Bindushree N | Updated: Oct 16, 2023, 10:18 AM IST
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ನಡೀತಾ ಇರೋ ಧರ್ಮ ಸಂಘರ್ಷ ತಾರಕ್ಕೇರಿದೆ. ಇಸ್ರೇಲ್ ವಶ ಮಾಡಿಕೊಳ್ಳಬೇಕು ಅನ್ನೋದು ಹಮಾಸ್ ಪ್ಲಾನ್ ಆಗಿದ್ರೆ ನಮ್ಮನ್ನ ಕೆಣಕಿದವರಿಗೆ ಗೋರಿ ಕಟ್ಟೋದು ಗ್ಯಾರಂಟಿ ಅನ್ನೋದು ಇಸ್ರೇಲ್(Isreal) ಯುದ್ಧ ಶಪಥ. ಈ ಮಧ್ಯೆ ಇಸ್ರೇಲ್ ಸಲುವಾಗಿ ಮಹಿಳಾ ಆರ್ಮಿ(Women Army) ತನ್ನ ಶಕ್ತಿ ಮೀರಿ ಹೋರಾಡ್ತಾ ಇದೆ. ಇಡೀ ಜಗತ್ತಿನಾದ್ಯಂತ ಟ್ರೆಂಡಿಂಗ್‌ನಲ್ಲಿ ಇರೋ ವಿಚಾರ ಅಂದ್ರೆ ಇಸ್ರೇಲ್ ಹಾಗೂ ಹಮಾಸ್ ನಡುವೆ ಆಗ್ತಾ ಇರೋ ಸಂಘರ್ಷ. ಶಾಂತವಾಗಿದ್ದ ಜಗತ್ತು ಇಂದು ಅದೇ ಯುದ್ಧದ ಬಗ್ಗೆ ಮಾತನ್ನಾಡ್ತಾ ಇದೆ. ಹೇಗಾದ್ರೂ ಮಾಡಿ ಇಸ್ರೇಲ್ ದೇಶವನ್ನ ಮಂಡಿಯೂರಿಸಬೇಕು ಅನ್ನೋ ಆಸೆ ಹಮಾಸ್(Hamas) ಉಗ್ರರದ್ದು. ನಮ್ಮನ್ನ ಕೆಣಕಿದವರಿಗೆ ಗೋರಿ ಕಟ್ಟಲೇ ಬೇಕು ಅನ್ನೋ ಶಪಥ ಇಸ್ರೇಲಿಗರದ್ದು.ಅದಕ್ಕಾಗಿ ತಮ್ಮಪ್ರಾಣವನ್ನೂ ಲೆಕ್ಕಿಸಿದೇ ದೇಶಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಇಸ್ರೇಲ್ ದೇಶದ ಜನರಿಂದ ಏನನ್ನ ಕಲೀಬೋದು ಅನ್ನೋ ಪ್ರಶ್ನೆಗೆ ಮೊದಲ ಉತ್ತರವೇ ದೇಶಪ್ರೇಮ. ನಾನು ಇರ್ಲಿ ಅಥವಾ ಇರದೇ ಇರಲಿ, ದೇಶ ಶಾಶ್ವತವಾಗಿ ಇರಲಿ ಅನ್ನೋ ಧನಾತ್ಮಕ ಧೋರಣೆ ಇಸ್ರೇಲಿಗರದ್ದು.. ಅಲ್ಲಿ ದೇಶಪ್ರೇಮವನ್ನ ಹೇಗೆ ಕಲಿಸ್ತಾರೆ ಅನ್ನೋದಕ್ಕಿಂತ ಇಸ್ರೇಲಿಗರು ಯಾಕೆ ಅಷ್ಟು ತಮ್ಮ ದೇಶವನ್ನ ಪ್ರೀತಿಸ್ತಾರೆ ಅನ್ನೋದು ತುಂಬಾ ರೋಚಕ ವಿಚಾರ. ಈಗ ಅಂತೂ ಇಸ್ರೇಲ್ ಬಿಟ್ಟು ಬೇರೆ ಬೇರೆ ದೇಶಗಳಲ್ಲಿ ಡಾಕ್ಟರ್, ಇಂಜಿನಿಯರ್ ಆಗಿದ್ದವರೆಲ್ಲಾ ಇಸ್ರೇಲ್ ವಿಮಾನ ಹತ್ತಿದ್ದಾರೆ. ಕಾರಣ ಇಷ್ಟೇ, ಗನ್ ಹೆಗಲಿಗೆ ಏರಿಸಿಕೊಂಡು ಹಮಾಸ್ ವಿರುದ್ಧ ಹೋರಾಡೋಕೆ ಬಂದಿದ್ದಾರೆ.
ಇದನ್ನೂ ವೀಕ್ಷಿಸಿ: ಹಮಾಸ್ ಕಮಾಂಡರ್‌ಗಳ ರುಂಡ ಚೆಂಡಾಡಿದ ಇಸ್ರೇಲ್: ಯಹೂದಿಗಳ ದಾಳಿಗೆ ಹಮಾಸ್ ನಿರ್ನಾಮ..!