ಬಂಡಾಯದ ಬೆಂಕಿಗೆ ಆಹುತಿಯಾಗುತ್ತಾ ರಷ್ಯಾ ?: ಅಂತರ್ಯುದ್ಧಕ್ಕೆ ಅಸಲಿ ಕಾರಣ ಏನು ?

Jun 25, 2023, 11:57 AM IST

ರಷ್ಯಾ ಈಗ ಬರೀ ಒಂದು ರಾಷ್ಟ್ರವಲ್ಲ, ಅದೊಂದು ರಣಭೂಮಿಯಾಗಿದೆ. ಅಲ್ಲೀಗ ಯುದ್ಧ ಮಾಡ್ತಾ ಇರೋದು, ಉಕ್ರೇನೂ ಅಲ್ಲ, ಬೇರೆ ಬದ್ಧ ಶತ್ರು ರಾಷ್ಟ್ರಗಳೂ ಅಲ್ಲ. ಇದು ರಷ್ಯಾದೊಳಗೇ ಉದ್ಭವಿಸಿರೋ ಬಂಡಾಯದ ಬಡಬಾಗ್ನಿ. ಈ ಬಂಡಾಯದ ಬೆಂಕಿಗೆ ಇಡೀ ರಷ್ಯಾ ಆಹುತಿಯಾಗುತ್ತೇನೋ ಅನ್ನೋ ಭೀತಿ ಕಾಡ್ತಾ ಇದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಪುಟಿನ್ ಆಪ್ತ ವ್ಯಾಗ್ನರ್‌. ರಷ್ಯಾ ಅನ್ನೋದು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದು.. ಯಾವುದೇ ದೇಶದ ವಿರುದ್ಧ ಸೆಣೆಸಾಡಿದ್ರೂ ರಷ್ಯಾ ಗೆಲುವಿನ ಸಾಧ್ಯತೆಯೇ ಹೆಚ್ಚು, ಅಂಥದ್ರಲ್ಲಿ ರಷ್ಯಾದ ಒಳಗೆಯೇ ಯುದ್ಧ ನಡೀತಿದೆ. ರಷ್ಯಾ ಮಿಲಿಟರಿ ಸೇನೆ ಜೊತೆಗಿದ್ದ ಖಾಸಗಿ ಸೇನೆ ವ್ಯಾಗ್ನರ್ ತಿರುಗಿ ಬಿದ್ದಿದ್ದು, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬದಲಿಸುವ ಎಚ್ಚರಿಕೆ ನೀಡಿದೆ. ವ್ಯಾಗ್ನರ್ ಸೇನೆ ನಿಯಂತ್ರಿಸಲು ಸೂಚನೆ ನೀಡಿದ ಪುಟಿನ್‌ ವಿರುದ್ಧವೇ ದಾಳಿ ಮಾಡಲಾಗುತ್ತಿದೆ. 

ಇದನ್ನೂ ವೀಕ್ಷಿಸಿ: ಕೇಸರಿ ಕೋಟೆಯಲ್ಲಿ ರಾಜ್ಯಾಧ್ಯಕ್ಷ ಪಟ್ಟಕ್ಕೆ ಬಿಗ್ ಫೈಟ್: ಬಿಜೆಪಿ ಹೈಕಮಾಂಡ್ ಒಲವು ಯಾರ ಕಡೆ..?