vuukle one pixel image

ರಣವೇಗದ ಬಿರುಗಾಳಿಗೆ ಆಪಾಯದಲ್ಲಿ 6 ಕೋಟಿ ಜನ, ಅಮೆರಿಕದಲ್ಲಿ ಬದುಕು ದಿಕ್ಕಾಪಾಲು

Chethan Kumar  | Updated: Mar 18, 2025, 6:05 PM IST

ಹತ್ತಾರು ಊರುಗಳಲ್ಲಿ ಸುಂಟರಗಾಳಿಯ ರಣಾವೇಶ, ಮರಗಳು ನೆಲಸಮ, ಮನೆಗಳು ಛಿದ್ರಛಿದ್ರ, ಬದುಕು ದಿಕ್ಕಾಪಾಲು. 24 ಗಂಟೆಯಲ್ಲಿ 40ಕ್ಕೂ ಅಧಿಕ ಸಾವು, ರಣವೇಗದ ಬಿರುಗಾಳಿ ಕಳೆದ ಎರಡು ದಿನಗಳಲ್ಲಿ ಅಮೆರಿಕಾವನ್ನೇ ಬುಡಮೇಲು ಮಾಡಿದೆ.  ಜನ ಯಾವುದನ್ನ ಕನಸಲ್ಲೂ ಎಣಿಸಿರ್ಲಿಲ್ವೋ, ಆ ದುರಂತ ಉದ್ಭವಿಸಿದೆ..ಅಷ್ಟೇ ಅಲ್ಲ, ತಿಂಗಳ ಹಿಂದಷ್ಟೇ ಅಮೆರಿಕಾ ನುಂಗಿ ಹಾಕೋಕೆ ಧಾವಿಸಿ ಬಂದಿದ್ದ ಜ್ವಾಲಾಸುರ, ಈಗ ಮತ್ತೆ ವಕ್ಕರಿಸ್ತಾನಾ ಅನ್ನೋ ಭೀತಿ ಹುಟ್ಟಿಕೊಂಡಿದೆ..ಹೊಸ ಅಧ್ಯಕ್ಷರ ಆಗಮನದ ಬೆನ್ನಲ್ಲೇ ಸಾಲು ಸಾಲು ದುರಂತಗಳು ಅಪ್ಪಳಿಸ್ತಾ ಇದಾವೆ. ಅಂಥಾ ದುರಂತ ಸೃಷ್ಟಿಸಬಲ್ಲ ಶಕ್ತಿ ಆ ಸುಂಟರಗಾಳಿಗೆ ಬಂದಿದ್ದು ಹೇಗೆ? ಯಾಕೆ?