ಸೋಂಕು, ಸಾವು ಅತೀ ಹೆಚ್ಚು ಇದ್ದ ಅಮೆರಿಕದಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣ!

May 15, 2021, 12:58 PM IST

ವಾಷಿಂಗ್ಟನ್(ಮೇ.15): ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕು ಮತ್ತು ಸಾವು ದಾಖಲಿಸಿದ ಅಮೆರಿಕದಲ್ಲಿ ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವ ಸುಳಿವು ಗೋಚರಿಸಿದ್ದು, ಎರಡೂ ಡೋಸ್‌ ಲಸಿಕೆ ಪಡೆದವರು ಇನ್ನು ಸಾರ್ವಜನಿಕ ಸ್ಥಳ ಮತ್ತು ಒಳಾಂಗಣದಲ್ಲಿ ಮಾಸ್ಕ್‌ ಧರಿಸಬೇಕಿಲ್ಲ, 6 ಅಡಿ ಅಂತರ ಕಾಪಾಡಿಕೊಳ್ಳುವ ನಿಯಮ ಪಾಲಿಸಬೇಕಿಲ್ಲ ಎಂದು ಸರ್ಕಾರವೇ ಘೋಷಿಸಿದೆ.

ಅಂದಾಜು 33 ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ ಇದುವರೆಗೆ ಒಟ್ಟು ಜನಸಂಖ್ಯೆಯ ಶೇ.47ರಷ್ಟುಜನರಿಗೆ ಕನಿಷ್ಠ 1 ಡೋಸ್‌ ಮತ್ತು ಶೇ.37ರಷ್ಟುಜನರಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. ಹೀಗಾಗಿ ಒಟ್ಟಾರೆ ಹೊಸ ಸೋಂಕಿನಲ್ಲಿ ಭಾರೀ ಇಳಿಕೆಯಾಗಿದ್ದು, ಸಾವಿನ ಪ್ರಮಾಣ ಕೂಡಾ ಗಣನೀಯ ಪ್ರಮಾಣದಲ್ಲಿ ತಗ್ಗಿದೆ.

ಎರಡೂ ಡೋಸ್‌ ಲಸಿಕೆ ಪಡೆದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ತೀರಾ ತೀರಾ ಕಡಿಮೆ. ಹೀಗಾಗಿ ನೀವು ಮಾಸ್ಕ್‌ ಧರಿಸಬೇಕಿಲ್ಲ. ಇದೊಂದು ಸಾಧನೆಯ ಮೈಲುಗಲ್ಲು. ಇದೊಂದು ಐತಿಹಾಸಿಕ ದಿನ ಎ<ದು ಅಧ್ಯಕ್ಷ ಬೈಡೆನ್ ತಿಳಿಸಿದ್ದಾರೆ.