Russia Ukraine War ಉಕ್ರೇನ್ ಮೇಲೆ ಅಣ್ವಸ್ತ್ರ ಬಳಕೆ ಮಾಡುತ್ತಾ ರಷ್ಯಾ?

Mar 12, 2022, 9:28 PM IST

ಬೆಂಗಳೂರು (ಮಾ. 12): ಸಮಾಧಿಗಳ ಮೇಲೆ ಸಾಮ್ರಾಜ್ಯ ಕಟ್ಟೋಕೆ ಸಿದ್ಧವಾಗಿ ನಿಂತಿರುವ ರಷ್ಯಾ (Russia) ಅಧ್ಯಕ್ಚ ವ್ಲಾಡಿಮಿರ್ ಪುಟಿನ್ (Vladimir Putin), ಕಳೆದ ಕೆಲವು ದಿನಗಳ ಹಿಂದೆ ಗಂಭೀರ ಪ್ರಮಾಣದ ಎಚ್ಚರಿಕೆಯನ್ನು ನೀಡಿದ್ದರು. ಅಣ್ವಸ್ತ್ರ (nueclear bomb) ಬಳಕೆ ಮಾಡುವ ಸೂಚನೆಯಂತಿದ್ದ ಈ ಎಚ್ಚರಿಕೆಯ ಬಗ್ಗೆ ಅಮೆರಿಕ (America) ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

15 ದಿನಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದರ ನಡುವೆ ಉಕ್ರೇನ್ ಮೇಲೆ ರಷ್ಯಾ ಅಣ್ವಸ್ತ್ರ ಬಳಕೆ ಮಾಡಬಹುದಾ ಎನ್ನುವ ಅತಂಕಗಳು ಶುರುವಾಗಿದೆ. ಅದಕ್ಕೆ ಕಾರಣ ವ್ಲಾಡಿಮಿರ್ ಪುಟಿನ್ ಅವರ ಮಾತುಗಳು. ವಿಶ್ವದಲ್ಲಿಯೇ ಬೇರೆ ಯಾವುದೇ ದೇಶಗಳಲ್ಲಿ ಇರದೇ ಇರುವಷ್ಟು ಅಣ್ವಸ್ತ್ರಗಳನ್ನು ಹೊಂದಿರುವ ರಷ್ಯಾ, ಗಂಭೀರ ಭದ್ರತಾ ಆತಂಕ ಎದುರಾದಲ್ಲಿ ಅಣ್ವಸ್ತ್ರ ಪ್ರಯೋಗಕ್ಕೂ ಸಜ್ಜು ಎಂದು ತಿಳಿಸಿದೆ.

ನಾವು ಉಕ್ರೇನ್ ನೆಲದಲ್ಲಿ ನಿಂತು ಹೋರಾಡಲ್ಲ, ರಷ್ಯಾ ಮೇಲೆ ನಿರ್ಬಂಧ ಹೆಚ್ಚಿಸುತ್ತೇವೆ: ಅಮೆರಿಕಾ
ಸುಲಭವಾಗಿ ಉಕ್ರೇನ್ ಕೈವಶವಾಗಲಿದೆ ಎಂದು ನಂಬಿದ್ದ ರಷ್ಯಾಗೆ ಉಕ್ರೇನ್ ಸೇನೆ ತೀವ್ರ ಪ್ರತಿರೋಧ ಒಡ್ಡಿದೆ. ಉಕ್ರೇನ್ ಸೇನೆಗೆ ಬೇಕಾದಂಥ ಶಸ್ತ್ರಾಸ್ತ್ರಗಳನ್ನು ಅಕ್ಕಪಕ್ಕದ ರಾಷ್ಟ್ರಗಳು ಪೂರೈಕೆ ಮಾಡುತ್ತಿರುವುದು ರಷ್ಯಾದ ಹಿನ್ನಡೆಗೆ ಕಾರಣವಾಗಿದೆ. ರಾಜಧಾನಿ ಕೀವ್ ವಶಪಡಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ರಷ್ಯಾ ಈವರೆಗೂ ನಡೆಸಿರುವ ಎಲ್ಲಾ ಪ್ರಕರಣಗಳೂ ವಿಫಲವಾಗಿದೆ.