ನಾವು ಉಕ್ರೇನ್ ನೆಲದಲ್ಲಿ ನಿಂತು ಹೋರಾಡಲ್ಲ, ರಷ್ಯಾ ಮೇಲೆ ನಿರ್ಬಂಧ ಹೆಚ್ಚಿಸುತ್ತೇವೆ: ಅಮೆರಿಕಾ

Mar 12, 2022, 3:47 PM IST

ನಾವು ಉಕ್ರೇನ್ ನೆಲದಲ್ಲಿ ನಿಂತು ಹೋರಾಡುವುದಿಲ್ಲ. ಆದರೆ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ಹೇರುತ್ತೇವೆ. ರಷ್ಯಾಗೆ ಸೈನ್ಯವನ್ನು ಕಳಿಸಲ್ಲ, ಯುದ್ಧ ವಿಮಾನ ಕಳಿಸಲ್ಲ' ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. 

Operation Ganga: ಕಾರ್ಯಾಚರಣೆಗೆ ತೆರೆ, ತಾಯ್ನಾಡಿಗೆ ವಾಪಸ್ಸಾದ ವಿದ್ಯಾರ್ಥಿಗಳಿಗೆ ಸಂತಸ

ಉಕ್ರೇನ್‌ ಮೇಲೆ ಆಕ್ರಮಣ ಮಾಡಿರುವ ರಷ್ಯಾ ಮೇಲೆ ಮತ್ತಷ್ಟುಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಮತ್ತು ಉಕ್ರೇನ್‌ಗೆ ಹೆಚ್ಚಿನ ಸೈನಿಕ ಒದಗಿಸುವುದಾಗಿ ಐರೋಪ್ಯ ಒಕ್ಕೂಟದ ದೇಶಗಳ ಮುಖ್ಯಸ್ಥರು ಹೇಳಿದ್ದಾರೆ. ಉಕ್ರೇನ್‌ಗೆ ಸೈನಿಕ ಸಹಾಯ ಒದಗಿಸಲು 4,100 ಕೋಟಿ ರು. ಹೆಚ್ಚುವರಿ ಅನುದಾನ ನೀಡುವುದಾಗಿ ಐರೋಪ್ಯ ಒಕ್ಕೂಟದ ಮುಖ್ಯ ಕಾನೂನು ತಜ್ಞ ಜೋಸೆಫ್‌ ಬೊರೆಲ್‌ ಹೇಳಿದ್ದಾರೆ.

ಅಲ್ಲದೇ ರಷ್ಯಾದ ರಫ್ತು, ಸಮುದ್ರಯಾನ ಮತ್ತು ರೇಡಿಯೋ ತಂತ್ರಜ್ಞಾನದ ಮೇಲೆ ಮತು 160 ರಷ್ಯಾ ನಾಗರಿಕರ ಮೇಲೆ ಬಾಲ್ಕ ದೇಶಗಳು ನಿರ್ಬಂಧಗಳನ್ನು ವಿಧಿಸಿವೆ. ಇದರೊಂದಿಗೆ ಬೆಲಾರಸ್‌ನ 3 ಬ್ಯಾಂಕ್‌ಗಳ ಮೇಲೂ ಸಹ ನಿರ್ಬಂಧ ವಿಧಿಸಲಾಗಿದೆ. ಈವರೆಗೆ ಐರೋಪ್ಯ ಒಕ್ಕೂಟ 862 ಮಂದಿ ಮತ್ತು 53 ಸಂಸ್ಥೆಗಳ ವಿರುದ್ಧ ನಿರ್ಬಂಧ ವಿಧಿಸಿವೆ.