೂ ನೀವದನ್ನು ನಿಭಾಯಿಸುವಿರಿ. ಈ ವಾರ ನಿಮಗೆ ಸಾಮಾನ್ಯ ಫಲಗಳಿವೆ.

click me!